coming soon Archives - Samyukta Karnataka

ʻಬಿಗ್ ಬಾಸ್ ಸೀಸನ್‌13ʼ ಅತೀ ಶೀಘ್ರದಲ್ಲಿ: ಯಾವಾಗಿನಿಂದ ಆರಂಭ; ಈ ಬಾರಿ ಸ್ಪರ್ಧಿಗಳು ಯಾರು? ಇಲ್ಲಿದೆ ಡೀಟೇಲ್ಸ್
ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಮತ್ತು ದೊಡ್ಡ ರಿಯಾಲಿಟಿ ಶೋ ‘ಬಿಗ್‌ಬಾಸ್’ ಪ್ರಿಯರಿಗೆ ವಾಹಿನಿಯು ಭರ್ಜರಿ ಸಿಹಿ ಸುದ್ದಿಯನ್ನು ನೀಡಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಬಿಗ್‌ಬಾಸ್ ಕನ್ನಡ ಸೀಸನ್ 12’ರ ಬಳಿಕ, ಇದೀಗ ʻಬಿಗ್‌ ಬಾಸ್‌ ಸೀಸನ್‌ 13ʼ ಈ ಬಾರಿ ಬಹುಬೇಗನೆ ಆರಂಭವಾಗಲಿದೆ ಎಂದು ವಾಹಿನಿಯು ತನ್ನ ಅಧಿಕೃತ ಪ್ರೊಮೊ ಹಂಚಿಕೊಳ್ಳುವ ಮೂಲಕ ಸ್ಪಷ್ಟಪಡಿಸಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಈ ಕುರಿತು ಪೋಸ್ಟ್ ಹಂಚಿಕೊಂಡಿರುವ ವಾಹಿನಿಯು, “ವಿಶೇಷದ ಜೊತೆ ಈ ವರ್ಷ ಬಹುಬೇಗ ಕನ್ನಡಿಗರ ಹಬ್ಬ ಆರಂಭವಾಗುತ್ತಿದೆ” ಎಂದು ಬರೆದುಕೊಂಡಿದೆ. ಸಾಮಾನ್ಯವಾಗಿ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಿನಲ್ಲಿ ಆರಂಭವಾಗುತ್ತಿದ್ದ ಈ ಶೋ, ಈ ಬಾರಿ ಅದಕ್ಕೂ ಮುನ್ನವೇ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗುತ್ತಿದೆ. ಕಳೆದ ಸೀಸನ್ 1 ರಿಂದ 12 ರವರೆಗೆ ನಟ ‘ಕಿಚ್ಚ’ ಸುದೀಪ್ ಸಾರಥ್ಯದಲ್ಲಿ ಯಶಸ್ವಿಯಾಗಿ ನಡೆದಿತ್ತು. ಆದ್ರೆ ಈ ಬಾರಿ ಯಾರು ನಿರೂಪಣೆ ಮಾಡಲಿದ್ದಾರೆ, ಶೋ ಯಾವಾಗ ಆರಂಭವಾಗಲಿದೆ, ಸ್ಪರ್ಧಿಗಳು ಯಾರು ಮತ್ತು ಯಾವ ಥೀಮ್ ಇರಲಿದೆ ಎಂಬ ಅಧಿಕೃತ ಮಾಹಿತಿಗಳನ್ನು ವಾಹಿನಿ ಇನ್ನು ಬಿಟ್ಟುಕೊಟ್ಟಿಲ್ಲ. ಆದ್ರೂ ಬಿಡುಗಡೆಯಾಗಿರುವ ಹೊಸ ಪ್ರೊಮೊ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ.

ಕಳೆದ ಸೀಸನ್ 12ರ ಧಮಾಕಾ: ಇನ್ನು ಬಿಗ್‌ಬಾಸ್‌ನ ಕಳೆದ 12ನೇ ಆವೃತ್ತಿಯು ಸೆಪ್ಟೆಂಬರ್ 28 ರಂದು ಅತ್ಯಂತ ಅದ್ಧೂರಿಯಾಗಿ ಆರಂಭವಾಗಿತ್ತು. ಮನೆಯೊಳಗೆ ಕಾಕ್ರೋಚ್ ಸುಧಿ, ನಟಿ ಕಾವ್ಯ ಶೈವ, ಡಾಗ್ ಸತೀಶ್, ಗಿಲ್ಲಿ ನಟ, ಜಾನ್ವಿ, ಧನುಷ್ ಗೌಡ, ಚಂದ್ರಪ್ರಭ, ಮಂಜು ಭಾಷಿಣಿ, ರಾಶಿಕಾ ಶೆಟ್ಟಿ, ಅಭಿಷೇಕ್, ಮಲ್ಲಮ್ಮ, ಅಶ್ವಿನಿ ಎಸ್.ಎನ್, ಧ್ರುವಂತ್, ರಕ್ಷಿತಾ ಶೆಟ್ಟಿ, ಕರಿಬಸಪ್ಪ, ಅಶ್ವಿನಿ ಹಾಗೂ ಸ್ಪಂದನಾ ಸ್ಪರ್ಧಿಗಳಾಗಿ ಭಾಗವಹಿಸಿದ್ದರು. ಇವರೊಂದಿಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ರಿಷಾ ಗೌಡ, ಸೂರಜ್ ಸಿಂಗ್ ಮತ್ತು ಮ್ಯೂಟಂಟ್ ರಘು ಕೂಡ ಮನೆ ಪ್ರವೇಶಿಸಿ ರಂಜಿಸಿದ್ದರು.

ಸುಮಾರು ಮೂರೂವರೆ ತಿಂಗಳುಗಳ ಕಾಲ ರೋಚಕವಾಗಿ ಸಾಗಿದ್ದ ‘ಬಿಗ್‌ಬಾಸ್ ಸೀಸನ್ 12’ ರ ಗ್ರಾಂಡ್ ಫಿನಾಲೆ ಜನವರಿ 18 ರಂದು ಜರುಗಿತ್ತು. ತೀವ್ರ ಪೈಪೋಟಿಯ ನಡುವೆ ‘ಗಿಲ್ಲಿ’ ಸೀಸನ್ 12ರ ವಿಜೇತರಾಗಿ (ಟ್ರೋಫಿ) ಹೊರಹೊಮ್ಮಿದರೆ, ರಕ್ಷಿತಾ ಶೆಟ್ಟಿ ರನ್ನರ್ ಅಪ್ ಸ್ಥಾನ ಪಡೆದುಕೊಂಡಿದ್ದರು. ಇದೀಗ ಸೀಸನ್ 12 ಮುಗಿದ ಕೆಲವೇ ತಿಂಗಳುಗಳಲ್ಲಿ ಸೀಸನ್ 13 ರ ಪ್ರೊಮೊ ಹೊರಬಂದಿರುವುದು ಬಿಗ್‌ಬಾಸ್ ಅಭಿಮಾನಿಗಳಲ್ಲಿ ಸಖತ್ ಕ್ರೇಜ್ ಸೃಷ್ಟಿಸಿದೆ.

The post ʻಬಿಗ್ ಬಾಸ್ ಸೀಸನ್‌13ʼ ಅತೀ ಶೀಘ್ರದಲ್ಲಿ: ಯಾವಾಗಿನಿಂದ ಆರಂಭ; ಈ ಬಾರಿ ಸ್ಪರ್ಧಿಗಳು ಯಾರು? ಇಲ್ಲಿದೆ ಡೀಟೇಲ್ಸ್ appeared first on Samyukta Karnataka.