Chennai Super Kings Archives - Samyukta Karnataka

CSKಗೆ ಶಾಕ್‌ ಮೇಲೆ ಶಾಕ್:‌ ನಾಯಕ ಸೇರಿ ಉಳಿದ ಆಟಗಾರರಿಗೆ ಆಗಿದ್ದೇನು? ಇಲ್ಲಿದೆ ನೋಡಿ ಮಾಹಿತಿ
ಐಪಿಎಲ್ 2026ರ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಅನುಭವಿಸಿದ ಹೀನಾಯ ಸೋಲಿನ ಬೆನ್ನಲ್ಲೇ, ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಚೆನ್ನೈ ತಂಡದ ನಾಯಕ ಋತುರಾಜ್ ಗಾಯಕವಾಡ್ ಸೇರಿದಂತೆ ಇಡೀ ತಂಡಕ್ಕೆ ಭಾರಿ ಮೊತ್ತದ ದಂಡ ವಿಧಿಸಲಾಗಿದೆ.

ಅಹಮದಾಬಾದ್‌ನಲ್ಲಿ ಗುರುವಾರ ನಡೆದ ಲೀಗ್ ಹಂತದ 66ನೇ ಮಹತ್ವದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಗುಜರಾತ್ ಟೈಟನ್ಸ್ ವಿರುದ್ಧ 89 ರನ್‌ಗಳ ಬೃಹತ್ ಅಂತರದಿಂದ ಪರಾಭವಗೊಂಡಿತು. ಈ ಹೀನಾಯ ಸೋಲಿನೊಂದಿಗೆ ಸಿಎಸ್‌ಕೆ ತಂಡವು ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯ ಪ್ಲೇ-ಆಫ್ ರೇಸ್‌ನಿಂದ ಅಧಿಕೃತವಾಗಿ ಹೊರಬಿದ್ದು, ಕೋಟ್ಯಂತರ ಅಭಿಮಾನಿಗಳಿಗೆ ತೀವ್ರ ನಿರಾಶೆ ಮೂಡಿಸಿತು.

ಸೋಲಿನ ಆಘಾತದಲ್ಲಿದ್ದ ಚೆನ್ನೈ ತಂಡಕ್ಕೆ ಐಪಿಎಲ್ ಆಡಳಿತ ಮಂಡಳಿಯು ಮತ್ತೊಂದು ದೊಡ್ಡ ಶಾಕ್ ನೀಡಿದೆ. ನಿಗದಿತ ಅವಧಿಯಲ್ಲಿ ಓವರ್‌ಗಳನ್ನು ಮುಗಿಸದ ಕಾರಣಕ್ಕಾಗಿ ತಂಡದ ನಾಯಕ ಋತುರಾಜ್ ಗಾಯಕವಾಡ್‌ಗೆ ಬರೋಬ್ಬರಿ ₹24 ಲಕ್ಷ ದಂಡ ವಿಧಿಸಲಾಗಿದೆ. ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಗಾಯಕವಾಡ್ ನೇತೃತ್ವದ ತಂಡ ಮಾಡಿದ ಎರಡನೇ ತಪ್ಪು ಇದಾಗಿದ್ದರಿಂದ ದಂಡದ ಪ್ರಮಾಣ ಹೆಚ್ಚಾಗಿದೆ.

ಐಪಿಎಲ್‌ನ ಕಠಿಣ ನಿಯಮಗಳ ಪ್ರಕಾರ, ನಾಯಕನಿಗೆ ಮಾತ್ರವಲ್ಲದೆ ಇಂಪ್ಯಾಕ್ಟ್ ಪ್ಲೇಯರ್ ಒಳಗೊಂಡಂತೆ ತಂಡದ ಉಳಿದ ಎಲ್ಲಾ ಆಟಗಾರರಿಗೂ ದಂಡದ ಬಿಸಿ ತಟ್ಟಿದೆ. ಪಂದ್ಯದ ಆಡುವ ಹನ್ನೊಂದರ ಬಳಗದಲ್ಲಿದ್ದ (Playing XI) ಸಹ ಆಟಗಾರರಿಗೆ ತಲಾ ₹6 ಲಕ್ಷ ಅಥವಾ ಪಂದ್ಯದ ಸಂಭಾವನೆಯ ಶೇಕಡಾ 25 ರಷ್ಟು (ಯಾವುದು ಕಡಿಮೆಯೋ ಅದು) ದಂಡ ವಿಧಿಸಿರುವುದಾಗಿ ಐಪಿಎಲ್ ತನ್ನ ಅಧಿಕೃತ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ. ಟೂರ್ನಿಯಿಂದ ಹೊರಬಿದ್ದ ಬೇಸರದಲ್ಲಿದ್ದ ಸಿಎಸ್‌ಕೆ ಆಟಗಾರರಿಗೆ ಈ ದಂಡದ ಶಿಕ್ಷೆ ಮತ್ತಷ್ಟು ನಷ್ಟವನ್ನುಂಟು ಮಾಡಿದೆ.

The post CSKಗೆ ಶಾಕ್‌ ಮೇಲೆ ಶಾಕ್:‌ ನಾಯಕ ಸೇರಿ ಉಳಿದ ಆಟಗಾರರಿಗೆ ಆಗಿದ್ದೇನು? ಇಲ್ಲಿದೆ ನೋಡಿ ಮಾಹಿತಿ appeared first on Samyukta Karnataka.