CEC Gyanesh Kumar Archives - Samyukta Karnataka

ಸುಪ್ರೀಂ ನಕಾರ: ಸಿಇಸಿ ಅಮಾನತುಗೊಳಿಸಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ತಿರಸ್ಕಾರ
ಹೊಸ ಮತದಾರರ ನೋಂದಣಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಫಾರ್ಮ್ 6ರಲ್ಲಿ ಮಾಡಿರುವ ಬದಲಾವಣೆಗಳಿಗೆ ಸುಪ್ರೀಂಕೋರ್ಟ್ ಯಾವುದೇ ಅನುಮೋದನೆ ನೀಡಿಲ್ಲ ಎಂದು ಮುಖ್ಯ ನ್ಯಾಯಮೂರ್ತಿನೇತೃತ್ವದ ಪೀಠ ಸ್ಪಷ್ಟಪಡಿಸಿದೆ. ಈ ತಿದ್ದುಪಡಿಗಳನ್ನು ಯಾರು ಮಾಡಿದರು ಎಂಬುದನ್ನು ದಾಖಲೆಗಳ ಮೂಲಕ ಪರಿಶೀಲಿ ಸುವುದಾಗಿ ತಿಳಿಸಿದೆ.

ಕೇಂದ್ರ ಮುಖ್ಯ ಚುನಾವಣಾ ಆಯುಕ್ತರಾದ (ಸಿಇಸಿ) ಜ್ಞಾನೇಶ್ ಕುಮಾರ್ ಅವರನ್ನು ತಕ್ಷಣವೇ ಅಮಾನತುಗೊಳಿಸಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸಾರಾಸಗಟಾಗಿ ತಿರಸ್ಕರಿಸಿದೆ. ಕೇವಲ ಪತ್ರಿಕಾ ವರದಿಗಳನ್ನು ಮುಂದಿಟ್ಟುಕೊಂಡು ದೇಶದ ಪ್ರಮುಖ ಸಾಂವಿಧಾನಿಕ ಸಂಸ್ಥೆಯ ಮುಖ್ಯಸ್ಥರ ವಿರುದ್ಧ ಇಂತಹ ಗಂಭೀರ ಮಧ್ಯಂತರ ಆದೇಶ ನೀಡಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರಿದ್ದ ಪೀಠ ಕಟ್ಟುನಿಟ್ಟಾಗಿ ಹೇಳಿದೆ. ಆಯೋಗಕ್ಕೆ ತನ್ನ ನಿಲುವನ್ನು ಸ್ಪಷ್ಟಪಡಿಸಲು ಕಾಲಾವಕಾಶ ನೀಡದೆ ಏಕಾಏಕಿ ಅಮಾನತು ಮಾಡಿದರೆ ಸಾಂವಿಧಾನಿಕ ಕಾರ್ಯಾಚರಣೆಯೇ ಸ್ಥಗಿತಗೊಳ್ಳುತ್ತದೆ ಎಂದು ನ್ಯಾಯಾಲಯ ಎಚ್ಚರಿಸಿದೆ.

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ವೇಳೆ ಸಹ-ಆಯುಕ್ತರನ್ನು ಕಡೆಗಣಿಸಿ ಏಕಪಕ್ಷೀಯ ನಿರ್ಧಾರ ಕೈಗೊಳ್ಳಲಾಗಿದೆ ಎಂಬುದು ಅರ್ಜಿದಾರರ ಪ್ರಮುಖ ಆಕ್ಷೇಪವಾಗಿತ್ತು. ಆದರೆ ಆಯೋಗದ ಆಂತರಿಕ ಸಮಾಲೋಚನೆಗಳಲ್ಲಿ ಭಿನ್ನ ಅಭಿಪ್ರಾಯಗಳು ಬರುವುದು ಚರ್ಚೆಯ ಸಹಜ ಲಕ್ಷಣವಾಗಿದ್ದು, ಅಂತಿಮವಾಗಿ ಎಲ್ಲ ಮಹತ್ವದ ತೀರ್ಮಾನಗಳನ್ನು ಒಮ್ಮತದಿಂದಲೇ ತೆಗೆದುಕೊಳ್ಳಲಾಗಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ. ಮತದಾರರ ಪಟ್ಟಿಯಲ್ಲಿರುವ ನಕಲಿ, ಮೃತ ಹಾಗೂ ಅನರ್ಹ ಮತದಾರರ ಹೆಸರುಗಳನ್ನು ವ್ಯವಸ್ಥಿತವಾಗಿ ತೆಗೆದುಹಾಕಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ದಾರಿ ಮಾಡಿಕೊಡುವುದು ಈ ಅಭಿಯಾನದ ಮೂಲ ಉದ್ದೇಶವಾಗಿದೆ.

ಇನ್ನೊಂದೆಡೆ, ಮತದಾರರ ನೋಂದಣಿಯ ‘ಫಾರ್ಮ್ 6’ ಅನ್ನು ಆಯೋಗವು ಅಕ್ರಮವಾಗಿ ತಿದ್ದುಪಡಿ ಮಾಡಿದೆ ಎಂಬ ಆರೋಪಗಳಿಗೂ ತೆರೆಬಿದ್ದಿದೆ. ಕಾನೂನುಬದ್ಧವಾದ ಫಾರ್ಮ್ 6 ರ ಮೂಲ ರಚನೆಯನ್ನು ಆಯೋಗ ಬದಲಿಸಿಲ್ಲ; ಬದಲಿಗೆ ಮತದಾರರ ನೈಜತೆಯನ್ನು ದೃಢೀಕರಿಸಲು ಅದಕ್ಕೆ ಹೆಚ್ಚುವರಿ ಘೋಷಣಾಪತ್ರವನ್ನು (Declaration) ಲಗತ್ತಿಸಲು ಮಾತ್ರ ಕೋರಲಾಗಿತ್ತು. ವಿಶೇಷ ಪರಿಷ್ಕರಣೆಯ ಸಂದರ್ಭದಲ್ಲಿ ಇಂತಹ ಪೂರಕ ದಾಖಲೆಗಳನ್ನು ಕೇಳುವ ಆಡಳಿತಾತ್ಮಕ ವಿವೇಚನಾ ಅಧಿಕಾರ ಚುನಾವಣಾ ಆಯೋಗಕ್ಕಿದೆ ಎಂಬುದನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿದೆ. ಆಧಾರರಹಿತ ರಾಜಕೀಯ ಟೀಕೆಗಳಿಗಿಂತ ಸಾಂವಿಧಾನಿಕ ನಿಯಮಗಳು ಮತ್ತು ಸಾಕ್ಷ್ಯಾಧಾರಗಳೇ ಸರ್ವಶ್ರೇಷ್ಠವೆಂಬುದನ್ನು ನ್ಯಾಯಾಲಯದ ಈ ನಡೆ ಎತ್ತಿಹಿಡಿದಿದೆ.

The post ಸುಪ್ರೀಂ ನಕಾರ: ಸಿಇಸಿ ಅಮಾನತುಗೊಳಿಸಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ತಿರಸ್ಕಾರ appeared first on Samyukta Karnataka.