Captaincy Task Cancelled Archives - Samyukta Karnataka

ಉಸ್ತುವಾರಿಗಳ ಎಡವಟ್ಟಿಗೆ ಬಿಗ್ ಬಾಸ್ ಕ್ಯಾಪ್ಟನ್ಸಿ ಟಾಸ್ಕ್ ರದ್ದು; ಗೊಂದಲದ ಗೂಡಾದ ಬಿಗ್‌ ಬಾಸ್‌ ಆಟ
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಪಟ್ಟಕ್ಕಾಗಿ ನಡೆದ ಸವಾಲಿನ ಆಟವೊಂದು ಉಸ್ತುವಾರಿಗಳ ಎಡವಟ್ಟು ಹಾಗೂ ಸ್ಪರ್ಧಿಗಳ ಗೊಂದಲದಿಂದಾಗಿ ರದ್ದಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಪ್ರೋಮೋ ಪ್ರಕಾರ, ಸಂಚಾಲಕರಾಗಿ ಕಾರ್ಯನಿರ್ವಹಿಸಿದ ‘ಮಾಡ್ರನ್ ಮಹಾಕವಿ’ ಮಂಜುನಾಥ್ ಹಾಗೂ ಲಿಖಿತ್ ಗೊಂದಲಮಯ ನಿರ್ಧಾರಗಳೇ ಟಾಸ್ಕ್ ರದ್ದಾಗಲು ಮುಖ್ಯ ಕಾರಣ ಎನ್ನಲಾಗಿದೆ.

ಕ್ಯಾಪ್ಟನ್ಸಿ ರೇಸ್‌ಗಾಗಿ ಬಿಗ್ ಬಾಸ್ “ಗೋಲು ಇಲ್ಲಾಂದ್ರೆ ಸೋಲು” ಎಂಬ 60 ನಿಮಿಷಗಳ ರೋಚಕ ಟಾಸ್ಕ್ ನೀಡಿದ್ದರು. ಐದು ಜನರ ಎರಡು ತಂಡಗಳಲ್ಲಿ ಮಹಿಳಾ ಮತ್ತು ಪುರುಷ ಸ್ಪರ್ಧಿಗಳು ಎದುರಾಳಿಗಳೊಂದಿಗೆ ಹಾರ್ನೆಸ್ ಧರಿಸಿ, ಮೈದಾನದಲ್ಲಿದ್ದ ಚೆಂಡನ್ನು ಎದುರಾಳಿ ತಂಡದ ಗೋಲ್ ಪೋಸ್ಟ್‌ಗೆ ತಲುಪಿಸಬೇಕಿತ್ತು. ಆದ್ರೆ ಆಟ ಆರಂಭವಾದ ಕ್ಷಣದಿಂದಲೇ ಕೌಂಟಿಂಗ್ ಹಾಗೂ ನಿಯಮಗಳ ಕುರಿತು ಗೊಂದಲಗಳು ತಲೆಯೆತ್ತಿದವು. ಆಸಿಯಾ ಮತ್ತು ಗಾನವಿ ನಡುವೆ ಗೇಮ್ ಪುಲ್ಲಿಂಗ್ ಹಾಗೂ ಫೌಲ್ ವಿಚಾರವಾಗಿ ತೀವ್ರ ವಾಗ್ವಾದ ನಡೆಯಿತು.

ಗೋಲ್ ಎಣಿಕೆ ವಿಚಾರದಲ್ಲಿ ಸಂಚಾಲಕರಾದ ಮಂಜ ಮತ್ತು ಲಿಖಿತ್ ತೀವ್ರ ತಪ್ಪು ತಿಳುವಳಿಕೆಗೆ ಒಳಗಾದರು. ಗಾನವಿ ತಂಡಕ್ಕೆ 5 ಅಂಕ ಹಾಗೂ ಪ್ರಶಾಂತ್ ತಂಡಕ್ಕೆ 1 ಅಂಕ ಬಂದಿದ್ದ ಸಂದರ್ಭದಲ್ಲಿ, ಚೆಂಡು ‘ನೆಟ್’ಗೆ ಬಿದ್ದರೆ ಮಾತ್ರ ಗೋಲು ಎಂದು ಉಸ್ತುವಾರಿಗಳು ಹೊಸ ನಿಯಮ ಹೆಣೆದರು. ಇದರಿಂದ ಕೆರಳಿದ ಬಿಗ್ ಬಾಸ್ ತಾವೇ ನೇರವಾಗಿ ಮಧ್ಯಪ್ರವೇಶಿಸಿ, “ನಾನು ಎಲ್ಲೂ ನೆಟ್ ಎಂದು ಹೇಳಿಲ್ಲ, ಗೋಲ್ ಪೋಸ್ಟ್ ಎಂದಷ್ಟೇ ಹೇಳಿದ್ದು” ಎಂದು ಗಟ್ಟಿಯಾಗಿ ಎಚ್ಚರಿಸಿದರು.

ಆಟದ ನಿಖರ ನಿಯಮಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಮತ್ತು ಸರಿಯಾದ ನಿರ್ಧಾರ ತಳೆಯುವಲ್ಲಿ ಸಂಚಾಲಕರು ಪದೇ ಪದೇ ವಿಫಲರಾದರು. ಈ ಸರಣಿ ಎಡವಟ್ಟುಗಳಿಂದಾಗಿ ಆಟವು ಸಂಪೂರ್ಣ ಅಂತ್ಯಗೊಳಿಸಿ, ಅಂತಿಮವಾಗಿ ಬಿಗ್ ಬಾಸ್ ಈ ವಾರದ ಕ್ಯಾಪ್ಟನ್ಸಿ ಟಾಸ್ಕ್‌ನ್ನು ರದ್ದುಗೊಳಿಸುವ ತೀರ್ಮಾನಕ್ಕೆ ಬಂದಿದ್ದಾರೆ.

The post ಉಸ್ತುವಾರಿಗಳ ಎಡವಟ್ಟಿಗೆ ಬಿಗ್ ಬಾಸ್ ಕ್ಯಾಪ್ಟನ್ಸಿ ಟಾಸ್ಕ್ ರದ್ದು; ಗೊಂದಲದ ಗೂಡಾದ ಬಿಗ್‌ ಬಾಸ್‌ ಆಟ appeared first on Samyukta Karnataka.