bigg boss kannada 12 Archives - Samyukta Karnataka

‘ಕ್ವಾಟ್ಲಿ ಕಿಚನ್’ ಶೋನಲ್ಲಿ ರಕ್ಷಿತಾ ಶೆಟ್ಟಿ ಕಾಮಿಡಿ; ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್!
ಬೆಂಗಳೂರು: ಸೋಶಿಯಲ್ ಮೀಡಿಯಾ ಮೂಲಕ ಮನೆಮಾತಾಗಿ, ಬಿಗ್‌ಬಾಸ್ ಕನ್ನಡ ಸೀಸನ್ 12ರಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದ ನಟಿ ರಕ್ಷಿತಾ ಶೆಟ್ಟಿ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಬಿಗ್‌ಬಾಸ್ ಮನೆಯಿಂದ ಹೊರಬಂದ ಬಳಿಕ ತಮ್ಮ ಕನಸಿನ ‘ಪಟಾಕಿ ಕಿಚನ್’ ಎಂಬ ಹೋಟೆಲ್ ಉದ್ಯಮ ಆರಂಭಿಸಿದ್ದ ರಕ್ಷಿತಾ, ಇದೀಗ ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಶೋ ‘ಕ್ವಾಟ್ಲಿ ಕಿಚನ್ ಸೀಸನ್ 2’ ರ ಉದ್ಘಾಟನಾ ಸಂಚಿಕೆಗೆ ವಿಶೇಷ ಅತಿಥಿಯಾಗಿ ಆಗಮಿಸಿ ಎಲ್ಲರನ್ನೂ ನಗಿಸಿದ್ದಾರೆ.

ಕಾರ್ಯಕ್ರಮದ ವೇಳೆ ರಕ್ಷಿತಾ ಶೆಟ್ಟಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋವೊಂದನ್ನು ಪ್ರಸಾರ ಮಾಡಲಾಯಿತು. ಅದರಲ್ಲಿ ತಟ್ಟೆಯಲ್ಲಿದ್ದ ಸತ್ತ ಮೀನನ್ನು ಪ್ರೀತಿಯಿಂದ ಮಾತನಾಡಿಸುತ್ತಾ, “ನಿನಗೆ ನಾನು ಅಂದ್ರೆ ತುಂಬ ಇಷ್ಟ ತಾನೇ?” ಎಂದು ಕೇಳುವ ದೃಶ್ಯ ಎಲ್ಲರ ಗಮನ ಸೆಳೆದಿದ್ದು, ಅಲ್ಲಿರುವಂತ ಎಲ್ಲರನ್ನು ಹೊಟ್ಟೆ ಹುಣ್ಣಾಗಿಸುಂತೆ ನಗಿಸಿದ್ದಾರೆ. ಈ ವಿಡಿಯೋ ಶೋನಲ್ಲಿ ಭಾರಿ ಸಂತಸದ ಹೊಸ ಅಲೆ ಎಬ್ಬಿಸಿದೆ.

ಇದೇ ಸಂದರ್ಭದಲ್ಲಿ ನಿರೂಪಕಿ ಸುಷ್ಮಾ ಹಾಸ್ಯಭರಿತ ಪ್ರಶ್ನೆಗೆ ಉತ್ತರಿಸಿದ ರಕ್ಷಿತಾ, “ನಾನು ಚಿಕನ್ ತರಲು ಅಂಗಡಿಗೆ ಹೋದಾಗ ಅಂಗಡಿಯವರೇ ಕೋಳಿಯನ್ನು ಕಟ್ ಮಾಡಿ ನನಗೆ ಕೊಡುತ್ತಾರೆ, ನಾನಂತೂ ಯಾವುದನ್ನೂ ಸಾಯಿಸುವುದಿಲ್ಲ” ಎಂದು ತಮ್ಮದೇ ಶೈಲಿಯಲ್ಲಿ ಉತ್ತರಿಸಿ ನೆರೆದಿದ್ದವರನ್ನು ರಂಜಿಸಿದರು.

ಸದ್ಯ ರಕ್ಷಿತಾ ಶೆಟ್ಟಿ ಈ ಮಜಾವಾದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ರಕ್ಷಿತಾಳ ಮುಗ್ಧತೆ ಹಾಗೂ ಹಾಸ್ಯಪ್ರಜ್ಞೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ತಟಸ್ಥ ಭಾಷೆ ಮತ್ತು ಕರಾವಳಿ ಶೈಲಿಯ ಸಂಭಾಷಣೆಯಿಂದಲೇ ಜನಮನ ಗೆದ್ದಿದ್ದ ರಕ್ಷಿತಾ, ‘ಕ್ವಾಟ್ಲಿ ಕಿಚನ್’ನಲ್ಲೂ ತಮ್ಮ ಎಂದಿನ ಚಾರ್ಮ್ ಮುಂದುವರಿಸಿದ್ದಾರೆ.

The post ‘ಕ್ವಾಟ್ಲಿ ಕಿಚನ್’ ಶೋನಲ್ಲಿ ರಕ್ಷಿತಾ ಶೆಟ್ಟಿ ಕಾಮಿಡಿ; ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್! appeared first on Samyukta Karnataka.

ಬಿಗ್ ಬಾಸ್ ಮೂಲಕ ಮನೆ ಮಾತಾಗಿದ್ದ ನಟಿ ಜಾಹ್ನವಿ ಈಗ ಜೆಡಿಎಸ್ ಮುಖಿ: ರಾಜಕೀಯದಲ್ಲಿ ಹೊಸ ಇನ್ನಿಂಗ್ಸ್!
ಬೆಂಗಳೂರು: ಕಿರುತೆರೆ ವಾಹಿನಿಗಳ ವಿವಿಧ ರಿಯಾಲಿಟಿ ಶೋಗಳು ಹಾಗೂ ಇತ್ತೀಚಿನ ಬಿಗ್ ಬಾಸ್ ಸ್ಪರ್ಧೆಯ ಮೂಲಕ ಕನ್ನಡಿಗರ ಮನೆಮನ ಗೆದ್ದಿದ್ದ ಖ್ಯಾತ ನಟಿ ಜಾಹ್ನವಿ ಅಧಿಕೃತವಾಗಿ ರಾಜಕೀಯ ರಂಗಕ್ಕೆ ಪ್ರವೇಶಿಸಿದ್ದಾರೆ. ಮಾಜಿ ಮುಖ್ಯಮಂತ್ರಿಗಳು ಹಾಗೂ ಪ್ರಸ್ತುತ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಜಾಹ್ನವಿ ಜಾತ್ಯಾತೀತ ಜನತಾದಳ (ಜೆಡಿಎಸ್) ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಖಾತೆಯಲ್ಲಿ ಫೋಸ್ಟ್‌: ಈ ಹೊಸ ನಡೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘವಾಗಿ ಬರೆದುಕೊಂಡಿರುವ ಜಾಹ್ನವಿ, ಇದನ್ನು ತಮ್ಮ ಜೀವನದ ‘ಥರ್ಡ್ ಇನ್ನಿಂಗ್ಸ್’ ಎಂದು ಕರೆದಿದ್ದಾರೆ. ಕಳೆದ 12 ವರ್ಷಗಳ ಕಾಲ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ನ್ಯೂಸ್ ಆಂಕರ್ ಆಗಿ ಕೆಲಸ ಮಾಡಿದ್ದು ತಮ್ಮ ಮೊದಲ ಇನ್ನಿಂಗ್ಸ್ ಆಗಿತ್ತು. ಆ ಬಳಿಕ ಕಲರ್ಸ್ ಕನ್ನಡ ವಾಹಿನಿಯ ರಿಯಾಲಿಟಿ ಶೋಗಳು ಮತ್ತು ಬಿಗ್ ಬಾಸ್ ಸ್ಪರ್ಧೆಯ ಮೂಲಕ ಎರಡನೇ ಇನ್ನಿಂಗ್ಸ್ ಆರಂಭವಾಗಿತ್ತು. ಬಿಗ್ ಬಾಸ್‌ನಿಂದ ಹೊರಬಂದ ನಂತರ ಮಾಡಿದ ಸಮಾಜಮುಖಿ ಕೆಲಸಗಳನ್ನು ಗುರುತಿಸಿದ ಜೆಡಿಎಸ್ ಯುವ ಮುಖಂಡ ಪುನೀತ್ ಗೌಡ ಪಕ್ಷಕ್ಕೆ ಆಹ್ವಾನ ನೀಡಿದ್ದರು ಎಂದು ಫೋಸ್ಟ್‌ನಲ್ಲಿ ಬರೆದುಕೊಳ್ಳುವ ಮೂಲಕ ಜಾಹ್ನವಿ ತಿಳಿಸಿದ್ದಾರೆ.

ರಾಜಕೀಯದತ್ತ ಹೆಜ್ಜೆ: ಕಷ್ಟದಲ್ಲಿದ್ದ ಜನರಿಗೆ ಜಾಹ್ನವಿ ಮಾಡಿದ ಸಣ್ಣ ಸಹಾಯದ ವಿಡಿಯೋಗಳು ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿ ನೆಟ್ಟಿಗರ ಮನ ಗೆದ್ದಿದ್ದವು. ರಾಜ್ಯದ ಜನತೆ ನೀಡಿದ ಈ ಪ್ರೀತಿಯೇ ತಮ್ಮನ್ನು ಜೆಡಿಎಸ್ ಪಕ್ಷದ ಆಹ್ವಾನದವರೆಗೂ ತಂದು ನಿಲ್ಲಿಸಿದೆ ಎಂದಿರುವ ಅವರು, ಹಳೆಯ ರಾಜಕೀಯ ಪದ್ಧತಿಯನ್ನು ಬದಲಾಯಿಸುವ ದೊಡ್ಡ ಸಂಕಲ್ಪ ಮಾಡಿದ್ದಾರೆ.

ಹಾಗೇ ಹಣ ಪಡೆದು ವೋಟ್ ಮಾರಿಕೊಳ್ಳುವುದು, ರಾಜಕಾರಣಿಗಳಿಗೆ ಗುಲಾಮರಾಗುವುದನ್ನು ಕಿತ್ತೊಗೆದು, ಜನರ ನಿಜವಾದ ಸೇವಕರಾಗಿ ನಿಂತು ರಾಜ್ಯದ ಅಭಿವೃದ್ಧಿಗಾಗಿ ದುಡಿಯುವುದು ಮತ್ತು ಹೊಸ ರಾಜಕೀಯ ಭಾಷ್ಯ ಬರೆಯುವುದು ತಮ್ಮ ಹೆಗ್ಗುರಿ ಎಂದಿದ್ದಾರೆ. ಹೊಸ ಹಾದಿಗೆ ಹೆಜ್ಜೆ ಇಟ್ಟಿರುವ ಜಾಹ್ನವಿ, ಕರ್ನಾಟಕದ ಜನತೆಯ ಆಶೀರ್ವಾದವನ್ನು ಕೋರಿದ್ದಾರೆ.

The post ಬಿಗ್ ಬಾಸ್ ಮೂಲಕ ಮನೆ ಮಾತಾಗಿದ್ದ ನಟಿ ಜಾಹ್ನವಿ ಈಗ ಜೆಡಿಎಸ್ ಮುಖಿ: ರಾಜಕೀಯದಲ್ಲಿ ಹೊಸ ಇನ್ನಿಂಗ್ಸ್! appeared first on Samyukta Karnataka.

ಬಿಗ್‌ ಬಾಸ್‌ ರಕ್ಷಿತಾ ಕಣ್ಣಿರು: ಸ್ನೇಹಬಂಧ ಮೇರದ ಗಿಲ್ಲಿ, ರಘು
ಬಿಗ್‌ಬಾಸ್ ಕನ್ನಡ ಸೀಸನ್ 12 ಕೇವಲ ಒಂದು ರಿಯಾಲಿಟಿ ಶೋ ಆಗಿ ಉಳಿಯದೆ, ಸ್ಪರ್ಧಿಗಳ ನಡುವೆ ಅನ್ಯೋನ್ಯ ಬಾಂಧವ್ಯವನ್ನು ಬೆಸೆದ ವೇದಿಕೆಯಾಗಿದೆ ಎಂಬುದಕ್ಕೆ ‘ದೊಡ್ಡಮನೆ ಹಬ್ಬ’ ಕಾರ್ಯಕ್ರಮವೇ ಸಾಕ್ಷಿ. ಕಾರ್ಯಕ್ರಮ ಮುಕ್ತಾಯಗೊಂಡು ಸುಮಾರು 25 ದಿನಗಳ ನಂತರ ಎಲ್ಲಾ ಸ್ಪರ್ಧಿಗಳು ಒಂದೇ ವೇದಿಕೆಯಲ್ಲಿ ಸೇರಿದಾಗ, ಅಲ್ಲಿ ಹಳೆಯ ನೆನಪುಗಳು ಮರುಕಳಿಸಿ ಭಾವುಕ ಕ್ಷಣಗಳಿಗೆ ನಾಂದಿ ಹಾಡಿತು.

ಹೌದು, ಬಿಗ್‌ಬಾಸ್ ಮನೆಯಲ್ಲಿ ಸದಾ ಲವಲವಿಕೆಯಿಂದ ಇರುತ್ತಿದ್ದ ಪಟಾಕಿ ರಕ್ಷಿತಾ ಶೆಟ್ಟಿ, ವೇದಿಕೆಯ ಮೇಲೆ ಬಿಕ್ಕಿ ಬಿಕ್ಕಿ ಅತ್ತಿದ್ದು ಎಲ್ಲರ ಗಮನ ಸೆಳೆಯಿತು. “ಮನೆಯಲ್ಲಿದ್ದಾಗ ನಾವೆಲ್ಲರೂ ಸದಾ ಒಟ್ಟಿಗಿರುತ್ತಿದ್ದೆವು, ಗಂಟೆಗಟ್ಟಲೆ ಮಾತನಾಡುತ್ತಿದ್ದೆವು. ಆದ್ರೆ ಈಗ ಎಲ್ಲರೂ ದೂರವಾಗುತ್ತಿದ್ದಾರೆ ಎಂಬ ನೋವು ಕಾಡುತ್ತಿದೆ” ಎಂದು ಕಣ್ಣೀರಿಟ್ಟಳು. ಬಿಗ್‌ಬಾಸ್ ಮನೆಯ ಕ್ಷಣಿಕ ವಾತಾವರಣದ ನಡುವೆಯೂ ಹುಟ್ಟಿಕೊಂಡ ಈ ನೈಜ ಸ್ನೇಹದ ಬೆಸುಗೆಯನ್ನು ಕಳೆದುಕೊಳ್ಳಲು ಇಷ್ಟಪಡುತ್ತಿಲ್ಲ ಎಂಬುದು ರಕ್ಷಿತಾಳ ಮಾತುಗಳಲ್ಲಿ ಸ್ಪಷ್ಟವಾಗಿತ್ತು.

ರಕ್ಷಿತಾ ಭಾವುಕರಾದ ತಕ್ಷಣ, ವೇದಿಕೆಯ ಮೇಲಿದ್ದ ‘ಗಿಲ್ಲಿ’ ನಟ ಮತ್ತು ರಘು ತಡಮಾಡದೆ ಬಳಿ ಓಡಿಬಂದು ಸಮಾಧಾನಪಡಿಸಿದರು. ಮೂವರೂ ಪರಸ್ಪರ ಅಪ್ಪಿಕೊಂಡು ಸಂಭ್ರಮಿಸಿದ ರೀತಿ ನೋಡುಗರ ಕಣ್ಣಲ್ಲಿ ಕಂಬನಿ ಮಿಡಯುವಂತೆ ಮಾಡಿತು. ಬಿಗ್‌ಬಾಸ್ ಮನೆಯೊಳಗೆ ‘ಮೂವರು ಗೆಳೆಯರು’ ಎಂದೇ ಗುರುತಿಸಿಕೊಂಡಿದ್ದರು. ಗಿಲ್ಲಿಯ ತಮಾಷೆ, ರಘುನ ತಿಳುವಳಿಕೆ ಮತ್ತು ರಕ್ಷಿತಾಳ ಮುಗ್ಧತೆ ಈ ಮೂವರ ಸ್ನೇಹದ ಶಕ್ತಿಯಾಗಿತ್ತು. ವೇದಿಕೆಯ ಮೇಲೆ ತೋರಿದ ಒಗ್ಗಟ್ಟು, ಆಟ ಮುಗಿದರೂ ಸ್ನೇಹ ಮುಗಿದಿಲ್ಲ ಎಂಬುದನ್ನು ಸಾರಿತು.

ಈ ಪ್ರೋಮೊ ಬಿಡುಗಡೆಯಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ತಮ್ಮ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. “ಗಿಲ್ಲಿಯ ತರಲೆ-ತುಂಟಾಟಗಳನ್ನು ಮತ್ತು ರಕ್ಷಿತಾ ಆ ಮುಗ್ಧ ನಗುವನ್ನು ನಾವು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ” ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಅಶ್ವಿನಿ ಗೌಡ ಹೇಳಿದಂತೆ, ಬಿಗ್‌ಬಾಸ್ ಮನೆಯು ದೂಡ್ಡವರನ್ನು ಮಕ್ಕಳನ್ನಾಗಿ ಮಾಡುತ್ತದೆ ಎಂಬ ಮಾತು ಅಕ್ಷರಶಃ ನಿಜವೆನಿಸಿದೆ.

ಒಟ್ಟಾರೆಯಾಗಿ ಬಿಗ್‌ಬಾಸ್ ಸೀಸನ್ 12ರ ಈ ಸ್ಪರ್ಧಿಗಳು ಸ್ಪರ್ಧೆಯ ಆಚೆಗೂ ಬೆಳೆಸಿಕೊಂಡಿರುವ ಈ ಮಾನವೀಯ ಸಂಬಂಧಗಳು ಪ್ರೇಕ್ಷಕರಿಗೆ ಹತ್ತಿರವಾಗಿವೆ. ‘ದೊಡ್ಡಮನೆ ಹಬ್ಬ’ ಕೇವಲ ಸಂಭ್ರಮದ ವೇದಿಕೆಯಾಗದೆ, ಸ್ನೇಹದ ಸಂಕೇತವಾಗಿ ಹೊರಹೊಮ್ಮಿದೆ.

The post ಬಿಗ್‌ ಬಾಸ್‌ ರಕ್ಷಿತಾ ಕಣ್ಣಿರು: ಸ್ನೇಹಬಂಧ ಮೇರದ ಗಿಲ್ಲಿ, ರಘು appeared first on Samyukta Karnataka.

‘ಕಲರ್ಸ್‌ ದೊಡ್ಮನೆ ಹಬ್ಬ’ದ ಮೆರುಗು; ಬಿಗ್ ಬಾಸ್ ಸ್ಪರ್ಧಿಗಳಿಂದ ಮನರಂಜನೆಯ ಮಹಾಪೂರ!
ಕನ್ನಡಿಗರ ನೆಚ್ಚಿನ ಮನರಂಜನಾ ವಾಹಿನಿ ‘ಕಲರ್ಸ್‌ ಕನ್ನಡ’ ಸದಾ ನವನವೀನ ಕಾರ್ಯಕ್ರಮಗಳ ಮೂಲಕ ವೀಕ್ಷಕರನ್ನು ಸೆಳೆಯುತ್ತಲೇ ಇರುತ್ತದೆ. ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 12 ಮುಕ್ತಾಯದ ನಂತರವೂ ಆ ಗುಂಗಿನಲ್ಲೇ ಇರುವ ಅಭಿಮಾನಿಗಳಿಗೆ ವಾಹಿನಿಯು ಭರ್ಜರಿ ಉಡುಗೊರೆಯೊಂದನ್ನು ನೀಡಲು ಮುಂದಾಗಿದೆ. ಫೆಬ್ರವರಿ 14ರಂದು “ಕಲರ್ಸ್‌ ದೊಡ್ಮನೆ ಹಬ್ಬ” ಎಂಬ ಅದ್ಧೂರಿ ಕಾರ್ಯಕ್ರಮ ಪ್ರಸಾರವಾಗಲಿದೆ.

ಕನ್ನಡ ಮೂರು ಗಂಟೆಗಳ ಕಾಲ ವೀಕ್ಷಕರನ್ನು ರಂಜಿಸಲಿದೆ. ಶನಿವಾರದಂದು (ಫೆ.14) ಕರುನಾಡಿನ ಮನೆ ಮಂದಿಯೆಲ್ಲ ಕುಳಿತು ನೋಡಬಹುದಾದ ಅತ್ಯುತ್ತಮ ಕಾರ್ಯಕ್ರಮ ಇದಾಗಲಿದೆ. ಅಂದಹಾಗೆ, ಈ “ಕಲರ್ಸ್‌ ದೊಡ್ಮನೆ ಹಬ್ಬ” ಇದೇ ಶನಿವಾರ ಸಂಜೆ 6:00 ಗಂಟೆಯಿಂದ ರಾತ್ರಿ 9:00 ಗಂಟೆಯವರೆಗೆ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಬಿಗ್ ಬಾಸ್ ಕನ್ನಡ ಸೀಸನ್‌ 12ರ ಎಲ್ಲಾ ಸ್ಪರ್ಧಿಗಳು ಹೊರಬಂದ ಮೇಲೆ ಇದೇ ಮೊದಲ ಬಾರಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮನೆಯೊಳಗಿನ ಗಂಭೀರ ವಾತಾವರಣದ ಬದಲು ಇಲ್ಲಿ ಕೇವಲ ನಗು, ಹರಟೆ ಮತ್ತು ಸಂಭ್ರಮಕ್ಕೆ ಮಾತ್ರ ಆದ್ಯತೆ ನೀಡಲಾಗಿದೆ. ನಕ್ಕು ನಗಿಸುವ ಸಾಕಷ್ಟು ಝಲಕ್‌ಗಳು ಈ “ಕಲರ್ಸ್‌ ದೊಡ್ಮನೆ ಹಬ್ಬ”ದ ಹೈಲೈಟ್‌.

ಭಾಗ್ಯಲಕ್ಷ್ಮೀ ಸೀರಿಯಲ್‌ ನಟಿ ಹಾಗೂ ನಿರೂಪಕಿ ಸುಷ್ಮಾ ರಾವ್ ತಮ್ಮ ಎಂದಿನ ಲವಲವಿಕೆಯಿಂದ ಈ ಕಾರ್ಯಕ್ರಮಕ್ಕೆ ಮೆರುಗು ನೀಡಲಿದ್ದಾರೆ. ಬಿಗ್ ಬಾಸ್ ಸ್ಪರ್ಧಿಗಳ ಗುಟ್ಟುಗಳನ್ನು ಹೊರಹಾಕುವಲ್ಲಿ ಸುಷ್ಮಾ ಅವರ ಚಾತುರ್ಯ ಇಲ್ಲಿ ಹೈಲೈಟ್. ಕಾರ್ಯಕ್ರಮದಲ್ಲಿ ಕೇವಲ ಹಾಡು-ಕುಣಿತ ಅಷ್ಟೇ ಅಲ್ಲದೆ, ಬಿಗ್ ಬಾಸ್ ಮನೆಯ ಟಾಸ್ಕ್‌ಗಳನ್ನು ನೆನಪಿಸುವಂತಹ ತಮಾಷೆಯ ಗೇಮ್‌ಗಳನ್ನು ಸುಷ್ಮಾ ಅವರು ಆಡಿಸಿ ರಂಜಿಸಿದ್ದಾರೆ. ಇದು ಸ್ಪರ್ಧಿಗಳ ನಡುವಿನ ಹಳೆಯ ಕಾಲೆಳೆಯುವ ಗುಣವನ್ನು ಮತ್ತೆ ನೆನಪಿಸಲಿದೆ.

ಈ ಬಾರಿಯ ಬಿಗ್ ಬಾಸ್‌ನಲ್ಲಿ ಅತಿ ಹೆಚ್ಚು ಚರ್ಚೆಗೊಳಗಾದವರೆಂದರೆ ಅದು ಬಿಗ್‌ಬಾಸ್‌ ವಿಜೇತ ಗಿಲ್ಲಿ ನಟ. ಇದೀಗ ಇದೇ ದೊಡ್ಮನೆ ಹಬ್ಬ ಕಾರ್ಯಕ್ರಮದಲ್ಲಿ ಗಿಲ್ಲಿ ಅಭಿಮಾನಿಗಳಿಗಾಗಿಯೇ ವಿಶೇಷ ವೇದಿಕೆ ಕಲ್ಪಿಸಲಾಗಿದೆ. ಅವರ ಬಿಗ್‌ ಬಾಸ್‌ ಜರ್ನಿಯನ್ನು ಸಂಭ್ರಮಿಸುವ ಜೊತೆಗೆ, ಫ್ಯಾನ್ಸ್‌ ಸಹ ಈ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ.

ಬಿಗ್ ಬಾಸ್‌ ಸೀಸನ್‌ 12ರ ಸ್ಪರ್ಧಿಗಳು ವೇದಿಕೆ ಮೇಲೆ ತಮ್ಮಿಷ್ಟದ ಹಾಡಿಗೆ ನೃತ್ಯ ಮಾಡಿ ಸಂಭ್ರಮಿಸಿದ್ದಾರೆ. ಬಿಗ್‌ ಬಾಸ್‌ ದಿನಗಳನ್ನು ಮೆಲುಕು ಹಾಕಿದ್ದಾರೆ. ಹೊರ ಬಂದ ಮೇಲೆ ಸಿಕ್ಕ ಪ್ರತಿಕ್ರಿಯೆ ಹೇಗಿತ್ತು ಅನ್ನೋದನ್ನೂ ಹೇಳಿಕೊಂಡಿದ್ದಾರೆ. ಇದೆಲ್ಲ ಮನರಂಜನೆಯ ರಸದೌತಣವನ್ನು ಸವಿಯಲು ಕಲರ್ಸ್‌ ದೊಡ್ಮನೆ ಹಬ್ಬ ಕಾರ್ಯಕ್ರಮವನ್ನು ಮಿಸ್‌ ಮಾಡಲೇಬೇಡಿ. ಇದೇ ಫೆಬ್ರವರಿ 14ರ ಸಂಜೆ 6 ಗಂಟೆಗೆ ಮೂರು ಗಂಟೆಗಳ ಮನರಂಜನೆ ನಿಮ್ಮ ನೆಚ್ಚಿನ ಕಲರ್ಸ್‌ ಕನ್ನಡದಲ್ಲಿ.

The post ‘ಕಲರ್ಸ್‌ ದೊಡ್ಮನೆ ಹಬ್ಬ’ದ ಮೆರುಗು; ಬಿಗ್ ಬಾಸ್ ಸ್ಪರ್ಧಿಗಳಿಂದ ಮನರಂಜನೆಯ ಮಹಾಪೂರ! appeared first on Samyukta Karnataka.

ಬಿಗ್ ಬಾಸ್ ವಿನ್ನರ್ ಗಿಲ್ಲಿಗೆ ಸಂಕಷ್ಟ; ಹಳ್ಳಿ ಪ್ರತಿಭೆ ಮೇಲೆ ಮೊದಲ ಬಾರಿಗೆ ಗಂಭೀರ ಆರೋಪ
“ದುಡ್ಡೆ ದೊಡಪ್ಪ” ದುಡ್ಡು ಬಂದ ಮೇಲೆ ಗಿಲ್ಲಿ ಹವಾ ಬೇರೆನೇ ಆಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 12ರ ಕಿರೀಟ ಮುಡಿಗೇರಿಸಿಕೊಂಡ ಹಾಸ್ಯ ನಟ ‘ಗಿಲ್ಲಿ’ ಸದ್ಯ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಗಿಲ್ಲಿ ಜನಪ್ರಿಯತೆ ಗಗನಕ್ಕೇರಿದ್ದು, ಸೋಶಿಯಲ್ ಮೀಡಿಯಾದಲ್ಲಿ ಕಾಮಿಡಿ ವಿಡಿಯೋಗಳು ಸಖತ್ ಟ್ರೆಂಡ್ ಆಗುತ್ತಿವೆ. ಆದ್ರೆ ಈ ಯಶಸ್ಸಿನ ನಡುವೆಯೇ ಗಿಲ್ಲಿ ನಟ ಈಗ ಹೊಸದೊಂದು ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.

ಚಿತ್ರತಂಡದ ಗಂಭೀರ ಆರೋಪ: ಗಿಲ್ಲಿ ನಟ ನಟಿಸಿರುವ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ‘ಸರ್ಕಾರಿ ಶಾಲೆ H8’ ಇಂದು (ಫೆಬ್ರುವರಿ 6) ರಾಜ್ಯದಾದ್ಯಂತ ಬಿಡುಗಡೆಯಾಗಿದೆ. ಆದ್ರೆ ಸಿನಿಮಾದ ಬಿಡುಗಡೆ ಪೂರ್ವ ಪ್ರಚಾರ ಕಾರ್ಯಗಳಿಗೆ (Promotions) ಗಿಲ್ಲಿ ನಟ ಭಾಗಿಯಾಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಬಿಗ್ ಬಾಸ್ ವಿನ್ನರ್ ಆದ ನಂತರ ಸಿಕ್ಕ ಜನಪ್ರಿಯತೆಯ ಗುಂಗಿನಲ್ಲಿರುವ ನಟ, ತಮ್ಮದೇ ಸಿನಿಮಾದ ಪ್ರಚಾರಕ್ಕೆ ಅಸಹಕಾರ ತೋರುತ್ತಿದ್ದಾರೆ ಎಂದು ಚಿತ್ರತಂಡ ದೂರಿದೆ. ಸಿನಿಮಾ ಬಿಡುಗಡೆಯ ಸಂಭ್ರಮದಲ್ಲಿ ಇರಬೇಕಾದ ತಂಡಕ್ಕೆ ನಟನ ಈ ನಡೆ ಬೇಸರ ತರಿಸಿದೆ.

ನಿಗೂಢ ಕಥೆಯ ‘ಸರ್ಕಾರಿ ಶಾಲೆ H8’: ಗುಣ ಹರಿಯಬ್ಬೆ ಬರೆದು ನಿರ್ದೇಶಿಸಿರುವ ಈ ಚಿತ್ರವು ಕೇವಲ ಹಾಸ್ಯಕ್ಕೆ ಸೀಮಿತವಾಗದೆ, ಒಂದು ನಿಗೂಢ ವಿಗ್ರಹದ ಸುತ್ತ ಸಾಗುವ ಸಸ್ಪೆನ್ಸ್ ಕಥಾಹಂದರವನ್ನು ಹೊಂದಿದೆ. ಗಿರಿಚಂದ್ರ ಪ್ರೊಡಕ್ಷನ್ಸ್ ಅಡಿಯಲ್ಲಿ ತೇಜಸ್ವಿನಿ ಎಸ್.ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದಲ್ಲಿ ಗಿಲ್ಲಿ ಜೊತೆ ಹಿರಿಯ ನಟ ರಾಘವೇಂದ್ರ ರಾಜ್‌ಕುಮಾರ್, ಮೇಘಶ್ರೀ, ಸುಚೇಂದ್ರ ಪ್ರಸಾದ್ ಹಾಗೂ ಬಿಗ್ ಬಾಸ್ ಖ್ಯಾತಿಯ ಜಗ್ಗಪ್ಪ ಮತ್ತು ನವಾಜ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ತಾಂತ್ರಿಕ ಶ್ರೀಮಂತಿಕೆ: ಚಿತ್ರಕ್ಕೆ ವಿಜೇತ್ ಮಂಜಿಯಾ ಸಂಗೀತ ನೀಡಿದ್ದು, ಡಾ. ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ವಿಶೇಷವೆಂದರೆ, ಹಾಸ್ಯನಟ ಶರಣ್ ಮತ್ತು ಮೆಹಬೂಬ್ ಸಾಬ್ ಚಿತ್ರದ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಬೆಂಗಳೂರು, ಚಿತ್ರದುರ್ಗ, ಶಿವಮೊಗ್ಗದಂತಹ ಸುಂದರ ತಾಣಗಳಲ್ಲಿ ಈ ಚಿತ್ರವನ್ನು ಚಿತ್ರೀಕರಿಸಲಾಗಿದೆ.

ಸದ್ಯ ಗಿಲ್ಲಿ ನಟನ ಅಭಿಮಾನಿಗಳು ಸಿನಿಮಾ ವೀಕ್ಷಿಸಲು ಉತ್ಸುಕರಾಗಿದ್ದರೂ, ಚಿತ್ರತಂಡ ಮಾಡಿರುವ ಅಸಹಕಾರದ ಆರೋಪ ಗಿಲ್ಲಿ ಇಮೇಜ್ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.

The post ಬಿಗ್ ಬಾಸ್ ವಿನ್ನರ್ ಗಿಲ್ಲಿಗೆ ಸಂಕಷ್ಟ; ಹಳ್ಳಿ ಪ್ರತಿಭೆ ಮೇಲೆ ಮೊದಲ ಬಾರಿಗೆ ಗಂಭೀರ ಆರೋಪ appeared first on Samyukta Karnataka.

ಬಿಗ್‌ಬಾಸ್‌ ರನ್ನರ್ ಅಪ್ ರಕ್ಷಿತಾ ಶೆಟ್ಟಿ : ‘ಬಾಯ್‌ಫ್ರೆಂಡ್’ ಜೊತೆ ವ್ಯಾಲೆಂಟೈನ್ಸ್‌ ಡೇ, ಯಾರು ಈ ಹುಡುಗ?
ಬಿಗ್‌ಬಾಸ್‌ ಕನ್ನಡ ಸೀಸನ್ 12ರ ಮೂಲಕ ಕನ್ನಡಿಗರ ಮನೆಮಾತಾಗಿರುವ ‘ಪಟಾಕಿ ಪೋರಿ’ ರಕ್ಷಿತಾ ಶೆಟ್ಟಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಲ್ಲಿದ್ದಾರೆ. ಬಿಗ್‌ಬಾಸ್‌ ಮನೆಯೊಳಗೆ ತಮ್ಮ ವಿಭಿನ್ನ ಮ್ಯಾನರಿಸಂ ಹಾಗೂ ಕಿರಿಕ್ ಮೂಲಕವೇ ಗುರುತಿಸಿಕೊಂಡಿದ್ದ ರಕ್ಷಿತಾ, ಇದೀಗ ತಮ್ಮ ವೈಯಕ್ತಿಕ ಜೀವನದ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಹುಡುಗನೊಬ್ಬನ ಜೊತೆ ವ್ಯಾಲೆಂಟೈನ್ಸ್ ಡೇ ಆಚರಿಸುತ್ತಿರುವ ಹಳೆಯ ವಿಡಿಯೋವೊಂದು ವೈರಲ್ ಆಗಿದೆ.

ವೈರಲ್ ವಿಡಿಯೋದಲ್ಲಿ ಏನಿದೆ?: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ರಕ್ಷಿತಾ ಶೆಟ್ಟಿ ಯುವಕನೊಬ್ಬನ ಜೊತೆ ಬಹಳ ಆಪ್ತವಾಗಿ ವ್ಯಾಲೆಂಟೈನ್ಸ್ ಡೇ ಸೆಲೆಬ್ರೇಟ್ ಮಾಡುತ್ತಿರುವ ದೃಶ್ಯಗಳು ಹರಿದಾಡಿದ್ದವು. ಇದನ್ನು ನೋಡಿದ ನೆಟ್ಟಿಗರು ಹಾಗೂ ಅಭಿಮಾನಿಗಳು, “ರಕ್ಷಿತಾ ಬಾಯ್‌ಫ್ರೆಂಡ್ ಇವರೇನಾ?” ಎಂದು ಪ್ರಶ್ನಿಸಲು ಶುರು ಮಾಡಿದ್ದರು.

ಹಾಗೇ ಇನ್ನು ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ, “ಬಾಯ್‌ಫ್ರೆಂಡ್ ಇದ್ದರೂ ಬಿಗ್‌ಬಾಸ್ ಮನೆಯೊಳಗೆ ಸಿಂಗಲ್ ಎಂಬಂತೆ ನಾಟಕ ಮಾಡಿದ್ದರು” ಎಂದು ಟೀಕೆ ವ್ಯಕ್ತಪಡಿಸಿದ್ದರು. ಈ ವಿಡಿಯೋ ಸಖತ್ ವೈರಲ್ ಆಗುತ್ತಿದ್ದಂತೆಯೇ ರಕ್ಷಿತಾ ಶೆಟ್ಟಿ ವಿರುದ್ಧ ಪರ-ವಿರೋಧದ ಚರ್ಚೆಗಳು ಆರಂಭವಾಗಿವೆ.

ಚರ್ಚೆಗೆ ರಕ್ಷಿತಾ ಶೆಟ್ಟಿ ನೀಡಿದ ಸ್ಪಷ್ಟನೆ: ತಮ್ಮ ಬಗ್ಗೆ ಹರಿದಾಡುತ್ತಿರುವ ಗಾಳಿ ಸುದ್ದಿಗೆ ಸ್ವತಃ ರಕ್ಷಿತಾ ಶೆಟ್ಟಿ ಬ್ರೇಕ್ ಹಾಕಿದ್ದಾರೆ. ಆ ವಿಡಿಯೋದ ಹಿಂದಿರುವ ಸತ್ಯಾಸತ್ಯತೆಯನ್ನು ಬಿಚ್ಚಿಟ್ಟಿದ್ದಾರೆ, ಅದು ಯಾವುದೇ ಪ್ರೇಮ ಸಂಬಂಧವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ಆ ವಿಡಿಯೋ ಕೇವಲ ಒಂದು ಪ್ರಮೋಷನಲ್ ಶೂಟ್ ಆಗಿತ್ತು.

ವ್ಯಾಲೆಂಟೈನ್ಸ್ ಡೇ ಪ್ರಮೋಷನ್ ಮಾಡುವಾಗ ಒಬ್ಬರೇ ಮಾಡಲು ಸಾಧ್ಯವಿಲ್ಲದ ಕಾರಣ, ನನ್ನ ಸ್ನೇಹಿತನ ಜೊತೆ ಆ ವಿಡಿಯೋ ಮಾಡಿದ್ದೆ. ಅದನ್ನು ನೋಡಿ ಜನರು ತಪ್ಪಾಗಿ ಭಾವಿಸಿದ್ದಾರೆ. ನನಗೂ ಆತನಿಗೂ ಯಾವುದೇ ಪ್ರೇಮ ಸಂಬಂಧವಿಲ್ಲ,” ಎಂದು ಅಭಿಮಾನಿಗಳಿಗೆ ಕ್ಲಾರಿಟಿ ಕೊಟ್ಟಿದ್ದಾರೆ.

ಸೋಶಿಯಲ್ ಮೀಡಿಯಾ ಪಟಾಕಿ: ಮೂಲತಃ ಯೂಟ್ಯೂಬ್ ವ್ಲಾಗ್‌ಗಳ ಮೂಲಕ ಫೇಮಸ್ ಆಗಿದ್ದ ರಕ್ಷಿತಾ ಶೆಟ್ಟಿ, ಬಿಗ್‌ಬಾಸ್ ಸೀಸನ್ 12ರಲ್ಲಿ ರನ್ನರ್ ಅಪ್ ಆಗುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ. ಸದ್ಯ ದೊಡ್ಡ ಮಟ್ಟದ ಫ್ಯಾನ್ ಬೇಸ್ ಹೊಂದಿರುವ ರಕ್ಷಿತಾ, ಇಂತಹ ಟ್ರೋಲ್‌ಗಳಿಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ತಮ್ಮ ವೃತ್ತಿಜೀವನದತ್ತ ಗಮನ ಹರಿಸುತ್ತಿದ್ದಾರೆ. ಸದ್ಯಕ್ಕೆ ಅವರು ‘ಸಿಂಗಲ್’ ಎಂಬುದನ್ನೇ ತಮ್ಮ ಮಾತುಗಳ ಮೂಲಕ ಪರೋಕ್ಷವಾಗಿ ಸಾಬೀತುಪಡಿಸಿದ್ದಾರೆ.

ಒಟ್ಟಿನಲ್ಲಿ ವೈರಲ್ ಆಗಿದ್ದ ಆ ವಿಡಿಯೋ ಕೇವಲ ವೃತ್ತಿಪರ ಕೆಲಸದ ಭಾಗವಾಗಿತ್ತೇ ಹೊರತು, ರಕ್ಷಿತಾ ಖಾಸಗಿ ಬದುಕಿನ ಪ್ರೇಮ ಕಥೆಯಲ್ಲ ಎಂಬುದನ್ನ ಸ್ಪಷ್ಟ ಪಡಿಸಿದ್ದಾರೆ.

The post ಬಿಗ್‌ಬಾಸ್‌ ರನ್ನರ್ ಅಪ್ ರಕ್ಷಿತಾ ಶೆಟ್ಟಿ : ‘ಬಾಯ್‌ಫ್ರೆಂಡ್’ ಜೊತೆ ವ್ಯಾಲೆಂಟೈನ್ಸ್‌ ಡೇ, ಯಾರು ಈ ಹುಡುಗ? appeared first on Samyukta Karnataka.

ಬಿಗ್‌ಬಾಸ್‌ ಕನ್ನಡ ಸೀಸನ್‌ 12: ಇದ್ದ ಆರರಲ್ಲಿ ಗೆಲ್ಲೋರ್‍ಯಾರು?
ಬಿಗ್‌ಬಾಸ್ ಕನ್ನಡ ಸೀಸನ್ 12 ಈಗಾಗಲೇ ಫಿನಾಲೆ ಹಂತ ತಲುಪಿದೆ. ಅಂತಿಮವಾಗಿ ಮನೆಯಲ್ಲಿ ಇರುವ ಆರು ಜನ ಸ್ಪರ್ಧಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಇಂದು ಸಂಜೆ ವಿನ್ನರ್‌ ಯಾರೆಂದು ಘೋಷಣೆಯಾಗುವ ಸಮಯಕ್ಕೆ ಈಗಾಗಲೇ ಜನ ಕಾತುರದಿಂದ ಕಾಯುತ್ತಿದ್ದಾರೆ.

ಮಮೆಯಲ್ಲಿ ಸ್ಪರ್ಧಿಗಳ ಆಟ ಒಂದಡೆಯಾದರೆ, ಸಾಮಾಜಿಕ ಜಾಲತಾಣದಲ್ಲಿ ಗಿಲ್ಲಿ ನಟ, ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿ ಅವರೇ ಟಾಪ್ ಮೂರರಲ್ಲಿದ್ದಾರೆ ಎಂಬ ಚರ್ಚೆ ಜೋರಾಗಿದೆ. ಇನ್ನು ಗಿಲ್ಲಿ ನಟನ ಅಭಿಮಾನಿಗಳಂತೂ ಗಿಲ್ಲಿ ಈಗಾಗಲೇ ಗೆದ್ದಾಯ್ತು ಎನ್ನುತ್ತಿದ್ದಾರೆ.

ಸದ್ಯ ಮನೆಯಲ್ಲಿ ಅಂತಿಮವಾಗಿ ಗಿಲ್ಲಿ ನಟ, ಅಶ್ವಿನಿ ಗೌಡ, ರಘು, ರಕ್ಷಿತಾ ಶೆಟ್ಟಿ, ಧನುಷ್ ಮತ್ತು ಕಾವ್ಯಾ ಶೈವ ಫಿನಾಲೆ ಅಭ್ಯರ್ಥಿಗಳಾಗಿದ್ದಾರೆ. ಈ ಆರು ಜನರಲ್ಲಿ ಯಾರು ವಿನ್ನರ್ ಎಂಬುದರ ಬಗ್ಗೆ ಬಿಸಿ ಬಿಸಿ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಲೇ ಇದೆ.

ಗಿಲ್ಲಿ ಕ್ರೇಜ್‌ ಜೋರು: ಬಿಗ್‌ ಮನೆಗೆ ಗಿಲ್ಲಿ ಕಾಲಿಡುತ್ತಿದ್ದಂತೆ ತಮ್ಮದೇಯಾದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. ಗಿಲ್ಲಿ ನಟನ ಬಗ್ಗೆ ಹೊರಗಡೆ ಇರುವ ಕ್ರೇಜ್ ಅಸಾಧಾರಣ ಆಗಿದೆ. ಅದನ್ನು ನೋಡಿದ ಎಲ್ಲರೂ ಕೂಡ ಗಿಲ್ಲಿ ಗೆಲ್ಲೋದು ಪಕ್ಕಾ ಎನ್ನುವ ಮಾತನ್ನೇ ಹೇಳುತ್ತಿದ್ದಾರೆ. ಗಿಲ್ಲಿ ಬಿಗ್ ಬಾಸ್ ವಿನ್ನರ್ ಎನ್ನುವುದಲ್ಲೆಕ್ಕೆ ಈ ಕ್ರೇಜ್ ಸಾಕ್ಷಿ ಎನ್ನುತ್ತಿದ್ದಾರೆ ಗಿಲ್ಲಿ ಫ್ಯಾನ್ಸ್.

37+ ಕೋಟಿ ವೋಟು: ಬಿಗ್‌ಬಾಸ್‌ ಕನ್ನಡ ಸೀಸನ್‌ನಲ್ಲಿ ಹಿಂದೆಂದೂ ಕಾಣದ ದಾಖಲೆ ಈ ಬಾರಿ ಆಗಿದೆ. 37 ಕೋಟಿಗೂ ಅಧಿಕ ವೋಟ್‌ ವಿನ್ನರ್‌ಗೆ ಸಿಕ್ಕಿದೆ ಎಂದು ಕಿಚ್ಚ ಸುದೀಪ್‌ ಹೇಳಿದ್ದಾರೆ. ಆದರೆ, ಎರಡನೇ ಸ್ಥಾನಕ್ಕೆ ಬಹಳಷ್ಟು ಅಂತರವಿದೆ ಎನ್ನುವುದನ್ನೂ ಹೇಳಿದ್ದಾರೆ. ಈ ಸೀಸನ್‌ ವಿನ್ನರ್‌ ಯಾರು ಇರಬೋದು? ಯಾರಿಗೆ ಇಷ್ಟು ವೋಟ್‌ ಸಿಕ್ಕಿದೆ? ಎನ್ನುವದನ್ನ ತಿಳಿಯಲು ರಾತ್ರಿಯ ವರೆಗೂ ಕಾಯಬೇಕಾಗಿದೆ.

The post ಬಿಗ್‌ಬಾಸ್‌ ಕನ್ನಡ ಸೀಸನ್‌ 12: ಇದ್ದ ಆರರಲ್ಲಿ ಗೆಲ್ಲೋರ್‍ಯಾರು? appeared first on Samyukta Karnataka.

ತಪ್ಪು ಸರಿಪಡಿಸಿಕೊಳ್ಳಲು ಜಾಲಿವುಡ್‌ ಸ್ಟುಡಿಯೋಗೆ ಅವಕಾಶ: ಡಿ.ಕೆ. ಶಿವಕುಮಾರ್
ರಾಜ್ಯ ರಾಜಕಾರಣದಲ್ಲಿ ಸದಾ ಸುದ್ದಿಯಲ್ಲಿರುವ ಡಿಕೆ ಶಿವಕುಮಾರ್ ಇದೀಗ ಬಿಗ್‌ಬಾಸ್‌ ಕಾರ್ಯಕ್ರಮಕ್ಕೆ ಆತಿಥ್ಯ ವಹಿಸುವ ಜಾಲಿವುಡ್ ಸ್ಟುಡಿಯೋ ವಿಷಯದಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನು ಪಾಲಿಸಿಲ್ಲ ಎಂಬ ಕಾರಣಕ್ಕೆ ಈ ಸ್ಟುಡಿಯೋವನ್ನು ಬಂದ್ ಮಾಡಲಾಗಿತ್ತು. ಆದರೆ, ಈ ನಿರ್ಧಾರದಿಂದ ಉದ್ಯೋಗ ಕಳೆದುಕೊಳ್ಳುವ ಆತಂಕದಲ್ಲಿದ್ದ ಅನೇಕರಿಗೆ ಡಿಕೆ ಶಿವಕುಮಾರ್ ಮಧ್ಯಪ್ರವೇಶವು ಭರವಸೆ ಮೂಡಿಸಿದೆ.

ಡಿಕೆ ಶಿವಕುಮಾರ್ ಜಿಲ್ಲಾಧಿಕಾರಿಯೊಂದಿಗೆ ಈ ಬಗ್ಗೆ ಚರ್ಚಿಸಿದ್ದು, ಪರಿಸ್ಥಿತಿಯ ಗಂಭೀರತೆಯನ್ನು ಅರಿತಿದ್ದಾರೆ. “ಖಾಸಗಿಯವರು ಇಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡಿದ್ದಾರೆ. ನೂರಾರು ಜನರಿಗೆ ಉದ್ಯೋಗ ನೀಡಿದ್ದಾರೆ. ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಅವರಿಗೆ ಒಂದು ಅವಕಾಶ ನೀಡಬೇಕು. ತಿದ್ದುಪಡಿ ಮಾಡಿಕೊಂಡು ಮುಂದುವರೆಯಲು ಅನುಮತಿ ನೀಡಬೇಕು” ಎಂದು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.

ಈ ನಡೆಯು ಕೇವಲ ಒಂದು ಸ್ಟುಡಿಯೋವನ್ನು ಉಳಿಸುವುದಕ್ಕಿಂತ ಹೆಚ್ಚಾಗಿ, ಸಾವಿರಾರು ಕುಟುಂಬಗಳಿಗೆ ಆಧಾರವಾಗಲಿದೆ. ತಪ್ಪುಗಳನ್ನು ಸರಿಪಡಿಸಲು ಅವಕಾಶ ನೀಡುವುದು, ಉದ್ಯೋಗಗಳನ್ನು ರಕ್ಷಿಸುವುದು ಮತ್ತು ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು ಸರ್ಕಾರದ ಕರ್ತವ್ಯ ಎಂಬುದನ್ನು ಡಿಕೆ ಶಿವಕುಮಾರ್ ತಮ್ಮ ಈ ನಿರ್ಧಾರದ ಮೂಲಕ ತೋರಿಸಿಕೊಟ್ಟಿದ್ದಾರೆ.

ಜೆಡಿಎಸ್‌ನವರಿಗೆ ನಿದ್ದೆ ಬರಲ್ಲ!: ನನ್ನ ಬಗ್ಗೆ ಮಾತನಾಡದೆ ಇದ್ದರೆ ಜೆಡಿಎಸ್‌ನವರಿಗೆ ನಿದ್ದೆ ಬರಲ್ಲ, ಮಾಲಿನ್ಯ ನಿಯಂತ್ರಣ ಮಂಡಳಿ ಬಿಗ್ ಬಾಸ್ ಸ್ಟುಡಿಯೋಗ್ಗೆ ಬೀಗ ಹಾಕಿದ್ದು, ಇದರಿಂದ ಉದ್ಯೋಗಗಳ ಮೇಲೆ ಪರಿಣಾಮ ಬೀಳುತ್ತದೆ ಎಂದು ಸುಧಾರಣೆಗೆ ಅವಕಾಶ ನೀಡಲು ಜಿಲ್ಲಾಧಿಕಾರಿಯವರಿಗೆ ಕರೆ ಮಾಡಿ ತಿಳಿಸಿದ್ದೇನೆ. ತಪ್ಪುಗಳಾದರೆ ತಿದ್ದಿಕೊಳ್ಳಲು ಅವಕಾಶ ಕೊಡಬೇಕು.

ಇನ್ನೂ ಈ ಬಗ್ಗೆ ರಾಜಕೀಯ ಮಾಡುತ್ತಿರುವ ದಳದವರಿಗೆ, ನನ್ನ ಬಗ್ಗೆ ಮಾತನಾಡದೇ ಇದ್ದರೆ ನಿದ್ದೆ ಬರಲ್ಲ, ಅವರಿಗೆ ರಾಜಕೀಯ ಶಕ್ತಿ ಸಹ ಇಲ್ಲ. ಮಾಡುವುದಕ್ಕೆ ಬೇರೆ ಕೆಲಸ ಇಲ್ಲದೆ ಇದ್ದಾಗ ಈ ತರಹ ನಾವು ರಾಜಕೀಯವಾಗಿ ಜೀವಂತವಿದ್ದೇವೆಂದು ತೋರಿಸಿಕೊಳ್ಳಲು ಪ್ರಯತ್ನಿಸುತ್ತಾರೆ ಎಂದು ತಿರುಗೇಟು ನೀಡಿದ್ದಾರೆ.

The post ತಪ್ಪು ಸರಿಪಡಿಸಿಕೊಳ್ಳಲು ಜಾಲಿವುಡ್‌ ಸ್ಟುಡಿಯೋಗೆ ಅವಕಾಶ: ಡಿ.ಕೆ. ಶಿವಕುಮಾರ್ appeared first on Samyukta Karnataka.

Bigg Boss Kannada 12: ಬಿಗ್‌ ಬಾಸ್‌ ಆರಂಭಕ್ಕೆ ದಿನಗಣನೆ ಶುರು
ಬೆಂಗಳೂರು: “Expect the Unexpected” ಎಂಬ ಥೀಮ್‌ನಲ್ಲಿ ಆರಂಭವಾಗಲಿರುವ ಈ ಬಾರಿಯ ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಆರಂಭಕ್ಕೆ ದಿನಗಣನೆ ಶುರುವಾಗಿದೆ.

ಹನ್ನೊಂದು ವರ್ಷಗಳ ಭರ್ಜರಿ ಯಶಸ್ಸಿನ ಬಳಿಕ ಈಗ 12ನೇ ಸೀಸನ್‌ನಲ್ಲಿ ಕನ್ನಡಿಗರನ್ನು ರಂಜಿಸಲು ಬಿಗ್‌ ಬಾಸ್‌ ಮನೆ ಈಗಾಗಲೇ ಸಿದ್ಧಗೊಂಡಿದೆ.

ಸೆಪ್ಟೆಂಬರ್‍‌ 28ರಂದು ಭಾನುವಾರ ಬಿಗ್‌ಬಾಸ್‌ ಸೀಸನ್‌ 12ಕ್ಕೆ ಗ್ರ್ಯಾಂಡ್‌ ಓಪನಿಂಗ್‌ ಸಿಗಲಿದ್ದು, ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗಲಿದೆ.

ವೀಕೆಂಡ್‌ನಲ್ಲಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಇಡೀ ವಾರದ ಕಥೆ ಕಿಚ್ಚನ ಪ್ರಸಾರವಾಗಲಿರುವ . ಅಲ್ಲದೇ ಜಿಯೋ ಹಾಟ್‌ಸ್ಟಾರ್‍‌ನಲ್ಲಿ ವೀಕ್ಷಿಸಬಹುದಾಗಿದೆ.

ಓಹ್.. ಭ್ರಮೆ!: ಈಗಾಗಲೇ ಸಿಕ್ಕಾಪಟ್ಟೆ ಸದ್ದು ಮಾಡಿರುವ ಬಿಗ್‌ ಬಾಸ್‌ ಪ್ರೋಮೊ 10 ಮಿಲಿಯನ್‌ಗೂ ಹೆಚ್ಚು ವೀಕ್ಷಣೆಯನ್ನು ಪಡೆದಿದೆ. AI ತಂತ್ರಜ್ಞಾನ ಬಳಸಿಕೊಂಡು ಮಾಡಿರುವ ಈ ಪ್ರೋಮೊದಲ್ಲಿ ಸುದೀಪ್‌ ಕಾಗೆ ಮತ್ತು ನರಿಯ ಕಥೆ ಹೇಳಿ ಎಲ್ಲವೂ ಗೊತ್ತು ಎನ್ನುವವರಿಗೆ “ಓಹ್.. ಭ್ರಮೆ!” ಇದರಲ್ಲಿಯೂ ಟ್ವಿಸ್ಟ್‌ ಇದೆ ಎಂದು ಹೇಳಿದ್ದಾರೆ.

ಮೂಲಕ ಪ್ರೋಮೊ ಮೂಲಕವೇ ಈ ಬಾರಿಯ ಬಿಗ್‌ ಬಾಸ್‌ ವಿಭಿನ್ನ ಮತ್ತು ವಿಶೇಷತೆಯನ್ನು ಒಳಗೊಂಡಿದೆ ಎಂದು ಸುದೀಪ್‌ ಉತ್ತರಿಸಿದ್ದಾರೆ. ಬಿಗ್‌ ಬಾಸ್‌ ಬಗ್ಗೆ ನಮಗೆಲ್ಲಾ ಗೊತ್ತು ಎನ್ನುವವರ ಬಾಯಿ ಸುದೀಪ್‌ ಮುಚ್ಚಿಸಿದ್ದಾರೆ. ಅಷ್ಟೇ ಅಲ್ಲ ಸುದೀಪ್‌ ಲುಕ್‌ ಮತ್ತು ಸ್ಟೈಲ್ ಕೂಡ ಡಿಫರೆಂಟ್‌ ಆಗಿಯೇ ಮಾಡಿದ್ದಾರೆ.

ಸುದೀಪ್‌ ಮಾತಿಗಾಗಿ ಕಾಯುತ್ತಿರುವ ಪ್ರೇಕ್ಷಕರು: ವಾರಾಂತ್ಯದಲ್ಲಿ ವಾರದ ಕಥೆ ಕಿಚ್ಚನ ಜತೆ ಕೇಳುವುದು ಒಂದು ವಿಶೇಷ. ತಮ್ಮ ವಿಭಿನ್ನ ಕಾಸ್ಟ್ಯೂಮ್ಸ್‌ ಮತ್ತು ಐಕಾನಿಕ್ ಧ್ವನಿ, ಕಣ್ಸೆಳೆಯೋ ನಗು, ಸಮಸ್ಯೆಗಳನ್ನು ಪರಿಹರಿಸೋ ಚಾಣಾಕ್ಷತೆ ಮತ್ತು ತಪ್ಪಿದವರನ್ನು ತಿದ್ದುವ ಗಟ್ಟಿತನ, ಸ್ಪರ್ಧಿಗಳಿಗೆ ನೀಡುವ ಸಂದೇಶ ಎಲ್ಲವನ್ನೂ ನೋಡಲು ಪ್ರೇಕ್ಷಕರು ಕಾಯುತ್ತಾ ಕುಳಿತಿದ್ದಾರೆ.

ಹೇಗಿರಲಿದೆ ದೊಡ್ಮನೆ: ‘ಬಿಗ್‌ ಬಾಸ್’ ಮನೆ ಎಂದರೆ ಅದರ ವಿಶೇಷತೆಯೇ ಬೇರೆ. ಕ್ಯಾಮೆರಾಗಳಿಂದ ತುಂಬಿರುವ ಮನೆಯಲ್ಲಿ ಪ್ರತಿಯೊಂದು ಕ್ಷಣವನ್ನು ಸೆರೆ ಹಿಡಿಯಲಾಗುತ್ತದೆ. ವಿಭಿನ್ನ ಪ್ರವೇಶ, ಡಿಫರೆಂಟ್ ಕೋಣೆ, ಅಡುಗೆ ಮನೆ, ಸ್ವಿಮಿಂಗ್‌ ಫೂಲ್‌ ಹೀಗೆ ಎಲ್ಲವೂ ಭಿನ್ನ ವಿಭಿನ್ನವಾಗಿ ಕೂಡಿರುತ್ತವೆ. ಈ ಬಾರಿ ಮತ್ತಷ್ಟು ಭಿನ್ನವಾಗಿ ಹಲವು ವಿಶೇಷತೆಯನ್ನು ಬಿಗ್‌ ಬಾಸ್‌ ಮನೆ ಹೊಂದಿದೆ.

ಬಿಗ್ ಬಾಸ್ ಸ್ಪರ್ಧಿಗಳು: ಬಿಗ್ ಬಾಸ್ ಮನೆಗೆ ಈ ಬಾರಿಯ ಸದಸ್ಯರೂ ಕೂಡ ಡಿಫರೆಂಟ್ ಎಂದು ಹೇಳಲಾಗಿದೆ. ನಟ – ನಟಿಯರು, ಸಿಂಗರ್ಸ್, ಹಾಸ್ಯಕಾರರು, ಕುಕ್ಸ್ ಮತ್ತು ಯೂಟ್ಯೂಬ್‌ರ್ಸ್‌ ಹೀಗೆ ಬೇರೆ ಬೇರೆ ಕ್ಷೇತ್ರದ ವ್ಯಕ್ತಿಗಳನ್ನು ಸೇರಿಸಿ ಬಿಗ್ ಬಾಸ್ ಮನೆಯಲ್ಲಿ ಒಟ್ಟುಗೂಡಿಸಲಾಗುತ್ತಿದೆ. ವಿಭಿನ್ನ ಕ್ಷೇತ್ರದ ಭಿನ್ನ ಭಿನ್ನ ಮನಸಿನ ಸ್ಪರ್ಧಿಗಳು ಈ ಬಾರಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.

The post Bigg Boss Kannada 12: ಬಿಗ್‌ ಬಾಸ್‌ ಆರಂಭಕ್ಕೆ ದಿನಗಣನೆ ಶುರು appeared first on Samyukta Karnataka.

Bigg Boss Kannada 12: ಬಿಗ್‌ ಬಾಸ್‌ ಸ್ಪರ್ಧಿಗಳ ಪಟ್ಟಿ ವೈರಲ್
ಬಿಗ್ ಬಾಸ್ ಕನ್ನಡ ಸೀನಸ್-12 ಆರಂಭಕ್ಕೆ ಪ್ರೇಕ್ಷಕರು ದಿನಗಣನೆ ಶುರು ಮಾಡಿದ್ದಾರೆ. ಇದರ ಮಧ್ಯೆ ಯಾರೆಲ್ಲ ಬಿಗ್‌ ಬಾಸ್‌ ಮನೆಗೆ ಹೋಗುತ್ತಾರೆ ಎಂದು ತಿಳಿದುಕೊಳ್ಳುವ ಕುತೂಹಲವಂತೂ ಹೆಚ್ಚಾಗಿದೆ. ಇದರ ಮಧ್ಯೆ ಸೋಶಿಯಲ್‌ ಮೀಡಿಯಾದಲ್ಲಿ ಹಲವಾರು ಹೆಸರಗಳು ಹರಿದಾಡುತ್ತಿವೆ.

ಯಾರು ದೊಡ್ಮನೆಗೆ ಬರುತ್ತಾರೆ ಎಂಬುದರ ಬಗ್ಗೆ ಹಲವಾರ ಹೆಸರುಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ. ಇನ್ನ ಮತ್ತೊಂದಿಷ್ಟು ಹೊಸ ಹೆಸರುಗಳು ಈಗ ಪಟ್ಟಿಗೆ ಸೇರ್ಪಡೆಯಾಗಿವೆ. ಹೀಗೆ ವೈರಲ್‌ ಆಗುವ ಹೆಸರುಗಳಲ್ಲಿ ಒಂದಿಷ್ಟು ಹೆಸರುಗಳು ಕೂಡ ನಿಜವಾಗಿರುವುದು ಉಂಟು.

ಕಂಟೆಸ್ಟೆಂಟ್ ಲಿಸ್ಟ್ ವೈರಲ್: ಸೆಪ್ಟೆಂಬರ್ 28 ರಿಂದ ಆರಂಭವಾಗಲಿರುವ ಆಟದಲ್ಲಿ ಮನೆಯೊಳಗೆ ಹೋಗುವ ಸ್ಪರ್ಧಿಗಳು ಯಾರು? ಎನ್ನುವ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಸಹಜವಾಗಿದೆ. ಅಲ್ಲದೇ ಸದ್ಯ ಮತ್ತೊಂದು ಪಟ್ಟಿಯೊಂದು ವೈರಲ್‌ ಆಗಿದ್ದು ಇವರೇ ಬಿಗ್ ಬಾಸ್ ಸೀಸನ್ 12ರ ಸ್ಪರ್ಧಿಗಳು ಎಂದು ಹೇಳಲಾಗುತ್ತಿದೆ. ಈ ಪಟ್ಟಿಯಲ್ಲಿ ಯಾರೆಲ್ಲ ಹೆಸರಿದೆ, ಎನ್ನುವ ವಿವರ ಇಲ್ಲಿದೆ ನೋಡಿ.

ಮೇಘಾ ಶೆಟ್ಟಿ: ಕನ್ನಡ ಕಿರುತರೆಯಲ್ಲಿ ಜೊತೆ ಜೊತೆಯಲಿ ಸೀರಿಯಲ್‌ ಮೂಲಕ ಮನೆಮಾತಾಗಿರುವ ಮೇಘಾ ಶೆಟ್ಟಿ ಈ ಬಾರಿಯ ಬಿಗ್‌ ಬಾಸ್‌ ಮನೆಗೆ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿಂದೆಯೇ ಅವರ ಹೆಸರು ಸಾಮಾಜಿಕ ಜಾಲತಾಣದಲ್ಲಿ ಕೂಡ ಹರಿದಾಡಿತ್ತು.

ಸುಧಾರಾಣಿ:‌ ವೈರಲ್‌ ಆದ ಪಟ್ಟಿಯಲ್ಲಿ ಸುಧಾರಾಣಿ ಹೆಸರು ಇದೆ. ಆದರೆ ಇದಕ್ಕೆ ಸುಧಾರಾಣಿ ಈಗಾಗಲೇ ವಿಡಿಯೋ ಮೂಲಕವೇ ಉತ್ತರ ಕೊಟ್ಟಿದ್ದಾರೆ. “ಯಾರು ಹೇಳಿದ್ದು ನಾನು ಹೋಗ್ತೀನಿ ಅಂತ, ಸಾಕ್ಷಿ ಏನಿದೆ?” ಎನ್ನುವ ವಿಡಿಯೋವನ್ನು ಸುಧಾರಾಣಿ ಹಂಚಿಕೊಂಡಿದ್ದರು.

ಶ್ವೇತಾ ಪ್ರಸಾದ್: ಕನ್ನಡ ಕಿರುತೆರೆ ಮತ್ತು ಸಿನಿಮಾಗಳಲ್ಲಿ ನಟಿಸಿರುವ ಶ್ವೇತಾ ಪ್ರಸಾದ್ ಹೆಸರು ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಬಿಗ್ ಬಾಸ್ ಮನೆಗೆ ಶ್ವೇತಾ ಹೋಗುವುದು ನಿಜವೋ ಅಥವಾ ಸುಳ್ಳೋ ಎನ್ನುವುದಕ್ಕೆ ಅವರೇ ಉತ್ತರ ನೀಡಬೇಕಿದೆ.

ಅನನ್ಯ ಅಮರ್: ಅಂಕಿತಾ ಅಮರ್ ಅವರ ಸಹೋದರಿ ನಟಿ ಅನನ್ಯ ಅಮರ್ ಈ ಬಾರಿಯ ಬಿಗ್ ಬಾಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿರುವ ಅನನ್ಯ ಹಲವು ತಾರೆಯರ ಸಂದರ್ಶನಗಳನ್ನ ಮಾಡಿದ್ದಾರೆ

ಹುಲಿ ಕಾರ್ತಿಕ್: ಬಿಗ್ ಬಾಸ್ ಮನೆಗೆ ಹೋಗುವವ ಪಟ್ಟಿಯಲ್ಲಿ ಹುಲಿ ಕಾರ್ತಿಕ್ ಹೆಸರು ಕಾಣಿಸಿಕೊಂಡಿದೆ. ಮಜಾಭಾರತ, ಗಿಚ್ಚಿ ಗಿಲಿಗಿಲಿ ಮೂಲಕ ಜನರನ್ನು ನಗಿಸುತ್ತ ಬಂದಿರುವ ಕಾರ್ತಿಕ್‌ ಈ ಬಾರಿ ದೊಡ್ಮನೆಯಲ್ಲಿ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ.

ಮೌನಾ ಗುಡ್ಡೇಮನೆ: ಚಾರುಲತಾ ಖ್ಯಾತಿಯ ಮೌನಾ ಗುಡ್ಡೇಮನೆ ಅವರ ‘ರಾಮಾಚಾರಿ’ ಧಾರಾವಾಹಿ ಮುಕ್ತಾಯವಾಗಲಿದ್ದು, ‘ಬಿಗ್ ಬಾಸ್’ ಮನೆ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ.

ಶ್ರೇಯಸ್ ಮಂಜು: ನಿರ್ಮಾಪಕ ಕೆ ಮಂಜು ಅವರ ಪುತ್ರ ಯುವ ನಾಯಕ ನಟ ಶ್ರೇಯಸ್ ಮಂಜು ದೊಡ್ಮನೆಗೆ ಬರಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ ಈಗಾಗಲೇ ಕೆಲ ಚಿತ್ರಗಳಲ್ಲಿ ನಟಿಸುತ್ತಿರುವ ಅವರು ಸ್ಪರ್ಧೆಗೆ ಬರುವುದು ಖಚಿತ ಎನ್ನುವ ಬಗ್ಗೆ ಸ್ಪಷ್ಟನೆ ಇಲ್ಲ.

ಸಮರ್ಜಿತ್ ಲಂಕೇಶ್: ನಿರ್ದೇಶಕ ಮತ್ತು ನಿರ್ಮಾಪಕ ಇಂದ್ರಜಿತ್ ಲಂಕೇಶ್ ಅವರ ಪುತ್ರ ಸಮರ್ಜಿತ್ ಲಂಕೇಶ್ ಹೆಸರು ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರ ಸ್ಪರ್ಧಿಗಳ ಪಟ್ಟಿಯಲ್ಲಿದೆ.

The post Bigg Boss Kannada 12: ಬಿಗ್‌ ಬಾಸ್‌ ಸ್ಪರ್ಧಿಗಳ ಪಟ್ಟಿ ವೈರಲ್ appeared first on Samyukta Karnataka.