#Bengaluru Archives - Samyukta Karnataka

ರಾಜ್ಯದಲ್ಲಿ ಹವಾಮಾನ ವೈಪರೀತ್ಯ: ಮುಂದಿನ 5 ದಿನ ಎಲ್ಲೆಲ್ಲಿ ವರುಣನ ಆರ್ಭಟ? ಬಿಸಿಲಿನ ಬೇಗೆಗೆ ಮಳೆಯ ತಂಪು!
ರಾಜ್ಯಾದ್ಯಂತ ಬೇಸಿಗೆಯ ಬಿಸಿಲು ದಿನದಿಂದ ದಿನಕ್ಕೆ ಏರುತ್ತಿದ್ದರೂ, ಅತ್ತ ವರುಣನ ಅಬ್ಬರವೂ ಅಲ್ಲಲ್ಲಿ ಜೋರಾಗಿಯೇ ಕೇಳಿಬರುತ್ತಿದೆ. ಈಗಾಗಲೇ ಬೆಂಗಳೂರು, ಕೊಡಗು, ತುಮಕೂರು ಹಾಗೂ ಶಿವಮೊಗ್ಗದ ಜನತೆ ಮಳೆಯ ಸಿಂಚನಕ್ಕೆ ಸಾಕ್ಷಿಯಾಗಿದ್ದಾರೆ. ಇದೀಗ ಹವಾಮಾನದಲ್ಲಿ ಉಂಟಾಗಿರುವ ಮಹತ್ವದ ಬದಲಾವಣೆಗಳಿಂದಾಗಿ ರಾಜ್ಯದ ಕರಾವಳಿ ಹಾಗೂ ಒಳನಾಡಿನ ಇತರ ಜಿಲ್ಲೆಗಳಲ್ಲೂ ಪೂರ್ವ ಮುಂಗಾರು ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ನಾಳೆ ಸೋಮವಾರ ಏಪ್ರಿಲ್ 13 ರಿಂದ ಏಪ್ರಿಲ್ 15 ರವರೆಗೆ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗುವ ನಿರೀಕ್ಷೆಯಿದ್ದು, ಏಪ್ರಿಲ್ 14 ಮತ್ತು 15 ರಂದು ಉತ್ತರ ಒಳನಾಡಿನಲ್ಲೂ ವರುಣನ ಸಿಂಚನವಾಗಲಿದೆ. ಈ ಮಳೆಯ ಸಮಯದಲ್ಲಿ ಸಿಡಿಲು ಮತ್ತು ಗುಡುಗಿನ ಆರ್ಭಟ ಇರಲಿದ್ದು, ಪ್ರತಿ ಗಂಟೆಗೆ ಸುಮಾರು 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಆದರೆ ಉತ್ತರ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಹೊರತಾಗಿಯೂ ಒಣಹವೆ ಮುಂದುವರಿಯಲಿದೆ. ರೈತರಿಗೆ ನೆಮ್ಮದಿಯ ವಿಷಯವೆಂದರೆ, ಈ ಅವಧಿಯಲ್ಲಿ ಎಲ್ಲಿಯೂ ಆಲಿಕಲ್ಲು ಸಹಿತ ಮಳೆಯಾಗುವ ಲಕ್ಷಣಗಳಿಲ್ಲ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.

ಏಪ್ರಿಲ್ 17 ರವರೆಗಿನ ಹವಾಮಾನದ ಸ್ಥಿತಿಗತಿಯನ್ನು ಗಮನಿಸಿದರೆ, ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯ ಜೊತೆಗೆ ಗರಿಷ್ಠ ತಾಪಮಾನ ಕಂಡುಬರಲಿದೆ. ಇತ್ತ ಮಲೆನಾಡು ಭಾಗದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಮಳೆ ಮುಂದುವರಿಯಲಿದ್ದು, ಮೈಸೂರು ಹಾಗೂ ಚಾಮರಾಜನಗರದಲ್ಲೂ ವರುಣನ ದರ್ಶನವಾಗುವ ಲಕ್ಷಣಗಳಿವೆ. ಇನ್ನು ಉತ್ತರ ಕರ್ನಾಟಕದ ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಹಾವೇರಿ, ಗದಗ ಮತ್ತು ವಿಜಯಪುರದಲ್ಲಿ ಮಬ್ಬು ವಾತಾವರಣದ ಜೊತೆಗೆ ಹಗುರ ಮಳೆಯಾಗುವ ನಿರೀಕ್ಷೆಯಿದೆ.

ರಾಜ್ಯದಲ್ಲಿ ಉಂಟಾಗಿರುವ ಈ ಹವಾಮಾನ ವೈಪರೀತ್ಯಕ್ಕೆ ಪ್ರಮುಖವಾಗಿ ವಾಯುಮಂಡಲದ ಸುಳಿಗಾಳಿ ಕಾರಣವಾಗಿದೆ. ಒಡಿಶಾದಿಂದ ಮನ್ನಾರ್ ಕೊಲ್ಲಿಯವರೆಗೆ ಹಬ್ಬಿರುವ ಉತ್ತರ-ದಕ್ಷಿಣ ಟ್ರಫ್ ಕರ್ನಾಟಕದ ಒಳಭಾಗದ ಮೂಲಕ ಹಾದುಹೋಗುತ್ತಿರುವುದರಿಂದ ಈ ಮಳೆ ಮಾರುತಗಳು ಸಕ್ರಿಯವಾಗಿವೆ. ಒಟ್ಟಾರೆಯಾಗಿ ಹೇಳುವುದಾದರೆ, ಮುಂದಿನ ಕೆಲವು ದಿನಗಳು ಬಿಸಿಲಿನ ಬೇಗೆಯ ನಡುವೆಯೂ ರಾಜ್ಯದ ಹಲವೆಡೆ ಮಳೆಯ ತಂಪು ವಾತಾವರಣ ಇರಲಿದೆ.

The post ರಾಜ್ಯದಲ್ಲಿ ಹವಾಮಾನ ವೈಪರೀತ್ಯ: ಮುಂದಿನ 5 ದಿನ ಎಲ್ಲೆಲ್ಲಿ ವರುಣನ ಆರ್ಭಟ? ಬಿಸಿಲಿನ ಬೇಗೆಗೆ ಮಳೆಯ ತಂಪು! appeared first on Samyukta Karnataka.

ಹೊಸ ಸಾಹಸ: ‘ಗರುಡ ಗ್ಲೈಡ್’ಗೆ ಚಾಲನೆ ನೀಡಿದ ಶ್ರೇಯಾಂಕ ಪಾಟೀಲ್
ಬೆಂಗಳೂರು: ನಗರದ ಪ್ರಸಿದ್ಧ ಅಮ್ಯೂಸ್‌ಮೆಂಟ್ ಪಾರ್ಕ್ ವಂಡರ್‌ಲಾ (Wonderla) ನಲ್ಲಿ ಹೊಸದಾಗಿ ನಿರ್ಮಿಸಲಾದ ‘ಗರುಡ ಗ್ಲೈಡ್’ ರೋಲರ್ ಕೋಸ್ಟರ್ ರೈಡ್ ಶುಕ್ರವಾರ ಅದ್ಧೂರಿಯಾಗಿ ಉದ್ಘಾಟನೆಯಾಯಿತು. ಈ ಸಂದರ್ಭದಲ್ಲಿ ಭಾರತೀಯ ಮಹಿಳಾ ಕ್ರಿಕೆಟರ್ ಹಾಗೂ ಕನ್ನಡತಿ ಶ್ರೇಯಾಂಕ ಪಾಟೀಲ್ ಭೇಟಿ ನೀಡಿ, ಈ ರೋಚಕ ರೈಡ್ ಅನುಭವಿಸಿದರು.

ಥ್ರಿಲ್ ರೈಡ್‌ನಲ್ಲಿ ಶ್ರೇಯಾಂಕ ಸಂಭ್ರಮ: ತಮ್ಮ ಕೋಚ್ ಅರ್ಜುನ್ ಜೊತೆಗೂಡಿ ವಂಡರ್‌ಲಾಕ್ಕೆ ಭೇಟಿ ನೀಡಿದ ಶ್ರೇಯಾಂಕ ಪಾಟೀಲ್, ಗರುಡ ಗ್ಲೈಡ್ ರೈಡ್‌ನಲ್ಲಿ ಭಾಗವಹಿಸಿ ರೋಚಕ ಅನುಭವ ಪಡೆದರು. ಗಾಳಿಯಲ್ಲಿ ತೂಗಾಡುತ್ತಾ ವೇಗದಲ್ಲಿ ಸಾಗುವ ಈ ರೈಡ್ ಪ್ರವಾಸಿಗರಿಗೆ ವಿಭಿನ್ನ ಥ್ರಿಲ್ ಅನುಭವ ನೀಡಲಿದೆ.

ವಿಶೇಷತೆ : ವಂಡರ್‌ಲಾ ಈಗ ಎರಡು ಇನ್ವರ್ಷನ್ (ತಲೆಕೆಳಗಾಗುವ) ರೋಲರ್ ಕೋಸ್ಟರ್ ರೈಡ್‌ಗಳನ್ನು ಹೊಂದಿರುವ ‘ರಿಕಾಯಿಲ್’ ‘ಗರುಡ ಗ್ಲೈಡ್’ ಮೂಲಕ ಭಾರತದ ಏಕೈಕ ಅಮ್ಯೂಸ್‌ಮೆಂಟ್ ಪಾರ್ಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಉನ್ನತ ಮಟ್ಟದ ಸುರಕ್ಷತೆ: ಈ ಹೊಸ ರೈಡ್‌ನ ವಿನ್ಯಾಸ ಹಾಗೂ ಅಳವಡಿಕೆಯನ್ನು ವಂಡರ್‌ಲಾದ ಸ್ವಂತ ಇಂಜಿನಿಯರಿಂಗ್ ತಂಡವೇ ನಿರ್ವಹಿಸಿದೆ. ಜಾಗತಿಕ ಮಟ್ಟದ ಸುರಕ್ಷತಾ ಮಾನದಂಡಗಳನ್ನು ಪಾಲಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಅದ್ಧೂರಿ ಉದ್ಘಾಟನಾ ಸಮಾರಂಭ: ಈ ಹೊಸ ರೈಡ್ ಉದ್ಘಾಟನೆಗಾಗಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಖ್ಯಾತ ಯೂಟ್ಯೂಬರ್ ಗಗನ್ ಶ್ರೀನಿವಾಸ್, ಕ್ರಿಕೆಟ್ ತಾರೆ ಶ್ರೇಯಾಂಕ ಪಾಟೀಲ್ ಇಬ್ಬರೂ ಸೇರಿ ‘ಗರುಡ ಗ್ಲೈಡ್’ ರೈಡ್‌ಗೆ ಚಾಲನೆ ನೀಡಿದರು.

ಪ್ರವಾಸೋದ್ಯಮಕ್ಕೆ ಉತ್ತೇಜನ: ಈ ಹೊಸ ರೈಡ್‌ನಿಂದ ಬೆಂಗಳೂರಿನ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ಹಾಗೂ ಯುವಕರಿಗೆ ಹೊಸ ಥ್ರಿಲ್ ಅನುಭವ ಸಿಗಲಿದೆ. ಕುಟುಂಬಗಳಿಗಾಗಿ ಆಕರ್ಷಕ ಮನರಂಜನೆ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.

ವಿದ್ಯುತ್‌ನಿಂದ LPG ತರಹದ ಜ್ವಾಲೆ: Make in Indiaಗೆ ಹೊಸ ಅವಕಾಶ

The post ಹೊಸ ಸಾಹಸ: ‘ಗರುಡ ಗ್ಲೈಡ್’ಗೆ ಚಾಲನೆ ನೀಡಿದ ಶ್ರೇಯಾಂಕ ಪಾಟೀಲ್ appeared first on Samyukta Karnataka.

ರಾಜ್ಯದಲ್ಲಿ ಮಳೆ ಮುನ್ಸೂಚನೆ! 16 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್; ಬೆಂಗಳೂರಿನಲ್ಲಿ ತಂಪು, ಮಳೆ–ಗುಡುಗು
ರಾಜ್ಯದಲ್ಲಿ ಕಳೆದ ಕೆಲ ವಾರಗಳಿಂದ ಸುಡುತ್ತಿರುವ ಬಿಸಿಲಿನ ಝಳಕ್ಕೆ ಕಂಗೆಟ್ಟಿರುವ ಜನತೆಗೆ ಇದೀಗ ಹವಾಮಾನದಲ್ಲಿ ಮುಂದಿನ ಕೆಲವು ದಿನಗಳಲ್ಲಿ ಗಮನಾರ್ಹ ಬದಲಾವಣೆ ಕಾಣಿಸಲಿದೆ. ಅರಬ್ಬಿ ಸಮುದ್ರದಿಂದ ಬೀಸುತ್ತಿರುವ ವಿಚಿತ್ರ ಗಾಳಿ ರಾಜ್ಯದ ದಕ್ಷಿಣ ಒಳನಾಡು, ಉತ್ತರ ಒಳನಾಡು ಮತ್ತು ಕರಾವಳಿ ಭಾಗಗಳಲ್ಲಿ ಮಳೆ ಮುಂದುವರಿಯುವ ಸಾಧ್ಯತೆಯನ್ನು ಹೆಚ್ಚಿಸಿದೆ.

ರಾಜ್ಯದ 16 ಕ್ಕೂ ಹೆಚ್ಚು ಜಿಲ್ಲೆಗಳಿಗೆ ಇಂದು (ಏಪ್ರಿಲ್ 7) ರಿಂದ 9 ರವರೆಗೆ ವಿವಿಧ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬಂಗಾಳಕೊಲ್ಲಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಮಲೆನಾಡು ಭಾಗದ ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ದಕ್ಷಿಣ ಒಳನಾಡಿನ ಮೈಸೂರು, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ಬೆಂಗಳೂರು ನಗರದಲ್ಲಿನ ವಾತಾವರಣವು ತಂಪಾಗಿದ್ದು, ಆದ್ರೆ ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ರೈತರನ್ನು ಚಿಂತೆಗೀಡು ಮಾಡಿದೆ. ಏಕಂದರೆ, ಬೇಸಿಗೆ ಸಮಯದಲ್ಲಿ ಸುರಿಯುವ ಬೆಳೆಯಿಂದಾಗಿ ಹಲವು ಬೆಳೆಗಳು ಕೊಳೆಯಲು ಶುರು ಮಾಡುತ್ತವೆ ಈ ಹಿನ್ನೆಲೆ ರೈತರ ಆತಂಕ ಹೆಚ್ಚಾಗಿದೆ.ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲೂ ಸಂಜೆ ತುಂತುರು ಮಳೆಯಾಗುವ ಲಕ್ಷಣಗಳಿವೆ. ಮಳೆ ಬಂದು ಹೋದ ನಂತರ ಮತ್ತೆ ಒಣಹವೆ ಶುರುವಾಗಲಿದೆ ಎಂದು ಹವಾಮಾನ ವರದಿ ಳಿಸಿದೆ.

The post ರಾಜ್ಯದಲ್ಲಿ ಮಳೆ ಮುನ್ಸೂಚನೆ! 16 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್; ಬೆಂಗಳೂರಿನಲ್ಲಿ ತಂಪು, ಮಳೆ–ಗುಡುಗು appeared first on Samyukta Karnataka.

ಪಾದಚಾರಿ ಮಾರ್ಗ ಅತಿಕ್ರಮಣಕ್ಕೆ ದಂಡ ವಿಧಿಸಲು ಜಿಬಿಎ ಸೂಚನೆ; ಅಕ್ರಮ ತೆರವು ಕಾರ್ಯಾಚರಣೆ ಶುರು!
ಬೆಂಗಳೂರು ನಗರದಲ್ಲಿ ಪಾದಚಾರಿಗಳ ಸುರಕ್ಷತೆ ಮತ್ತು ಸೌಲಭ್ಯಗಳನ್ನು ಹೆಚ್ಚಿಸಲು ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ಓಲ್ಡ್ ಮದ್ರಾಸ್ ರಸ್ತೆಯಲ್ಲಿನ ಪಾದಚಾರಿ ಮಾರ್ಗಗಳನ್ನು ಅತಿಕ್ರಮಣದಿಂದ ಮುಕ್ತಗೊಳಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ ರಾವ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅತಿಕ್ರಮಣ ಮಾಡಿದವರ ವಿರುದ್ಧ ದಂಡ ವಿಧಿಸುವುದರ ಜೊತೆಗೆ ತಕ್ಷಣವೇ ಅವುಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸುವಂತೆ ಅವರು ತಿಳಿಸಿದ್ದಾರೆ.

ಶನಿವಾರ ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದಿಂದ ಉಲ್ಸೂರು ಸರೋವರದವರೆಗೆ ತಪಾಸಣೆ ನಡೆಸಿದ ಸಂದರ್ಭದಲ್ಲಿ, ಪಾದಚಾರಿ ಮಾರ್ಗಗಳಲ್ಲಿ ಹಲವು ಅತಿಕ್ರಮಣಗಳು ಕಂಡುಬಂದವು. ಆಂಜನೇಯ ದೇವಸ್ಥಾನ ಸಮೀಪ, ನರ್ಸರಿ, ಗ್ರಾನೈಟ್ ಅಂಗಡಿಗಳು ಮತ್ತು ಮರ್ಫಿ ರಸ್ತೆಯಲ್ಲಿನ ಪಾದಚಾರಿ ಮಾರ್ಗಗಳು ಅತಿಕ್ರಮಣಗೊಂಡಿರುವುದು ಗಮನಕ್ಕೆ ಬಂದಿದೆ. ಇದರಿಂದ ಪಾದಚಾರಿಗಳ ಸಂಚಾರಕ್ಕೆ ತೊಂದರೆ ಉಂಟಾಗುತ್ತಿರುವುದು ಕಂಡುಬಂದಿದೆ.

ಇದರ ಜೊತೆಗೆ, ಹಾನಿಗೊಂಡಿರುವ ಪಾದಚಾರಿ ಮಾರ್ಗಗಳನ್ನು ದುರಸ್ತಿ ಮಾಡುವಂತೆ ಹಾಗೂ ಸಂಚಾರಕ್ಕೆ ಅಡ್ಡಿಯಾಗಿರುವ ಕಲ್ಲುಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪಾದಚಾರಿ ಮಾರ್ಗಗಳಲ್ಲಿ ಸ್ವಚ್ಛತೆ ಕಾಪಾಡಲು ವಿಶೇಷ ತಂಡಗಳನ್ನು ನಿಯೋಜಿಸುವ ಕಾರ್ಯವೂ ನಡೆಯಲಿದೆ.

ಇನ್ನು ಎಂಇಜಿ ಕಾಂಪೌಂಡ್ ಗೋಡೆಯ ಹಾನಿಗೊಂಡ ಭಾಗದಲ್ಲಿ ತ್ಯಾಜ್ಯವನ್ನು ಸುರಿಯುತ್ತಿರುವುದು ಕೂಡ ಗಮನಕ್ಕೆ ಬಂದಿದ್ದು, ಇದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಇದಕ್ಕೂ ಪೂರಕವಾಗಿ, ಕೇಂದ್ರ ನಗರ ನಿಗಮದ ಆಯುಕ್ತ ರಾಜೇಂದ್ರ ಚೋಳನ್ ಅವರು ಉಲ್ಸೂರು ಸರೋವರ ಅಭಿವೃದ್ಧಿ ಯೋಜನೆ ಕುರಿತು ಮಾಹಿತಿ ನೀಡಿದ್ದು, 106 ಎಕರೆ ಪ್ರದೇಶದಲ್ಲಿ ಹರಡಿರುವ ಈ ಕೆರೆಯನ್ನು 33.50 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದಿದ್ದಾರೆ. ಮಳೆಗಾಲದ ಮೊದಲು ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಅಲ್ಲದೆ, ಪಕ್ಕದ ಉದ್ಯಾನವನವನ್ನು ಸರೋವರಕ್ಕೆ ಸಂಪರ್ಕಿಸುವ ಸೇತುವೆಯ ನಿರ್ಮಾಣವೂ ಬಹುತೇಕ ಪೂರ್ಣಗೊಂಡಿದೆ ಎಂದು ತಿಳಿಸಿದ್ದಾರೆ.

ಒಟ್ಟಿನಲ್ಲಿ, ಪಾದಚಾರಿಗಳಿಗೆ ಸುಗಮ ಮತ್ತು ಸುರಕ್ಷಿತ ಸಂಚಾರವನ್ನು ಒದಗಿಸಲು ಈ ಕ್ರಮಗಳು ಮಹತ್ವದ ಹೆಜ್ಜೆಯಾಗಿದೆ.

The post ಪಾದಚಾರಿ ಮಾರ್ಗ ಅತಿಕ್ರಮಣಕ್ಕೆ ದಂಡ ವಿಧಿಸಲು ಜಿಬಿಎ ಸೂಚನೆ; ಅಕ್ರಮ ತೆರವು ಕಾರ್ಯಾಚರಣೆ ಶುರು! appeared first on Samyukta Karnataka.

RCB ಮ್ಯಾಚ್‌ಗೆ ಹೊಸ ರೂಲ್ಸ್; Ticket ಇಲ್ಲಾ? ಸ್ಟೇಡಿಯಂಗೆ ಬರಬೇಡಿ! ಅಭಿಮಾನಿಗಳಿಗೆ ಖಡಕ್ ಸೂಚನೆ.
ಬೆಂಗಳೂರು: ನಾಳೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಲಿರುವ ಐಪಿಎಲ್ ಪಂದ್ಯಕ್ಕಾಗಿ ಬೆಂಗಳೂರಿನ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಅಭಿಮಾನಿಗಳಿಗೆ ಮಹತ್ವದ ಎಚ್ಚರಿಕೆ ನೀಡಿದ್ದಾರೆ. ಟಿಕೆಟ್ ಇಲ್ಲದವರು ಕ್ರೀಡಾಂಗಣದ ಬಳಿ ಬರಬಾರದು. ಅದಾಗಿಯೂ ಬಂದಲ್ಲಿ, ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಈ ಹಿಂದೆ ಮಾರ್ಚ್ 28ರಂದು ಬೆಂಗಳೂರಿನಲ್ಲಿ ಮೊದಲ ಐಪಿಎಲ್ ಪಂದ್ಯ ನಡೆದ ವೇಳೆ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ನಾಳೆ ನಡೆಯಲಿರುವ ಪಂದ್ಯದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆಯ ಕ್ರಮಗಳನ್ನು ಅನುಸರಿಸಲಾಗಿದೆ. ಕಳೆದ ಪಂದ್ಯದಲ್ಲಿ ಆಗಮನ ಮತ್ತು ನಿರ್ಗಮನ ಸೇರಿ ಸುಮಾರು 32 ಸಾವಿರ ಜನ ಮೆಟ್ರೋ ರೈಲುಗಳಲ್ಲಿ ಪ್ರಯಾಣಿಸಿದ್ದರು. ಹೀಗಾಗಿ, ನಾಳೆ ಪಂದ್ಯವನ್ನು ವೀಕ್ಷಿಸಲು ಬರಲಿರುವ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮೆಟ್ರೋ ಮತ್ತು ಬಿಎಂಟಿಸಿ ಬಸ್ ಸೇವೆಗಳನ್ನು ಬಳಸಲು ಪೊಲೀಸ್ ಇಲಾಖೆ ಮನವಿ ಮಾಡಿದೆ.

ಪೂರ್ವಭಾವಿಯಾಗಿ ಸಂಭವಿಸಿದ ಘಟನೆಗಳ ನಡುವೆ ಕೆಲವರ ಮೊಬೈಲ್ ಕಳ್ಳತನ ಕೂಡ ಸೇರಿದೆ. ಕಳೆದ ಪಂದ್ಯದ ವೇಳೆ ಸುಮಾರು 71 ಮೊಬೈಲ್ ವಶಕ್ಕೆ ತೆಗೆದುಕೊಳ್ಳಲಾಗಿದೆ ಮತ್ತು ಬಹುತೇಕ ಕೃತ್ಯ ಹೊರ ರಾಜ್ಯದಿಂದ ಬಂದ ವ್ಯಕ್ತಿಗಳಿಂದ ನಡೆದಿದ್ದರಿಂದ, ಅಭಿಮಾನಿಗಳಿಗೆ ತಮ್ಮ ವೈಯಕ್ತಿಕ ವಸ್ತುಗಳು ಮತ್ತು ಮೊಬೈಲ್‌ಗಳು ಸುರಕ್ಷಿತವಾಗಿರಲು ಎಚ್ಚರಿಕೆ ನೀಡಲಾಗಿದೆ.

ಇದಲ್ಲದೆ, ನಾಳೆ ಪಂದ್ಯಾವಳಿಯ ಪ್ರಯುಕ್ತ ಮೆಟ್ರೋ ರೈಲುಗಳ ಸಂಚಾರ ಸಮಯವನ್ನು ವಿಸ್ತರಿಸಲಾಗಿದೆ. ಬಿಎಂಆರ್‌ಸಿಎಲ್ ಪ್ರಕಟಣೆ ಪ್ರಕಾರ, ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ಮೆಟ್ರೋ ಸೇವೆ ರಾತ್ರಿ 11 ಗಂಟೆಯಿಂದ ಮುಂಜಾನೆ 2 ಗಂಟೆಯವರೆಗೆ ನಿರ್ವಹಿಸಲಿದ್ದು, ವೈಟ್‌ಫೀಲ್ಡ್ (ಕಾಡುಗೋಡಿ) ಯಿಂದ 12:30 AM, ಚೆಲ್ಲಘಟ್ಟದಿಂದ 12:45 AM, ರೇಷ್ಮೆ ಸಂಸ್ಥೆ ಮತ್ತು ಮಾದಾವರದಿಂದ 12:45 AM, ಬೊಮ್ಮಸಂದ್ರದಿಂದ 12:30 AM, ಆರ್.ವಿ. ರಸ್ತೆಯಿಂದ 2:00 AM, ನಾಡಪ್ರಭು ಕೆಂಪೇಗೌಡ ನಿಲ್ದಾಣ-ಮಜೆಸ್ಟಿಕ್ ನಿಂದ ನಾಲ್ಕು ದಿಕ್ಕುಗಳಿಗೆ 1:30ಕ್ಕೆ ಕೊನೆಯ ರೈಲು ಹೊರಡಲಿದೆ.

ಪೊಲೀಸ್ ಇಲಾಖೆ ಅಭಿಮಾನಿಗಳಿಗೆ ಸುಲಭ, ಸುರಕ್ಷಿತ ಹಾಗೂ ಅಹಿತಕರ ಘಟನೆಗಳಿಂದ ಮುಕ್ತ ಪ್ರಯಾಣಕ್ಕೆ ಈ ಎಲ್ಲ ಕ್ರಮಗಳನ್ನು ಕೈಗೊಂಡಿದ್ದು, ಅವರ ಸೂಚನೆಗಳನ್ನು ಪಾಲಿಸಲು ಮನವಿ ಮಾಡಿದ್ದಾರೆ.

The post RCB ಮ್ಯಾಚ್‌ಗೆ ಹೊಸ ರೂಲ್ಸ್; Ticket ಇಲ್ಲಾ? ಸ್ಟೇಡಿಯಂಗೆ ಬರಬೇಡಿ! ಅಭಿಮಾನಿಗಳಿಗೆ ಖಡಕ್ ಸೂಚನೆ. appeared first on Samyukta Karnataka.

ಭಾಷಣ ಮಧ್ಯೆ ಕುಸಿದ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ: ಆಸ್ಪತ್ರೆಗೆ ದಾಖಲು
ಬೆಂಗಳೂರು : ಕರ್ನಾಟಕದ ಮಾಜಿ ಲೋಕಾಯುಕ್ತ ಮತ್ತು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಕಾರ್ಯಕ್ರಮದ ವೇಳೆ ಏಕಾಏಕಿ ಅಸ್ವಸ್ಥಗೊಂಡು ಕುಸಿದು ಬಿದ್ದ ಘಟನೆ ಕೆಲಕಾಲ ಆತಂಕ ಮೂಡಿಸಿತು.

ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನಡೆದ ಡಾ. ಪಿಜಿಆರ್ ಸಿಂಧ್ಯ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅವರು, ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದಾಗಲೇ ಸಮತೋಲನ ತಪ್ಪಿ ನೆಲಕ್ಕುಸಿದರು. ತಕ್ಷಣ ಸ್ಥಳದಲ್ಲಿದ್ದವರು ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ನಂತರ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ವೈದ್ಯಕೀಯ ಮಾಹಿತಿ: ವೈದ್ಯರು ನಡೆಸಿದ ಪ್ರಾಥಮಿಕ ಪರೀಕ್ಷೆಯಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ಗಣನೀಯವಾಗಿ ಕುಸಿದಿರುವುದು (Low Sugar) ಪತ್ತೆಯಾಗಿದೆ. ಜೊತೆಗೆ, ಲಘು ಹೃದಯಾಘಾತದ ಅನುಮಾನವೂ ವ್ಯಕ್ತವಾಗಿದ್ದು, ಹೆಚ್ಚಿನ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ತಜ್ಞ ವೈದ್ಯರ ತಂಡವು ಅವರ ಆರೋಗ್ಯದ ಮೇಲೆ ನಿಗಾ ವಹಿಸಿದೆ.

80 ವರ್ಷ ದಾಟಿದರೂ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿರುವ ಹೆಗ್ಡೆ ಅವರ ಆರೋಗ್ಯ ವಿಚಾರ ತಿಳಿಯುತ್ತಿದ್ದಂತೆಯೇ ಅಭಿಮಾನಿಗಳು ಹಾಗೂ ಗಣ್ಯರು ಆತಂಕ ವ್ಯಕ್ತಪಡಿಸಿದ್ದಾರೆ. ಅವರ ಶೀಘ್ರ ಗುಣಮುಖತೆಗೆ ಹಲವರು ಪ್ರಾರ್ಥಿಸುತ್ತಿದ್ದಾರೆ.

ಶ್ವಾನದಿಂದ ಬೆಕ್ಕಿನ ಮರಿಗೆ ಹಾಲು – ಅಪೂರ್ವ ದೃಶ್ಯ ವೈರಲ್

The post ಭಾಷಣ ಮಧ್ಯೆ ಕುಸಿದ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ: ಆಸ್ಪತ್ರೆಗೆ ದಾಖಲು appeared first on Samyukta Karnataka.

5ರಂದು ರಾಜಧಾನಿಯಲ್ಲಿ ಸಂಯೋಗ ಕಲಾಶಾಲೆಯಿಂದ ಗೆಜ್ಜೆಪೂಜೆ
ಬೆಂಗಳೂರು: ರಾಜಧಾನಿಯ ಸುಂಕದಕಟ್ಟೆಯ ಸಂಯೋಗ – ಕನೆಕ್ಟಿಂಗ್ ಆರ್ಟ್ಸ್ ಕಲಾ ಶಾಲೆಯ ಹಿರಿಯ ಭರತನಾಟ್ಯ ವಿದುಷಿ ಲತಾ ಲಕ್ಷ್ಮೀಶ ಅವರ ಮಾರ್ಗದರ್ಶನದಲ್ಲಿ 7 ಜನ ಯುವ ನರ್ತಕಿಯರ ಗೆಜ್ಜೆಪೂಜೆ ಕಾರ್ಯಕ್ರಮ ಏ. 5 ರಂದು ಆಯೋಜನೆಗೊಂಡಿದೆ.

ನಗರದ ಯಲಹಂಕ ಸ್ಯಾಟಲೈಟ್ ಟೌನ್‌ನ ಡಾ. ಅಂಬೇಡ್ಕರ್ ಸಭಾಂಗಣದಲ್ಲಿ ಸಂಜೆ 4ಕ್ಕೆ ಹಮ್ಮಿಕೊಂಡಿರುವ ಸಮಾರಂಭದಲ್ಲಿ ಹಿರಿಯ ಭರತನಾಟ್ಯ ಕಲಾವಿದೆ ರೂಪಶ್ರೀ ಮಧುಸೂದನ ಮತ್ತು ಶಾಸಕ ಗೋಪಾಲಯ್ಯ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಹಿರಿಯ ಚಿತ್ರಕಲಾವಿದ ಮತ್ತು ಯೋಗ ಗುರು ಲಕ್ಷ್ಮೀಶ ಹೆಗಡೆ ಹೊಸಾಕುಳಿ ಉಪಸ್ಥಿತರಿರುತ್ತಾರೆ.

ಸಪ್ತ ಯುವ ನರ್ತಕಿಯರು: ಚಂದ್ರಶೇಖರ ಮತ್ತು ಸುಕನ್ಯಾರ ಪತ್ರಿ ಎಸ್.ಸಿ. ಅಕ್ಷರಾ, ಮಂಜುನಾಥ ಮತ್ತು ಶಿಲ್ಪ ಅವರ ಪುತ್ರಿ ಎಂ. ದಿಯಾ, ಪುಟ್ಟವೀರಪ್ಪ ಮತ್ತು ಭವ್ಯಾ ಅವರ ಪುತ್ರಿ ಪಿ ಕಾಶ್ವಿ, ಕೃಷ್ಣ ಮತ್ತು ಸಂಧ್ಯಾರ ಪುತ್ರಿ ನಿಹಾರಿಕಾ, ರಮೇಶ ಮತ್ತು ಸವಿತಾರ ಪುತ್ರಿ ಪ್ರಣೀತಾ, ಪೆರುಮಾಳ್ ಮತ್ತು ಅಶ್ವಿನಿ ಪುತ್ರಿ ಪ್ರಿಯಾಂಕಾ ದೇವಿ, ಶ್ರೀನಿವಾಸ ಮತ್ತು ಹೇಮಾರ ಪುತ್ರಿ ಪೂಜಿತಾ ಅವರು ಲಾಸ್ಯರಂಜನಾ ಸರಣಿ 3ನೇ ಕುಸುಮ ಸಮರ್ಪಣೆಯ ಸಂದರ್ಭದಲ್ಲಿ ಗುರುಗಳ ಸಮ್ಮುಖ ಗೆಜ್ಜೆಪೂಜೆ ಮಾಡಿಸಿಕೊಂಡು ವಿಶೇಷ ನೃತ್ಯ ಪ್ರಸ್ತುತಪಡಿಸಲಿದ್ದಾರೆ.

ಹಿಮ್ಮೇಳದಲ್ಲಿ ವಿದ್ವಾಂಸರು: ನಟುವಾಂಗದಲ್ಲಿ ಗುರು ಲತಾ ಲಕ್ಷ್ಮೀಶ, ಗಾಯನದಲ್ಲಿ ವಿದ್ವಾಂಸರಾದ ನಂದಕುಮಾರ್, ಮೃದಂಗದಲ್ಲಿ ಜನಾರ್ಧನ, ಕೊಳಲಿನಲ್ಲಿ ರಾಕೇಶ್ ಸುಧೀರ, ವೀಣೆಯಲ್ಲಿ ಗೋಪಾಲ ವೆಂಕಟರಮಣ, ರಿದಂ ಪ್ಯಾಡ್‌ನಲ್ಲಿ ಭಾರ್ಗವ ಮತ್ತು ಖಂಜಿರದಲ್ಲಿ ವಿದ್ಯಾಸಾಗರ ಸಹಕಾರ ನೀಡಲಿದ್ದಾರೆ.

ಕಲಾ ಸೇವೆಯಲ್ಲಿ ವಿದುಷಿ ಲತಾ: ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಭೀಮನಕೋಣೆ ಮೂಲದ ವಿದುಷಿ ಲತಾ ಅವರು ಕಳೆದ 15 ವರ್ಷಗಳಿಂದ ಬೆಂಗಳೂರಿನಲ್ಲಿ ನೂರಾರು ಮಕ್ಕಳಿಗೆ ನರ್ತನ ಕಲೆಯನ್ನು ಧಾರೆ ಎರೆಯುತ್ತಿದ್ದಾರೆ. ಈವರೆಗೆ ತಮ್ಮ 23 ಶಿಷ್ಠೆಯರ ರಂಗ ಪ್ರವೇಶ ಮಾಡಿಸಿ ಕಲಾ ರಂಗಕ್ಕೆ ಮಹತ್ತರ ಕಾಣಿಕೆ ನೀಡಿದ ಕೀರ್ತಿಗೆ ಭಾಜನರಾಗಿದ್ದಾರೆ. ಕರ್ನಾಟಕದ ವಿವಿಧ ಪ್ರತಿಷ್ಠಿತ ವೇದಿಕೆಗಳೂ ಸೇರಿದಂತೆ ಹೊರ ರಾಜ್ಯದಲ್ಲೂ ಲತಾ ಅವರ ಕಲಾ ಪ್ರೌಢಿಮೆ ಅನಾವರಣಗೊಂಡಿದೆ. 3 ದಶಕಗಳ ಸುದೀರ್ಘ ಲಾ ಸೇವೆಗಾಗಿ ಇವರಿಗೆ ಅನೇಕ ಪ್ರಶಸ್ತಿ, ಪುರಸ್ಕಾರ ಅರಸಿ ಬಂದಿವೆ. ಪತಿ ಮತ್ತು ಕಲಾವಿದ ಲಕ್ಷ್ಮೀಶ ಅವರ ಸಹಕಾರದಲ್ಲಿ ಲಾಸ್ಯ ರಂಜನಾ ಸರಣಿ ಮೂಲಕ ಅವರು ವಿಭಿನ್ನವಾದ ಕಾರ್ಯಕ್ರಮಗಳನ್ನು ರೂಪಿಸಿ ಅರಳು ಪ್ರತಿಭೆಗಳಿಗೆ ವಿಶೇಷ ವೇದಿಕೆ ಕಲ್ಪಿಸುವಲ್ಲಿ ಬಹು ಆಸಕ್ತಿಯಿಂದಲೇ ಶ್ರಮಿಸುತ್ತಿರುವುದು ಗಮನಾರ್ಹ ಸಂಗತಿಯಾಗಿದೆ.

The post 5ರಂದು ರಾಜಧಾನಿಯಲ್ಲಿ ಸಂಯೋಗ ಕಲಾಶಾಲೆಯಿಂದ ಗೆಜ್ಜೆಪೂಜೆ appeared first on Samyukta Karnataka.

ಬಕೆಟ್ ನೀರಿನಲ್ಲಿ ಮುಳುಗಿ ಮಗು ಸಾವು: ಶಾಕ್‌ಗೆ ತಾಯಿ ಆತ್ಮಹತ್ಯೆ
ಬೆಂಗಳೂರು: ಬೆಂಗಳೂರು ನಗರದ ಚಂದ್ರಾ ಲೇಔಟ್ ಠಾಣಾ ವ್ಯಾಪ್ತಿಯ ಭೈರವೇಶ್ವರ ನಗರದಲ್ಲಿ ಹೃದಯವಿದ್ರಾವಕ ಘಟನೆ ಸಂಭವಿಸಿದೆ. ನೀರಿನ ಬಕೆಟ್‌ನಲ್ಲಿ ಮುಳುಗಿ ಮಗು ಸಾವನ್ನಪ್ಪಿದ ದುರ್ಘಟನೆಯನ್ನು ಕಂಡ ತಾಯಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ಮಗುವನ್ನು ಅಗಸ್ತ್ಯ ಎಂದು ಗುರುತಿಸಲಾಗಿದ್ದು, ತಾಯಿ ಪ್ರತಿಭಾ (29) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರೂ ಮನೆಯಲ್ಲಿ ಒಬ್ಬರೇ ಇದ್ದ ವೇಳೆ ಈ ಘಟನೆ ನಡೆದಿರುವುದು ತಿಳಿದುಬಂದಿದೆ.

ಘಟನೆ ವಿವರ : ಪ್ರತಿಭಾ ವರ್ಕ್ ಫ್ರಂ ಹೋಂ ಮಾಡುತ್ತಿದ್ದರು. ಗಂಡ ಮಹಂತೇಶ್ ಕೆಲಸದ ನಿಮಿತ್ತ ಹೊರಗೆ ಹೋಗಿದ್ದಾಗ ಈ ದುರಂತ ಸಂಭವಿಸಿದೆ. ಮನೆಯ ಮೇಲ್ಚಾವಣಿಯಲ್ಲಿ ಒಣಹಾಕಿದ್ದ ಬಟ್ಟೆ ತರಲು ತೆರಳಿದ್ದ ವೇಳೆ, ಮಗು ಆಟವಾಡುತ್ತಾ ಬಚ್ಚಲು ಮನೆಗೆ ಹೋಗಿದ್ದು, ಅಲ್ಲಿದ್ದ ನೀರಿನ ಬಕೆಟ್‌ನಲ್ಲಿ ಮುಳುಗಿ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.

ಡೆತ್ ನೋಟ್‌ನಲ್ಲಿ ತಾಯಿಯ ನೋವು : ಘಟನೆ ಬಳಿಕ ಪ್ರತಿಭಾ ಬರೆದಿಟ್ಟ ಡೆತ್ ನೋಟ್‌ನಲ್ಲಿ, “ನನ್ನ ಮಗುವನ್ನು ಉಳಿಸಿಕೊಳ್ಳಲು ಆಗಲಿಲ್ಲ. ಇದರ ಹೊಣೆಗಾರಿಕೆ ನನ್ನದೇ” ಎಂದು ಹೇಳಿಕೊಂಡಿದ್ದಾರೆ. ಮೊದಲು ಮಾತ್ರೆ ನುಂಗಿ ಹಾಗೂ ಕೈ ಕತ್ತರಿಸಿ ಆತ್ಮಹತ್ಯೆಗೆ ಯತ್ನಿಸಿದರೂ ವಿಫಲವಾದ ಹಿನ್ನೆಲೆಯಲ್ಲಿ ಕೊನೆಗೆ ನೇಣಿಗೆ ಶರಣಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಘಟನೆ ಬೆಳಕಿಗೆ ಬಂದದ್ದು ಹೇಗೆ? : ರಾತ್ರಿ ಮನೆಗೆ ಬಂದ ಮಹಂತೇಶ್ ಬಾಗಿಲು ತೆರೆದಾಗ ಈ ದಾರುಣ ಘಟನೆ ಬೆಳಕಿಗೆ ಬಂದಿದೆ. ಒಳಗೆ ತಾಯಿ ನೇಣಿಗೆ ಶರಣಾಗಿರುವುದು ಹಾಗೂ ಮಗು ಮೃತಪಟ್ಟಿರುವುದು ಕಂಡು ಬೆಚ್ಚಿಬಿದ್ದಿದ್ದಾರೆ. ಸ್ಥಳದಲ್ಲೇ ಡೆತ್ ನೋಟ್ ಹಾಗೂ ಖಾಲಿ ಮಾತ್ರೆ ಪ್ಯಾಕ್ ಕೂಡ ಪತ್ತೆಯಾಗಿದೆ.

ಪೊಲೀಸ್ ತನಿಖೆ : ಚಂದ್ರಾಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

ಸೂಚನೆ: ಮಾನಸಿಕ ಒತ್ತಡ ಅಥವಾ ಸಂಕಷ್ಟದಲ್ಲಿರುವವರು ಸಹಾಯ ಪಡೆಯುವುದು ಅತ್ಯಂತ ಅಗತ್ಯ. ಆತ್ಮಹತ್ಯೆ ಸಮಸ್ಯೆಗೆ ಪರಿಹಾರವಲ್ಲ. ಅಗತ್ಯವಿದ್ದಲ್ಲಿ ಸ್ಥಳೀಯ ಸಹಾಯವಾಣಿ ಅಥವಾ ವಿಶ್ವಾಸಾರ್ಹ ವ್ಯಕ್ತಿಗಳ ನೆರವು ಪಡೆಯಲು ಮನವಿ.

ಅಪಪ್ರಚಾರಕ್ಕೆ ಬೇಸತ್ತು BAMS ವಿದ್ಯಾರ್ಥಿನಿ ಆತ್ಮಹತ್ಯೆ

The post ಬಕೆಟ್ ನೀರಿನಲ್ಲಿ ಮುಳುಗಿ ಮಗು ಸಾವು: ಶಾಕ್‌ಗೆ ತಾಯಿ ಆತ್ಮಹತ್ಯೆ appeared first on Samyukta Karnataka.

ಲೈಂಗಿಕ ಕಿರುಕುಳ: ನರ್ಸಿಂಗ್ ಕೌನ್ಸಿಲ್‌ನ ರಿಜಿಸ್ಟ್ರಾರ್ ಬಂಧನ
ಬೆಂಗಳೂರು: ಬಲವಂತವಾಗಿ ತಬ್ಬಿಕೊಂಡು ಮುತ್ತು, ಅಂಗಾಂಗ ಮುಟ್ಟಿ ಮಹಿಳಾ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಕರ್ನಾಟಕ ರಾಜ್ಯ ನರ್ಸಿಂಗ್ ಕೌನ್ಸಿಲ್ ಕಚೇರಿಯ ರಿಜಿಸ್ಟ್ರಾರ್ ಡಾ. ಮಲ್ಲು ಎಂಬವರನ್ನು ನಗರದ ಉಪ್ಪಾರಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಗಾಂಧಿನಗರದಲ್ಲಿರುವ ಕರ್ನಾಟಕ ನರ್ಸಿಂಗ್ ಕೌನ್ಸಿಲ್ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬರು, ಡಾ.ಮಲ್ಲು ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸುವ ಮೂಲಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಾರ್ಚ್ 26ರಂದು ಉಪ್ಪಾರಪೇಟೆ ಠಾಣೆಗೆ ದೂರು ನೀಡಿದ್ದರು.

ವಿಚಾರಣೆಗೆ ಹಾಜರಾಗುವಂತೆ ಆರೋಪಿಗೆ ನೋಟಿಸ್ ನೀಡಿದರೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಡಾ. ಮಲ್ಲ ಅವರನ್ನು ವಶಕ್ಕೆ ಪಡೆದು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಟ್ಟೆ ಕೈಚೀಲ ಖರೀದಿಯಲ್ಲಿ ಅಕ್ರಮ: ರೋಹಿಣಿ ಸಿಂಧೂರಿಗೆ ಸಂಕಷ್ಟ

The post ಲೈಂಗಿಕ ಕಿರುಕುಳ: ನರ್ಸಿಂಗ್ ಕೌನ್ಸಿಲ್‌ನ ರಿಜಿಸ್ಟ್ರಾರ್ ಬಂಧನ appeared first on Samyukta Karnataka.

ಬಟ್ಟೆ ಕೈಚೀಲ ಖರೀದಿಯಲ್ಲಿ ಅಕ್ರಮ: ರೋಹಿಣಿ ಸಿಂಧೂರಿಗೆ ಸಂಕಷ್ಟ
ಬೆಂಗಳೂರು: ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ ಸ್ವಚ್ಛ ಭಾರತ ಅಭಿಯಾನದಡಿ ಬಟ್ಟೆ ಕೈಚೀಲ ಖರೀದಿಯಲ್ಲಿ ಅಕ್ರಮ ನಡೆಸಿದ್ದಾರೆ ಎಂಬ ಆರೋಪದಡಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಿ, ತನಿಖೆ ನಡೆಸುವ ಪೂರ್ವಾನುಮತಿಗೆ ಮುಂದಾಗುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ಬುಧವಾರ ನಿರ್ದೇಶನ ನೀಡಿದೆ.

ಮೈಸೂರಿನ ವಕೀಲ ಎನ್.ಆರ್.ರವಿಚಂದ್ರೇಗೌಡ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಪೀಠವು ರೋಹಿಣಿ ವಿರುದ್ಧದ ಆರೋಪದ ತನಿಖೆಗೆ ನಿರಾಕರಿಸಿದ್ದ ರಾಜ್ಯ ಸರಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (ಡಿಪಿಎಆರ್) ಆದೇಶವನ್ನು ರದ್ದುಪಡಿಸಿದೆ. ಅಲ್ಲದೇ ಮುಂದಿನ 4 ವಾರಗಳಲ್ಲಿ ತನಿಖೆ ಪ್ರಕ್ರಿಯೆ ಆರಂಭಿಸಬೇಕು ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದೆ.

ಸ್ವಚ್ಛಭಾರತ ಅಭಿಯಾನದಡಿ ಪ್ಲಾಸ್ಟಿಕ್ ಬಳಕೆ ತಡೆಗೆ ಬಟ್ಟೆ ಕೈಚೀಲಗಳನ್ನು ಖರೀದಿಸಲು ಅಂದಿನ ಡಿಸಿ ನಿರ್ದೇಶನ ನೀಡಿದ್ದರು. ಪ್ರತಿ ಬಟ್ಟೆ ಕೈಚೀಲ ಮುಕ್ತ ಮಾರುಕಟ್ಟೆಯಲ್ಲಿ 13 ರೂ. ಇದ್ದರೂ 52 ರೂ.ಗಳಿಗೆ ಖರೀದಿಸಲಾಗಿದೆ. ಇದರಿಂದ ಬೊಕ್ಕಸಕ್ಕೆ 7.65 ಕೋಟಿ ರೂ. ನಷ್ಟವಾಗಿದೆ. ಅಕ್ರಮ ಕುರಿತಂತೆ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ತನಿಖೆ ನಡೆಸಬೇಕು, ಎಂದು ಕೋರಿ 2021ರ ಅಕ್ಟೋಬರ್ 13ರಂದು ಅಂದಿನ ಮೈಸೂರು ಎಸಿಬಿ ಕಚೇರಿಗೆ ವಕೀಲ ರವಿಚಂದ್ರೇಗೌಡ ದೂರು ನೀಡಿದ್ದರು. ಆದರೆ ಈ ದೂರು ಆಧರಿಸಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆ ನಡೆಸಲು ರಾಜ್ಯ ಸರಕಾರ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ದೂರುದಾರ ವಕೀಲರು ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರ ಪರ ಬಿಪಿನ್ ಹೆಗಡೆ ವಾದ ಮಂಡಿಸಿದ್ದರು.

The post ಬಟ್ಟೆ ಕೈಚೀಲ ಖರೀದಿಯಲ್ಲಿ ಅಕ್ರಮ: ರೋಹಿಣಿ ಸಿಂಧೂರಿಗೆ ಸಂಕಷ್ಟ appeared first on Samyukta Karnataka.