#Belagavi Archives - Samyukta Karnataka

ಬೆಳಗಾವಿಯಲ್ಲಿ ಮರ್ಯಾದೆಗೇಡು ಹತ್ಯೆ – ಮಗಳನ್ನು ಕೊಂದು ಶವ ಸುಟ್ಟ ಕುಟುಂಬ
ಬೆಳಗಾವಿ: ಮದುವೆಯಾಗಿರುವ ಮಗಳು ಪ್ರೀತಿಸಿದವನ ಜೊತೆ ಓಡಿ ಹೋಗಿದ್ದಾಳೆ ಎಂಬ ಕಾರಣಕ್ಕೆ ಮಗಳನ್ನು ಕೊಲೆ ಮಾಡಿ, ಬಳಿಕ ಸುಟ್ಟು ಹಾಕಿರುವ ಮರ್ಯಾದೆಗೇಡು ಹತ್ಯೆ ಬೆಳಗಾವಿಯಲ್ಲಿ ನಡೆದಿದ್ದು, ಇಡೀ ರಾಜ್ಯವೆ ಬೆಚ್ಚಿಬಿದ್ದಿದೆ.

ಬೆಳಗಾವಿ ಜಿಲ್ಲೆಯಲ್ಲಿ ಬೆಳಕಿಗೆ ಬಂದ ಮೊಟ್ಟ ಮೊದಲ ಮರ್ಯಾದೆಗೇಡು ಹತ್ಯೆ ಇದು. ತನ್ನ ಗಂಡನನ್ನು ಬಿಟ್ಟು ಪ್ರಿಯಕರನೊಂದಿಗೆ ಓಡಿಹೋಗಿದ್ದಾಳೆ ಎಂಬ ಕಾರಣಕ್ಕೆ ಸ್ವಂತ ಕುಟುಂಬದವರೇ ಯುವತಿಗೆ ವಿಷ ಕುಡಿಸಿ ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸಲು ಮೃತದೇಹವನ್ನು ಸುಟ್ಟು ಹಾಕಿರುವ ಭೀಕರ ಘಟನೆ ಬೆಳಕಿಗೆ ಬಂದಿದೆ. ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ.

ಮುಚ್ಚಿಹಾಕಲಾಗಿದ್ದ ಪ್ರಕರಣವನ್ನು ಪೊಲೀಸ್ ಇನಸ್ಪೆಕ್ಟರ್ ಜಾವೀದ್ ಮುಶಾಪುರೆ ಚಾಣಾಕ್ಷತನದಿಂದ ಬಯಲಿಗೆಳೆದಿದ್ದಾರೆ.

ಹುಕ್ಕೇರಿ ತಾಲೂಕಿನ ನದಿಗುಡಿ ಕ್ಷೇತ್ರದ, 24 ವರ್ಷದ ಸತ್ಯವ್ವ ಸಂತೋಷ ಹೆಳವಿ ಎಂಬುವವಳೇ ಕೊಲೆಯಾದ ದುರ್ದೈವಿ. ಸತ್ಯವ್ವಳಿಗೆ ರಾಯಬಾಗ ತಾಲೂಕಿನ ಹಣಬರಟ್ಟಿಯ ಸಂತೋಷ ಹೆಳವಿ ಎನ್ನುವವನ ಜೊತೆ ಮದುವೆಯಾಗಿತ್ತು. ಆದರೆ ನದಿಗುಡಿ ಕ್ಷೇತ್ರದ ಕ್ಷತ್ರೀಯ ಜಾತಿಗೆ ಸೇರಿದ ಕೃಷ್ಣಾ ಸಹದೇವ ಪಾಟೀಲ ಎಂಬಾತನನ್ನು ಪ್ರೀತಿಸುತ್ತಿದ್ದ ಆಕೆ, ಇತ್ತೀಚೆಗೆ ತನ್ನ ಪತಿಯನ್ನು ಬಿಟ್ಟು ಆತನ ಜೊತೆ ಹೋಗಿದ್ದಳು. ಇದರಿಂದ ತಮ್ಮ ಕುಟುಂಬದ ಮರ್ಯಾದೆ ಹರಾಜಾಗಿದೆ ಎಂದು ಆಕ್ರೋಶಗೊಂಡಿದ್ದ ತವರು ಮನೆಯವರು ಆಕೆಗಾಗಿ ಹುಡುಕಾಟ ನಡೆಸಿದ್ದರು.

ಮಾರ್ಚ್ 13ರಂದು ಸತ್ಯವ್ವಳನ್ನು ಪತ್ತೆ ಹಚ್ಚಿದ ಕುಟುಂಬಸ್ಥರು, ಆಕೆಯ ಮನವೊಲಿಸಲು ಪ್ರಯತ್ನಿಸಿದ್ದಾರೆ. ಮಹಾರಾಷ್ಟ್ರದ ಶಿರೋಳಕ್ಕೆ ಕರೆದುಕೊಂಡು ಹೋಗಿ ಟೆಂಟ್ ಹಾಕಿ ಇಟ್ಟುಕೊಂಡು ಸತತ ಪ್ರಯತ್ನಿಸಿದರೂ ಆಕೆ ಒಪ್ಪಲಿಲ್ಲ. ತಮ್ಮದೇ ಜಾತಿಯ ಬೇರೆ ಹುಡುಗನ ಜೊತೆ ಮದುವೆ ಮಾಡುವುದಾಗೂ ಹೇಳಿದರು. ಆದರೂ ಒಪ್ಪದಿದ್ದಾಗ ಅರಗಕ್ಕೆ ಕರೆದುಕೊಂಡು ಹೋಗಿ ಆಕೆಗೆ ಮಧ್ಯರಾತ್ರಿ ಬಲವಂತವಾಗಿ ವಿಷ ಕುಡಿಸಿ, ಆಕೆಯನ್ನು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಬಳಿಕ ಯಾರಿಗೂ ಸುಳಿವು ಸಿಗಬಾರದೆಂಬ ಉದ್ದೇಶದಿಂದ ಶವವನ್ನು ಅರಗದ ಸ್ಮಶಾನದಲ್ಲಿ ಸುಟ್ಟು ಹಾಕಿದ್ದಾರೆ.

ಈ ಬಗ್ಗೆ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿದ್ದು ಪೊಲೀಸರು ತನಿಖೆ ಕೈಗೆತ್ತಿಕೊಂಡು ಅಮಾನವೀಯ ಕೃತ್ಯ ಬಯಲು ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಚಿಕ್ಕಪ್ಪ ಪ್ರಕಾಶ ಭೀಮಪ್ಪ ಹೆಳವರ (46), ಸಹೋದರ ಶಾನೂರ ಸದಾಶಿವ ಹೆಳವರ (35) ಮತ್ತು ಬಾವ ಮೊರಬದ ಕಲ್ಲಪ್ಪ ಮಾಯಪ್ಪ ಹೆಳವಿ (40) ಇವರನ್ನು ಬಂಧಿಸಲಾಗಿದ.

ಪತ್ತೆಯಾಗಿದ್ದೇ ರೋಚಕ : ಈ ಪ್ರಕರಣ ಪತ್ತೆಯಾಗಿದ್ದೇ ರೋಚಕ. ಸಂಪೂರ್ಣ ಮುಚ್ಚಿಹೋಗಿದ್ದ ಪ್ರಕರಣದ ಸುಳಿವು ಪಡೆದ ಯಮಕನಮರಡಿ ಪೊಲೀಸ್ ಇನಸ್ಪೆಕ್ಟರ್ ಜಾವೀದ್ ಅತ್ಯಂತ ಚಾಣಾಕ್ಷತನದಿಂದ ಬಯಲು ಮಾಡಿದ್ದಾರೆ. ಎಲ್ಲ ರೀತಿಯ ಪ್ರಯತ್ನದ ನಂತರ ಅಂತಿಮವಾಗಿ ಯುವತಿಯ ತಾಯಿಯನ್ನು ಭೇಟಿ ಮಾಡಿ, ಅವಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ. ನಿಮ್ಮದು ಹೆತ್ತ ಕರುಳು ಮಗಳ ಸಾವನ್ನು ಸಹಿಸಿಕೊಳ್ಳುವುದು ಕಷ್ಟ. ನಮಗೆ ಎಲ್ಲ ಗೊತ್ತಾಗಿದೆ, ಏನಾಯಿತು ನಿಜ ಹೇಳಿಬಿಡಿ ಎಂದು ಮನವೊಲಿಸಿದ್ದಾರೆ. ಆಗ ಅಳಲು ಆರಂಭಿಸಿದ ಆ ತಾಯಿ, ಎಲ್ಲ ಕಥೆಯನ್ನು ಬಿಚ್ಚಿಟ್ಟಳು.

ಇದೀಗ 3 ಆರೋಪಿಗಳನ್ನು ಬಂಧಿಸಲಾಗಿದೆ. ಮುಚ್ಚಿ ಹೋಗಿದ್ದ ಪ್ರಕರಣವನ್ನು ಬಯಲಿಗೆಳೆದಿದ್ದೇ ರೋಮಾಂಚಕ

ಮಹಿಳಾ ಮೀಸಲಾತಿ ಮಸೂದೆ : ದೇಶದ ಮಹಿಳೆಯರಿಗೆ ಮೋದಿ ಪತ್ರ

The post ಬೆಳಗಾವಿಯಲ್ಲಿ ಮರ್ಯಾದೆಗೇಡು ಹತ್ಯೆ – ಮಗಳನ್ನು ಕೊಂದು ಶವ ಸುಟ್ಟ ಕುಟುಂಬ appeared first on Samyukta Karnataka.

ಪಿಯು ಪರೀಕ್ಷೆಯಲ್ಲಿ ತಾಯಿ-ಮಗಳು ಪಾಸ್
ಬೆಳಗಾವಿ(ಮೂಡಲಗಿ): ಬೆಳಗಾವಿ ಜಿಲ್ಲೆಯ ಮೂಡಲಗಿ ಸಮೀಪದ ಕಲ್ಲೋಳಿ ಪಟ್ಟಣದ ಅಂಗನವಾಡಿಯಲ್ಲಿ ಕಾರ್ಯಕರ್ತೆಯಾಗಿ ಕಳೆದ 16 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶಿಲ್ಪಾ ಸೋಮನಟ್ಟಿ(ಗಿರೆಣ್ಣವರ) ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ವಡೆರಹಟ್ಟಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಎಕ್ಸಟ್ರನಲ್(ಹೊರಗಿನ) ಪರೀಕ್ಷೆ ಬರೆದಿರುವ ಅವರು ಶೇ. 54 ಅಂಕವನ್ನು ಪಡೆದಿದ್ದಾರೆ. ಇನ್ನೂ ಅವರ ಪುತ್ರಿ ಪಲ್ಲವಿ ಕೂಡ ಈ ಬಾರಿಯ ಪಿಯು ಪರೀಕ್ಷೆಯಲ್ಲಿ ಪಾಸಾಗಿದ್ದು, ತಾಯಿ-ಮಗಳು ಒಟ್ಟಿಗೆ ಪಾಸಾಗಿದ್ದಾರೆ.

ಶಿಲ್ಪಾ ಅವರ ಮಗಳು ಪಲ್ಲವಿ ಗಿರೆನ್ನವರ ನಾಗನೂರಿನ ಅಥರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಶೇ. 78 ಅಂಕ ಪಡೆದು ಉತ್ತೀರ್ಣರಾಗಿದ್ದಾ

ಬಾಗಲಕೋಟೆ ಉಪಚುನಾವಣೆ: ಮತದಾನ‌ ಫಸ್ಟ್‌ಕ್ಲಾಸ್

The post ಪಿಯು ಪರೀಕ್ಷೆಯಲ್ಲಿ ತಾಯಿ-ಮಗಳು ಪಾಸ್ appeared first on Samyukta Karnataka.

ಬೆಳಗಾವಿ: ಬೆಳಗ್ಗೆ ಅಮ್ಮನಿಲ್ಲ, ಸಂಜೆ ಅಪ್ಪನಿಲ್ಲ; ಒಂದೇ ದಿನ 3 ಕಂದಮ್ಮಗಳನ್ನ ತಬ್ಬಲಿಯಾಗಿಸಿದ ಕ್ರೂರ ವಿಧಿ!
ವಿಧಿ ಎಷ್ಟೊಂದು ಕ್ರೂರವಾಗಿರುತ್ತದೆ ಎಂಬುದಕ್ಕೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿರುವ ಈ ಹೃದಯವಿದ್ರಾವಕ ಘಟನೆಯೇ ಸಾಕ್ಷಿ. ಬೆಳಗ್ಗೆ ಎದ್ದು ‘ಅಮ್ಮ’ ಎಂದು ಕರೆದ ಮುಗ್ಧ ಕಂದಮ್ಮಗಳಿಗೆ ಸಂಜೆಯಾಗುವಷ್ಟರಲ್ಲಿ ‘ಅಪ್ಪ’ನೂ ಇಲ್ಲದಂತಾಗಿದೆ. ಕೇವಲ ಕೆಲವೇ ಗಂಟೆಗಳ ಅಂತರದಲ್ಲಿ ಗಂಡ-ಹೆಂಡತಿ ಇಬ್ಬರೂ ಸಾವನ್ನಪ್ಪಿದ್ದು, ಅವರ ಮೂರು ಮುದ್ದಾದ ಮಕ್ಕಳು ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ.

ಏನಿದು ಕರುಣಾಜನಕ ದುರಂತ?: ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಅರವಳ್ಳಿ ಗ್ರಾಮದಲ್ಲಿ ಈ ಕರುಳು ಹಿಂಡುವ ಘಟನೆ ಸಂಭವಿಸಿದೆ 30 ವರ್ಷದ ಮಧುರಾ ಹಾಗೂ 36 ವರ್ಷದ ಕರೆಪ್ಪ ಮಾದರ ದಂಪತಿಯೇ ಪ್ರಾಣ ಕಳೆದುಕೊಂಡ ದುರ್ದೈವಿಗಳು.

ಮಧುರಾ ಅವರು ಕಳೆದ ಹಲವು ವರ್ಷಗಳಿಂದ ತೀವ್ರವಾದ ಹೊಟ್ಟೆನೋವಿನಿಂದ ಬಳಲುತ್ತಿದ್ದರು  ಭಾನುವಾರ ನೋವು ತಾಳಲಾರದೆ, ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿದ್ದ ವಿಷ ಸೇವಿಸಿದ್ದರು. ತಕ್ಷಣವೇ ಅವರನ್ನು ಬೈಲಹೊಂಗಲ ಆಸ್ಪತ್ರೆಗೆ, ಅಲ್ಲಿಂದ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದರು.

ಪತ್ನಿಯ ನೋಡಲು ಹೋದವನು ಮರಳಿ ಬರಲೇ ಇಲ್ಲ!: ಮತ್ತೊಂದೆಡೆ, ಆಸ್ಪತ್ರೆಯಲ್ಲಿ ಹೆಂಡತಿ ಮೃತಪಟ್ಟ ಸುದ್ದಿ ಕೇಳಿ ಪತಿ ಕರೆಪ್ಪರಿಗೆ ಆಕಾಶವೇ ಕಳಚಿಬಿದ್ದಂತಾಯಿತು. ಪತ್ನಿಯ ಮುಖ ನೋಡಲು ಆಘಾತ ಹಾಗೂ ಗಡಿಬಿಡಿಯಲ್ಲಿ ಬೈಕ್ ಏರಿ ಬೆಳಗಾವಿಯತ್ತ ಹೊರಟರು. ಆದರೆ, ಅರವಳ್ಳಿ ಕ್ರಾಸ್ ಬಳಿ ಬರುತ್ತಿದ್ದಂತೆ ಧಾರವಾಡ ಕಡೆಯಿಂದ ಅತಿವೇಗವಾಗಿ ಬಂದ ಕೆಎಸ್ಆರ್​ಟಿಸಿ ಬಸ್ ಕರೆಪ್ಪ ಅವರ ಬೈಕ್ ಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ, ರಕ್ತದ ಮಡುವಿನಲ್ಲಿ ಒದ್ದಾಡಿದ ಕರೆಪ್ಪ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಒಂದೇ ದಿನ ಹೆಂಡತಿ ಆಸ್ಪತ್ರೆಯಲ್ಲಿ, ಗಂಡ ನಡುರಸ್ತೆಯಲ್ಲಿ ಹೆಣವಾಗಿದ್ದಾರೆ.

The post ಬೆಳಗಾವಿ: ಬೆಳಗ್ಗೆ ಅಮ್ಮನಿಲ್ಲ, ಸಂಜೆ ಅಪ್ಪನಿಲ್ಲ; ಒಂದೇ ದಿನ 3 ಕಂದಮ್ಮಗಳನ್ನ ತಬ್ಬಲಿಯಾಗಿಸಿದ ಕ್ರೂರ ವಿಧಿ! appeared first on Samyukta Karnataka.

ಬೆಳಗಾವಿ: ಲೋಕಾಯುಕ್ತ ದಾಳಿ – AEE ಮನೆ ಸೇರಿ 3 ಕಡೆ ಶೋಧ
ಬೆಳಗಾವಿ, ಹುಕ್ಕೇರಿ, ಅಥಣಿ ಸೇರಿ ಮೂರು ಕಡೆಗಳಲ್ಲಿ ಶೋಧ: ಕೋಟಿ ಕೋಟಿ ಆಸ್ತಿ ಸುಳಿವು

ಬೆಳಗಾವಿ: ಅಕ್ರಮ ಆಸ್ತಿ ಸಂಪಾದನೆ ಆರೋಪದ ಬೆನ್ನಲ್ಲೇ ಜಿಲ್ಲಾ ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ (ಎಇಇ) ಅಜಯ ಸಿಂಗ್ ರಜಪೂತ್ ಅವರಿಗೆ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಬೆಳ್ಳಂಬೆಳಿಗ್ಗೆ ಬಿಸಿ ಮುಟ್ಟಿಸಿದ್ದಾರೆ. ಬೆಳಗಾವಿಯ ಆಂಜನೇಯ ನಗರದಲ್ಲಿರುವ ಮನೆ ಸೇರಿದಂತೆ ಮೂರು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ ಅಧಿಕಾರಿಗಳು ಮಹತ್ವದ ದಾಖಲೆಗಳ ಪರಿಶೀಲನೆ ಕೈಗೊಂಡರು.

ಬೆಳಗಾವಿ ಜಿಲ್ಲೆಯಲ್ಲೇ ಈ ದಾಳಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಹುಕ್ಕೇರಿ ಹಾಗೂ ಅಥಣಿ ತಾಲೂಕಿನ ಮನೆಗಳ ಮೇಲೂ ಶೋಧ ಕಾರ್ಯ ಮುಂದುವರಿದಿದೆ. ಅಧಿಕಾರಿಗಳ ದಾಳಿಯ ವೇಳೆ ಮನೆಗಳಲ್ಲಿ ಸಂಗ್ರಹವಾಗಿದ್ದ ಆಸ್ತಿ ದಾಖಲೆಗಳು, ಬ್ಯಾಂಕ್ ಠೇವಣಿ ವಿವರಗಳು, ಚಿನ್ನಾಭರಣ ಹಾಗೂ ಇತರೆ ಬೆಲೆಬಾಳುವ ವಸ್ತುಗಳ ಬಗ್ಗೆ ತೀವ್ರ ಪರಿಶೀಲನೆ ನಡೆದಿದೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ, ಈ ದಾಳಿಯಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಸ್ಥಿರ-ಜಂಗಮ ಆಸ್ತಿ, ಚಿನ್ನಾಭರಣ ಹಾಗೂ ಭಾರೀ ಪ್ರಮಾಣದ ಠೇವಣಿ ಕುರಿತ ಮಾಹಿತಿ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿರುವ ಸಾಧ್ಯತೆ ವ್ಯಕ್ತವಾಗಿದೆ. ಶೋಧ ಕಾರ್ಯ ಪೂರ್ಣಗೊಂಡ ಬಳಿಕವೇ ಅಕ್ರಮ ಆಸ್ತಿ ಪ್ರಮಾಣದ ನಿಖರ ಚಿತ್ರ ಹೊರಬೀಳಲಿದೆ.

ಡಿಎಸ್ಪಿ ಬಿ.ಎಸ್. ಪಾಟೀಲ ಮತ್ತು ಭರತ್ ರೆಡ್ಡಿ ನೇತೃತ್ವದಲ್ಲಿ ಲೋಕಾಯುಕ್ತ ತಂಡ ದಾಳಿ ನಡೆಸಿದ್ದು, ದಾಖಲಾತಿಗಳ ಪರಿಶೀಲನೆ ಇನ್ನೂ ಮುಂದುವರಿದಿದೆ. ಅಧಿಕಾರಿಗಳ ದಾಳಿಯಿಂದ ಸಂಬಂಧಿತ ವಲಯಗಳಲ್ಲಿ ತೀವ್ರ ಸಂಚಲನ ಉಂಟಾಗಿದೆ. ಅಕ್ರಮ ಆಸ್ತಿ ಆರೋಪದ ಸುಳಿವು ಆಧರಿಸಿ ನಡೆದ ಈ ಕಾರ್ಯಾಚರಣೆ ಬೆಳಗಾವಿಯಲ್ಲಿ ಮತ್ತೊಮ್ಮೆ ಭ್ರಷ್ಟಾಚಾರ ವಿರುದ್ಧ ಲೋಕಾಯುಕ್ತದ ಕಟ್ಟುನಿಟ್ಟಿನ ಹೆಜ್ಜೆ ಎಂಬಂತೆ ಪರಿಣಮಿಸಿದೆ.

ಶೋಧ ಕಾರ್ಯದ ಅಂತಿಮ ವರದಿ ಹೊರಬಂದ ನಂತರ ಇನ್ನಷ್ಟು ಸ್ಫೋಟಕ ವಿವರಗಳು ಬಹಿರಂಗವಾಗುವ ನಿರೀಕ್ಷೆಯಿದೆ.

The post ಬೆಳಗಾವಿ: ಲೋಕಾಯುಕ್ತ ದಾಳಿ – AEE ಮನೆ ಸೇರಿ 3 ಕಡೆ ಶೋಧ appeared first on Samyukta Karnataka.

ಯಾರ ಕೈ-ಕಾಲು ಹಿಡಿಯಲ್ಲ, ಜೆಸಿಬಿ ಪಕ್ಷಕ್ಕೆ ಇನ್ನೂ ಸಮಯ ಇದೆ
ಚಿಕ್ಕೋಡಿ: ಬಿಜೆಪಿ ಸೇರ್ಪಡೆಗೆ ನಾನು ಯಾರನ್ನೂ ಭೇಟಿಯಾಗಲ್ಲ. ಯಾರ ಕೈಕಾಲು ಹಿಡಿಯಲ್ಲ. ಅವಶ್ಯಕತೆ ಬಿದ್ದಾಗ ಅವರು ಕರೆಯುತ್ತಾರೆ. ಇಲ್ಲವಾದ್ರೇ ಪಕ್ಷ ಕಟ್ಟೋದು ಅಂತಾ ಹೇಳಿದಿನಿ, ಜೆಸಿಬಿ ಪಕ್ಷಕ್ಕೆ ಇನ್ನೂ ಸಮಯ ಇದೆ, ಗಡಿ ಬಿಡಿ ಮಾಡಬೇಡಿ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ಪಾಕಿಸ್ತಾನದೊಳಗಿನ ಒಂದು ಸರ್ಕಾರ ಇದ್ದಂಗಿದೆ. ಬಜೆಟ್‌ನಲ್ಲಿ ಎಲ್ಲಾ ಅವರಿಗೆ ಕೊಟ್ಟಿದ್ದಾರೆ. ಅವರ ಹೆಣ್ಣು ಮಕ್ಕಳಿಗೆ ಕರಾಟೆ ಕಲಿಸುತ್ತಾರಂತೆ, ಪಿಎಸ್‌ಐ ಟ್ರೈನಿಂಗ್, ಸಿಬಿಎಸ್ಸಿ ಶಾಲೆ ಮಾಡೋದು, ಉರ್ದು ಶಾಲೆಗೆ ಪ್ರೋತ್ಸಾಹ ಕೊಡೊದು. ಇದು ಒಬ್ಬ ರಾಜ್ಯದ ಮುಖ್ಯಮಂತ್ರಿ ಮಾಡುವ ಬಜೆಟ್? ಎಂದು ಪ್ರಶ್ನೆ ಮಾಡಿದರು.

ವಿಜಯೇಂದ್ರ ಎಂಬ ಧೀಮಂತ ನಾಯಕ, ಅವರ ತಂದೆ ರೈತ ಪರ ಹೋರಾಟಗಾರರು, ಜೈಲಿಗೆ ಹೋಗಿ ಬಂದಿದ್ದಾರೆ. ಈ ಸರ್ಕಾರ ಹೋದ ಮೇಲೆ ಬಿಜೆಪಿ ಬಂದು ಅವರ ಮಗ ಬರಬಾರದು, ಆ ಚಿಂತೆ ನಮಗೆ ಕಾಡುತ್ತಿದೆ. ಬಿಜೆಪಿ ಹೈಕಮಾಂಡ್ ಏನೂ ಮಾಡುತ್ತದೋ ನೋಡೋಣ. ಚಿತ್ರದುರ್ಗದಲ್ಲಿ ಐವತ್ತು ವರ್ಷದ ಕಾರ್ಯಕ್ರಮ ಮಾಡ್ತಾರಂತೆ. ಇದು ಒಂದು ಬ್ಲ್ಯಾಕ್‌ಮೇಲ್ ಮಾಡುವ ತಂತ್ರ. ಲಿಂಗಾಯತರು ಯಾರೂ ಅವರ ಹಿಂದೆ ಇಲ್ಲ. ಸುಮ್ನೆ ಈ ರೀತಿ ಮಾಡ್ತಿದ್ದಾರೆ ಎಂದರು.

ಉತ್ತರ ಕರ್ನಾಟಕಕ್ಕೆ ಎರಡೂ ಪಕ್ಷದಿಂದ ಹಾನಿಯಾಗಿದೆ. ಮುಸ್ಲಿಂ ಸಮುದಾಯದ ಮತ ನಮಗೆ ಬೇಡ ಎಂದು ಹೇಳಿದಿನಿ. ದಾವಣಗೆರೆಯಲ್ಲಿ ಬಿಜೆಪಿಗೆ ಮುಸ್ಲಿಂರು ವೋಟ್ ಹಾಕ್ತಾರೆ ಅಂದ್ರು. ಸಿದ್ದರಾಮಯ್ಯ ಅವರ ಬಳಿ ಹೋಗಿ ಪ್ಯಾಕಿಂಗ್ ಆಗಿ ಬಂದ್ರು. ಐಪಿಎಲ್ ಟಿಕೆಟ್ ಸಲುವಾಗಿ ಎಂಎಲ್‌ಗಳಿಗೆ ಐದು ಪಾಸ್ ಕೊಡಬೇಕಂತೆ ಎರಡು ಲಕ್ಷ ವೇತನ ಕೊಡ್ತಾರೆ ನಮಗೆ. ಐದಾರು ಸಾವಿರ ರೂಪಾಯಿ ಟಿಕೆಟ್ ತಗೊಂಡು ತಿಂಡಿ ಇದ್ರೇ ಹೋಗಬೇಕು ಎಂದು ಹರಿಹಾಯ್ದರು.

The post ಯಾರ ಕೈ-ಕಾಲು ಹಿಡಿಯಲ್ಲ, ಜೆಸಿಬಿ ಪಕ್ಷಕ್ಕೆ ಇನ್ನೂ ಸಮಯ ಇದೆ appeared first on Samyukta Karnataka.

ಸಾಮಾನ್ಯರ ಬ್ಯಾಂಕ್ ಖಾತೆಗಳೇ ಅಪರಾಧಿಗಳ ಆಯುಧ: ಬೆಳಗಾವಿ ಪೊಲೀಸರ ಭರ್ಜರಿ ಬೇಟೆ
ಬೆಳಗಾವಿ: ‘ವರ್ಕ್ ಫ್ರಾಂ ಹೋಮ್’ ಕೆಲಸ ಕೊಡಿಸುತ್ತೇವೆ, ಸರ್ಕಾರದ ಸಾಲ ಮಾಡಿಸಿಕೊಡುತ್ತೇವೆ ಎಂದು ನಂಬಿಸಿ ಅಮಾಯಕ ಜನರ ಹೆಸರಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆಸಿ, ಆ ಖಾತೆಗಳನ್ನೇ ಸೈಬರ್ ವಂಚನೆಗೆ ಬಳಸಿದ ಭಾರೀ ಜಾಲವನ್ನು ಬೆಳಗಾವಿ ನಗರ ಸೈಬರ್ ಅಪರಾಧ ಪೊಲೀಸರು ಭೇದಿಸಿದ್ದಾರೆ.

ಈ ಪ್ರಕರಣದಲ್ಲಿ ಇಬ್ಬರು ಪ್ರಮುಖ ಆರೋಪಿತರನ್ನು ಬಂಧಿಸಲಾಗಿದ್ದು, ಸುಮಾರು 72 ಬ್ಯಾಂಕ್ ಖಾತೆಗಳ ಮೂಲಕ ಸಂಘಟಿತ ಸೈಬರ್ ವಂಚನೆ ನಡೆದಿದೆ ಎಂಬ ಅಚ್ಚರಿಯ ಸಂಗತಿ ತನಿಖೆಯಿಂದ ಬೆಳಕಿಗೆ ಬಂದಿದೆ.

ನಗರದ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ 22 ಫೆಬ್ರವರಿ 2026ರಂದು ದಾಖಲಾಗಿದ್ದ ಪ್ರಕರಣದ ತನಿಖೆ ವೇಳೆ ಈ ಜಾಲ ಬೆಳಕಿಗೆ ಬಂದಿತು. ಪಿರ್ಯಾದಿದಾರ ಕುಮಾರಿ ಮಾನಸಿ ಚವ್ಹಾಣ ಅವರಿಗೆ ಪರಿಚಿತಳಾದ ಮೇಘಾ ಮಾರಡೊಳಕರ, ಪಿರ್ಯಾದಿ ಹಾಗೂ ಹರಿಶ್ಚಂದ್ರ ಅವಿನಾಶ ದಿವಟೆ ಅವರಿಗೆ ಮನೆಯಿಂದಲೇ ಕೆಲಸ ಮತ್ತು ಸಾಲ ಸೌಲಭ್ಯ ಕೊಡಿಸುವುದಾಗಿ ನಂಬಿಕೆ ಮೂಡಿಸಿದ್ದಳು. ಆದರೆ, ಕೆಲಸವೂ ಕೊಡಿಸದೆ, ಸಾಲವೂ ಮಾಡಿಸದೆ, ಅವರ ಹೆಸರಿನಲ್ಲಿ ತೆರೆದ ಬ್ಯಾಂಕ್ ಖಾತೆಗಳನ್ನು ಮೋಸದ ಹಣ ವರ್ಗಾವಣೆಗೆ ಬಳಸಿಕೊಂಡಿರುವುದು ಬಹಿರಂಗವಾಯಿತು.

ಪ್ರಕರಣದ ತನಿಖೆ ಕೈಗೊಂಡ ಪೊಲೀಸರು 24 ಫೆಬ್ರವರಿ 2026ರಂದು ನ್ಯಾಯಾಲಯದ ಶೋಧ ವಾರೆಂಟ್ ಪಡೆದು ಆರೋಪಿ ಮೇಘಾ ಮಾರಡೊಳಕರ ನಿವಾಸವನ್ನು ತಪಾಸಣೆ ನಡೆಸಿದರು. ವಿಚಾರಣೆ ವೇಳೆ ಆಕೆ ಬೆಳಗಾವಿಯ ಹಲವು ಅಮಾಯಕ ಜನರನ್ನು ಬಳಸಿ ವಿವಿಧ ಬ್ಯಾಂಕ್‌ಗಳಲ್ಲಿ 72 ಖಾತೆಗಳನ್ನು ತೆರೆಸಿದ್ದಳು ಎಂಬ ಸಂಗತಿ ಪತ್ತೆಯಾಯಿತು.

ಆ ಖಾತೆಗಳ ಸಂಬಂಧ ದಾಖಲೆಗಳನ್ನು ಟ್ರಾವೆಲ್ಸ್ ಪಾರ್ಸೆಲ್ ಮೂಲಕ ಮುಂಬೈ ಮೂಲದ ಹೈದರಅಲಿ ಗುಲಾಮಅಲಿ ಉಜೈನವಾಲಾ ಅವರಿಗೆ ಕಳುಹಿಸಲಾಗುತ್ತಿತ್ತು ಎನ್ನಲಾಗಿದೆ. ಇದಕ್ಕಿಂತಲೂ ಆತಂಕಕಾರಿ ಅಂಶವೆಂದರೆ, ಈ ಬ್ಯಾಂಕ್ ಖಾತೆಗಳ ಜಾಲವನ್ನು ಸೈಬರ್ ಸಂಘಟಿತ ಅಪರಾಧಕ್ಕಾಗಿ ಬಳಸಲಾಗುತ್ತಿದ್ದು, ಪ್ರಮುಖ ಆರೋಪಿತನಾದ ಹೈದರಅಲಿ ತನ್ನ ಮಗ ಇದ್ರಿಸ್ ಅಲಿ ಹೈದರಅಲಿ, ಮತ್ತೊಬ್ಬ ಆರೋಪಿ ಅಜಿಜ್ ಬೋರಾ ಹಾಗೂ ಮೇಘಾ ಮಾರಡೊಳಕರ ಮಗಳು ಶಿವಾನಿ ನಾರಾಯಣ ಮಾರಡೊಳಕರ ಮೂಲಕ ದೇಶದಾಚೆಗೂ ಸಂಪರ್ಕ ಜಾಲ ಬೆಳೆಸಿದ್ದಾನೆ ಎಂಬ ಶಂಕೆ ಪೊಲೀಸರ ತನಿಖೆಯಲ್ಲಿ ವ್ಯಕ್ತವಾಗಿದೆ.

ಈ ಬೆನ್ನಲ್ಲೇ, ಪೊಲೀಸರು 22 ಮಾರ್ಚ್ 2026ರಂದು ಮುಂಬೈನಲ್ಲಿ ಹೈದರಅಲಿಯನ್ನು ವಶಕ್ಕೆ ಪಡೆದು, ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ನಡೆಸಿದರು. ಇದೇ ಪ್ರಕರಣದಲ್ಲಿ ಆರೋಪಿ ಆಗಿರುವ ಮೇಘಾ ಮಾರಡೊಳಕರರನ್ನು 26 ಮಾರ್ಚ್ 2026ರಂದು ಗೋವಾದ ಪೂರ್ವ ಭಾಗದಲ್ಲಿ ವಶಕ್ಕೆ ಪಡೆದು, 27 ಮಾರ್ಚ್ ರಂದು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇಬ್ಬರೂ ಆರೋಪಿಗಳು ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ.

ತನಿಖೆಯ ಮತ್ತೊಂದು ದೊಡ್ಡ ಬಹಿರಂಗವೆಂದರೆ, 72 ಖಾತೆಗಳ ಪೈಕಿ 47 ಖಾತೆಗಳ ವಿರುದ್ಧವೇ 1930 ಹಾಗೂ ಎನ್‌ಸಿಸಿಆರ್‌ಪಿ ಪೋರ್ಟಲ್‌ನಲ್ಲಿ ಒಟ್ಟು 144 ಪ್ರಕರಣಗಳು ದಾಖಲಾಗಿವೆ. ಇದೇ 47 ಖಾತೆಗಳಲ್ಲಿ ಸೇರಿ ₹1,27,04,678 ಮೊತ್ತದ ಮೋಸದ ಹಣ ಜಮಾ ಆಗಿರುವುದು ಪತ್ತೆಯಾಗಿದೆ. ಇದರಿಂದ ಬೆಳಗಾವಿಯಿಂದ ನಡಿದ ಬ್ಯಾಂಕ್ ಖಾತೆ ತೆರೆಸುವ ನೆಪದ ಜಾಲ, ದೇಶವ್ಯಾಪಿ ಸೈಬರ್ ವಂಚನೆಗೆ ಸೇತುವೆಯಾಗಿತ್ತು ಎಂಬ ಅನುಮಾನ ಗಾಢವಾಗಿದೆ.

ಒಟ್ಟಿನಲ್ಲಿ, ಉದ್ಯೋಗ ಮತ್ತು ಸಾಲದ ಆಮಿಷ ತೋರಿಸಿ ಖಾತೆ ತೆರೆಸುವ ಈ ಮಾದರಿ ಕೇವಲ ಸಾಮಾನ್ಯ ಮೋಸವಲ್ಲ; ಅದು ಸಾಮಾನ್ಯ ನಾಗರಿಕರ ಬ್ಯಾಂಕ್ ಪರಿಚಯವನ್ನೇ ಅಪರಾಧ ಜಾಲದ ಆಯುಧವಾಗಿಸುವ ಅಪಾಯಕಾರಿ ಕುತಂತ್ರ ಎಂಬುದು ಸ್ಪಷ್ಟವಾಗಿದೆ.

ಈ ಕಾರ್ಯಾಚರಣೆ ಪೊಲೀಸ್ ಆಯುಕ್ತರು ಹಾಗೂ ಉಪ ಪೊಲೀಸ್ ಆಯುಕ್ತರು (ಕಾನೂನು ಮತ್ತು ಸುವ್ಯವಸ್ಥೆ), ಬೆಳಗಾವಿ ನಗರ ಅವರ ಮಾರ್ಗದರ್ಶನದಲ್ಲಿ ನಡೆದಿದ್ದು, ಸಹಾಯಕ ಪೊಲೀಸ್ ಆಯುಕ್ತ ಬಿ.ಎಸ್. ಮಂಟೂರ, ಪೊಲೀಸ್ ನಿರೀಕ್ಷಕ ಎಸ್.ಎನ್. ಗಾಚಿ ಹಾಗೂ ಸೈಬರ್ ಅಪರಾಧ ಪೊಲೀಸ್ ಠಾಣೆಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಯಶಸ್ವಿ ಕಾರ್ಯಾಚರಣೆಗೆ ಪೊಲೀಸ್ ಆಯುಕ್ತರು ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಶ್ಲಾಘಿಸಿದ್ದಾರೆ.

The post ಸಾಮಾನ್ಯರ ಬ್ಯಾಂಕ್ ಖಾತೆಗಳೇ ಅಪರಾಧಿಗಳ ಆಯುಧ: ಬೆಳಗಾವಿ ಪೊಲೀಸರ ಭರ್ಜರಿ ಬೇಟೆ appeared first on Samyukta Karnataka.

ಅಪಘಾತ: ಮಹಿಳಾ ಪೌರಕಾರ್ಮಿಕ ಸ್ಥಳದಲ್ಲೇ ಸಾವು
ಬೆಳಗಾವಿ: ನಗರದ ಸ್ವಚ್ಛತೆಗೆ ಬೆಳಗ್ಗೆಯೇ ರಸ್ತೆಗಿಳಿದಿದ್ದ ಪಾಲಿಕೆ ಪೌರಕಾರ್ಮಿಕರಾದ ಅವ್ವಕ್ಕ ಕೋಲಕಾರ ಅವರು, ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲೇ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ದಾರುಣ ಘಟನೆ ಅನಗೋಳ ನಾಕಾ ಬಳಿ ಶುಕ್ರವಾರ ಬೆಳಿಗ್ಗೆ ನಡೆದಿದೆ.

ಮಾಹಿತಿಯ ಪ್ರಕಾರ, ಅವ್ವಕ್ಕ ಕೋಲಕಾರ ಅವರು ಎಂದಿನಂತೆ ಬೆಳಿಗ್ಗೆ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿದ್ದಾಗ ವೇಗವಾಗಿ ಬಂದ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ತಕ್ಷಣವೇ ಚಾಲಕ ವಾಹನ ಸಮೇತ ಸ್ಥಳದಿಂದ ಪರಾರಿಯಾಗಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣಗೊಂಡಿತ್ತು. ಕರ್ತವ್ಯದಲ್ಲಿದ್ದ ಮಹಿಳಾ ಪೌರಕಾರ್ಮಿಕಿಯೊಬ್ಬರು ಹೀಗೆ ಪ್ರಾಣ ಕಳೆದುಕೊಂಡಿರುವುದು ಪಾಲಿಕೆ ವಲಯದಲ್ಲೂ, ಸಾರ್ವಜನಿಕ ವಲಯದಲ್ಲೂ ತೀವ್ರ ದುಃಖಕ್ಕೆ ಕಾರಣವಾಗಿದೆ.

ಘಟನೆ ಕುರಿತು ಮಾಜಿ ಮೇಯರ್ ಮಂಗೇಶ ಪವಾರ, ಮಾಜಿ ಉಪಮೇಯರ್ ವಾಣಿ ಜೋಶಿ, ನಗರಸೇವಕರಾದ ಅಭಿಜಿತ ಜವಳಕರ, ಆನಂದ ಚವ್ಹಾಣ, ಸಾರಂಗ ಮುಂತಾದವತು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.

ಇದೇ ವೇಳೆ ಪಾಲಿಕೆ ಉಪ ಆಯುಕ್ತ ಉದಯ ತಳವಾದ ಹಾಗೂ ಪರಿಸರ ಅಭಿಯಂತರ ಹನಮಂತ ಕಲಾದಗಿ ಸಹ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.
ಅಪಘಾತದ ಬಳಿಕ ಪರಾರಿಯಾಗಿದ್ದ ವಾಹನ ಹಾಗೂ ಚಾಲಕನನ್ನು ಪೊಲೀಸರು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಚಾಲಕನ ನಿರ್ಲಕ್ಷ್ಯದ ಅಂಶಗಳ ಕುರಿತು ತನಿಖೆ ಮುಂದುವರಿಸಿದ್ದಾರೆ. ನಗರವನ್ನು ಸ್ವಚ್ಛವಾಗಿಡಲು ತಮ್ಮ ಜೀವವನ್ನೇ ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸುವ ಪೌರಕಾರ್ಮಿಕರ ಸುರಕ್ಷತೆ ಮತ್ತೆ ಪ್ರಶ್ನೆಗೆ ಗುರಿಯಾಗಿದೆ. ಅವ್ವಕ್ಕ ಕೋಲಕಾರ ಅವರ ಸಾವಿನ ಸುದ್ದಿ ಪಾಲಿಕೆ ಸಿಬ್ಬಂದಿಯಲ್ಲಿ ಶೋಕದ ಛಾಯೆ ಮೂಡಿಸಿದೆ.

The post ಅಪಘಾತ: ಮಹಿಳಾ ಪೌರಕಾರ್ಮಿಕ ಸ್ಥಳದಲ್ಲೇ ಸಾವು appeared first on Samyukta Karnataka.

LPG ಕೊರತೆ – ಸಾಲದ ಒತ್ತಡಕ್ಕೆ ಹೊಟೇಲ್ ಮಾಲೀಕ ಆತ್ಮಹತ್ಯೆ
ಬೆಳಗಾವಿ (ಹುಕ್ಕೇರಿ): ಸಾಲದ ಒತ್ತಡ ಹಾಗೂ ವ್ಯವಹಾರ ಸಂಕಷ್ಟದಿಂದ ಮನನೊಂದು ಹೊಟೇಲ್ ಉದ್ಯಮಿ ಆತ್ಮಹತ್ಯೆ ಮಾಡಿಕೊಂಡಿರುವ  ಘಟನೆ ಹುಕ್ಕೇರಿ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.

ಹುಕ್ಕೇರಿ ಹಳೆಯ ಬಸ್ ನಿಲ್ದಾಣದ ಸಮೀಪದ “ಹನುಮಾನ್ ಹೊಟೇಲ್” ಮಾಲೀಕ ರಾಮ ಹಳ್ಳೂರಿ (ಸುಮಾರು 45) ಅವರು ತಮ್ಮದೇ ಹೊಟೇಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಪೊಲೀಸ್ ಮೂಲಗಳಿಂದ ದೃಢಪಟ್ಟಿದೆ.

ವ್ಯವಹಾರ ಸಂಕಷ್ಟ – ಆತ್ಮಹತ್ಯೆಗೆ ಕಾರಣವೇ?: ಕಳೆದ ಕೆಲವು ದಿನಗಳಿಂದ ಹೊಟೇಲ್‌ಗೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದೊರೆಯದೆ, ಹೋಟೆಲ್ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಇದರಿಂದ ಆದಾಯ ಸಂಪೂರ್ಣವಾಗಿ ಕುಂಠಿತಗೊಂಡಿದ್ದು, ಸಾಲದ ಕಂತುಗಳು ಹಾಗೂ ಬಡ್ಡಿಯನ್ನು ತೀರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಸ್ಥಳೀಯರ ಪ್ರಕಾರ, ರಾಮ ಹಳ್ಳೂರಿ ಹಲವು ವರ್ಷಗಳಿಂದ ಹೋಟೆಲ್ ವ್ಯವಹಾರ ನಡೆಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಹಣಕಾಸಿನ ಸಮಸ್ಯೆಗಳು ಹೆಚ್ಚಾಗಿದ್ದವು. ಸಾಲಗಾರರ ಒತ್ತಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಅವರು ಮಾನಸಿಕವಾಗಿ ಕುಗ್ಗಿ ಈ ಕೃತ್ಯಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಹುಕ್ಕೇರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಇದೇ ವೇಳೆ, ಸ್ಥಳೀಯ ವ್ಯಾಪಾರಿಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಸರಬರಾಜಿನಲ್ಲಿ ಉಂಟಾಗಿರುವ ವ್ಯತ್ಯಯಗಳ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದು, ಸರಬರಾಜು ವ್ಯವಸ್ಥೆಯನ್ನು ಸರಿಪಡಿಸಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಸೂಚನೆ: ಮಾನಸಿಕ ಒತ್ತಡ ಅಥವಾ ಸಂಕಷ್ಟದಲ್ಲಿರುವವರು ಸಹಾಯ ಪಡೆಯುವುದು ಅತ್ಯಂತ ಅಗತ್ಯ. ಆತ್ಮಹತ್ಯೆ ಸಮಸ್ಯೆಗೆ ಪರಿಹಾರವಲ್ಲ. ಅಗತ್ಯವಿದ್ದಲ್ಲಿ ಸ್ಥಳೀಯ ಸಹಾಯವಾಣಿ ಅಥವಾ ವಿಶ್ವಾಸಾರ್ಹ ವ್ಯಕ್ತಿಗಳ ನೆರವು ಪಡೆಯಲು ಮನವಿ.

ಪೆಟ್ರೋಲ್, ಡೀಸೆಲ್‌, ಎಲ್‌ಪಿಜಿ ಗ್ಯಾಸ್ ಪೂರೈಕೆ ಬಗ್ಗೆ ಆತಂಕ ಬೇಡ

The post LPG ಕೊರತೆ – ಸಾಲದ ಒತ್ತಡಕ್ಕೆ ಹೊಟೇಲ್ ಮಾಲೀಕ ಆತ್ಮಹತ್ಯೆ appeared first on Samyukta Karnataka.

ಈಜುತ್ತಿದ್ದಾಗಲೇ ಹೃದಯಾಘಾತ: ಸೇನಾಧಿಕಾರಿ ಸಾವು
ಬೆಳಗಾವಿ: ಈಜುಗೊಳದಲ್ಲಿ ಈಜುತ್ತಿದ್ದಾಗಲೇ ಹೃದಯಾಘಾತದಿಂದ ಸೇನಾಧಿಕಾರಿ ಸಾವನ್ನಪ್ಪಿದ ಘಟನೆ ಬೆಳಗಾವಿಯ ನಾನಾವಾಡಿಯ ಕಮಾಂಡೋ ವಿಂಗ್ ಆವರಣದಲ್ಲಿ ಮುಂಜಾನೆ ನಡೆದಿದೆ.

ಸ್ವಿಮ್ಮಿಂಗ್ ಪೂಲ್‌ನಲ್ಲಿ ಈಜುತ್ತಿದ್ದ ಹರಿಯಾಣ ಮೂಲದ ಲೆಫ್ಟಿನೆಂಟ್ ಅಮಿತ್‌ಸಿಂಗ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಬೆಳಗಾವಿಯ ಎಂಎಲ್‌ಐಆರ್‌ಸಿ ಕಮಾಂಡೋ ವಿಂಗ್‌ನ ಟ್ರೇನಿಂಗ್‌ನಲ್ಲಿ ಅಧಿಕಾರಿಯಾಗಿದ್ದರು.

ಈಜುತ್ತಿದ್ದಾಗಲೇ ಏಕಾಏಕಿ ತೀವ್ರ ಹೃದಯಾಘಾತವಾಗಿದೆ. ತಕ್ಷಣ ಅಧಿಕಾರಿಯನ್ನು ಮೇಲಕ್ಕೆ ತಂದು ಲೈಫ್ ಗಾರ್ಡ್ ಪ್ರದೀಪ್ ಕುಮಾರ್ ಪ್ರಥಮ ಚಿಕಿತ್ಸೆ ನೀಡಿ ಅಂಬುಲೆನ್ಸ್ ಮೂಲಕ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ಒಯ್ಯುವಾಗ ಮಾರ್ಗಮಧ್ಯದಲ್ಲೇ ಲೆಫ್ಟಿನೆಂಟ್ ಅಮಿತ್ ಸಿಂಗ್ ಸಾವನ್ನಪ್ಪಿದ್ದಾರೆ.

ಟಿಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

The post ಈಜುತ್ತಿದ್ದಾಗಲೇ ಹೃದಯಾಘಾತ: ಸೇನಾಧಿಕಾರಿ ಸಾವು appeared first on Samyukta Karnataka.

ಹುಬ್ಬಳ್ಳಿ–ಬೆಳಗಾವಿ ವಿಮಾನ ನಿಲ್ದಾಣ ಉನ್ನತಿ ಏಕೆ ಇಲ್ಲ?: ಕೇಂದ್ರದ ವಿರುದ್ಧ ಎಂ.ಬಿ ಪಾಟೀಲ ಆಕ್ರೋಶ
ತಮಿಳನಾಡು ವಿಮಾನ ನಿಲ್ದಾಣಕ್ಕೆ ಅಂತಾರಾಷ್ಟ್ರೀಯ ಹುದ್ದೆ: ಕರ್ನಾಟಕಕ್ಕೆ ತಾರತಮ್ಯ

ಬೆಂಗಳೂರು : ತಮಿಳುನಾಡಿನ ಮಧುರೈ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೆಂದು ಘೋಷಿಸಿರುವ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ತಾರತಮ್ಯ ಮಾಡಿದೆ ಎಂದು ರಾಜ್ಯದ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಮ್.‌ ಬಿ ಪಾಟೀಲ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ತಮಿಳುನಾಡಿಗೆ ವಿಶೇಷ ಆದ್ಯತೆ ನೀಡುತ್ತಿದ್ದು, ಕರ್ನಾಟಕದ ಹುಬ್ಬಳ್ಳಿ ಹಾಗೂ ಬೆಳಗಾವಿ ವಿಮಾನ ನಿಲ್ದಾಣದ ವಿಚಾರದಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

‘ತಮಿಳುನಾಡಿಗೆ ಬೆಣ್ಣೆ, ಕರ್ನಾಟಕಕ್ಕೆ ಸುಣ್ಣ’: ಮಧುರೈ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯವಾಗಿ ಘೋಷಿಸಿರುವುದು ನೆರೆಯ ರಾಜ್ಯಕ್ಕೆ ನೀಡಿದ ಆದ್ಯತೆಯ ಉದಾಹರಣೆ ಎಂದು ಎಂ.ಬಿ ಪಾಟೀಲ ಹೇಳಿದರು. “ತಮಿಳುನಾಡಿಗೆ ಬೆಣ್ಣೆ, ಕರ್ನಾಟಕಕ್ಕೆ ಸುಣ್ಣ ಎನ್ನುವಂತಾಗಿದೆ. ಈ ರೀತಿಯ ಧೋರಣೆ ಯಾವತ್ತಿಗೂ ಸರಿಯಲ್ಲ,” ಎಂದು ಅವರು ಕೇಂದ್ರ ಸರ್ಕಾರದ ವಿರುದ್ಧ ಟೀಕಿಸಿದರು.

ಚುನಾವಣೆ ದೃಷ್ಟಿಯಿಂದ ನಿರ್ಧಾರ? : ತಮಿಳುನಾಡಿನಲ್ಲಿ ನಡೆಯಲಿರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ ಅವರು, ಕರ್ನಾಟಕದ ಬೇಡಿಕೆಯ ಬಗ್ಗೆ ಕೇಂದ್ರ ಸರ್ಕಾರ ತೋರಿಸುತ್ತಿರುವ ಉದಾಸೀನತೆ ಪ್ರಶ್ನಾರ್ಹವಾಗಿದೆ ಎಂದು ಹೇಳಿದರು.

ಕೇಂದ್ರಕ್ಕೆ ಪತ್ರ ಬರೆದಿದ್ದ ರಾಜ್ಯ ಸರ್ಕಾರ : ಉತ್ತರ ಕರ್ನಾಟಕದ ಆರ್ಥಿಕ ಅಭಿವೃದ್ಧಿ ದೃಷ್ಟಿಯಿಂದ ಹುಬ್ಬಳ್ಳಿ ಹಾಗೂ ಬೆಳಗಾವಿ ವಿಮಾನ ನಿಲ್ದಾಣಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸುವಂತೆ ಕೋರಿ 2025ರ ಜೂನ್ 24ರಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಅವರಿಗೆ ಪತ್ರ ಬರೆದಿದ್ದಾಗಿ ಸಚಿವರು ತಿಳಿಸಿದ್ದಾರೆ.

ಆದರೆ ಇಷ್ಟಾದರೂ ರಾಜ್ಯದ ಬೇಡಿಕೆಗೆ ಸ್ಪಂದಿಸದಿರುವುದು ಖೇದಕರ ಎಂದು ಅವರು ಹೇಳಿದರು.

ಕರ್ನಾಟಕದ ಕೇಂದ್ರ ಸಚಿವರು ಧ್ವನಿ ಎತ್ತಲಿ : ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಮತ್ತು ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಅವರು ಒಗ್ಗಟ್ಟಾಗಿ ಧ್ವನಿ ಎತ್ತಿ, ರಾಜ್ಯದ ಹಿತಾಸಕ್ತಿಯ ಪರ ನಿಲ್ಲಬೇಕಿದೆ ಎಂದು ಎಂ.ಬಿ ಪಾಟೀಲ ಆಗ್ರಹಿಸಿದ್ದಾರೆ.

ಉತ್ತರ ಕರ್ನಾಟಕ ಅಭಿವೃದ್ಧಿಗೆ ಅಗತ್ಯ: ಹುಬ್ಬಳ್ಳಿ ಅಥವಾ ಬೆಳಗಾವಿ ಎರಡರಲ್ಲಿ ಕನಿಷ್ಠ ಒಂದನ್ನಾದರೂ ತಕ್ಷಣ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೆಂದು ಘೋಷಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಇದರಿಂದ ಉತ್ತರ ಕರ್ನಾಟಕದ ವ್ಯಾಪಾರ, ಉದ್ಯಮ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ದೊಡ್ಡ ಉತ್ತೇಜನ ಸಿಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಸರ್ಕಾರವು ರಾಜ್ಯದ ಅಗತ್ಯವನ್ನು ಮನಗಂಡು ಶೀಘ್ರದಲ್ಲೇ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಸಚಿವರು ಆಗ್ರಹಿಸಿದ್ದಾರೆ.

ಟಿಕೆಟ್ ಸಿಗದ ಬೇಸರ: BJP ಶಿಸ್ತು ಸಮಿತಿ ಅಧ್ಯಕ್ಷ ಪಾಟೀಲ ರಾಜೀನಾಮೆ

The post ಹುಬ್ಬಳ್ಳಿ–ಬೆಳಗಾವಿ ವಿಮಾನ ನಿಲ್ದಾಣ ಉನ್ನತಿ ಏಕೆ ಇಲ್ಲ?: ಕೇಂದ್ರದ ವಿರುದ್ಧ ಎಂ.ಬಿ ಪಾಟೀಲ ಆಕ್ರೋಶ appeared first on Samyukta Karnataka.