#Bangalore Archives - Samyukta Karnataka

ಪೆಸಿಫಿಕ್‌ನ ನಾಡಿಮಿಡಿತ: ಜಗತ್ತಿನ ಹವಾಮಾನ ‘ಎಲ್ ನಿನೊ’ (El Niño) ಮತ್ತು ‘ಲಾ ನಿನಾ’ (La Niña) ರೋಚಕ ಕಥೆ
ಲೇಖಕರು: ಚನಬಸನಗೌಡ. ಎಸ್. ಪಾಟೀಲ್, ಹಿರಿಯ ವಿಜ್ಞಾನಿಗಳು, ಭಾರತೀಯ ಹವಾಮಾನ ಇಲಾಖೆ (IMD), ಬೆಂಗಳೂರು

ಬೆಂಗಳೂರು: ಪ್ರತಿ ವರ್ಷ ಜೂನ್ ತಿಂಗಳು ಬರುತ್ತಿದ್ದಂತೆ ಕರ್ನಾಟಕವು ನೈಋತ್ಯ ಮಾನ್ಸೂನ್ ಮಳೆಯ ಆಗಮನಕ್ಕಾಗಿ ಕಾತರದಿಂದ ಆಕಾಶ ನೋಡಲು ಆರಂಭಿಸುತ್ತದೆ. ಮಲೆನಾಡಿನ ದಟ್ಟ ಕಾಡುಗಳು, ಬಯಲುಸೀಮೆಯ ಸಮೃದ್ಧ ಹೊಲಗಳು ಹಾಗೂ ಕಾವೇರಿ, ಕೃಷ್ಣಾ ನದಿಗಳ ಜಲಾಶಯಗಳು ಜೀವಕಳೆ ಪಡೆದುಕೊಳ್ಳುವುದು ಈ ಮಳೆಯಿಂದಲೇ. ಆದರೆ, ನಮ್ಮ ರಾಜ್ಯದ ಹವಾಮಾನದ ಹಣೆಬರಹವನ್ನು ಬರೆಯುವ ನಿಜವಾದ ‘ರಿಮೋಟ್ ಕಂಟ್ರೋಲ್’ ಇರುವುದು ಇಲ್ಲಿಂದ ಅರ್ಧ ಜಗತ್ತಿನ ಆಚೆಗಿನ ಪೆಸಿಫಿಕ್ ಸಾಗರದ ಆಳದಲ್ಲಿ!

ಆದರೆ ನಿಮಗೆ ಗೊತ್ತೇ? ನಮ್ಮ ಕರ್ನಾಟಕದ ಹಳ್ಳಿಹಳ್ಳಿಯ ರೈತರ ಕಣ್ಣಲ್ಲಿ ಸಂತೋಷದ ಕಣ್ಣೀರು ತರಿಸಬೇಕೋ ಅಥವಾ ಅವರ ಭೂಮಿ ಒಡೆದು ಬರಗಾಲದ ಆತಂಕ ಸೃಷ್ಟಿಸಬೇಕೋ ಎಂಬ ಇಡೀ ಹವಾಮಾನದ ‘ಅದೃಶ್ಯ ರಿಮೋಟ್ ಕಂಟ್ರೋಲ್’ ಇರುವುದು ಇಲ್ಲಿಂದ ಅರ್ಧ ಜಗತ್ತಿನ ಆಚೆಗಿನ ಪೆಸಿಫಿಕ್ ಮಹಾಸಾಗರದ ಅತ್ಯಂತ ಆಳದ ತಳದಲ್ಲಿ!

ವಿಜ್ಞಾನದ ಜಗತ್ತಿನಲ್ಲಿ ಇವುಗಳನ್ನು ‘ಎಲ್ ನಿನೊ’ (El Niño) ಮತ್ತು ‘ಲಾ ನಿನಾ’ (La Niña) ಎಂದು ಕರೆಯಲಾಗುತ್ತದೆ. ಆದರೆ ನೆನಪಿಡಿ, ಇವು ಕೇವಲ ಹೈಟೆಕ್ ಪ್ರಯೋಗಾಲಯಗಳಲ್ಲಿ ಹವಾಮಾನಶಾಸ್ತ್ರಜ್ಞರು ರೂಮಿನಲ್ಲಿ ಕುಳಿತು ಚರ್ಚಿಚುವ ಕ್ಲಿಷ್ಟ ಪದಗಳಲ್ಲ! ಇದು ಪ್ರಕೃತಿ ಅರ್ಧ ಭೂಮಿ ದಾಟಿ ಆಡುವ ಅತ್ಯಂತ ನಿಗೂಢ ಮಾಯಾಜಾಲ. ಮಳೆಯನ್ನೇ ನಂಬಿ ಬದುಕುವ ನಮ್ಮ ನಾಡಿನ ಪ್ರತಿಯೊಬ್ಬ ರೈತರ ಹೊಲದ ಹಣೆಬರಹವನ್ನು ಮತ್ತು ನಿಮ್ಮ-ನಮ್ಮ ಅಡುಗೆಮನೆಯ ಬಜೆಟ್ ಅನ್ನು ಒಂದೇ ಒಂದು ಕ್ಷಣದಲ್ಲಿ ಉಲ್ಟಾ-ಪಲ್ಟಿಯಾಗಿಸಬಲ್ಲ ಜಗತ್ತಿನ ಅತ್ಯಂತ ರೋಚಕ ವಿಸ್ಮಯಗಳಿವು!

ಸಮುದ್ರದ ನೀರು ಕೇವಲ ಒಂದು ಡಿಗ್ರಿ ಬಿಸಿಯಾದರೆ ಇಡೀ ಭೂಮಂಡಲದ ಹವಾಮಾನ ನಕ್ಷೆಯೇ ಹೇಗೆ ಬದಲಾಗುತ್ತದೆ? ಪೆಸಿಫಿಕ್ ಸಾಗರದಲ್ಲಿ ‘ಎಲ್ ನಿನೊ’ (El Niño) ಮತ್ತು ‘ಲಾ ನಿನಾ’ (La Niña) ಪ್ರಕೃತಿಯ ಈ ರೋಮಾಂಚನಕಾರಿ ಜೂಜಾಟದ ರಹಸ್ಯವನ್ನು ಅನಾವರಣಗೊಳಿಸೋಣ.

1. ಇತಿಹಾಸದ ಪುಟಗಳಲ್ಲಿ ಅಡಗಿದ ರಹಸ್ಯ

ಆಧುನಿಕ ಉಪಗ್ರಹಗಳು ಮತ್ತು ಸೂಪರ್ ಕಂಪ್ಯೂಟರ್‌ಗಳು ಬರುವ ಸಾವಿರಾರು ವರ್ಷಗಳ ಮೊದಲೇ ಈ ಜಾಗತಿಕ ಹವಾಮಾನ ಜೋಡಿಯು ಭೂಮಿಯ ಮೇಲೆ ತನ್ನ ಪ್ರಭಾವ ಬೀರುತ್ತಿತ್ತು. ವಿಜ್ಞಾನಿಗಳು ಸಮುದ್ರದ ಆಳದ ಹವಳದ ಬಂಡೆಗಳು ಮತ್ತು ಹಿಮನದಿಗಳ ಐಸ್ ಕೋರ್‌ಗಳನ್ನು ಪರೀಕ್ಷಿಸಿದಾಗ, ಈ ಪ್ರಕೃತಿ ವಿದ್ಯಮಾನವು ಕನಿಷ್ಠ 5,000 ವರ್ಷಗಳಿಂದ ಜಗತ್ತಿನ ಹವಾಮಾನ ನಕ್ಷೆಯನ್ನು ಬದಲಿಸುತ್ತ ಬಂದಿರುವುದು ಪತ್ತೆಯಾಗಿದೆ.

2. ಮೀನುಗಾರರ ಅನುಭವ ಮತ್ತು ವಿಚಿತ್ರ ನಾಮಕರಣದ ಕಥೆ

ಈ ವಿದ್ಯಮಾನಕ್ಕೆ ‘ಎಲ್ ನಿನೊ’ ಎಂಬ ಹೆಸರು ಬಂದಿರುವುದು ಯಾವುದೇ ಹೈಟೆಕ್ ಪ್ರಯೋಗಾಲಯದಲ್ಲಲ್ಲ, ಬದಲಿಗೆ ಕಡಲ ಅಲೆಗಳ ನಡುವೆ! 1600ರ ದಶಕದಲ್ಲಿ ಪೆರು ಮತ್ತು ಈಕ್ವೆಡಾರ್ ದೇಶದ ಮೀನುಗಾರರು ಒಂದು ವಿಚಿತ್ರ ಬದಲಾವಣೆಯನ್ನು ಗಮನಿಸಿದರು. ಪ್ರತಿ ನಾಲ್ಕೈದು ವರ್ಷಗಳಿಗೊಮ್ಮೆ, ಸಮುದ್ರದ ತಣ್ಣನೆಯ ನೀರು ಅನಿರೀಕ್ಷಿತವಾಗಿ ಬೆಚ್ಚಗಾಗುತ್ತಿತ್ತು. ಇದರಿಂದಾಗಿ ಅಲ್ಲಿನ ಕೋಟ್ಯಂತರ ಅಂಚೋವಿ (Anchovy) ಮೀನುಗಳು ಬೇರೆಡೆಗೆ ವಲಸೆ ಹೋಗುತ್ತಿದ್ದವು ಹಾಗೂ ಮೀನುಗಾರಿಕೆ ನಂಬಿದ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತಿದ್ದವು.

ಈ ಸಮುದ್ರದ ನೀರು ಬಿಸಿಯಾಗುವ ಪ್ರಕ್ರಿಯೆಯು ಪ್ರತಿ ಬಾರಿಯೂ ಸರಿಯಾಗಿ ಡಿಸೆಂಬರ್ ತಿಂಗಳ ಕೊನೆಯಲ್ಲಿ, ಅಂದರೆ ಕ್ರಿಸ್‌ಮಸ್ ಹಬ್ಬದ ಸಮಯದಲ್ಲಿ ಉತ್ತುಂಗಕ್ಕೆ ತಲುಪುತ್ತಿತ್ತು. ಆಳವಾದ ಧಾರ್ಮಿಕ ನಂಬಿಕೆಯುಳ್ಳ ಅಲ್ಲಿನ ಸ್ಪ್ಯಾನಿಷ್ ಭಾಷಿಕ ಮೀನುಗಾರರು, ಹಬ್ಬದ ದಿನಗಳಲ್ಲಿ ಸಮುದ್ರಕ್ಕೆ ಬರುವ ಈ ವಿಶಿಷ್ಟ ಅತಿಥಿಗೆ ಪ್ರೀತಿಯಿಂದ ‘ಎಲ್ ನಿನೊ’ ಎಂದು ಹೆಸರಿಟ್ಟರು. ಸ್ಪ್ಯಾನಿಷ್ ಭಾಷೆಯಲ್ಲಿ ಇದರ ಅರ್ಥ ‘ಚಿಕ್ಕ ಹುಡುಗ’ (Little Boy) ಎಂದು.

3. ಜಾಗತಿಕ ಒಗಟು ಬಿಡಿಸಿದ ಭಾರತದ ಕನೆಕ್ಷನ್!

ಶತಮಾನಗಳ ಕಾಲ ಇಡೀ ಜಗತ್ತು ಇದನ್ನು ಪೆರು ದೇಶದ ಕರಾವಳಿಗೆ ಸೀಮಿತವಾದ ಒಂದು ಸಣ್ಣ ಪ್ರಾದೇಶಿಕ ಸಮಸ್ಯೆ ಎಂದೇ ಭಾವಿಸಿತ್ತು. ಆದರೆ ೨೦ನೇ ಶತಮಾನದ ಆರಂಭದಲ್ಲಿ ಭಾರತದಲ್ಲಿದ್ದ ಬ್ರಿಟಿಷ್ ಹವಾಮಾನಶಾಸ್ತ್ರಜ್ಞರು ಸರ್ ಗಿಲ್ಬರ್ಟ್ ವಾಕರ್ ಈ ತಿಳಿವಳಿಕೆಯನ್ನೇ ಬದಲಾಯಿಸಿದರು. ಅಂದಿನ ಬ್ರಿಟಿಷ್ ಸರ್ಕಾರವು ಅವರಿಗೆ ಭಾರತದ ಮಾನ್ಸೂನ್ ಮಳೆ ಏಕೆ ಕೈಕೊಡುತ್ತದೆ ಮತ್ತು ಬರಗಾಲ ಏಕೆ ಬರುತ್ತದೆ ಎಂಬುದನ್ನು ಪತ್ತೆಹಚ್ಚುವ ಕೆಲಸ ನೀಡಿತ್ತು.

ವಾಕರ್ ಅವರು ಯಾವುದೇ ಕಂಪ್ಯೂಟರ್ ಇಲ್ಲದ ಆ ಕಾಲದಲ್ಲಿ ಏಷ್ಯಾ, ಆಫ್ರಿಕಾ ಮತ್ತು ಅಮೆರಿಕಾದ ಹತ್ತಾರು ಹವಾಮಾನ ಕೇಂದ್ರಗಳ ದತ್ತಾಂಶಗಳನ್ನು ಕಲೆಹಾಕಿ ಸಂಶೋಧನೆ ನಡೆಸಿದರು. ಆಗ ಅವರಿಗೆ ಪೆಸಿಫಿಕ್ ಸಾಗರದ ಒಂದು ತುದಿಯಲ್ಲಿ ವಾತಾವರಣದ ಒತ್ತಡ ಹೆಚ್ಚಾದಾಗ, ಮತ್ತೊಂದು ತುದಿಯಲ್ಲಿ ಒತ್ತಡ ಕಡಿಮೆಯಾಗುವ ‘ತಕ್ಕಡಿ’ಯಂತಹ ವಿಚಿತ್ರ ವಿದ್ಯಮಾನ ಕಂಡುಬಂದಿತು. ಇದಕ್ಕೆ ಅವರು ‘ದಕ್ಷಿಣ ಆಂದೋಲನ’ (Southern Oscillation) ಎಂದು ಹೆಸರಿಟ್ಟರು.

ನಂತರ 1960ರ ದಶಕದಲ್ಲಿ ಹವಾಮಾನ ವಿಜ್ಞಾನಿ ಜ್ಯಾಕೋಬ್ ಬ್ಜಿರ್ಕ್ನೆಸ್ ಅವರು, ವಾಕರ್ ಪತ್ತೆಹಚ್ಚಿದ ಗಾಳಿಯ ಒತ್ತಡದ ಬದಲಾವಣೆ ಮತ್ತು ಪೆರುವಿನ ಸಮುದ್ರದ ನೀರು ಬಿಸಿಯಾಗುವುದು ಎರಡೂ ಒಂದೇ ನಾಣ್ಯದ ಎರಡು ಮುಖಗಳು ಎಂಬುದನ್ನು ಸಾಬೀತುಪಡಿಸಿದರು. ಸಾಗರ ಮತ್ತು ವಾತಾವರಣ ಸೇರಿ ಜಗತ್ತನ್ನು ನಿಯಂತ್ರಿಸುವ ಈ ಜಂಟಿ ವ್ಯವಸ್ಥೆಗೆ ವಿಜ್ಞಾನ ಲೋಕವು ENSO (El Niño–Southern Oscillation) ಎಂದು ನಾಮಕರಣ ಮಾಡಿತು.

4. ‘ಲಾ ನಿನಾ’ ಎಂಬ ಹೆಣ್ಣು ಮಗುವಿನ ಆಗಮನ

ಹಲವು ದಶಕಗಳ ಕಾಲ ವಿಜ್ಞಾನಿಗಳು ಕೇವಲ ಸಮುದ್ರದ ನೀರು ಬಿಸಿಯಾಗುವ (ಎಲ್ ನಿನೊ) ಹಂತದ ಬಗ್ಗೆ ಮಾತ್ರ ಅಧ್ಯಯನ ಮಾಡಿದ್ದರು. ಆದರೆ ಪೆಸಿಫಿಕ್ ಸಾಗರವು ಒಂದು ತೂಗಾಡುವ ತೊಟ್ಟಿಲಿದ್ದಂತೆ; ಅದು ಒಂದು ಕಡೆ ಬಿಸಿಯಾದರೆ, ಮತ್ತೊಂದು ಬಾರಿ ಅಷ್ಟೇ ಪ್ರಮಾಣದಲ್ಲಿ ತಣ್ಣಗಾಗುತ್ತದೆ ಎಂಬುದು ನಂತರ ತಿಳಿಯಿತು.

ಸಮುದ್ರದ ನೀರು ಸಾಮಾನ್ಯಕ್ಕಿಂತ ಅತಿ ಹೆಚ್ಚು ತಣ್ಣಗಾಗುವ ಈ ಪ್ರಕ್ರಿಯೆಗೆ ವಿಜ್ಞಾನಿಗಳು ಒಂದು ಸೂಕ್ತ ಹೆಸರನ್ನು ಹುಡುಕಲಾರಂಭಿಸಿದರು. ೧೯೮೦ರ ದಶಕದಲ್ಲಿ ವಿಜ್ಞಾನಿಗಳು ಇದಕ್ಕೆ ‘ಲಾ ನಿನಾ’ (La Niña) ಎಂದು ಹೆಸರಿಟ್ಟರು. ಸ್ಪ್ಯಾನಿಷ್ ಭಾಷೆಯಲ್ಲಿ ಇದರ ಅರ್ಥ ‘ಚಿಕ್ಕ ಹುಡುಗಿ’ (Little Girl) ಎಂದು.

ಗಂಡು ಮಗುವಿನ ಹಂತ (ಎಲ್ ನಿನೊ) ಭಾರತಕ್ಕೆ ಕಡಿಮೆ ಮಳೆ ತಂದರೆ, ಹೆಣ್ಣು ಮಗುವಿನ ಹಂತ (ಲಾ ನಿನಾ) ನಮಗೆ ಅತ್ಯಂತ ಬಲಿಷ್ಠವಾದ ಮಾನ್ಸೂನ್ ಮತ್ತು ಉತ್ತಮ ಮಳೆಯನ್ನು ಕೊಡುಗೆಯಾಗಿ ನೀಡುತ್ತದೆ!

ಎಲ್ ನಿನೊ ಮತ್ತು ಲಾ ನಿನಾ • ಒಂದು ಸರಳ ನೋಟ

ವೈಶಿಷ್ಟ್ಯ – ಎಲ್ ನಿನೊ (El Niño) – ಲಾ ನಿನಾ (La Niña)

ಸರಳ ಅರ್ಥ  – ಚಿಕ್ಕ ಹುಡುಗ – ಚಿಕ್ಕ ಹುಡುಗಿ

ಪೆಸಿಫಿಕ್ ಸಾಗರದ ಸ್ಥಿತಿ ಅಸಾಮಾನ್ಯವಾಗಿ ನೀರು ಬಿಸಿಯಾಗುವುದು – ಅಸಾಮಾನ್ಯವಾಗಿ ನೀರು ತಣ್ಣಗಾಗುವುದು

ಮಾರುತಗಳ ವೇಗ ವ್ಯಾಪಾರ ಮಾರುತಗಳು ದುರ್ಬಲಗೊಳ್ಳುತ್ತವೆ – ಮಾರುತಗಳು ಸಾಮಾನ್ಯಕ್ಕಿಂತ ಬಲಿಷ್ಠವಾಗುತ್ತವೆ

ಭಾರತದ ಮೇಲಿನ ಪ್ರಭಾವ ಮಾನ್ಸೂನ್ ದುರ್ಬಲ, ಬರಗಾಲದ ಆತಂಕ – ಉತ್ತಮ ಮಾನ್ಸೂನ್, ಭಾರೀ ಮಳೆಯ ಹರ್ಷ

ಜಾಗತಿಕ ಪರಿಣಾಮ ಏಷ್ಯಾ ಖಂಡದಲ್ಲಿ ಒಣ ಹವಾಮಾನ / ಬರ ದಕ್ಷಿಣ ಏಷ್ಯಾದಲ್ಲಿ ಉತ್ತಮ ಮಳೆ ಮತ್ತು ಪ್ರವಾಹ

5. ಆಧುನಿಕ ತಂತ್ರಜ್ಞಾನ ಮತ್ತು ಭವಿಷ್ಯದ ಸವಾಲು

20ನೇ ಶತಮಾನದ ಕೊನೆ ದಶಕಗಳಲ್ಲಿ, ಎಲ್ ನಿನೊ ನಿಜವಾದ ಜಾಗತಿಕ ಪರಿಣಾಮದ ಶಕ್ತಿ ಎಂದು ಪ್ರಕಟಗೊಂಡಿತು. 1982-83ರ ಎಲ್ ನಿನೊ ಯಾವುದೇ ಪೂರ್ವ ಸೂಚನೆ ಇಲ್ಲದೆ ಬಂದು ವಿಜ್ಞಾನಿಗಳು ಮತ್ತು ಸರ್ಕಾರಗಳನ್ನು ಆಘಾತಕ್ಕೀಡುಮಾಡಿತು. ಆಸ್ಟ್ರೇಲಿಯಾ ಮತ್ತು ಇಂಡೋನೇಷ್ಯಾದಲ್ಲಿ ಭೀಕರ ಬರಗಾಲ, ಕ್ಯಾಲಿಫೋರ್ನಿಯಾ ಮತ್ತು ದಕ್ಷಿಣ ಅಮೇರಿಕಾ ಕರಾವಳಿಯಲ್ಲಿ ಭೀಕರ ಪ್ರವಾಹ, ಶತಕೋಟಿ ಡಾಲರ್ ಹಾನಿ. ಈ ದುರಂತ ಅಂತರರಾಷ್ಟ್ರೀಯ ವೈಜ್ಞಾನಿಕ ಸಮುದಾಯವನ್ನು ಎಚ್ಚರಿಸಿ, ಉಷ್ಣವಲಯ ವಾತಾವರಣ ಸಾಗರ Tropical Atmosphere Ocean (TAO) ಬೋಯಾ ಜಾಲ ರಚಿಸಲು ಪ್ರೇರೇಪಿಸಿತು — ಸಮಭಾಜಕ ರೇಖೆಯ ಉದ್ದಕ್ಕೂ ಸಾಗರ ಮೇಲ್ಮೈ ತಾಪಮಾನ, ಮಾರುತ ಮತ್ತು ಸಾಗರ ಪ್ರವಾಹ ನಿರಂತರ ಗಮನಿಸುವ ಸಲಕರಣೆ ಸಜ್ಜಿತ ತೇಲು ಬೋಯಾಗಳ ಜಾಲ.

TAO ಜಾಲ ENSO ವಿಜ್ಞಾನವನ್ನು ಪ್ರತಿಕ್ರಿಯಾತ್ಮಕ ಶಿಸ್ತಿನಿಂದ ಮುನ್ಸೂಚನಾ ಶಿಸ್ತಾಗಿ ಬದಲಿಸಿತು. TAO ದತ್ತಾಂಶ ಮತ್ತು ಶಕ್ತಿಶಾಲಿ ಹವಾಮಾನ ಮಾದರಿಗಳ ಆಧಾರದಲ್ಲಿ ವಿಜ್ಞಾನಿಗಳು 1992-98ರ ದಂತಕಥೆ ‘ಗಡ್ಜಿಲ್ಲಾ’ ಎಲ್ ನಿನೊ ಮತ್ತು 2015-16 ರ ಅಭೂತಪೂರ್ವ ಘಟನೆ ಯಶಸ್ವಿಯಾಗಿ ಮುನ್ಸೂಚಿಸಿದರು. ಹವಾಮಾನ ವಿಜ್ಞಾನದ ಇತಿಹಾಸದಲ್ಲಿ ೧೯೯೭-೯೮ರ ಎಲ್ ನಿನೊ ವಿದ್ಯಮಾನವನ್ನು ಅತ್ಯಂತ ಪ್ರಬಲ ಹಾಗೂ ವಿನಾಶಕಾರಿ ಘಟನೆ ಎಂದು ಪರಿಗಣಿಸಲಾಗಿದೆ. ಇದರ ಬೃಹತ್ ಗಾತ್ರ ಮತ್ತು ಜಾಗತಿಕ ಹವಾಮಾನದ ಮೇಲಿನ ಭೀಕರ ಪ್ರಭಾವವನ್ನು ನೋಡಿ ವಿಜ್ಞಾನಿಗಳು ಇದಕ್ಕೆ ಪ್ರೀತಿಯಿಂದ ಹಾಗೂ ಆತಂಕದಿಂದ ‘ಗಡ್ಜಿಲ್ಲಾ’ (Godzilla) ಎಂಬ ಹೆಸರಿಟ್ಟರು. ‘ಗಡ್ಜಿಲ್ಲಾ’ ಎಲ್ ನಿನೊದ ತೀವ್ರತೆಯಿಂದಾಗಿ 1997ರಲ್ಲಿ ಭಾರತದ ನೈಋತ್ಯ ಮಾನ್ಸೂನ್ ಮಳೆಯ ಪ್ರಮಾಣದಲ್ಲಿ ಗಣನೀಯ ಇಳಿಕೆ ಕಂಡುಬಂದಿತು. ದೇಶದ ಹಲವು ಭಾಗಗಳಲ್ಲಿ ಕೃಷಿ ಇಳುವರಿ ಕುಸಿದು ಬರಗಾಲದ ಪರಿಸ್ಥಿತಿ ಎದುರಾಗಿತ್ತು.

ಹವಾಮಾನ ಇತಿಹಾಸದಲ್ಲಿ ಈ ೧೯೯೭-೯೮ರ ಘಟನೆಯು, ಪ್ರಕೃತಿಯ ಸಣ್ಣ ಬದಲಾವಣೆಯೂ ಇಡೀ ಜಗತ್ತನ್ನು ಹೇಗೆ ತಲ್ಲಣಗೊಳಿಸಬಲ್ಲದು ಎಂಬುದಕ್ಕೆ ಅತ್ಯಂತ ಸ್ಪಷ್ಟ ಉದಾಹರಣೆಯಾಗಿ ಉಳಿದುಕೊಂಡಿದೆ.

ಇಂದು, ಎಲ್ ನಿನೊ ಮತ್ತು ಲಾ ನಿನಾ ಭೂಮಿಯ ಅತ್ಯಂತ ಪ್ರಬಲ ವಾರ್ಷಿಕ ಹವಾಮಾನ ಚಾಲಕ ಶಕ್ತಿಗಳು — ಮಾನ್ಸೂನ್ ಬದಲಿಸಬಲ್ಲ, ಕಾಡ್ಗಿಚ್ಚು ಹೊತ್ತಿಸಬಲ್ಲ, ಮೀನುಗಾರಿಕೆ ಕುಸಿತಕ್ಕೆ ತರಬಲ್ಲ, ಆಹಾರ ಭದ್ರತೆ ಬೆದರಿಸಬಲ್ಲ.

ಪೆಸಿಫಿಕ್ ಸಾಗರದ ಆಳದಲ್ಲಿ ನಡೆಯುವ ಈ ಎಲ್ ನಿನೊ ಮತ್ತು ಲಾ ನಿನಾ ಆಟವು ಕೇವಲ ಒಂದು ಪ್ರಕೃತಿಯ ವಿಸ್ಮಯವಲ್ಲ; ಅದು ಜಗತ್ತಿನ ಪ್ರತಿಯೊಂದು ಜೀವಿಯೂ ಭೂಮಿಯ ಪರಿಸರ ವ್ಯವಸ್ಥೆಗೆ ಹೇಗೆ ಬೆಸೆದುಕೊಂಡಿದೆ ಎಂಬುದನ್ನು ನೆನಪಿಸುವ ಪ್ರಕೃತಿಯ ನಾಡಿಮಿಡಿತ. ಒಂದು ಕಾಲದಲ್ಲಿ ಕೇವಲ ಮೀನುಗಾರರ ನಂಬಿಕೆಯಾಗಿದ್ದ ಎಲ್ ನಿನೊ ಮತ್ತು ಲಾ ನಿನಾ ವಿದ್ಯಮಾನಗಳು, ಇಂದು ಇಡೀ ಜಗತ್ತಿನ ಹಸಿವು, ಆರ್ಥಿಕತೆ ಮತ್ತು ಅಸ್ತಿತ್ವವನ್ನು ನಿರ್ಧರಿಸುವ ಮಹಾಶಕ್ತಿಗಳಾಗಿ ಬೆಳೆದು ನಿಂತಿವೆ.

The post ಪೆಸಿಫಿಕ್‌ನ ನಾಡಿಮಿಡಿತ: ಜಗತ್ತಿನ ಹವಾಮಾನ ‘ಎಲ್ ನಿನೊ’ (El Niño) ಮತ್ತು ‘ಲಾ ನಿನಾ’ (La Niña) ರೋಚಕ ಕಥೆ appeared first on Samyukta Karnataka.

ಸಿದ್ದರಾಮಯ್ಯ ಕಾಲಿಗೆ ಬಿದ್ದ ಡಿಕೆ ಶಿವಕುಮಾರ್; ಸಿಎಂ ನಿವಾಸದ ಹೈ-ವೋಲ್ಟೇಜ್ ಉಪಾಹಾರ ಸಭೆಯಲ್ಲಿ ನಡೆದಿದ್ದೇನು?
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಕುರ್ಚಿ ಬದಲಾವಣೆ ಕುರಿತಾದ ಚರ್ಚೆಗಳು ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಸಿಎಂ ಸಿದ್ದರಾಮಯ್ಯ ಇಂದು ಆಯೋಜಿಸಿದ್ದ ಮಹತ್ವದ ‘ಬ್ರೇಕ್‌ಫಾಸ್ಟ್‌ ಸಭೆ’ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಈ ಉನ್ನತ ಮಟ್ಟದ ಉಪಾಹಾರ ಕೂಟದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಸರ್ಕಾರದ ಪ್ರಮುಖ ಸಚಿವರುಗಳು ಭಾಗವಹಿಸಿ ಚರ್ಚೆ ನಡೆಸಿದ್ದಾರೆ.

ಈ ಪ್ರಮುಖ ಸಭೆಯಲ್ಲಿ ಡಾ. ಜಿ. ಪರಮೇಶ್ವರ್, ಭೈರತಿ ಸುರೇಶ್‌, ಸಂತೋಷ್ ಲಾಡ್, ಎಂ.ಸಿ. ಸುಧಾಕರ್, ಎಂ.ಬಿ. ಪಾಟೀಲ್, ಪ್ರಿಯಾಂಕ್ ಖರ್ಗೆ, ಎಸ್.ಎಸ್. ಮಲ್ಲಿಕಾರ್ಜುನ್, ಕೆ.ಜೆ. ಜಾರ್ಜ್ ಹಾಗೂ ಕೆ. ವೆಂಕಟೇಶ್‌ ಪಾಲ್ಗೊಂಡಿದ್ದರು. ಹಾಗೇ ಸಚಿವರಾದ ಶಿವರಾಜ್ ತಂಗಡಗಿ, ಎನ್. ಚಲುವರಾಯಸ್ವಾಮಿ, ಲಕ್ಷ್ಮೀ ಹೆಬ್ಬಾಳ್ಕರ್, ಶರಣಬಸಪ್ಪ ದರ್ಶನಾಪುರ, ಮಧು ಬಂಗಾರಪ್ಪ, ಸತೀಶ್‌ ಜಾರಕಿಹೊಳಿ, ಡಾ. ಎಚ್.ಸಿ. ಮಹದೇವಪ್ಪ, ಮಂಕಾಳ್ ವೈದ್ಯ, ಆರ್.ಬಿ. ತಿಮ್ಮಾಪುರ್, ಶರಣು ಪ್ರಕಾಶ್‌ ಪಾಟೀಲ್, ಕೆ.ಎಚ್. ಮುನಿಯಪ್ಪ, ಎಚ್.ಕೆ. ಪಾಟೀಲ್‌, ಈಶ್ವರ್ ಖಂಡ್ರೆ ಮತ್ತು ಎನ್.ಎಸ್. ಬೋಸರಾಜು ಸಿಎಂ ನಿವಾಸಕ್ಕೆ ಆಗಮಿಸಿ ಸಭೆಯಲ್ಲಿ ಉಪಸ್ಥಿತರಿದ್ದರು.

ಕ್ಷಣಮಾತ್ರದಲ್ಲಿ ಗಮನ ಸೆಳೆದ ಡಿಕೆಶಿ ನಡೆ: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ವದಂತಿಗಳು ಹರಿದಾಡುತ್ತಿರುವ ಸಂದರ್ಭದಲ್ಲೇ ನಡೆದ ಈ ಸಭೆ ಹಲವು ರಾಜಕೀಯ ಆಯಾಮಗಳನ್ನು ಪಡೆದುಕೊಂಡಿದೆ. ಸಭೆಯ ಆರಂಭದಲ್ಲಿ ಮುಖ್ಯಮಂತ್ರಿ ಸಿದ್ದು ಕಾಲಿಗೆ ಬಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಶೀರ್ವಾದ ಪಡೆದರು. ಆ ಬಳಿಕ ಇಬ್ಬರು ನಾಯಕರು ಪರಸ್ಪರ ಆಲಿಂಗಿಸಿಕೊಂಡು ನಗುವಿನೊಂದಿಗೆ ಮಾತುಕತೆ ನಡೆಸಿದ್ದು, ಸಭೆಯ ಪ್ರಮುಖ ಹೈಲೈಟ್ ಆಗಿ ಮೂಡಿಬಂದಿದೆ.

ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಹಿರಿಯ ನಾಯಕರ ಆಲಿಂಗನವು ಪಕ್ಷದೊಳಗೆ ಎಲ್ಲವೂ ಸುಸೂತ್ರವಾಗಿದೆ ಎಂಬ ಸಂದೇಶವನ್ನು ರವಾನಿಸುವ ಪ್ರಯತ್ನವೇ ಎಂಬ ಚರ್ಚೆಗಳು ಆರಂಭವಾಗಿವೆ. ಸರ್ಕಾರದ ಪ್ರಮುಖ ಸಚಿವರ ದಂಡೇ ನೆರೆದಿದ್ದ ಈ ಬ್ರೇಕ್‌ಫಾಸ್ಟ್‌ ಮೀಟಿಂಗ್, ಮುಂಬರುವ ದಿನಗಳಲ್ಲಿ ರಾಜ್ಯ ರಾಜಕಾರಣದ ಮುಂದಿನ ನಡೆಗಳ ದೃಷ್ಟಿಯಿಂದ ಅತ್ಯಂತ ನಿರ್ಣಾಯಕ ಎಂದು ವಿಶ್ಲೇಷಿಸಲಾಗುತ್ತಿದೆ.

The post ಸಿದ್ದರಾಮಯ್ಯ ಕಾಲಿಗೆ ಬಿದ್ದ ಡಿಕೆ ಶಿವಕುಮಾರ್; ಸಿಎಂ ನಿವಾಸದ ಹೈ-ವೋಲ್ಟೇಜ್ ಉಪಾಹಾರ ಸಭೆಯಲ್ಲಿ ನಡೆದಿದ್ದೇನು? appeared first on Samyukta Karnataka.

ಸ್ಟ್ರೆಚರ್ ಮೇಲೆಯೇ SSLC ಪರೀಕ್ಷೆ ಬರೆದ ಕುಸುಮಾ: ಮಿಡಿದ ಜನಪ್ರತಿನಿಧಿಗಳ ಹೃದಯ
ಕಿಡ್ನಿ ಮಾರಾಟಕ್ಕೆ ಮುಂದಾದ ತಂದೆ – ಸರ್ಕಾರ ಮತ್ತು ಮಾಜಿ ಸಚಿವ ಸುರೇಶ್ ಕುಮಾರ್ ನೆರವು.

ಕೋಲಾರ/ಬೆಂಗಳೂರು: ಕೆಜಿಎಫ್ ತಾಲೂಕಿನ ವಿದ್ಯಾರ್ಥಿನಿ ಕುಸುಮಾ SSLC ಪರೀಕ್ಷೆ ವೇಳೆ ತೋರಿಸಿದ ಮನೋಬಲ ದೇಶದ ಗಮನ ಸೆಳೆದಿದ್ದರೆ, ಇದೀಗ ಆಕೆಯ ಚಿಕಿತ್ಸೆಗೆ ಎದುರಾದ ಸಂಕಷ್ಟದ ವೇಳೆ ಮಾನವೀಯತೆಗೂ ಹೊಸ ಉದಾಹರಣೆ ಮೂಡಿದೆ. ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದರೂ, ಆಂಬ್ಯುಲೆನ್ಸ್ ಮೂಲಕ ಪರೀಕ್ಷಾ ಕೇಂದ್ರಕ್ಕೆ ಬಂದು ಸ್ಟ್ರೆಚರ್ ಮೇಲೆಯೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ಕುಸುಮಾ ಈಗ ಆರೋಗ್ಯ ಸಮಸ್ಯೆಯಿಂದ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆ, ಮಾಜಿ ಸಚಿವ ಸುರೇಶ್ ಕುಮಾರ್ ನೆರವಿಗೆ ಧಾವಿಸಿದ್ದಾರೆ.

ಅಪಘಾತ – ಆದರೆ ಕುಗ್ಗದ ಆತ್ಮವಿಶ್ವಾಸ : ಕೆಜಿಎಫ್ ತಾಲೂಕಿನ ಚಿನ್ನನಾಗನಹಳ್ಳಿ ನಿವಾಸಿ, ಸೆಂಟ್ ಮೇರಿಸ್ ಹೈಸ್ಕೂಲ್‌ನ 16 ವರ್ಷದ ಕುಸುಮಾ, ಇತ್ತೀಚಿನ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಒಂದು ಕಾಲು ಕಳೆದುಕೊಂಡಿದ್ದಳು. ಶಸ್ತ್ರಚಿಕಿತ್ಸೆ ಬಳಿಕವೂ ಆಕೆ ವಿದ್ಯಾಭ್ಯಾಸದ ಮೇಲೆ ಆಸಕ್ತಿ ಕಳೆದುಕೊಳ್ಳದೆ, ತಾಯಿಯೊಂದಿಗೆ ಆಂಬ್ಯುಲೆನ್ಸ್ ಮೂಲಕ ಕೆಜಿಎಫ್‌ನ ಪರೀಕ್ಷಾ ಕೇಂದ್ರಕ್ಕೆ ಬಂದು ಸ್ಟ್ರೆಚರ್ ಮೇಲೆಯೇ ಪರೀಕ್ಷೆ ಬರೆದು ಎಲ್ಲರ ಮನಗೆದ್ದಳು.

ಮಗಳ ಚಿಕಿತ್ಸೆಗಾಗಿ ಕಿಡ್ನಿ ಮಾರಾಟಕ್ಕೂ ಮುಂದಾದ ತಂದೆ: ಚಿಕಿತ್ಸೆಗೆ ಹಣದ ಕೊರತೆಯಿಂದಾಗಿ ತಂದೆಯು ಸಂಕಷ್ಟಕ್ಕೆ ಸಿಲುಕಿದ್ದರು, ಚಿಕಿತ್ಸೆ ವೆಚ್ಚ ದಿನೇದಿನೇ ಹೆಚ್ಚಾಗುತ್ತಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕುಸುಮಾ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು. ನಾಲ್ಕು ದಿನಗಳಲ್ಲೇ ₹5.5 ಲಕ್ಷ ವೆಚ್ಚವಾಗಿದ್ದರಿಂದ, ಆಕೆಯ ತಂದೆ ಶಂಕರಪ್ಪ ಮಗಳ ಚಿಕಿತ್ಸೆಗಾಗಿ ಕಿಡ್ನಿ ಮಾರಾಟಕ್ಕೂ ಮುಂದಾಗಿದ್ದರು ಎಂಬುದು ಮನಕಲುಕುವ ಸಂಗತಿ.

ಮಿಡಿದ ಜನಪ್ರತಿನಿಧಿಗಳ ಹೃದಯ – ಮಾನವೀಯತೆ ಮೆರೆದ ನೆರವು : ಈ ವಿಷಯ ತಿಳಿದ ತಕ್ಷಣ ಮಾಜಿ ಸಚಿವ ಸುರೇಶ್ ಕುಮಾರ್‌ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬದ ಜೊತೆ ಮಾತನಾಡಿದರು. ನಂತರ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರ ಗಮನಕ್ಕೆ ವಿಷಯವನ್ನು ತಂದರು.

ಸರ್ಕಾರದ ಮಧ್ಯಸ್ಥಿಕೆಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಚಿಕಿತ್ಸೆ ವೆಚ್ಚ ಭರಿಸುವ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ, ಆಸ್ಪತ್ರೆ ಆಡಳಿತ ಮಂಡಳಿಯು ಸಹ ಮಾನವೀಯತೆ ತೋರಿಸಿ ಕುಸುಮಾಗೆ ಉಚಿತ ಚಿಕಿತ್ಸೆ ನೀಡುವುದಾಗಿ ಘೋಷಿಸಿದೆ. ಮುಂದಿನ ಕೆಲ ದಿನಗಳಲ್ಲಿ ಆರೋಗ್ಯದಲ್ಲಿ ಸುಧಾರಣೆ ತರಲು ವೈದ್ಯರು ಭರವಸೆ ನೀಡಿದ್ದಾರೆ.

ಸಾರ್ವಜನಿಕರಿಂದ ಮೆಚ್ಚುಗೆ : ಕುಸುಮಾ ಧೈರ್ಯಕ್ಕೂ, ಹಾಗೂ ಸಂಕಷ್ಟದ ಸಮಯದಲ್ಲಿ ನೆರವಾದ ನಾಯಕರ ಮಾನವೀಯತೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ಘಟನೆ, ಮನೋಬಲ ಮತ್ತು ಮಾನವೀಯತೆ ಎರಡೂ ಒಟ್ಟಿಗೆ ಸಮಾಜವನ್ನು ಬಲಪಡಿಸುತ್ತವೆ ಎಂಬ ಸಂದೇಶ ನೀಡಿದೆ.

ವಿದ್ಯಾರ್ಥಿನಿ ಕುಸುಮಾಗೆ ಮಿಡಿದ ಜನಪ್ರತಿನಿಧಿಗಳುhttps://t.co/PBVbcTIwwM#Sureshkumar #medical #treatment #bengaluru #samyuktakarnataka #SSLCExam #kolar #kgf #HospitalBill #MedicalEmergency #StudentHelp pic.twitter.com/PKBXuowsgU
— Samyukta Karnataka (@SamyuktaKarnatk) April 21, 2026

The post ಸ್ಟ್ರೆಚರ್ ಮೇಲೆಯೇ SSLC ಪರೀಕ್ಷೆ ಬರೆದ ಕುಸುಮಾ: ಮಿಡಿದ ಜನಪ್ರತಿನಿಧಿಗಳ ಹೃದಯ appeared first on Samyukta Karnataka.

ಫ್ರೆಂಡ್ ಅನ್ನೇ ಕಿಡ್ನಾಪ್ ಮಾಡಿದ ಬೆಂಗಳೂರಿನ ಕ್ಲಾಸ್‌ಮೆಟ್‌ಗಳು; 50,000 ರೂ.ಗೆ ಪುಂಡರು ಪೊಲೀಸರ ಬಲೆಗೆ ಬಿದ್ದಿದ್ದು ಹೇಗೆ?
ಬೆಂಗಳೂರಿನಲ್ಲಿ ವಿದ್ಯಾರ್ಥಿ ಸಮುದಾಯವೇ ಬೆಚ್ಚಿಬೀಳುವಂತಹ ಘಟನೆಯೊಂದು ನಡೆದಿದೆ. ತಮ್ಮ ಐಷಾರಾಮಿ ಜೀವನದ ಹಸಿವನ್ನು ನೀಗಿಸಿಕೊಳ್ಳಲು ಹಣದ ಆಸೆಗೆ ಬಿದ್ದ ನಾಲ್ವರು ವಿದ್ಯಾರ್ಥಿಗಳು, ತಮ್ಮದೇ ಕಾಲೇಜಿನ ಸಹಪಾಠಿಯನ್ನು ಅಪಹರಿಸಿದ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಬಿಹಾರ, ಜಮ್‌ಶೆಡ್‌ಪುರ, ಕೇರಳ ಹಾಗೂ ಬೆಂಗಳೂರು ಮೂಲದ ಈ ವಿದ್ಯಾರ್ಥಿಗಳು ಒಡಿಶಾ ಮೂಲದ ಮೊಹಂತಿ ಎಂಬ ವಿದ್ಯಾರ್ಥಿಯನ್ನು ಸಂಚು ರೂಪಿಸಿ ಕಿಡ್ನ್ಯಾಪ್ ಮಾಡಿದ್ದರು.

ಆರೋಪಿ ವಿದ್ಯಾರ್ಥಿಗಳು ಮೊಹಂತಿಯನ್ನು ಪುಸಲಾಯಿಸಿ ಆತನ ಹಾಸ್ಟೆಲ್‌ನಿಂದ ಹೊರಗೆ ಕರೆಸಿಕೊಂಡಿದ್ದಾರೆ. ನಂತರ ಆತನನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ತಮ್ಮ ಬಾಡಿಗೆ ಕೋಣೆಗೆ ಕರೆದೊಯ್ದು ಕೂಡಿ ಹಾಕಿದ್ದಾರೆ. ಅಲ್ಲಿಂದ ಮೊಹಂತಿಯ ಸ್ನೇಹಿತರಿಗೆ ಕರೆ ಮಾಡಿದ ಈ ಕಿಡ್ನ್ಯಾಪರ್‌ಗಳು, ಆತನ ಬಿಡುಗಡೆಗಾಗಿ 50,000 ರೂಪಾಯಿಗಳ ಬೇಡಿಕೆಯಿಟ್ಟಿದ್ದಾರೆ. ಇದನ್ನು ನಂಬಿದ ಸಂತ್ರಸ್ತನ ಸ್ನೇಹಿತರು ಮೊದಲು 10,000 ರೂಪಾಯಿಗಳನ್ನು ವರ್ಗಾವಣೆ ಮಾಡಿದ್ದಾರೆ, ಆದರೆ ತಡಮಾಡದೆ ತಕ್ಷಣವೇ ‘112’ ಸಹಾಯವಾಣಿಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಆಗ್ನೇಯ ವಿಭಾಗದ ಡಿಸಿಪಿ ಮೊಹಮ್ಮದ್ ಸುಜೀತಾ ಎಂ.ಎಸ್. ಅವರ ನೇತೃತ್ವದ ಮಡಿವಾಳ ಪೊಲೀಸರ ತಂಡ, ತಾಂತ್ರಿಕ ನೆರವಿನೊಂದಿಗೆ ಆರೋಪಿಗಳ ಲೊಕೇಶನ್ ಪತ್ತೆಹಚ್ಚಿದೆ. ರಾತ್ರಿ 8:30ರ ಸುಮಾರಿಗೆ ಬಂದ ದೂರಿನ ಹಿನ್ನೆಲೆಯಲ್ಲಿ ಮಿಂಚಿನ ವೇಗದಲ್ಲಿ ದಾಳಿ ನಡೆಸಿದ ಪೊಲೀಸರು, ಮಧ್ಯರಾತ್ರಿ 1 ಗಂಟೆಯ ಒಳಗೆ ಮೊಹಂತಿಯನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೇವಲ ಎರಡು ಗಂಟೆಗಳ ಅಂತರದಲ್ಲಿ ಸಿನಿಮಾ ಶೈಲಿಯ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿಗಳಿಂದ ಪೊಲೀಸರು ಕೃತ್ಯಕ್ಕೆ ಬಳಸಿದ್ದ ಒಂದು ಕಾರು, ಬೆದರಿಸಲು ಬಳಸಿದ್ದ ನಕಲಿ ಲೋಹದ ಪಿಸ್ತೂಲು ಮತ್ತು ಒಂದು ಚಾಕುವನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಡಿಸಿಪಿ ಮೊಹಮ್ಮದ್ ಸುಜೀತಾ ಅವರು, ಸಂತ್ರಸ್ತ ಮತ್ತು ಆರೋಪಿಗಳು ಒಂದೇ ಕಾಲೇಜಿಗೆ ಸೇರಿದವರಾಗಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೆ, ಈ ವಿದ್ಯಾರ್ಥಿಗಳು ಈ ಹಿಂದೆಯೂ ಇಂತಹ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತೀವ್ರ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಸದ್ಯ ಮಡಿವಾಳ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಆರೋಪಿಗಳು ಈಗ ಪೊಲೀಸರ ಅತಿಥಿಗಳಾಗಿದ್ದಾರೆ.

The post ಫ್ರೆಂಡ್ ಅನ್ನೇ ಕಿಡ್ನಾಪ್ ಮಾಡಿದ ಬೆಂಗಳೂರಿನ ಕ್ಲಾಸ್‌ಮೆಟ್‌ಗಳು; 50,000 ರೂ.ಗೆ ಪುಂಡರು ಪೊಲೀಸರ ಬಲೆಗೆ ಬಿದ್ದಿದ್ದು ಹೇಗೆ? appeared first on Samyukta Karnataka.

ಕರ್ನಾಟಕದಲ್ಲಿ ಮಳೆ ಅಬ್ಬರ! 22 ಜಿಲ್ಲೆಗಳಲ್ಲಿ ಗುಡುಗು-ಮಿಂಚು, ಬಿರುಗಾಳಿ; ಯೆಲ್ಲೋ ಅಲರ್ಟ್ ಘೋಷಣೆ
ಬೆಂಗಳೂರು : ರಾಜ್ಯದಲ್ಲಿ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಹವಾಮಾನದಲ್ಲಿ ಮಹತ್ವದ ಬದಲಾವಣೆ ಕಾಣಿಸಿಕೊಳ್ಳಲಿದ್ದು, ಸಾಧಾರಣದಿಂದ ಮಧ್ಯಮ ಪ್ರಮಾಣದ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಒಟ್ಟು 22 ಜಿಲ್ಲೆಗಳಲ್ಲಿ ಗುಡುಗು, ಮಿಂಚು ಹಾಗೂ ಬಿರುಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮಳೆಯ ತೀವ್ರತೆ ಹೆಚ್ಚು ಇರಲಿದ್ದು, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯಿದೆ. ಈ ಭಾಗಗಳಲ್ಲಿ ಕೆಲವೆಡೆ ಗುಡುಗು-ಮಿಂಚು ಸಹಿತ ಮಳೆಯೂ ಕಂಡುಬರಬಹುದು ಎಂದು ಇಲಾಖೆ ತಿಳಿಸಿದೆ.

ಇನ್ನು ಉತ್ತರ ಕರ್ನಾಟಕದ ಬೀದರ್, ಕಲಬುರ್ಗಿ, ವಿಜಯಪುರ, ಯಾದಗಿರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿಯೂ ಮಳೆ ಚಟುವಟಿಕೆ ಹೆಚ್ಚಾಗಲಿದ್ದು, ಕೆಲವೆಡೆ ಗಾಳಿಯ ವೇಗವೂ ಹೆಚ್ಚಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ತುಮಕೂರು, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಬಳ್ಳಾರಿ, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿಯೂ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.

ಇದಲ್ಲದೆ, ಬಳ್ಳಾರಿ, ಬೆಂಗಳೂರು, ಕೋಲಾರ, ಶಿವಮೊಗ್ಗ ಹಾಗೂ ಹಾಸನ ಸೇರಿದಂತೆ ಹಲವೆಡೆ ಗಾಳಿಯ ವೇಗ ಗಂಟೆಗೆ 30 ರಿಂದ 40 ಕಿಲೋಮೀಟರ್‌ವರೆಗೆ ಬೀಸುವ ಸಾಧ್ಯತೆ ಇದ್ದು, ಜನರು ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ. ಮಿಂಚು ಹಾಗೂ ಗುಡುಗು ಸಂಭವಿಸುವ ವೇಳೆ ಸುರಕ್ಷತಾ ಕ್ರಮಗಳನ್ನು ಪಾಲಿಸುವುದು ಅತ್ಯಂತ ಮುಖ್ಯವಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ಇಂದು ದಿನವಿಡೀ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಸಂಜೆ ಅಥವಾ ರಾತ್ರಿ ವೇಳೆಗೆ ನಗರದ ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಒಟ್ಟಿನಲ್ಲಿ, ರಾಜ್ಯದ ಹಲವೆಡೆ ಮುಂದಿನ ಕೆಲವು ದಿನ ಮಳೆ ಚಟುವಟಿಕೆ ಚುರುಕಾಗಲಿದ್ದು, ಬಿರುಗಾಳಿ ಹಾಗೂ ಮಿಂಚಿನ ಪರಿಣಾಮವೂ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅತ್ಯಂತ ಅಗತ್ಯವಾಗಿದೆ.

The post ಕರ್ನಾಟಕದಲ್ಲಿ ಮಳೆ ಅಬ್ಬರ! 22 ಜಿಲ್ಲೆಗಳಲ್ಲಿ ಗುಡುಗು-ಮಿಂಚು, ಬಿರುಗಾಳಿ; ಯೆಲ್ಲೋ ಅಲರ್ಟ್ ಘೋಷಣೆ appeared first on Samyukta Karnataka.

‘ವಿರೋಶ್’ ಯುಗಾರಂಭ: 16 ಪ್ರಸಿದ್ಧ ದೇವಸ್ಥಾನಗಳಿಗೆ ನವದಂಪತಿಗಳಿಂದ ಅನ್ನದಾನ ಹಾಗೂ ಸಿಹಿ ಹಂಚಿಕೆ
ಬೆಂಗಳೂರು: ದಕ್ಷಿಣ ಭಾರತದ ಚಿತ್ರರಂಗದ ಮೋಸ್ಟ್ ಅಟ್ರಾಕ್ಟಿವ್ ಜೋಡಿ ಎನಿಸಿಕೊಂಡಿರುವ ‘ರೌಡಿ ಸ್ಟಾರ್’ ವಿಜಯ್ ದೇವರಕೊಂಡ ಮತ್ತು ‘ನ್ಯಾಷನಲ್ ಕ್ರಶ್’ ರಶ್ಮಿಕಾ ಮಂದಣ್ಣ ಕೊನೆಗೂ ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಟ್ಟಿರುವ ಸುದ್ದಿ ಈಗ ಎಲ್ಲೆಡೆ ಸಂಚಲನ ಮೂಡಿಸಿದೆ. ಫೆಬ್ರವರಿ 27 ರಂದು ಈ ಜೋಡಿ ಅತ್ಯಂತ ಗೌಪ್ಯವಾಗಿ ಸಪ್ತಪದಿ ತುಳಿದಿದ್ದು, ಈಗ ದೇವದರ್ಶನ ಪಡೆಯಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ತಿರುಪತಿಯಲ್ಲಿ ದರ್ಶನ, ಭಕ್ತರಿಗೆ ಸಿಹಿ ಹಂಚಿಕೆ: ಮದುವೆಯ ನಂತರ ಈ ಜೋಡಿ ಮೊದಲು ಭೇಟಿ ನೀಡಿದ್ದು ಕಲಿಯುಗದ ದೈವ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ. ತಿರುಪತಿ ಬಾಲಾಜಿಯ ದರ್ಶನ ಪಡೆದ ನವದಂಪತಿಗಳು, ಅಲ್ಲಿನ ಭಕ್ತರಿಗೆ ಮತ್ತು ಅಭಿಮಾನಿಗಳಿಗೆ ಸಿಹಿ ಹಂಚುವ ಮೂಲಕ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ. ಇವರನ್ನು ಕಂಡ ಅಭಿಮಾನಿಗಳು ‘ಹ್ಯಾಪಿ ಮ್ಯಾರೀಡ್ ಲೈಫ್ ವಿರೋಶ್’ ಎಂದು ಕೂಗಿ ಶುಭ ಹಾರೈಸಿದ್ದಾರೆ.

16 ಪುಣ್ಯಕ್ಷೇತ್ರಗಳ ಪ್ರಸಾದ ಹಂಚಿಕೆಗೆ ಸಿದ್ಧವಾದ ವೇಳಾಪಟ್ಟಿ: ತಮ್ಮ ದಾಂಪತ್ಯ ಜೀವನದ ಆರಂಭದಲ್ಲಿ ದೈವಾನುಗ್ರಹ ಪಡೆಯಲು ಈ ಜೋಡಿ ಭಾರತದ ವಿವಿಧ ರಾಜ್ಯಗಳ 16 ಪ್ರಸಿದ್ಧ ದೇವಸ್ಥಾನಗಳಿಗೆ ಅನ್ನದಾನ ಮಾಡುವ ಬೃಹತ್ ಯೋಜನೆಯನ್ನು ಹಾಕಿಕೊಂಡಿದ್ದಾರೆ ಎನ್ನಲಾಗಿದೆ.

ಕರ್ನಾಟಕ: ಬೆಂಗಳೂರಿನ ಶಿವೋಹಂ ದೇವಸ್ಥಾನ ಹಾಗೂ ರಾಧಾ ಕೃಷ್ಣ ಮಂದಿರ (ಇಸ್ಕಾನ್), ಕೊಡಗಿನ ಪಾಡಿ ಇಗ್ಗುತಪ್ಪ ದೇವಸ್ಥಾನ ಮತ್ತು ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಸಿಹಿ ತಿಂಡಿ ನೀಡಲಿದ್ದಾರೆ.

ತೆಲಂಗಾಣ & ಆಂಧ್ರಪ್ರದೇಶ: ಹೈದರಾಬಾದ್‌ನ ಹರೇ ಕೃಷ್ಣ ಹೆರಿಟೇಜ್, ಮಹಬೂಬ್‌ನಗರದ ಮಾನ್ಯಂಕೊಂಡ ವೆಂಕಟೇಶ್ವರ ಸ್ವಾಮಿ, ವೈಜಾಗ್‌ನ ಕನಕ ಮಹಾಲಕ್ಷ್ಮಿ ಹಾಗೂ ವಿಜಯವಾಡದ ಕನಕದುರ್ಗ ದೇವಸ್ಥಾನಗಳು ಈ ಪಟ್ಟಿಯಲ್ಲಿವೆ.

ಇತರ ರಾಜ್ಯಗಳು: ಉತ್ತರ ಪ್ರದೇಶದ ಬೃಂದಾವನ (ಕೃಷ್ಣ ಬಲರಾಮ ಮಂದಿರ), ಅಸ್ಸಾಂನ ರುಕ್ಮಿಣಿ ದೇವಸ್ಥಾನ, ಗುಜರಾತ್ ಮತ್ತು ರಾಜಸ್ಥಾನದ ಪ್ರಸಿದ್ಧ ಮಂದಿರಗಳಿಗೂ ಈ ಜೋಡಿ ಅನ್ನದಾನ ಮಾಡಲಿದ್ದಾರೆ.

ಅಭಿಮಾನಿಗಳಲ್ಲಿ ಹಬ್ಬದ ವಾತಾವರಣ: ‘ಗೀತ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೇಡ್’ ಸಿನಿಮಾಗಳ ಮೂಲಕ ತೆರೆಯ ಮೇಲೆ ಮೋಡಿ ಮಾಡಿದ್ದ ಈ ಜೋಡಿ, ನಿಜ ಜೀವನದಲ್ಲೂ ಒಂದಾಗಬೇಕೆಂಬುದು ಕೋಟಿಗಟ್ಟಲೆ ಅಭಿಮಾನಿಗಳ ಆಸೆಯಾಗಿತ್ತು. ಪ್ರಸ್ತುತ ಹರಿದಾಡುತ್ತಿರುವ ಈ ಅನ್ನದಾನ ಪಟ್ಟಿ ವೈರಲ್ ಆಗುತ್ತಿದ್ದು, ಅಭಿಮಾನಿಗಳಲ್ಲಿ ಸಂತಸ  ಮೂಡಿದ್ದು, ಜೊತೆಗೆ ಜನರ ಮೆಚ್ಚುಗೆಗೂ ವಿರೋಶ್‌ ಜೋಡಿ ಪಾತ್ರರಾಗಿದ್ದಾರೆ.

The post ‘ವಿರೋಶ್’ ಯುಗಾರಂಭ: 16 ಪ್ರಸಿದ್ಧ ದೇವಸ್ಥಾನಗಳಿಗೆ ನವದಂಪತಿಗಳಿಂದ ಅನ್ನದಾನ ಹಾಗೂ ಸಿಹಿ ಹಂಚಿಕೆ appeared first on Samyukta Karnataka.

ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್
ಬೆಂಗಳೂರು: ವಿಶೇಷ ಚೇತನ ಮಕ್ಕಳ ಬಾಳಲ್ಲಿ ಸಂತಸ ಮೂಡಲಿ ಎಂಬ ನಿಟ್ಟಿನಲ್ಲಿ ಬೈಕ್ ಮತ್ತು ಜೀಪ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಸ್ಪರ್ಶ್ ಫೌಂಡೇಶನ್ ಸಂಸ್ಥಾಪಕರಾದ ಗಾಯತ್ರಿ ಹೇಳಿದರು.

ನಗರದಲ್ಲಿ ಸ್ಪರ್ಶ್ ಫೌಂಡೇಶನ್, ಹಸಿರೋತ್ಸವ ಫೋರಂ ಮತ್ತು ಸುದಯ ಫೌಂಡೇಶನ್ ಸಹಯೋಗದೊಂದಿಗೆ ಸೋರ್ ಬೇರಿ ಹೋಟೆಲ್ ನಿಂದ ಆರಂಭವಾಗಿ ಹಾಲಿಡೇ ಇನ್ ಹೋಟೆಲ್ ವರೆಗೆ “ಸಂತಾ ರೈಡ್ ಮತ್ತು ಡ್ರೈವ್” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಗಾಯತ್ರಿ ಅವರು, ನಾವು ವಿಶೇಷ ಚೇತನವುಳ್ಳ ಮಕ್ಕಳ ಶಿಕ್ಷಣ, ಚಿಕಿತ್ಸೆ ಮತ್ತು ಒಟ್ಟಾರೆ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಿ ಈವರೆಗೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ.

ಅದರಂತೆ ಇಂದು ಕೈಗೊಂಡ ಸಂತಾ ರೈಡ್‌ ಕೇವಲ ಆಯೋಜನೆಯಲ್ಲ, ಜನರಲ್ಲಿ ಅರಿವು ಮೂಡಿಸಲು ಮತ್ತು ಮಕ್ಕಳಿಗೆ ಅರ್ಥಪೂರ್ಣವಾಗಿ ಬೆಂಬಲ ನೀಡಲು ಸಮುದಾಯವನ್ನು ಪ್ರೋತ್ಸಾಹಿಸುವ ಒಂದು ಮಾರ್ಗವಾಗಿದೆ ಎಂದರು. ಹಸಿರೋತ್ಸವ ಫೋರಂ ನ ಸಂಸ್ಥಾಪಕರಾದ ಆರತಿ ಮಾತನಾಡಿ, ಈ ರೀತಿಯ ಕಾರ್ಯಕ್ರಮಗಳ ಮೂಲಕ ನಾವು ವಿಶೇಷ ಚೇತನವುಳ್ಳ ಮಕ್ಕಳಿಗೆ ಬೆಂಬಲವನ್ನು ಸೂಚಿಸಬೇಕು. ಅವರ ಉತ್ತಮ ಭವಿಷ್ಯಕ್ಕಾಗಿ ನಾವು ನೆರವಾಗಬೇಕು ಎಂದರು.

ಸುದಯ ಫೌಂಡೇಶನ್‌ನ ಸಂಸ್ಥಾಪಕರಾದ ಡಾ. ದಿವ್ಯಾ ರಂಗೇನಹಳ್ಳಿ ಮಾತನಾಡಿ, ಪ್ರತಿ ವಿಶೇಷ ಚೇತನವುಳ್ಳ ಮಗುವು ಗುಣಮಟ್ಟದ ಶಿಕ್ಷಣ ಮತ್ತು ಆರೈಕೆಯನ್ನು ಪಡೆಯಲು ಅರ್ಹವಾಗಿದೆ. ಸಂಸ್ಥೆಗಳು ಮತ್ತು ನಾಗರಿಕರು ಈ ರೀತಿ ಒಟ್ಟಾಗಿ ಬಂದಾಗ ಮಾತ್ರ ಸಮಾಜವು ಅವರೊಂದಿಗಿದೆ ಎಂಬ ಪ್ರಬಲ ಸಂದೇಶವನ್ನು ಸಾರಲು ಸಾಧ್ಯ.

ಹಬ್ಬದ ಆಚರಣೆಗಳನ್ನು ಒಂದು ಉತ್ತಮ ಸಾಮಾಜಿಕ ಕಾರಣದೊಂದಿಗೆ ಆಚರಿಸಿದರೆ ಅದಕ್ಕೊಂದು ಅರ್ಥ ಸಿಗಲಿದೆ. ಕ್ರಿಸ್‌ಮಸ್‌ ಆಚರಣೆಗೆ ಜೊತೆಗೆ ಇಂದು ಮಕ್ಕಳ ಅಗತ್ಯವನ್ನು ಪೂರೈಸುವ ಒಂದು ಉತ್ತಮ ಕೆಲಸ ಜರುಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಈ ರ್ಯಾಲಿ ಯಲ್ಲಿ ಭಾಗವಹಿಸಿದ ಮಕ್ಕಳಿಗೆ ಚರ್ಚ್ ಸ್ಟ್ರೀಟ್ ರಸ್ತೆಯ ಸಿಬಿಡಿ ಹೋಟೆಲ್ ಆಕರ್ಷಕ ಉಡುಗೊರೆಗಳನ್ನು ನೀಡಿ ಸಂತಸ ಪಡಿಸಿದರು. ರ್ಯಾಲಿ ಯಲ್ಲಿ ಸಾಂತಾ ಕ್ಲಾಸ್ ಉಡುಪು ಧರಿಸಿ 30ಕ್ಕೂ ಹೆಚ್ಚು ಹಬ್ಬದ ರೀತಿಯಲ್ಲಿ ಅಲಂಕರಿಸಿದ ಬೈಕ್‌ಗಳು ಮತ್ತು ಜೀಪ್‌ಗಳಲ್ಲಿ ಸಂಚರಿಸಲಾಯಿತು. ಈ ಆಕರ್ಷಕ ರ್ಯಾಲಿ ಕಂಡು ಜನರು ಸಂಭ್ರಮದಿಂದ ವೀಕ್ಷಿಸಿದರು.

The post ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕಾಗಿ ಧನಸಹಾಯ ಮಾಡಲು ಸಂತಾ ರೈಡ್ ಮತ್ತು ಡ್ರೈವ್ appeared first on Samyukta Karnataka.

ಟಾಟಾ ಹಿಟಾಚಿ: ಎಲೆಕ್ಟ್ರಿಕ್ ಎಕ್ಸ್‌ಕವೇಟರ್ ಕ್ರಾಂತಿ, ‘ರಿಲಯಬಲ್ ಆರೆಂಜ್’ ಹೊಸ ಶಕ್ತಿ!
ಬೆಂಗಳೂರು: ಭಾರತದ ನಿರ್ಮಾಣ ಯಂತ್ರೋಪಕರಣಗಳ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಟಾಟಾ ಹಿಟಾಚಿ, ದಕ್ಷಿಣ ಭಾರತದ ಅತಿದೊಡ್ಡ ನಿರ್ಮಾಣ ಯಂತ್ರಗಳ ಪ್ರದರ್ಶನವಾದ ‘ಎಕ್ಸ್‌ಕಾನ್ 2025’ (EXCON 2025) ಮೂಲಕ ಹೊಸ ಕ್ರಾಂತಿಗೆ ನಾಂದಿ ಹಾಡಿದೆ. “ರಿಲಯಬಲ್ ಆರೆಂಜ್” (Reliable Orange) ಎಂಬ ಆಕರ್ಷಕ ಥೀಮ್ ಅಡಿಯಲ್ಲಿ, ಕಂಪನಿಯು ತನ್ನ ಭವಿಷ್ಯದ ತಂತ್ರಜ್ಞಾನ ಮತ್ತು ಎಲೆಕ್ಟ್ರಿಕ್ ಶಕ್ತಿಯನ್ನು ಅನಾವರಣಗೊಳಿಸಿದೆ.

ಎಲೆಕ್ಟ್ರಿಕ್ ಯುಗಕ್ಕೆ ಸ್ವಾಗತ: ಈ ಬಾರಿಯ ಎಕ್ಸ್‌ಕಾನ್‌ನ ಪ್ರಮುಖ ಆಕರ್ಷಣೆ ಎಂದರೆ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಎಕ್ಸ್‌ಕವೇಟರ್‌ಗಳು. ಟಾಟಾ ಹಿಟಾಚಿ ಹೆಮ್ಮೆಯಿಂದ ತನ್ನ ಹೊಸ ಇ.ಎಕ್ಸ್.210ಎಲ್.ಸಿ. ಎಲೆಕ್ಟ್ರಿಕ್ (EX 210LC Electric) ಮತ್ತು 33ಇ ಎಲೆಕ್ಟ್ರಿಕ್ (33E Electric) ಯಂತ್ರಗಳನ್ನು ಬಿಡುಗಡೆ ಮಾಡಿದೆ. ಇಂಧನ ವೆಚ್ಚ ಕಡಿಮೆ ಮಾಡುವ ಮತ್ತು ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಇವು ಗೇಮ್ ಚೇಂಜರ್ ಆಗಲಿವೆ. ಇದರ ಜೊತೆಗೆ, ಗಣಿಗಾರಿಕೆ ಕ್ಷೇತ್ರಕ್ಕಾಗಿ ಬೃಹತ್ ಗಾತ್ರದ ‘ಝಕ್ಸಿಸ್ 890’ (Zaxis 890) ಮೈನಿಂಗ್ ಮೆಷಿನ್ ಅನ್ನು ಸಹ ಪರಿಚಯಿಸಲಾಗಿದೆ.

ಅಟ್ಯಾಚ್‌ಮೆಂಟ್‌ಗಳ ಹೊಸ ಲೋಕ: ಕೇವಲ ಯಂತ್ರಗಳಷ್ಟೇ ಅಲ್ಲ, ಕೆಲಸದ ದಕ್ಷತೆ ಹೆಚ್ಚಿಸುವ ವಿವಿಧ ಅಟ್ಯಾಚ್‌ಮೆಂಟ್‌ಗಳನ್ನು ಕಂಪನಿ ಪ್ರದರ್ಶಿಸಿದೆ. ಸೋಲಾರ್ ಪ್ಯಾನಲ್ ಲಿಫ್ಟರ್, ಕ್ರಷರ್ ಬಕೆಟ್, ಸ್ಮಾರ್ಟ್ ರಾಕ್ ಬ್ರೇಕರ್, ರಿಪ್ಪರ್ ಟೂಥ್, ಟಿಲ್ಟ್ ಕಪ್ಲರ್ ಮತ್ತು ಮಿನಿ ಎಕ್ಸ್ಕವೇಟರ್ ಗ್ರಾಪಲ್ ಸೇರಿದಂತೆ ಹಲವು ನವೀನ ಸಾಧನಗಳು ಇಲ್ಲಿವೆ. ಇವು ನಿರ್ಮಾಣ ಮತ್ತು ಗಣಿಗಾರಿಕೆ ಕೆಲಸಗಳನ್ನು ಮತ್ತಷ್ಟು ಸುಲಭ ಮತ್ತು ವೇಗವಾಗಿಸಲಿವೆ.

ಜಪಾನ್ ಮತ್ತು ಭಾರತದ ಸ್ನೇಹದ ಸೇತುವೆ: ಈ ಪೆವಿಲಿಯನ್ ಅನ್ನು ಜಪಾನಿನ ಹಿಟಾಚಿ ಕನ್ಸ್ಟ್ರಕ್ಷನ್ ಮೆಷಿನರಿಯ ಅಧ್ಯಕ್ಷ ಮಸಫುಮಿ ಸೆಂಝಕಿ ಉದ್ಘಾಟಿಸಿದರು. ಅವರು ಮಾತನಾಡಿ, “ಭಾರತ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಿರ್ಮಾಣ ಮಾರುಕಟ್ಟೆಯಾಗಿದೆ. ನಮ್ಮ ಸಹಯೋಗವು ಭಾರತೀಯ ಗ್ರಾಹಕರಿಗೆ ವಿಶ್ವದರ್ಜೆಯ ತಂತ್ರಜ್ಞಾನ ಒದಗಿಸುವ ಗುರಿ ಹೊಂದಿದೆ,” ಎಂದರು.

ಟಾಟಾ ಹಿಟಾಚಿಯ ಎಂಡಿ ಸಂದೀಪ್ ಸಿಂಗ್, “ನಾವು ಕಳೆದ 60 ವರ್ಷಗಳಿಂದ ಗ್ರಾಹಕರ ನಂಬಿಕೆ ಉಳಿಸಿಕೊಂಡಿದ್ದೇವೆ. ಈ ಹೊಸ ಎಲೆಕ್ಟ್ರಿಕ್ ಮತ್ತು ಸ್ಮಾರ್ಟ್ ಯಂತ್ರಗಳು ಭಾರತದ ಮೂಲಸೌಕರ್ಯ ಅಭಿವೃದ್ಧಿಗೆ ವೇಗ ನೀಡಲಿವೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸ್ಮಾರ್ಟ್ ತಂತ್ರಜ್ಞಾನದ ದರ್ಶನ: ಕೇವಲ ಯಂತ್ರಗಳಷ್ಟೇ ಅಲ್ಲ, ಟಾಟಾ ಹಿಟಾಚಿ ತನ್ನ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಾದ ‘ಇ-ದೋಸ್ತ್’ (e-Dost), ಕಾನ್ಸೈಟ್ ಮತ್ತು ಇನ್ಸೈಟ್ ಟೆಲಿಮ್ಯಾಟಿಕ್ಸ್ ಪರಿಹಾರಗಳನ್ನು ಪ್ರದರ್ಶಿಸಿದೆ. ಇವು ಯಂತ್ರಗಳ ಕಾರ್ಯಕ್ಷಮತೆ, ಇಂಧನ ಬಳಕೆ ಮತ್ತು ನಿರ್ವಹಣೆಯ ಬಗ್ಗೆ ರಿಯಲ್-ಟೈಮ್ ಮಾಹಿತಿಯನ್ನು ಗ್ರಾಹಕರಿಗೆ ಒದಗಿಸುತ್ತವೆ. 1,20,000ಕ್ಕೂ ಹೆಚ್ಚು ಯಂತ್ರಗಳನ್ನು ಮಾರಾಟ ಮಾಡಿರುವ ಟಾಟಾ ಹಿಟಾಚಿ, ತನ್ನ ‘ರಿಲಯಬಲ್ ಆರೆಂಜ್’ ಬಣ್ಣದ ಮೂಲಕ ವಿಶ್ವಾಸಾರ್ಹತೆ ಮತ್ತು ಬಾಳಿಕೆಗೆ ಹೆಸರಾಗಿದೆ.

ಒಟ್ಟಿನಲ್ಲಿ, ಎಕ್ಸ್‌ಕಾನ್ 2025ರಲ್ಲಿ ಟಾಟಾ ಹಿಟಾಚಿ ಕೇವಲ ಯಂತ್ರಗಳನ್ನು ಪ್ರದರ್ಶಿಸಿಲ್ಲ, ಬದಲಿಗೆ ಭಾರತದ ನಿರ್ಮಾಣ ಕ್ಷೇತ್ರದ ಭವಿಷ್ಯದ ದಿಕ್ಕನ್ನು ತೋರಿಸಿಕೊಟ್ಟಿದೆ. ಸುಸ್ಥಿರತೆ (Sustainability) ಮತ್ತು ತಂತ್ರಜ್ಞಾನದ (Technology) ಸಮ್ಮಿಲನವೇ ಈ ಬಾರಿಯ ಹೈಲೈಟ್.

The post ಟಾಟಾ ಹಿಟಾಚಿ: ಎಲೆಕ್ಟ್ರಿಕ್ ಎಕ್ಸ್‌ಕವೇಟರ್ ಕ್ರಾಂತಿ, ‘ರಿಲಯಬಲ್ ಆರೆಂಜ್’ ಹೊಸ ಶಕ್ತಿ! appeared first on Samyukta Karnataka.

ಟಿಕೆಟ್ ಹಣಕ್ಕೆ ‘ಕತ್ತರಿ’ ಹಾಕಿದ ಇಂಡಿಗೋ: ಭಾಗಶಃ ರೀಫಂಡ್ ನೀಡಿ ಕೈತೊಳೆದುಕೊಂಡ ಸಂಸ್ಥೆ!
ಬೆಂಗಳೂರು: ರದ್ದುಗೊಂಡ ವಿಮಾನಗಳ ಟಿಕೆಟ್ ದರವನ್ನು ಸಂಪೂರ್ಣವಾಗಿ ಮರುಪಾವತಿ ಮಾಡದ ಇಂಡಿಗೊ ವಿಮಾನಯಾನ ಸಂಸ್ಥೆಯ ವಿರುದ್ಧ ಬೆಂಗಳೂರಿನಲ್ಲಿ ಹಲವು ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೂರ್ಣ ಮರುಪಾವತಿಯ ಭರವಸೆಯ ಹೊರತಾಗಿಯೂ, ಟಿಕೆಟ್ ರದ್ದತಿ ಸಮಯದಲ್ಲಿ ₹400 ರಿಂದ ₹3,000 ರವರೆಗೆ ಹಣ ಕಡಿತಗೊಂಡಿದೆ ಎಂದು ಆರೋಪಿಸಿದ್ದಾರೆ.

ಕಡಿತ ಶುಲ್ಕ ಮತ್ತು ಗುಪ್ತ ಶುಲ್ಕಗಳು: ಕಂಪನಿಯು ಡಿಸೆಂಬರ್ 15 ರವರೆಗೆ ಟಿಕೆಟ್ ರದ್ದತಿಗೆ ಪೂರ್ಣ ಮರುಪಾವತಿಯನ್ನು ಪ್ರಕಟಿಸಿತ್ತು. ಆದರೆ, ವಾಸ್ತವದಲ್ಲಿ ವಿಮಾನಯಾನ ಸಂಸ್ಥೆಯ ವೆಬ್‌ಸೈಟ್ ಹಾಗೂ MakeMyTrip, Cleartrip, ಮತ್ತು Ixigo ಯಂತಹ ಥರ್ಡ್ ಪಾರ್ಟಿ ವೆಬ್‌ಸೈಟ್‌ಗಳು ರದ್ದತಿ ಶುಲ್ಕ ಮತ್ತು ‘ಅನುಕೂಲ ಸೇವಾ ಶುಲ್ಕ’ಗಳನ್ನು ವಿಧಿಸುವುದನ್ನು ಮುಂದುವರೆಸಿವೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ.

ಹಾಗೇ ಐಟಿ ಉದ್ಯೋಗಿ ಆದಿತ್ಯ ಎಂಬುವವರು, “ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಹೇಳಿದ್ದರೂ ಸಹ, ಈ ವೆಬ್‌ಸೈಟ್‌ಗಳಲ್ಲಿ ಗುಪ್ತ ಶುಲ್ಕಗಳನ್ನು (Hidden Charges) ವಿಧಿಸಲಾಗಿದೆ. ಈ ಕಾರಣದಿಂದಾಗಿ ನಾನು ಮೂರು ಟಿಕೆಟ್‌ಗಳಿಗೆ ಸುಮಾರು ₹3,000 ಕಳೆದುಕೊಂಡಿದ್ದೇನೆ,” ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮತ್ತೊಬ್ಬ ಪ್ರಯಾಣಿಕರಾದ ಕವಿತಾ ಅವರು, ಡಿ. 8ರಂದು ಬೆಂಗಳೂರಿನಿಂದ ಭುವನೇಶ್ವರಕ್ಕೆ ₹8,147 ಕೊಟ್ಟು ಟಿಕೆಟ್ ಬುಕ್ ಮಾಡಿದ್ದರು. ವಿಮಾನ ಹಾರಾಟ ರದ್ದಾಗಿದ್ದರಿಂದ ಅವರಿಗೆ ಮರುಪಾವತಿಯ ಸಂದೇಶ ಬಂದಿತ್ತು. ಆದರೆ, ಅವರಿಗೆ ಮರುಪಾವತಿಯಾದ ಮೊತ್ತ ಕೇವಲ ₹7,712 ಆಗಿದ್ದು, ₹435 ಕಡಿತಗೊಳಿಸಲಾಗಿದೆ. “ಉಳಿದ ಮೊತ್ತ ಏನಾಯಿತು? ಈ ಕುರಿತು ಕಾಲ್‌ಸೆಂಟರ್‌ಗೆ ಕರೆ ಮಾಡಿದಾಗ, ನಿಮ್ಮ ವಿಮಾನ ರದ್ದಾಗಿಲ್ಲ ಎಂದು ತಿಳಿಸಿದರು. ಇದು ಗಂಭೀರ ಸಮಸ್ಯೆ,” ಎಂದು ಕವಿತಾ ತಿಳಿಸಿದ್ದಾರೆ.

ಇಂಡಿಗೊ ಪ್ರತಿಕ್ರಿಯೆ: ಇದೇ ಸಮಯದಲ್ಲಿ, ಕೆಲ ಪ್ರಯಾಣಿಕರಿಗೆ ಟಿಕೆಟ್‌ ದರವು ಪೂರ್ಣವಾಗಿ ಮರುಪಾವತಿಯಾಗಿರುವುದಾಗಿಯೂ ವರದಿಯಾಗಿದೆ. ಈ ಕುರಿತು ಇಂಡಿಗೊ ಮೂಲವೊಂದು ಸ್ಪಷ್ಟನೆ ನೀಡಿದ್ದು, “ವಿಮಾನಯಾನ ಶುಲ್ಕವನ್ನು ಸಂಪೂರ್ಣವಾಗಿ ಮರುಪಾವತಿಸಲಾಗುತ್ತದೆಯಾದರೂ, ಟಿಕೆಟ್ ಬುಕಿಂಗ್ ಸಮಯದಲ್ಲಿ ವಿಧಿಸಲಾಗಿದ್ದ ಅನುಕೂಲ ಸೇವಾ ಶುಲ್ಕವನ್ನು ಕಡಿತಗೊಳಿಸಲಾಗುತ್ತದೆ,” ಎಂದು ಹೇಳಿದೆ.

ಹೀಗಾಗಿ ಶುಲ್ಕಗಳ ಕುರಿತು ಸರಿಯಾದ ಪಾರದರ್ಶಕತೆ ಇಲ್ಲದಿರುವುದು ಮತ್ತು ಕೆಲವು ಪ್ರಯಾಣಿಕರಿಗೆ ವಿಮಾನ ರದ್ದಾಗಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಸರಿಯಾದ ಮಾಹಿತಿ ನೀಡದಿರುವುದು ಗ್ರಾಹಕರಲ್ಲಿ ಮತ್ತಷ್ಟು ಗೊಂದಲ ಮೂಡಿಸಿದೆ.

The post ಟಿಕೆಟ್ ಹಣಕ್ಕೆ ‘ಕತ್ತರಿ’ ಹಾಕಿದ ಇಂಡಿಗೋ: ಭಾಗಶಃ ರೀಫಂಡ್ ನೀಡಿ ಕೈತೊಳೆದುಕೊಂಡ ಸಂಸ್ಥೆ! appeared first on Samyukta Karnataka.

ಪಟ್ಟಣ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪ್ರಭಾರಿ ನೇಮಕ
ಬೆಂಗಳೂರು: ರಾಜ್ಯದ ವಿವಿಧ ಪಟ್ಟಣ ಪಂಚಾಯಿತಿ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಡಿಸೆಂಬರ್ 21, 2025ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ಬಿಜೆಪಿ ಸಂಘಟನೆ ರಾಜಕೀಯ ಚಟುವಟಿಕೆಗಳನ್ನು ಗಟ್ಟಿಗೊಳಿಸಿದೆ. ಈ ಸಂಬಂಧ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಪಕ್ಷದ ಪರವಾಗಿ ಸ್ಥಳೀಯ ಸಂಸ್ಥೆಗಳಿಗೆ ವಿಶೇಷ ಪ್ರಭಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಯಾರಿಗೆ ಯಾವ ಜವಾಬ್ದಾರಿ?: ದಕ್ಷಿಣ ಕನ್ನಡ ಜಿಲ್ಲೆಯ ಬಜಪೆ ಹಾಗೂ ಕಿನ್ನಿಗೋಳಿ ಪಟ್ಟಣ ಪಂಚಾಯತಗಳಿಗೆ ಮಾಜಿ ವಿಧಾನಪರಿಷತ್‌ ಸದಸ್ಯ ಮೋನಪ್ಪ ಭಂಡಾರಿಯನ್ನು ಹಾಗೂ ಉತ್ತರ ಕನ್ನಡ ಜಿಲ್ಲೆಯ ಮಂಕಿ ಪಟ್ಟಣ ಪಂಚಾಯಿತಗೆ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಅವರನ್ನ ಮತ್ತು ಬಿಜೆಪಿ ರಾಜ್ಯ ಕಾರ್ಯದರ್ಶಿ ಮುನಿರಾಜು ಅವರನ್ನು ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಗೆ ಪ್ರಭಾರಿಗಳನ್ನಾಗಿ ನೇಮಿಸಿ ಪ್ರಕಟಣೆ ಹೊರಡಿಸಿದ್ದಾರೆ.

ಚುನಾವಣಾ ಕಣಕ್ಕಿಳಿದ ಬಿಜೆಪಿ: ಚುನಾವಣೆ ಪ್ರಕಟಣೆ ಹೊರಬಿದ್ದಂತೆಯೇ ಸ್ಥಳೀಯ ಮಟ್ಟದಲ್ಲಿ ಅಭ್ಯರ್ಥಿ ಆಯ್ಕೆ, ಮತದಾರ ಸಂಪರ್ಕ ಹಾಗೂ ಪ್ರಚಾರ ತಂತ್ರ ರೂಪಿಸುವ ಕೆಲಸಕ್ಕೆ ವೇಗ ಸಿಕ್ಕಿದೆ. ವಿಜಯೇಂದ್ರ ಅವರ ಆಯ್ಕೆ ಕ್ರಮವು ಗ್ರಾಮ – ಪಟ್ಟಣ ಮಟ್ಟದಲ್ಲಿ ಸಂಘಟನೆ ಬಲಪಡಿಸುವುದು ಮತ್ತು ಬೂತ್ ವ್ಯವಸ್ಥೆಯನ್ನು ಮತ್ತಷ್ಟು ಕಠಿಣಗೊಳಿಸುವುದು ಎನ್ನುವುದು ಪಕ್ಷದ ಮೂಲ ಉದ್ದೇಶ ಎಂದು ಹೇಳಲಾಗಿದೆ.

The post ಪಟ್ಟಣ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪ್ರಭಾರಿ ನೇಮಕ appeared first on Samyukta Karnataka.