Australia A India A Archives - Samyukta Karnataka

ಆಸೀಸ್ ವೇಗಕ್ಕೆ ಕ್ರೀಸ್‌ನಲ್ಲೇ ನಡುಗಿದ್ರಾ ಸ್ಟಾರ್ ಬ್ಯಾಟರ್ಸ್: ತವರಿನಲ್ಲೇ ಭಾರತ ‘ಎ’ ತಂಡಕ್ಕೆ ಮುಖಭಂಗವಾಗಿದ್ದು ಎಲ್ಲಿ?!
ಪ್ರಮುಖ ಬ್ಯಾಟರ್‌ಗಳ ಸತತ ವೈಫಲ್ಯದಿಂದಾಗಿ ಪ್ರವಾಸಿ ಆಸ್ಟ್ರೇಲಿಯಾ ‘ಎ’ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ‘ಎ’ ತಂಡ 69 ರನ್‌ಗಳ ಹೀನಾಯ ಸೋಲು ಕಂಡಿದೆ. ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ‘ಎ’ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಅಂತರದ ಅಜೇಯ ಮುನ್ನಡೆ ಸಾಧಿಸಿ ಸರಣಿಯನ್ನು ತನ್ನದಾಗಿಸಿಕೊಂಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ‘ಎ’ ತಂಡ ಸ್ಯಾಮ್ ಕೊನ್ಸ್ಟಾಸ್ (67 ರನ್) ಹಾಗೂ ಜೋಶ್ ಫಿಲಿಪ್ (58 ರನ್) ಅವರ ಆಕರ್ಷಕ ಅರ್ಧಶತಕಗಳ ಬಲದಿಂದ 49.5 ಓವರ್‌ಗಳಲ್ಲಿ 275 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ಅರ್ಷದ್ ಖಾನ್ 3 ವಿಕೆಟ್ ಕಬಳಿಸಿ ಎದುರಾಳಿ ಬೃಹತ್ ಮೊತ್ತ ಗಳಿಸುವುದನ್ನು ನಿಯಂತ್ರಿಸಿದರು.

276 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಭಾರತ ‘ಎ’ ಆರಂಭದಲ್ಲೇ ಆಘಾತ ಅನುಭವಿಸಿತು. ದೇವದತ್ ಪಡಿಕಲ್ (1), ನಾಯಕ ಋತುರಾಜ್ ಗಾಯಕ್ವಾಡ್ (12) ಹಾಗೂ ಸಾಯಿ ಸುದರ್ಶನ್ (13) ಜವಾಬ್ದಾರಿಯುತ ಆಟ ಪ್ರದರ್ಶಿಸದೆ ಪೆವಿಲಿಯನ್ ಸೇರಿದರು.

ಇದರಿಂದ ಭಾರತ 30 ರನ್‌ಗಳಿಗೆ 3 ಪ್ರಮುಖ ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು. ಮಧ್ಯಮ ಕ್ರಮಾಂಕದಲ್ಲಿ ರಜತ್ ಪಾಟೀದಾರ್ (67 ರನ್, 82 ಎಸೆತ) ಏಕಾಂಗಿ ಹೋರಾಟ ನಡೆಸಿದರೂ ಇತರ ಬ್ಯಾಟರ್‌ಗಳಿಂದ ಸೂಕ್ತ ಬೆಂಬಲ ಸಿಗಲಿಲ್ಲ. ಆಸೀಸ್ ವೇಗಿ ಸ್ಪೆನ್ಸರ್ ಜಾನ್ಸನ್ (3/35) ಮಾರಕ ದಾಳಿಗೆ ಕುಸಿದ ಭಾರತ ‘ಎ’ 45.2 ಓವರ್‌ಗಳಲ್ಲಿ 206 ರನ್‌ಗಳಿಗೆ ಸರ್ವಪತನ ಕಂಡಿತು.

The post ಆಸೀಸ್ ವೇಗಕ್ಕೆ ಕ್ರೀಸ್‌ನಲ್ಲೇ ನಡುಗಿದ್ರಾ ಸ್ಟಾರ್ ಬ್ಯಾಟರ್ಸ್: ತವರಿನಲ್ಲೇ ಭಾರತ ‘ಎ’ ತಂಡಕ್ಕೆ ಮುಖಭಂಗವಾಗಿದ್ದು ಎಲ್ಲಿ?! appeared first on Samyukta Karnataka.