#AmericaAmerica2 Archives - Samyukta Karnataka

“ನೂರು ಜನ್ಮಕೂ…” ನೆನಪುಗಳಿಗೆ ಮರುಜೀವ; ಸದ್ಯದಲ್ಲೇ ಅಮೆರಿಕ ಅಮೆರಿಕ ಪಾರ್ಟ್-2! ನಿರ್ದೇಶಕರಿಂದ ಅಧಿಕೃತ ಘೋಷಣೆ
ಕನ್ನಡ ಚಿತ್ರರಂಗದ ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ, ಕೆಲವು ಸಿನಿಮಾಗಳು ಕೇವಲ ಮನರಂಜನೆಯಾಗಿ ಉಳಿಯದೆ ಒಂದು ಭಾವನೆಯಾಗಿ ಬದಲಾಗಿವೆ. ಅಂತಹ ಅಪರೂಪದ ಚಿತ್ರಗಳಲ್ಲಿ ‘ಅಮೆರಿಕ-ಅಮೆರಿಕ’ ಅಗ್ರಪಂಕ್ತಿಯಲ್ಲಿ ನಿಲ್ಲುತ್ತದೆ. ಇಂದಿಗೆ ಈ ಸಿನಿಮಾ ಬೆಳ್ಳಿಪರದೆಗೆ ಬಂದು ಭರ್ತಿ ಮೂವತ್ತು ವರ್ಷಗಳು ಸಂದಿವೆ. 1997ರ ಏಪ್ರಿಲ್ 11ರಂದು ಬಿಡುಗಡೆಯಾಗಿದ್ದ ಈ ಚಿತ್ರ, ಅಂದು ಸೃಷ್ಟಿಸಿದ ಸಂಚಲನ ಅಷ್ಟಿಷ್ಟಲ್ಲ. ಗೆಳೆತನದ ಗಾಢತೆ, ಪ್ರೀತಿಯ ತೊಳಲಾಟ, ದೇಶಪ್ರೇಮದ ಸೆಳೆತ ಹಾಗೂ ಪಾಶ್ಚಾತ್ಯ ಸಂಸ್ಕೃತಿಯ ನಡುವೆ ನಮ್ಮ ಮಣ್ಣಿನ ಸೊಗಡನ್ನು ಎತ್ತಿ ಹಿಡಿದ ಈ ಸಿನಿಮಾ, ಇಂದಿಗೂ ಕನ್ನಡಿಗರ ಮೆಚ್ಚಿನ ‘ಕಲ್ಟ್ ಕ್ಲಾಸಿಕ್’ ಚಿತ್ರಗಳಲ್ಲಿ ಒಂದಾಗಿ ಉಳಿದಿದೆ.

ರಮೇಶ್ ಅರವಿಂದ್ ಅವರ ಅಮಾಯಕ ನಟನೆ, ಹೇಮಾ ಪಂಚಮುಖಿ ಅವರ ಸ್ನಿಗ್ಧ ಸೌಂದರ್ಯ ಮತ್ತು ಅಕ್ಷಯ್ ಆನಂದ್ ಅವರ ತೀವ್ರತೆಯುಳ್ಳ ಪಾತ್ರಗಳು ಜನಮಾನಸದಲ್ಲಿ ಅಚ್ಚೊತ್ತಿವೆ. ವರ್ಷಗಳ ಕಾಲ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಂಡಿದ್ದ ಈ ಸಿನಿಮಾ, ನಾಗತಿಹಳ್ಳಿ ಚಂದ್ರಶೇಖರ್ ಅವರ ನಿರ್ದೇಶನ ಪ್ರತಿಭೆಗೆ ಹಿಡಿದ ಕನ್ನಡಿಯಾಗಿತ್ತು. ಈ ಸುದೀರ್ಘ ಪಯಣದ ಸಂಭ್ರಮವನ್ನು ಹಂಚಿಕೊಂಡಿರುವ ನಾಗತಿಹಳ್ಳಿ ಅವರು ಸೋಶಿಯಲ್ ಮೀಡಿಯಾದಲ್ಲಿ ಅತ್ಯಂತ ಭಾವುಕರಾಗಿ ಬರೆದುಕೊಂಡಿದ್ದಾರೆ. “ಇದು ನಾನು ರೂಪಿಸಿದ ಸಿನಿಮಾವಲ್ಲ, ಬದಲಾಗಿ ನನ್ನನ್ನೇ ರೂಪಿಸಿದ ಸಿನಿಮಾ; ಕೋಟಿ ಕೋಟಿ ಕಂಗಳಿಗೆ ಕನಸು ಮತ್ತು ಮನಗಳಿಗೆ ಮಮಕಾರ ನೀಡಿದ ಚಿತ್ರ” ಎಂದು ಹೇಳುವ ಮೂಲಕ ಕನ್ನಡಿಗರಿಗೆ ತಮ್ಮ ಕೃತಜ್ಞತೆಗಳನ್ನು ಅರ್ಪಿಸಿದ್ದಾರೆ.

ಇದೇ ಸುಸಂದರ್ಭದಲ್ಲಿ ನಿರ್ದೇಶಕರು ಚಿತ್ರಪ್ರೇಮಿಗಳಿಗೆ ಒಂದು ದೊಡ್ಡ ಸಿಹಿಸುದ್ದಿಯನ್ನು ನೀಡಿದ್ದಾರೆ. ಹೌದು, ಕನ್ನಡಿಗರು ಹಲವು ವರ್ಷಗಳಿಂದ ಕಾಯುತ್ತಿದ್ದ ‘ಅಮೆರಿಕ-ಅಮೆರಿಕ 2’ ಚಿತ್ರವನ್ನು ಅವರು ಅಧಿಕೃತವಾಗಿ ಘೋಷಿಸಿದ್ದಾರೆ. ಈ ಘೋಷಣೆ ಹೊರಬೀಳುತ್ತಿದ್ದಂತೆಯೇ ಸೋಷಿಯಲ್ ಮೀಡಿಯಾದಲ್ಲಿ ಸಂಭ್ರಮದ ಅಲೆ ಎದ್ದಿದೆ. ಹೆಚ್ಚಿನ ಮಾಹಿತಿ ಲಭ್ಯವಿಲ್ಲದಿದ್ದರೂ, ಅಭಿಮಾನಿಗಳು ಮಾತ್ರ ತಮ್ಮ ನೆಚ್ಚಿನ ಚಿತ್ರದ ಮುಂದುವರಿದ ಭಾಗ ಹೇಗಿರಬಹುದು ಎಂಬ ಕಲ್ಪನೆಯಲ್ಲಿ ಮುಳುಗಿದ್ದಾರೆ. ಹಲವರು ನಾಗತಿಹಳ್ಳಿ ಅವರ ಪೋಸ್ಟ್‌ಗೆ ಕಮೆಂಟ್ ಮಾಡಿ, ಚಿತ್ರವನ್ನು ಮರು-ಬಿಡುಗಡೆ ಮಾಡುವಂತೆ ಮನವಿ ಮಾಡುವುದರ ಜೊತೆಗೆ, ಸೀಕ್ವೆಲ್‌ನಲ್ಲಿಯೂ ಹಳೆಯ ಕಲಾವಿದರೇ ಇರಲಿ ಎಂಬ ಆಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಅವರು ನಿರ್ದೇಶನದಿಂದ ತುಸು ದೂರ ಉಳಿದಿದ್ದರು. 2015ರ ‘ಇಷ್ಟಕಾಮ್ಯ’ ಮತ್ತು 2020ರ ‘ಇಂಡಿಯಾ vs ಇಂಗ್ಲೆಂಡ್’ ನಂತರ ಅವರ ಅಭಿಮಾನಿಗಳು ಒಂದು ಸದಭಿರುಚಿಯ ಚಿತ್ರಕ್ಕಾಗಿ ಕಾಯುತ್ತಿದ್ದರು. ಈಗ ಸರಿ ಸುಮಾರು ಮೂರು ದಶಕಗಳ ಬಳಿಕ ತಮ್ಮದೇ ಸಿನಿಮಾದ ಸೀಕ್ವೆಲ್ ಮೂಲಕ ಮರಳುತ್ತಿರುವುದು ಸಹಜವಾಗಿಯೇ ದೊಡ್ಡ ನಿರೀಕ್ಷೆಯನ್ನು ಹುಟ್ಟುಹಾಕಿದೆ. ನಾಗತಿಹಳ್ಳಿ ಅವರ ಸಂವೇದನಾಶೀಲ ಕಥೆ ಮತ್ತು ಈಗಿನ ತಲೆಮಾರಿನ ಬದಲಾದ ಅಮೆರಿಕದ ಚಿತ್ರಣ ಎರಡನೇ ಭಾಗದಲ್ಲಿ ಹೇಗೆ ಮೂಡಿಬರಲಿದೆ ಎಂಬ ಕುತೂಹಲ ಸದ್ಯಕ್ಕೆ ಎಲ್ಲರಲ್ಲಿದೆ.

The post “ನೂರು ಜನ್ಮಕೂ…” ನೆನಪುಗಳಿಗೆ ಮರುಜೀವ; ಸದ್ಯದಲ್ಲೇ ಅಮೆರಿಕ ಅಮೆರಿಕ ಪಾರ್ಟ್-2! ನಿರ್ದೇಶಕರಿಂದ ಅಧಿಕೃತ ಘೋಷಣೆ appeared first on Samyukta Karnataka.