Actress Roopika Archives - Samyukta Karnataka

ಹೊಸ ಪಯಣಕ್ಕೆ ಹೆಜ್ಜೆ ಇಟ್ಟ ‘ಲಕ್ಷ್ಮಿ ನಿವಾಸ’ ಖ್ಯಾತಿಯ ನಟಿ ರೂಪಿಕಾ: ಕೆನಡಾ ಉದ್ಯೋಗಿ ಜೊತೆ ಕಲ್ಯಾಣೋತ್ಸವ!
ಕನ್ನಡ ಕಿರುತೆರೆಯ ನಟಿ ಹಾಗೂ ಪ್ರಖ್ಯಾತ ಭರತನಾಟ್ಯ ನೃತ್ಯಗಾರ್ತಿ ರೂಪಿಕಾ ತಮ್ಮ ಜೀವನದ ಹೊಸ ಪಯಣಕ್ಕೆ ಹೆಜ್ಜೆ ಇಟ್ಟಿದ್ದಾರೆ. ಇತ್ತೀಚೆಗಷ್ಟೇ ನಿಶ್ಚಿತಾರ್ಥದ ಸಂಭ್ರಮ ಆಪ್ತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಅತ್ಯಂತ ಅದ್ಧೂರಿಯಾಗಿ ಜರುಗಿದೆ. ರೂಪಿಕಾ ಕೈಹಿಡಿಯಲಿರುವ ಭಾವಿ ಪತಿಯ ಹೆಸರು ಅಂಕಿತ್. ಮೂಲತಃ ಬೆಂಗಳೂರಿನವರಾದ ಅಂಕಿತ್, ಕಳೆದ ಐದು ವರ್ಷಗಳಿಂದ ಕೆನಡಾದ ಪ್ರತಿಷ್ಠಿತ ‘ಇನ್ವೆಸ್ಕೋ’ ಸಂಸ್ಥೆಯಲ್ಲಿ ಟ್ಯಾಕ್ಸ್ ಸ್ಪೆಷಲಿಸ್ಟ್ (ತೆರಿಗೆ ತಜ್ಞರು) ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಹಾಗೇ ವೃತ್ತಿಯಲ್ಲಿ ಹಣಕಾಸು ತಜ್ಞರಾಗಿದ್ದರೂ, ಇವರಿಗೆ ಕಲೆ ಮತ್ತು ಸಂಗೀತದಲ್ಲಿ ಅಪಾರ ಆಸಕ್ತಿಯಿದೆ. ಅಂಕಿತ್ ಮ್ಯೂಸಿಕಲ್ ಕಂಪೋಸರ್ ಕೂಡ ಆಗಿದ್ದು, ಚಿತ್ರರಂಗದ ಮೇಲೆ ಹೆಚ್ಚು ಒಲವನ್ನು ಉಳಿಸಿಕೊಂಡಿದ್ದಾರೆ. ಈ ಜೋಡಿಯ ವಿವಾಹ ಮಹೋತ್ಸವಕ್ಕೆ ಈಗಾಗಲೇ ಶುಭ ಮುಹೂರ್ತ ಫಿಕ್ಸ್ ಆಗಿದೆ. ಮುಂಬರುವ ಆಗಸ್ಟ್ ತಿಂಗಳಿನಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಈ ನವಜೋಡಿಯ ಮದುವೆ ಅದ್ಧೂರಿಯಾಗಿ ನೆರವೇರಲಿದೆ. ಈ ಶುಭ ಕಾರ್ಯದಲ್ಲಿ ಚಿತ್ರರಂಗದ ಪ್ರಮುಖರು ಹಾಗೂ ರಾಜಕೀಯ ಗಣ್ಯರು ಭಾಗವಹಿಸಿ ನವಜೋಡಿಗೆ ಹರಸಲಿದ್ದಾರೆ.

ಕಿರುತೆರೆಯ ಜನಪ್ರಿಯ ಧಾರಾವಾಹಿಗಳಾದ ‘ಬೆಳ್ಳಿಚುಕ್ಕಿ’ ಮತ್ತು ‘ಬದುಕು’ ಮೂಲಕ ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ರೂಪಿಕಾ, 2009ರಲ್ಲಿ ತೆರೆಕಂಡ ‘ಚೆಲುವಿನ ಚಿಲಿಪಿಲಿ’ ಚಿತ್ರದ ಮೂಲಕ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಪರಿಚಯವಾಗಿ ದೊಡ್ಡ ಪ್ರಸಿದ್ಧಿ ಪಡೆದರು. ಪ್ರಸ್ತುತ ಜೀ ಕನ್ನಡ ವಾಹಿನಿಯ ಸೂಪರ್ ಹಿಟ್ ಧಾರಾವಾಹಿ ‘ಲಕ್ಷ್ಮಿ ನಿವಾಸ’ದಲ್ಲಿ ‘ಸಿಂಚನಾ’ ಎಂಬ ಪ್ರಮುಖ ಪಾತ್ರದ ಮೂಲಕ ಪ್ರೇಕ್ಷಕರ ಮನಗೆದ್ದು, ಮನೆಮಾತಾಗಿದ್ದಾರೆ. ತಮಗೆ ಇಷ್ಟವಾದ ಕಲಾ ಕ್ಷೇತ್ರದಲ್ಲೇ ಸಕ್ರಿಯರಾಗಿರುವ ನಟಿ ರೂಪಿಕಾಗೆ ಅಭಿಮಾನಿಗಳು ಹಾಗೂ ಗಣ್ಯರು ಶುಭ ಹಾರೈಸುತ್ತಿದ್ದಾರೆ.

The post ಹೊಸ ಪಯಣಕ್ಕೆ ಹೆಜ್ಜೆ ಇಟ್ಟ ‘ಲಕ್ಷ್ಮಿ ನಿವಾಸ’ ಖ್ಯಾತಿಯ ನಟಿ ರೂಪಿಕಾ: ಕೆನಡಾ ಉದ್ಯೋಗಿ ಜೊತೆ ಕಲ್ಯಾಣೋತ್ಸವ! appeared first on Samyukta Karnataka.