Home ಕ್ರೀಡೆ ರೋಹಿತ್‌ – ಕೊಹ್ಲಿ ಆರ್ಭಟ, ಜೈಸ್ವಾಲ್‌ ಶತಕ; ಭಾರತಕ್ಕೆ ಗೆಲುವು

ರೋಹಿತ್‌ – ಕೊಹ್ಲಿ ಆರ್ಭಟ, ಜೈಸ್ವಾಲ್‌ ಶತಕ; ಭಾರತಕ್ಕೆ ಗೆಲುವು

0

ಯಶಸ್ವಿ ಜೈಸ್ವಾಲ್‌ ಆಕರ್ಷಕ ಶತಕ ಮತ್ತು ರೋಹಿತ್‌ ಶರ್ಮಾ – ವಿರಾಟ್‌ ಕೊಹ್ಲಿ ಅವರ ಅರ್ಧಶತಕದ ನೆರವಿನಿಂದ ಭಾರತ, ದಕ್ಷಿಣ ಆಫ್ರಿಕಾ ವಿರುದ್ಧ ಸುಲಭ ಗೆಲುವು ದಾಖಲಿಸಿದೆ. ಈ ಮೂಲಕ ಟೆಸ್ಟ್‌ ಸರಣಿ ಸೋಲಿನ ಸೇಡನ್ನು ಟೀಮ್‌ ಇಂಡಿಯಾ ತೀರಿಸಿಕೊಂಡಿದೆ.

ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ನಾಯಕ ಕೆ.ಎಲ್‌. ರಾಹುಲ್‌ ನೇತೃತ್ವದ ಭಾರತ ತಂಡ ದಕ್ಷಿಣ ಆಫ್ರಿಕಾ ತಂಡವನ್ನು 47.5 ಓವರ್‌ಗಳಲ್ಲಿ 270 ರನ್‌ಗಳಿಗೆ ಆಲೌಟ್‌ ಮಾಡಿತು.

ದಕ್ಷಿಣ ಆಫ್ರಿಕಾ ಪರ ಕ್ವಿಂಟನ್‌ ಡಿ‌ʼಕಾಕ್ ಕೇವಲ 89 ಎಸೆತಗಳಲ್ಲಿ (8 ಬೌಂಡರಿ, 6 ಸಿಕ್ಸರ್‌) 106 ರನ್‌ಗಳಿಸಿ ತಂಡವನ್ನು ಉತ್ತಮ ಸ್ಥಿತಿಗೆ ಕೊಂಡೊಯ್ದರು. ಆದರೆ ನಾಯಕ ಬವುಮಾ (48) ಹೊರತುಪಡಿಸಿ ಉಳಿದ ಯಾವೊಬ್ಬ ಆಟಗಾರನೂ ಕೂಡ ಹೆಚ್ಚಿನ ರನ್‌ ಗಳಿಸಲು ಸಾಧ್ಯವಾಗಲಿಲ್ಲ.

ಬಳಿಕ 271 ರನ್‌ಗಳ ಗುರಿ ಬೆನ್ನಟ್ಟಿ ಭಾರತಕ್ಕೆ ರೋಹಿತ್‌ ಮತ್ತು ಜೈಸ್ವಾಲ್‌ ಉತ್ತಮ ಆರಂಭವನ್ನು ನೀಡಿದರು. ರೋಹಿತ್‌ 73 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್‌ ಸೇರಿದಂತೆ 75 ರನ್‌ ಗಳಿಸಿ ಪೆವಿಲಿಯನ್‌ ಸೇರಿದರು.

ಎರಡನೇ ವಿಕೆಟ್‌ಗೆ ಜೈಸ್ವಾಲ್‌ ಜತೆಯಾದ ವಿರಾಟ್‌ ಕೊಹ್ಲಿ ಕೇವಲ 45 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್‌ ಸೇರಿದಂತೆ ಅಜೇಯ 65 ರನ್‌ಗಳಿಸಿದರು. ಜೈಸ್ವಾಲ್‌ 121 ಎಸೆತಗಳಲ್ಲಿ 12 ಬೌಂಡರಿ, 2 ಸಿಕ್ಸರ್‌ನೊಂದಿಗೆ 116 ರನ್‌ಗಳಿಸಿ ಅಜೇಯರಾಗಿ ಉಳಿದರು.

ಭಾರತ ಅಂತಿಮವಾಗಿ 39.5 ಓವರ್‌ಗಳಲ್ಲಿ 1 ವಿಕೆಟ್‌ ಕಳೆದುಕೊಂಡು ಗೆಲುವಿನ ದಡ ಸೇರಿತು.

NO COMMENTS

LEAVE A REPLY

Please enter your comment!
Please enter your name here

Exit mobile version