ಮುಂಬೈ: ಸ್ವದೇಶ್‌ನಿಂದ ಆರಂಭವಾದಂಥ ಪ್ರತಿಷ್ಠಿತ ಮಳಿಗೆ ಇರೋಸ್ (Eros) ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾಯಿತು. ರಿಲಯನ್ಸ್ ಫೌಂಡೇಷನ್ ಸ್ಥಾಪಕಿ ಹಾಗೂ ಅದರ ಅಧ್ಯಕ್ಷೆಯೂ ಆದ ನೀತಾ ಅಂಬಾನಿ ಕಲಾವಿದರು ಹಾಗೂ ಕುಶಲಕರ್ಮಿಗಳನ್ನು ಸನ್ಮಾನಿಸಿದರು. ಭಾರತದ ವೈವಿಧ್ಯಮಯ ಕಲೆ ಹಾಗೂ ಸಂಸ್ಕೃತಿಯನ್ನು ಉಳಿಸಿಕೊಂಡು, ಮುಂದುವರಿಸಿಕೊಂಡು ಬಂದಂಥ ಕಲಾವಿದರು ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ಕುಶಲಕರ್ಮಿಗಳು ಈ ಕಾರ್ಯಕ್ರಮಕ್ಕೆ ಕಳೆ ತಂದಿದ್ದರು. ಈ ಕಾರ್ಯಕ್ರಮದಲ್ಲಿ ಹಿಂದಿ ಚಿತ್ರರಂಗದ ತಾರಾ ಬಳಗವೇ ತುಂಬಿಹೋಗಿತ್ತು. ಆದ್ದರಿಂದ ಒಂದಿಷ್ಟು ಗ್ಲ್ಯಾಮರ್ ಕೂಡ ಸೇರ್ಪಡೆಯಾಯಿತು.
ಮಾಧ್ಯಮಗಳ ಸಮ್ಮುಖದಲ್ಲಿ ನೀತಾ ಅಂಬಾನಿ ಅವರು ರಾಷ್ಟ್ರಪ್ರಶಸ್ತಿ ವಿಜೇತ ಕುಶಲಕರ್ಮಿಗಳನ್ನು ಗೌರವಿಸಿದರು. ಮತ್ತು “ಇವರೆಲ್ಲ ಭಾರತ ದೇಶದ ಹೆಮ್ಮೆ ಹಾಗೂ ಈ ರಾತ್ರಿಯಲ್ಲಿನ ನಿಜವಾದ ತಾರೆಗಳು,” ಎಂದು ಮೆಚ್ಚುಗೆ ಮಾತುಗಳನ್ನು ಆಡಿದರು. “ನಮ್ಮ ಕಲಾವಿದರು – ಕುಶಲಕರ್ಮಿಗಳನ್ನು ಗೌರವಿಸುವ ಮೂಲಕ ಹಬ್ಬದ ಋತುವಿನ ಆರಂಭವನ್ನು ಈ ದಿನ ಸಂಭ್ರಮಿಸುತ್ತಾ ಇದ್ದೇವೆ. ಅವರು ಭಾರತದ ಹೆಮ್ಮೆ ಹಾಗೂ ಈ ರಾತ್ರಿಯ ತಾರೆಗಳು. ಇವತ್ತು ನಮ್ಮ ಜೊತೆಗೆ ರಾಷ್ಟ್ರಪ್ರಶಸ್ತಿ ವಿಜೇತರಾದ ಹಲವು ಕಲಾವಿದರು – ಕುಶಲಕರ್ಮಿಗಳು ಇದ್ದಾರೆ. ಕಾಶ್ಮೀರ, ಒಡಿಶಾ, ತಮಿಳುನಾಡು, ಹೈದರಾಬಾದ್ ಮತ್ತು ಜೈಪುರ ಹೀಗೆ ಭಾರತದ ನಾನಾ ಭಾಗಗಳಿಂದ ಅವರು ಬಂದಿದ್ದಾರೆ. ನಮ್ಮ ನಿಜವಾದ ಹೆಮ್ಮೆ ಅವರು. ಅದ್ಭುತವಾದ ಹಬ್ಬದ ಸಮಯ ನಿಮ್ಮದಾಗಲಿ,” ಎಂದರು.
ಬಿರೇನ್ ಬಸಕ್ ಅವರಿಗೆ ಪದ್ಮಶ್ರೀ ಗೌರವ ಲಭಿಸಿದ್ದು, ತಂಜಾವೂರ್ ಚಿತ್ರ ಕಲಾವಿದ ವಿ. ಪನ್ನೀರ್ ಸೆಲ್ವಂ ಅವರಿಗೆ ಶಿಲ್ಪ ಗುರು ಪ್ರಶಸ್ತಿ, ರಾಷ್ಟ್ರೀಯ ಪ್ರಶಸ್ತಿ ಬಂದಿದೆ. ಶಮ್ಮಿ ಬನ್ನು ಶರ್ಮಾ ಏಳನೇ ತಲೆಮಾರಿನ ಮಿನಿಯೇಚರ್ ಪೇಂಟರ್ ಹಾಗೂ ರಾಷ್ಟ್ರಪತಿ ಪ್ರಶಸ್ತಿ ವಿಜೇತರು. ಇನ್ನು ಘನ್ ಶ್ಯಾಮ್ ಸರೋದೆ ಅವರು ಪೈಥಾನಿ ಜವಳಿ ಡಿಸೈನರ್ ಆಗಿ ಹೆಸರು ಮಾಡಿದವರು ಹಾಗೂ ಕೈಮಗ್ಗದ ಪುನರುಜ್ಜೀವನಕ್ಕೆ ಬಹಳ ಶ್ರಮಿಸಿದವರು ಹಾಗೂ ಒಡಿಶಾದ ಇಕಟ್ ಜವಳಿ ಕಲಾವಿದರು ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತರಾದ ಗುಂಜನ್ ಜೈನ್ ಸಮಾರಂಭದಲ್ಲಿ ಭಾಗವಹಿಸಿದ್ದರು. ಎಲ್ಲ ಕಲಾವಿದರಿಗೆ ಹಿಂದಿನ ವರ್ಷಗಳಲ್ಲಿ ರಾಷ್ಟ್ರಪ್ರಶಸ್ತಿ ಬಂದಿವೆ.
ಬಾಲಿವುಡ್ ತಾರಾ ದಂಪತಿ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಈ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು. ರಿಲಯನ್ ಜಿಯೋ ಇನ್ಫೋಕಾಮ್ ಅಧ್ಯಕ್ಷ ಆಕಾಶ್ ಅಂಬಾನಿ ತಮ್ಮ ಪತ್ನಿ ಶ್ಲೋಕಾ ಮೆಹ್ತಾ ಜತೆಗೂಡಿ ಆಗಮಿಸಿದ್ದರು. ಖುಷಿ ಕಪೂರ್, ಜಾಹ್ನವಿ ಕಪೂರ್ ಸಜ ಸ್ವದೇಶ್ ಸಂಭ್ರಮದ ಭಾಗವಾದರು. ಕರಿಷ್ಮಾ ಕಪೂರ್, ರವಿನಾ ಟಂಡನ್, ರಿತೇಶ್ ದೇಶ್‌ಮುಖ್ ಮತ್ತು ಪತ್ನಿ ಜೆನಿಲಿಯಾ, ಮಾಧುರಿ ದೀಕ್ಷಿತ್, ಯುವರಾಜ್ ಸಿಂಗ್, ಹಜೆಲ್ ಕೀಚ್, ಆದಿತಿ ರಾವ್ ಹೈದರಿ ಇನ್ನೂ ಹಲವಾರು ತಾರೆಗಳು ಕಾಣಿಸಿಕೊಂಡರು.
ಗಮನ ಸೆಳೆದ ನೀತಾ ಅಂಬಾನಿ ದಿರಿಸು – ಒಡವೆ: ನೀತಾ ಅಂಬಾನಿ ಅವರು ಸ್ವದೇಶ್‌ನ ನವಿಲು ನೀಲಿ ಬಣ್ಣದ ಬನಾರಸಿ ಸೀರೆಯನ್ನು ಧರಿಸಿದ್ದರು. ಇದರಲ್ಲಿ ಸಂಕೀರ್ಣವಾದ ಮೀನಿನ ಚಿಹ್ನೆಗಳು ಮತ್ತು ಸಾಂಪ್ರದಾಯಿಕ ಕಧುವಾ ನೇಯ್ಗೆ ತಂತ್ರವಿತ್ತು. ಇನ್ನು ಮನೀಶ್ ಮಲ್ಹೋತ್ರಾ ಸಿದ್ಧಪಡಿಸಿದ ಬ್ಲೌಸ್‌ನಲ್ಲಿ ಪೋಲ್ಕಿ ಬಾರ್ಡರ್, ಕೈಯಿಂದ ದೇವರನ್ನು ಚಿತ್ರಿಸಿದ ಗುಂಡಿಗಳು ಮತ್ತು ಅವರ ವೈಯಕ್ತಿಕ ಸಂಗ್ರಹದಿಂದ ವಿಂಟೇಜ್ ಆಭರಣಗಳನ್ನು ಸಹ ಧರಿಸಿದ್ದರು. 100 ವರ್ಷಗಳಿಗಿಂತ ಹಳೆಯದಾದ ಕುಂದನ್ ಪೋಲ್ಕಿ ಕಿವಿಯೋಲೆಗಳು, ಸ್ವದೇಶ್‌ನ ಕೈಯಿಂದ ತಯಾರಿಸಿದ ಜಾಡೌ ಪಕ್ಷಿ ಉಂಗುರ ಮತ್ತು ಅವರ ತಾಯಿಯಿಂದ ಬಂದಂಥ ಪರಂಪರೆಯ ಹಾತ್ ಫೂಲ್ – ಅಮೂಲ್ಯವಾದ ಕುಟುಂಬ ಉಡುಗೊರೆಯಾದ ಜಡೆಬಿಲ್ಲೆಯೊಂದಿಗೆ ಕಾಣಿಸಿಕೊಂಡರು.
