Home ಸುದ್ದಿ ದೇಶ ಅಲಿನಗರ: ಮೈಥಿಲಿ ಠಾಕೂರ್ ಐತಿಹಾಸಿಕ ಮುನ್ನಡೆ

ಅಲಿನಗರ: ಮೈಥಿಲಿ ಠಾಕೂರ್ ಐತಿಹಾಸಿಕ ಮುನ್ನಡೆ

0

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಅಲಿನಗರ ಕ್ಷೇತ್ರದಲ್ಲಿ ಇತಿಹಾಸ ಮರು ಬರೆಯುತ್ತಿರುವುದು ಕಾಣಿಸುತ್ತಿದೆ. ಮೊದಲ ಬಾರಿಗೆ ರಾಜಕೀಯ ರಂಗ ಪ್ರವೇಶಿಸಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಜನಪ್ರಿಯ ಜನಪದ ಗಾಯಕಿ ಮೈಥಿಲಿ ಠಾಕೂರ್, ಅಲಿನಗರ ಕ್ಷೇತ್ರದಲ್ಲಿ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ.

ಇತ್ತೀಚಿನ ಎಣಿಕೆ ಪ್ರಕಾರ, 28 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಮೈಥಿಲಿ ಠಾಕೂರ್ ಮುನ್ನಡೆ ಕಾಯ್ದುಕೊಂಡಿದ್ದಾರೆ. ಈ ಮುನ್ನಡೆ ಮುಂದುವರಿದಲ್ಲಿ ಕಳೆದ 17 ವರ್ಷಗಳಲ್ಲಿ ಬಿಜೆಪಿ ಗೆಲುವು ಸಾಧಿಸದೇ ಇದ್ದ ಅಲಿನಗರ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕೇಸರಿ ಬಾವುಟ ಹಾರಿಸುವ ಸಾಧ್ಯತೆ ದೃಢವಾಗಿದೆ.

ಅಲಿನಗರ ಕ್ಷೇತ್ರದ ಇತಿಹಾಸ: 2008ರಲ್ಲಿ ಕ್ಷೇತ್ರ ಮರು ವಿನ್ಯಾಸದ ವೇಳೆ ಅಲಿನಗರ ಕ್ಷೇತ್ರ ರಚನೆ. 2008ರಿಂದ 2020ರವರೆಗೂ — ಬಿಜೆಪಿಗೆ ಇಲ್ಲಿ ಒಂದೇ ಸಲವೂ ಗೆಲುವು ಲಭಿಸಿಲ್ಲ. ಪ್ರತೀ ಚುನಾವಣೆಯಲ್ಲಿ ಮೈತ್ರಿಕೂಟಗಳು ಅಥವಾ ಪ್ರಾದೇಶಿಕ ಪಕ್ಷಗಳಿಗೆ ಜಯ. ಈ ಹಿನ್ನೆಲೆಯಲ್ಲೇ, ಮೈಥಿಲಿ ಠಾಕೂರ್ ಅವರ ದಿಟ್ಟ ಪೈಪೋಟಿ ಮತ್ತು ಜನಮನ ಗೆದ್ದ ಪರ್ತಿ ಅವರನ್ನು ಐತಿಹಾಸಿಕ ಗೆಲುವಿನತ್ತ ಕರೆದೊಯ್ಯುತ್ತಿದೆ.

ಮೈಥಿಲಿ ಠಾಕೂರ್ ಯಾರು?: ಬಿಹಾರ ಮತ್ತು ಉತ್ತರ ಭಾರತದ ಅತ್ಯಂತ ಜನಪ್ರಿಯ ಜನಪದ, ಭಕ್ತಿಗೀತೆ, ಭಾವಗೀತೆಗಳ ಗಾಯಕಿ. ಹಿಂದಿ ಮತ್ತು ಬೋಜ್‌ಪುರಿ ಸಂಗೀತ ಜಗತ್ತಿನಲ್ಲಿ ಅಪಾರ ಅಭಿಮಾನಿ ಬಳಗ. ಸಾಮಾಜಿಕ ಮಾಧ್ಯಮಗಳಲ್ಲಿ ಲಕ್ಷಾಂತರ ಅಭಿಮಾನಿಗಳೊಂದಿಗೆ ಜನಪ್ರಿಯ ವ್ಯಕ್ತಿತ್ವ. ಚುನಾವಣೆಗೆ ಕೇವಲ ಒಂದು ವಾರ ಮೊದಲು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆ. ತಮ್ಮ ಜನಪ್ರಿಯತೆ, ನೆಲದ ಜನರ ಸಂಪರ್ಕ ಹಾಗೂ ಯುವಶಕ್ತಿ—ಈ ಮೂರು ಅಂಶಗಳು ಅವರ ಬಲವಾಗಿವೆ.

NO COMMENTS

LEAVE A REPLY

Please enter your comment!
Please enter your name here

Exit mobile version