Home ತಾಜಾ ಸುದ್ದಿ ಹಿಂದುಳಿದ ವರ್ಗಗಳಿಗೆ ಮೋಸ: ಸಿಎಂ ವಿರುದ್ಧ ಈಶ್ವರಪ್ಪ ಕಿಡಿ

ಹಿಂದುಳಿದ ವರ್ಗಗಳಿಗೆ ಮೋಸ: ಸಿಎಂ ವಿರುದ್ಧ ಈಶ್ವರಪ್ಪ ಕಿಡಿ

0

ವಿಜಯಪುರ: ಬಿಜೆಪಿ ಸರಕಾರ ರೂಪಿಸಿದ್ದ ಪ್ರಾಜೆಕ್ಟ್‌ಗಳನ್ನು ದಲಿತರ ಚಾಂಪಿಯನ್ ಎಂದುಕೊಳ್ಳುವ ಸಿಎಂ ಸಿದ್ದರಾಮಯ್ಯ ರದ್ದು ಮಾಡಿದ್ದಾರೆ. ಈ ಯೋಜನೆಗಳಿಗೆ ನಮ್ಮ ಸರಕಾರ ಹಣ ಕೊಟ್ಟಿದ್ದನ್ನು ರದ್ದು ಮಾಡಿ ಸಿದ್ದರಾಮಯ್ಯ ಹಿಂದುಳಿದ ವರ್ಗಗಳಿಗೆ ಮಹಾಮೋಸ ಮಾಡಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಿರುಪತಿ ಪ್ರಸಾದದ ವಿಷಯದಲ್ಲಿ ಜಗನ್‌ಮೋಹನ್ ರೆಡ್ಡಿಯವರನ್ನು ಬಂಧಿಸಬೇಕು, ಹಿಂದುಗಳ ಶ್ರದ್ಧೆಗೆ ಭಂಗ ತರುವ ಕೆಲಸ ಮಾಡಿದ್ದಾರೆ. ಈ ಪ್ರಕರಣದಲ್ಲಿ ವಿದೇಶದ ಸಂಚಿದೆ. ತಕ್ಷಣವೇ ಈ ವಿಷಯವನ್ನು ಸಿಬಿಐ ತನಿಖೆಗೆ ನೀಡಬೇಕು ಎಂದರು.

Exit mobile version