ಹರಿಯಾಣ ಫಲಿತಾಂಶ: ECI ಜಾಲತಾಣಕ್ಕೆ ನಿಧಾನಗತಿಯಲ್ಲಿ ಅಪ್ ಲೋಡ್

0
16

ನವದೆಹಲಿ: ಚುನಾವಣಾ ಆಯೋಗದ ವೆಬ್ಸೈಟ್‌ನಲ್ಲಿ ಮತ ಎಣಿಕೆಯ ಡೇಟಾವನ್ನು ನಿಧಾನಗತಿಯಲ್ಲಿ ಅಪ್ಲೋಡ್ ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಕುರಿತಂತೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಹರಿಯಾಣ ಚುನಾವಣೆಯಲ್ಲಿ ನಾವು ಚುನಾವಣಾ ಆಯೋಗದ ಜಾಲತಾಣದಲ್ಲಿ ಚುನಾವಣಾ ಫಲಿತಾಂಶಗಳ ಕ್ಷಣ ಕ್ಷಣದ ಅಂಕಿ-ಅಂಶಗಳ ಅಪ್ಲೋಡ್ ಮಾಡುವ ಕಾರ್ಯದಲ್ಲಿ ನಿಧಾನಗತಿಯನ್ನು ನೋಡಿದ್ದೇವೆ. ದಾರಿ ತಪ್ಪಿಸುವ ರೀತಿ ಮಾಹಿತಿ ಅಪ್ ಲೋಡ್ ಮಾಡಲು ಬಿಜೆಪಿ ಚುನಾವಣಾ ಆಯೋಗದ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತಿದೆಯಾ ಎಂದು ಪ್ರಶ್ನಿಸಿದ್ದಾರೆ.

Previous articleಜಾತಿಗಣತಿ ರಾಜಕೀಯ ದಾಳವಾಗದಿರಲಿ
Next articleಸರ್ಕಾರಕ್ಕೆ ರಾಜ್ಯದ ಯಾವೊಂದು ಸಮಸ್ಯೆಗಳು ಕೇಳಿಸುತ್ತಿಲ್ಲ…