Home ನಮ್ಮ ಜಿಲ್ಲೆ ಬೆಳಗಾವಿ ಜನತೆಗೆ ಶ್ರೀರಾಮನ ದರ್ಶನ ಪಡೆಯಲು ವಿಶೇಷ ರೈಲು

ಬೆಳಗಾವಿ ಜನತೆಗೆ ಶ್ರೀರಾಮನ ದರ್ಶನ ಪಡೆಯಲು ವಿಶೇಷ ರೈಲು

0

ಬೆಂಗಳೂರು: ಬೆಳಗಾವಿಯಿಂದ ಅಯೋಧ್ಯೆಯ ಶ್ರೀರಾಮನ ಭಕ್ತರ ಅನುಕೂಲಕ್ಕಾಗಿ “ಆಸ್ತಾ ವಿಶೇಷ ರೈಲಿನ” ವ್ಯವಸ್ಥೆ ಕಲ್ಪಿಸಿದ್ದಾರೆ ಎಂದು ಬಿಜೆಪಿ ಸಂಸದೆ ಮಂಗಲಾ ಅಂಗಡಿ ತಿಳಿಸಿದ್ದಾರೆ.
ಈ ಕುರಿತು ಸರಣಿ ಪೋಸ್ಟ್‌ ಮಾಡಿರುವ ಅವರು ಬೆಳಗಾವಿಯಿಂದ ಅಯೋಧ್ಯೆಯ ಶ್ರೀರಾಮನ ಭಕ್ತರ ಅನುಕೂಲಕ್ಕಾಗಿ ಮನವಿ ಸಲ್ಲಿಸಿದ ಸಲುವಾಗಿ ಸನ್ಮಾನ್ಯ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ಅವರು ಅಧಿಕಾರಿಗಳಿಗೆ ಸೂಚನೆ ನೀಡಿ, “ಆಸ್ತಾ ವಿಶೇಷ ರೈಲಿನ” ವ್ಯವಸ್ಥೆ ಕಲ್ಪಿಸಿದ್ದಾರೆ. ಬೆಳಗಾವಿಯಿಂದ ಈ ರೈಲು ಮುಂದಿನ ತಿಂಗಳು ಫೆಬ್ರವರಿ 17 ರಂದು ಬೆಳಿಗ್ಗೆ 10.30 ಕ್ಕೆ ಹೊರಡಲಿದ್ದು, ಫೆಬ್ರವರಿ 19 ರಂದು ಬೆಳಗ್ಗೆ 11.50 ಕ್ಕೆ ಅಯೋಧ್ಯಾ ಧಾಮವನ್ನು ತಲುಪಲಿದೆ. ಬಳಿಕ ಇದೇ ರೈಲು ಫೆಬ್ರವರಿ 20 ರಂದು ರಾತ್ರಿ 10 ಗಂಟೆಗೆ ಹೊರಟು ಫೆಬ್ರವರಿ 22 ರಂದು ಸಂಜೆ 4.45 ಕ್ಕೆ ಬೆಳಗಾವಿಗೆ ತಲುಪಲಿದೆ. ನನ್ನ ಬೆಳಗಾವಿಯ ಜನತೆ ಶ್ರೀರಾಮನ ದರ್ಶನ ಪಡೆಯಲು ಈ ವಿಶೇಷ ರೈಲು ವ್ಯವಸ್ಥೆ ಮಾಡಿದ ನಮ್ಮ ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಬೆಳಗಾವಿಯ ನಾಗರಿಕರು ಈ ಅವಕಾಶವನ್ನು ಬಳಸಿಕೊಳ್ಳಬೇಕಾಗಿ ವಿನಂತಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

Exit mobile version