Home Advertisement
Home ತಾಜಾ ಸುದ್ದಿ ನನಗೇನೂ ಆಗುವುದಿಲ್ಲ ಗಾಬರಿ ಆಗಬೇಡಿ….

ನನಗೇನೂ ಆಗುವುದಿಲ್ಲ ಗಾಬರಿ ಆಗಬೇಡಿ….

0
97

ಬೆಳಗಾವಿ: ನನಗೇನೂ ಆಗುವುದಿಲ್ಲ. ಯಾರೂ ಗಾಬರಿ ಆಗಬೇಡಿ. ನನ್ನ ಭವಿಷ್ಯದ ಬಗ್ಗೆ ಯಾರೂ ಚಿಂತೆ ಮಾಡಬೇಡಿ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ‌ ವಿಜಯೇಂದ್ರ ಅವರ ಗುಂಪಿನ ನಾಯಕರಿಂದ ಕೇಳಿ ಬರುತ್ತಿರುವ ಒತ್ತಾಯಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟಾಂಗ್ ಕೊಟ್ಟ ಪರಿಯಿದು‌.
ನಗರದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದೊಂದು ದಿನ ನಾನು ಕರ್ನಾಟಕದ ನಂಬರ್ ಒನ್ ಆಗುತ್ತೆನೆ ಮುಂದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದೀಪ ಆರಿರುವವರ ಬಗ್ಗೆ ನಾನು ಏಕೆ ಮಾತನಾಡಲಿ ಎಂದು ಯಡಿಯೂರಪ್ಪ ಆಪ್ತರಿಗೆ ಯತ್ನಾಳ್ ಟಾಂಗ್ ಕೊಟ್ಟರು.
ನಾವೆಲ್ಲ ಜವಾರಿ ಎಂಬ ರೇಣುಕಾಚಾರ್ಯ ಹೇಳಿಕೆಗೆ ತಿರುಗೇಟು ನೀಡಿದ ಅವರು,
ದೇಶದಲ್ಲಿ ‌ಹುಟ್ಟಿದವರು ಎಲ್ಲರೂ ಜವಾರಿನೇ. ಆದರೆ, ಹೊರಗಿನಿಂದ ಬಂದವರು ಮಾತ್ರ ಹೈಬ್ರಿಡ್ ಎಂದರು.