ಡಾ. ಕರಜಗಿಯವರ ಸಾಕ್ಷಿ ಗ್ರಂಥ ಲೋಕಾರ್ಪಣೆ ಇಂದು

0
8

ಬೆಂಗಳೂರು: ಶಿಕ್ಷಣ ತಜ್ಞರೂ ಆಗಿರುವ ಲೋಕ ಶಿಕ್ಷಣ ಟ್ರಸ್ಟ್ ಧರ್ಮದರ್ಶಿ ಡಾ. ಗುರುರಾಜ ಕರಜಗಿಯವರು ರಚಿಸಿರುವ `ಸಾಕ್ಷಿ’ ಗ್ರಂಥ ಭಾನುವಾರ (ಆ. ೧೮) ಲೋಕಾರ್ಪಣೆಗೊಳ್ಳಲಿದೆ.
ಭಾರತೀಯ ವಿದ್ಯಾಭವನದ ಖಿಂಚಾ ಸಭಾಂಗಣದಲ್ಲಿ ಬೆಳಗ್ಗೆ ೧೦-೩೦ಕ್ಕೆ ಏರ್ಪಡಿಸಿರುವ ಸಮಾರಂಭದಲ್ಲಿ ವಿದ್ವಾಂಸ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಅವರು ಗ್ರಂಥವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತರು, ಪಬ್ಲಿಕ್ ಟಿವಿ ಮುಖ್ಯಸ್ಥರಾದ ಎಚ್.ಆರ್. ರಂಗನಾಥ್ ಭಾಗವಹಿಸಲಿದ್ದಾರೆ. ಗ್ರಂಥಕರ್ತೃ ಗುರುರಾಜ ಕರಜಗಿ, ಲೋಕ ಶಿಕ್ಷಣ ಟ್ರಸ್ಟ್ ಸದಸ್ಯರಾದ ಡಿ.ಆರ್. ಪಾಟೀಲ್ ಅವರೂ ಉಪಸ್ಥಿತರಿರುತ್ತಾರೆ. ಲೋಕ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಯು.ಬಿ. ವೆಂಕಟೇಶ್ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್.ಎನ್. ಸುರೇಶ್ ಅವರಲ್ಲದೆ, ಇನ್ನಿತರ ಗಣ್ಯರೂ ಉಪಸ್ಥಿತರಿರುತ್ತಾರೆ.

Previous articleರಾಜ್ಯಪಾಲರ ವಿರುದ್ಧ ಕೈ ಕಾರ್ಯಕರ್ತರ ಪ್ರತಿಭಟನೆ
Next articleನೀವು ಕರೆ ಮಾಡಿರುವ ಚಂದಾದಾರರೂ….