ಕೆಎಂಎಫ್‌ಗೆ ಕಲಬೆರಕೆ ಹಾಲು ಮಾರಾಟ

0
105

ಔರಾದ (ಬೀದರ್): ಹಾಲಿನಲ್ಲಿ ಬೇರೊಂದು ಹಾಲಿನ ಪೌಡರ್ ಬೆರೆಸಿ ಕೆಎಂಎಫ್ ಗೆ ಮಾರಾಟ ಮಾಡುತಿದ್ದ ವ್ಯಕ್ತಿ ರೆಡ್ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ.
ಔರಾದ್ ತಾಲ್ಲೂಕಿನ ಖಂಡಿಕೇರಿ ಗ್ರಾಮದ ವ್ಯಕ್ತಿಯೊಬ್ಬ ಹಸು ಎಮ್ಮೆಗಳನ್ನು ಸಾಕಿಕೊಂಡಿದ್ದ. ಅವುಗಳ ಹಾಲಿಗೆ ಬೇರೊಂದು ಹಾಲಿನ ಪೌಡರ್ ಬೆರೆಸಿ ಕೆಎಮ್ಎಫ್ ಗೆ ದಿನಾಲು ಮಾರಾಟ ಮಾಡುತಿದ್ದ. ಇವನ ಹಾಲಿನ ಕಲಬೆರಿಕೆಗೆ ಬಗ್ಗೆ ಅನುಮಾನಗೊಂಡು ಕೆಎಂಎಫ್ ಅಧಿಕಾರಿಗಳು ಔರಾದ್ ಪೊಲೀಸ್ ಅಧಿಕಾರಿಗಳ ಜೊತೆಗೂಡಿ ದಾಳಿ ನಡೆಸಿದರು. ಆಗ ಹಾಲಿಗೆ ಕಲಬೆರಿಕೆ ಮಾಡುತಿದ್ದ ಕಳಪೆ ಹಾಲಿನ ಪೌಡರಿನ 5 ಬ್ಯಾಗ್ ದೊರಕಿವೆ. ಈ ಕುರಿತು ಅಧಿಕಾರಿಗಳು ಮುಂದಿನ ತನಿಖೆ ಕ್ರಮ ಕೈಗೊಂಡಿದ್ದಾರೆ.

Previous articleಶೂನ್ಯ ಸಂಪಾದನೆಯ ಮೂಲಕ ಹ್ಯಾಟ್ರಿಕ್ ಸಾಧನೆ
Next articleತ್ರಿವೇಣಿ ಸಂಗಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮುರಿಂದ ಪವಿತ್ರ ಸ್ನಾನ