ಸತ್ಯಾಂಶ ಏನು ಎಂಬುದನ್ನು ಪೊಲೀಸ್‌ರೇ ಸ್ಪಷ್ಟನೆ ಕೊಡಬೇಕು…

0
35

ಹುಬ್ಬಳ್ಳಿ: ಶಿಗ್ಗಾವಿ ಕ್ಷೇತ್ರದಲ್ಲಿ ದೊಡ್ಡಮಟ್ಟದ ಗೆಲವು ಸಾಧಿಸುತ್ತೇವೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಮಂಗಳವಾರ ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೇ ವ್ಯಕ್ತವಾಗಿದೆ. ದೊಡ್ಡ ಅಂತರದ ಗೆಲವು ಸಾಧಿಸಲಿದ್ದಾರೆ ಎಂದರು. ಕಾಂಗ್ರೆಸ್ ಅಭ್ಯರ್ಥಿ ಕುರಿತು ಎಸ್ ಪಿ ಅವರು ನೀಡಿರುವ ಹೇಳಿಕೆ ಅವರೇ ಹೇಳಿ ಅವರೇ ಹಿಂದಕ್ಕೆ ಹೋಗಿದ್ದಾರೆ. ಸತ್ಯಾಂಶ ಏನು ಎಂಬುದನ್ನು ಪೊಲೀಸ್ ವರಿಷ್ಠಾಧಿಕಾರಿಗಳೇ ಸ್ಪಷ್ಟನೆ ಕೊಡಬೇಕು. ಈ ಕುರಿತು ಚುನಾವಣಾ ಆಯೋಗದ ಗಮನಕ್ಕೆ ತರಲಾಗುವುದು ಎಂದರು. ಕಾಂಗ್ರೆಸ್ ಅಭ್ಯರ್ಥಿ ಕುರಿತು ನಾವು ಹೇಳಿದ್ದಿಲ್ಲ. ಆಜ್ಜಂಫೀರ್ ಖಾದ್ರಿ ಹಾಗೂ ಪೊಲೀಸ್ ಅಧಿಕಾರಿ ಹೇಳಿದ್ದಾರೆ ಎಂದರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿರುವ ವಿಚಾರದಲ್ಲಿ ಜೋಶಿ ಅವರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಇದರಲ್ಲಿ ಯಾವುದೇ ದುರುದ್ದೇಶ ಇಲ್ಲ ಎಂದರು.

Previous articleನಿಮ್ಮ ದುರಾಡಳಿತ ಜನತೆಗೆ ತಿಳಿಸಲು ನೀವೇ ಅವಕಾಶ ಮಾಡಿಕೊಟ್ಟಿದ್ದಕ್ಕೆ…….
Next articleಎಚ್‌ಎಂಟಿ ಭೂಮಿ ಡಿನೋಟಿಫಿಕೇಷನ್‌: ಅಧಿಕಾರಿಗಳಿಗೆ ನೋಟಿಸ್‌