Home ನಮ್ಮ ಜಿಲ್ಲೆ ಉತ್ತರ ಕನ್ನಡ ದಾಂಡೇಲಿ ನಗರಸಭೆ ಪೌರಾಯುಕ್ತರಿಂದ ಯುಟ್ಯೂಬರ್ ಅತಿಕ್ರಮಣ ತೆರವು ಮಹಿಳಾ ಹೋರಾಟಗಾರರಿಗೆ ಜಾಗೆ ನೀಡುವ ಭರವಸೆ.

ದಾಂಡೇಲಿ ನಗರಸಭೆ ಪೌರಾಯುಕ್ತರಿಂದ ಯುಟ್ಯೂಬರ್ ಅತಿಕ್ರಮಣ ತೆರವು ಮಹಿಳಾ ಹೋರಾಟಗಾರರಿಗೆ ಜಾಗೆ ನೀಡುವ ಭರವಸೆ.

0

ದಾಂಡೇಲಿ (ಉತ್ತರ ಕನ್ನಡ) ಡಿ.ಎಫ್.ಎ. ಟೌನ್ ಶಿಪ್ ನಲ್ಲಿ ಯುಟ್ಯೂಬರ್ ಸಂದೇಶ ಜೈನ್ ಅವರ ಪತ್ನಿ ಪದ್ಮಶ್ರೀ ಜಿನರಾಜ ಹೆಗ್ಡೆ ಹೆಸರಿನಲ್ಲಿ ನಗರಸಭೆ ಲೆಟರ್ ಹೆಡ್ ನಲ್ಲಿ ನಿವೇಶನ ಹಂಚಿಕೆ ಪತ್ರ ಮಾಡಿಕೊಂಡು ನಗರಸಭೆಯಲ್ಲಿ ಯಾವುದೇ ಅಧಿಕೃತ ದಾಖಲೆಗಳು, ಸ್ವಾಧೀನ ಪತ್ರ ಇಲ್ಲದೇ ಬೆಲೆ ಬಾಳುವ ನಿವೇಶನವನ್ನು ಬೇಲಿ ಹಾಕಿ ಅತಿಕ್ರಮಿಸಿದ್ದನ್ನು ನಗರಸಭೆ ಪೌರಾಯುಕ್ತರು ತೆರವುಗೊಳಿಸಿದ ಘಟನೆ ಇಂದು ಗುರುವಾರ ಜರುಗಿದೆ.

ನಮಗೆ ಮನೆ ಕಟ್ಟಲು ಜಾಗೆ ಕೊಡಿ ಎಂದು ಸ್ಥಳೀಯ ಮಹಿಳೆಯರು ಮೂರನೇ ದಿನವಾದ ಇಂದು ಬೆಳಿಗ್ಗೆ ಹೋರಾಟವನ್ನು ತೀವ್ರಗೊಳಿಸಿ ಯುಟ್ಯೂಬರ್ ವಿರುದ್ಧ ಘೋಷಣೆ ಕೂಗತೊಡಗಿದರು. ಸ್ಥಳೀಯ ಹಲವಾರು ಸಂಘಟನೆಗಳ ಮುಖಂಡರುಗಳು ಹೋರಾಟ ನಿರತ ಮಹಿಳೆಯರ ಬೆಂಬಲಕ್ಕೆ ನಿಂತು ಗಟ್ಟಿ ಧ್ವನಿಯಿಂದ ಮಾತನಾಡಿ ನಗರಸಭಾ ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಪರಿಹರಿಸಬೇಕೆಂದು ಒತ್ತಾಯಿಸಿದರು.

ಮಧ್ಯಾಹ್ನದ ವೇಳೆಗೆ ಪ್ರತಿಭಟನಾನಿರತ ಮಹಿಳೆಯರ ಆಕ್ರೋಶ ತೀವ್ರಗೊಳ್ಳುತ್ತಿದ್ದಂತೆ ಪೋಲಿಸರು ಪಿ.ಎಸ್.ಐ ಅಮೀನ್ ಅತ್ತಾರ ನೇತ್ರತ್ವದಲ್ಲಿ ಸ್ಥಳಕ್ಕಾಗಮಿಸಿ ಹೋರಾಟಗಾರ ಮಹಿಳೆಯರ ಮನವೊಲಿಸಿ ಶಾಂತತೆ ಕಾಪಾಡಿದರು. ಅಷ್ಟರಲ್ಲೆ ನಗರಸಭಾ ಪೌರಾಯುಕ್ತರು, ಮ್ಯಾನೇಜರ್, ಸಿಬ್ಬಂಧಿಗಳೊಂದಿಗೆ ಆಗಮಿಸಿ ಹೋರಾಟ ನಿರತ ಮಹಿಳೆಯರ ಅಹವಾಲುಗಳನ್ನು ಕೇಳಿ ತಿಳಿದುಕೊಂಡು ನಿವೇಶನ ರಹಿತರಿಗೆ ಪರಿಶೀಲನೆಯಿಂದ ಮನೆ ಮತ್ತು ನಿವೇಶನ ನೀಡಲು ನಗರದಲ್ಲಿ ಈಗಾಗಲೇ 10 ಎಕರೆಯಷ್ಟು ಜಾಗೆಯನ್ನು ಗುರುತಿಸಲಾಗಿದೆ.

ನಿವೇಶನ ರಹಿತರಾದ ನೀವೆಲ್ಲರೂ ಅರ್ಜಿಗಳನ್ನು ನೀಡಿ. ಶಾಸಕ ಆರ್.ವಿ.ದೇಶಪಾಂಡೆ ಅವರು ನಿವೇಶನ ರಹಿತರ ಅರ್ಜಿಗಳನ್ನು ಸ್ವೀಕರಿಸಿ. ಅವರೆಲ್ಲರಿಗೆ ನಿವೇಶನ ನೀಡುವ ಭರವಸೆಯನ್ನು ನೀಡಿರುವುದಾಗಿ ತಿಳಿಸಲು ಹೇಳಿದ್ದಾರೆ. ನಿವೇಶನ, ಮನೆ ಹಂಚಿಕೆಯ ಕುರಿತು ವಿವರಿಸಿದರು. ಪ್ರತಿಭಟನೆ ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿದರು. ಪೌರಾಯುಕ್ತರ ಮನವಿಯನ್ನು ಒಪ್ಪದ ಮಹಿಳೆಯರು ಅತಿಕ್ರಮಣ ಮಾಡಿ ಬೇಲಿ ಹಾಕಿದವರ ಹೆಸರು ಬಹಿರಂಗ ಪಡಿಸುವಂತೆ ಆಗ್ರಹಿಸಿ ಅದನ್ನು ಕಿತ್ತೆಸೆಯುವಂತೆ ಒತ್ತಾಯಿಸಿದರು.

ಹೆಸರೇಳದೆ ಹೋದರೆ ನಾವು ಅದರ ಪಕ್ಕದಲ್ಲಿ ಜಾಗೆ ಅತಿಕ್ರಮಿಸುತ್ತೆವೆ. 2006 ರಿಂದ ಆಶ್ರಯಕ್ಕಾಗಿ ಅರ್ಜಿ ನೀಡುತ್ತಾ ಬಂದಿರುವ ನಮಗೆ ಜಾಗೆ ನೀಡದೆ ಬೇರೆ ಊರಿನಿಂದ ಬಂದು 2023ರಲ್ಲಿ ಅರ್ಜಿ ನೀಡಿದವನಿಗೆ ಜಾಗೆ ನೀಡುತ್ತೀರಾ ಎಂದು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಯುಟ್ಯೂಬರ್, ಪತ್ರಕರ್ತ ಸಂದೇಶ ಜೈನ್ ಅವರ ಪತ್ನಿ ಪದ್ಮಶ್ರೀ ಹೆಸರು ಹೇಳಿ ಅವರಿಗೆ ನಗರಸಭೆ ಲೆಟರ್ ಹೆಡ್ ನಲ್ಲಿ ನಿವೇಶನ ಹಂಚಿಕೆಪತ್ರ ನೀಡಿದ್ದು, ಯಾವುದೇ ಅಧಿಕ್ರತ ದಾಖಲೆಗಳಿಲ್ಲ ಎಂಬುದು ಬಹಿರಂಗ ಪಡಿಸಲಾಯಿತು.

ಈಗಾಗಲೇ ಯುಟ್ಯೂಬರ್ ಗಾಂಧಿನಗರದಲ್ಲಿ ಆಶ್ರಯ ಸೈಟ್ ಹೊಂದಿರುವ ಕುರಿತು ಮಾಹಿತಿ ಹೊರಬಿದ್ದಿದೆ. ಈ ಸಂದರ್ಭದಲ್ಲಿ ದಾಂಡೇಲಿ ಸಮಗ್ರ ಅಭಿವೃದ್ದಿ ಹೋರಾಟ ಸಮಿತಿ ಅಧ್ಯಕ್ಷ ಅಕ್ರಂ ಖಾನ್, ಜೈಭೀಮ್ ಜಿಲ್ಲಾಧ್ಯಕ್ಷ ಸಂಜು ಕಾಂಬಳೆ, ಕರವೇಯ ಪ್ರವೀಣ ಕೊಠಾರಿ, ಆಶ್ರಯ ಸಮಿತಿ ಸದಸ್ಯ ಪ್ರಭುದಾಸ್ ಎನಿ ಬೇರಾ, ಉಮಾಕಾಂಬಳೆ, ರೇಣುಕಾ ಮಾದಾರ, ನಾಗಮ್ಮ ಹರಿಜನ ಉಪಸ್ಥಿತರಿದ್ದು ಮಾತನಾಡಿದರು.

NO COMMENTS

LEAVE A REPLY

Please enter your comment!
Please enter your name here

Exit mobile version