Home ನಮ್ಮ ಜಿಲ್ಲೆ ಬೆಂಗಳೂರು ಕ್ರಿಸ್ಮಸ್‌ ಟ್ರೀ ಲೈಟಿಂಗ್‌ ಮಾಡುವ ಮೂಲಕ ಹಬ್ಬದ ಆರಂಭಕ್ಕೆ ಚಾಲನೆ

ಕ್ರಿಸ್ಮಸ್‌ ಟ್ರೀ ಲೈಟಿಂಗ್‌ ಮಾಡುವ ಮೂಲಕ ಹಬ್ಬದ ಆರಂಭಕ್ಕೆ ಚಾಲನೆ

0

ಬೆಂಗಳೂರು: ಡಿಸೆಂಬರ್‌ ಬಂತೆಂದರೆ ಕ್ರಿಸ್‌ಮಸ್‌ ಹಬ್ಬಕ್ಕೆ ಎಲ್ಲೆಡೆ ತಯಾರಿ ಆರಂಭ. ಈ ನಿಟ್ಟಿನಲ್ಲಿ ನಗರದ ಗೋಕುಲಂ ಹೋಟೆಲ್‌ನಲ್ಲಿ ಕ್ರಿಸ್‌ಮಸ್‌ ಟ್ರೀ ಗೆ ಲೈಟಿಂಗ್‌ ಮಾಡುವ ಮೂಲಕ ಹಬ್ಬದ ಆರಂಭವನ್ನು ಸೂಚಿಸಲಾಯಿತು. ಈ ವೇಳೆ ಇದೊಂದು ಒಗ್ಗಟ್ಟು ಮತ್ತು ಸಂಭ್ರಮದ ಹಬ್ಬ ಎಂದು ಗೋಕುಲಂ ಹೋಟೆಲ್‌ನ ಏರಿಯಾ ಜನರಲ್ ಮ್ಯಾನೇಜರ್ ಶಫೀ ಅಹ್ಮದ್ ಹೇಳಿದರು.

ಕಾರ್ಯಕ್ರಮದ ವಿಶೇಷ ಅತಿಥಿಗಳಾದ ಮಾರ್ಕೊ ಮತ್ತು ಸಿಂಧೂರಿ ಅವರು ಕ್ರಿಸ್ಮಸ್ ವೃಕ್ಷಕ್ಕೆ ದೀಪಾಲಂಕಾರ ಮಾಡಿದ್ದು, ಈ ಆಚರಣೆಯ ಪ್ರಮುಖ ಆಕರ್ಷಣೆಯಾಗಿತ್ತು.

ಹೋಟೆಲ್‌ನ ಸೇಲ್ಸ್ ಮತ್ತು ಮಾರ್ಕೆಟಿಂಗ್ ನಿರ್ದೇಶಕರಾದ ಸಚಿನ್ ಮುದ್ದಪ್ಪ ಮಾತನಾಡಿ, ಡಿಸೆಂಬರ್‌ ತಿಂಗಳಲ್ಲಿ ರಜಾದಿನಗಳು ಹೆಚ್ಚಿರುವ ಕಾರಣ ಪ್ರವಾಸ ಕೈಗೊಳ್ಳುವವರು ಹೆಚ್ಚಿರುತ್ತಾರೆ ಮತ್ತು ನಮ್ಮ ಹೋಟೆಲ್‌ಗೆ ಆಗಮಿಸುವವರು ಕೂಡ ಜಾಸ್ತಿ. ಹೀಗಾಗಿ ಹಬ್ಬದ ವಾತಾವರಣವನ್ನು ಸೃಷ್ಟಿಸುವಲ್ಲಿ ನಾವು ಹೆಚ್ಚು ಕಾರ್ಯನಿರತರಾಗಿರುತ್ತೇವೆ ಎಂದರು.

ಕಲ್ಲೂರ್ ಸಿನಿಮಾಸ್, ಪೆನ್ ಎನ್ ಪೇಪರ್ ಸ್ಟುಡಿಯೋಸ್ ಹಾಗೂ ಸ್ಕ್ರೀನ್ ಫಸ್ಟ್ ಪ್ರೊಡಕ್ಷನ್ ಲಾಂಛನದಲ್ಲಿ ಪ್ರಶಾಂತ್ ಕಲ್ಲೂರ್ ಅವರು ನಿರ್ಮಿಸಿರುವ, ಪ್ರತಾಪ್ ಗಂಧರ್ವ ನಿರ್ದೇಶನದ, ಹೆಸರಾಂತ ನಿರ್ದೇಶಕ ಹರಿ ಸಂತೋಷ್ ಕಥೆ ಬರೆದು ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.

ಹಾಗೇ ಯುವ ನಟ ರಕ್ಷಿತ್ ನಾಗ್ ನಾಯಕನಾಗಿ ಹಾಗೂ ಸಂಜನ್ ದಾಸ್, ಅನುಷಾ ನಾಯಕಿಯರಾಗಿ ನಟಿಸಿರುವ “congratulations ಬ್ರದರ್” ಚಿತ್ರ ನವೆಂಬರ್ 21ರಂದು ಬಿಡುಗಡೆಯಾಗಿತ್ತು. ಎರಡನೇ ವಾರದಲ್ಲೂ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಖುಷಿಯನ್ನು ಹಂಚಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಕ್ರಮದಲ್ಲಿ ಚಿತ್ರತಂಡವು ಪಾಲ್ಗೊಂಡಿದ್ದು, ಸಂಭ್ರಮಕ್ಕೆ ಹೆಚ್ಚು ಮೆರುಗು ತಂದಿತು.

ಈ ವೇಳೆ ನಟ ರಕ್ಷಿತ್‌ ನಾಗ್‌ ಮಾತನಾಡಿ, ಇದೊಂದು ಸುವರ್ಣ ಅವಕಾಶ, ಇಲ್ಲಿ ನಮ್ಮ ತಂಡ ಪಾಲ್ಗೊಂಡಿರುವುದು ಖುಷಿ ತಂದಿದೆ. ನಂತರ ನಟಿ ಅನುಷ ಮಾತನಾಡಿ, ಹಬ್ಬ ಎಲ್ಲರ ಬದುಕಿಗೂ ಹೊಸ ಚೈತನ್ಯ ತುಂಬುತ್ತದೆ, ಅದೇ ರೀತಿ ಸಿನಿಮಾ ರಂಗದಲ್ಲಿ ನಮ್ಮ ‘Congratulations ಬ್ರದರ್‌ʼ ಇನ್ನಷ್ಟು ಯಶಸ್ವಿ ಕಾಣಲು ಹಾರೈಸಿ ಎಂದು ನುಡಿದರು. ಈ ವೇಳೆ ಚಿತ್ರದ ನಿರ್ಮಾಪಕ ಪ್ರಶಾಂತ್ ಕಲ್ಲೂರ್ ಉಪಸ್ಥಿತರಿದ್ದರು.

ಹೋಟೆಲ್‌ ಆವರಣವು ಅಲಂಕಾರ, ಸಂಗೀತ, ವಿವಿಧ ಖಾದ್ಯ, ಅತಿಥಿಗಳು ಮತ್ತು ಸಿಬ್ಬಂದಿಗಳೊಂದಿಗೆ ಸಂಭ್ರಮದಿಂದ ಕೂಡಿದ್ದು, ಕಣ್ಣಿಗೆ ಹಬ್ಬದಂತಿತ್ತು.

NO COMMENTS

LEAVE A REPLY

Please enter your comment!
Please enter your name here

Exit mobile version