ಬೆಂಗಳೂರು: ದಂಪತಿ ನಡುವೆ ಫಸ್ಟ್ ನೈಟ್‌ನಲ್ಲಿ ಶುರುವಾದ ಫೈಟ್ ಮದುವೆಯಾಗಿ ಐದೇ ತಿಂಗಳುಗಳಲ್ಲಿ ಠಾಣಾ ಮೆಟ್ಟಿಲೇರಿದೆ.
ಕಳೆದ ಜೂನ್ 9ರಂದು ಹೆಸರಘಟ್ಟ ಹೋಬಳಿ ಗುಡ್ಡದಹಳ್ಳಿ 26 ವರ್ಷದ ಯುವತಿಯನ್ನು ನೆಲಮಂಗಲದ ಮೂಲದ 30 ವರ್ಷದ ಚಾರ್ಟೆಡ್ ಅಕೌಂಟೆಂಟ್‌ಗೆ ಕೊಟ್ಟು ಮದುವೆ ಮಾಡಿಕೊಡಲಾಗಿತ್ತು.
ಈ ಮದುವೆಯು ಇಬ್ಬರ ಸಮ್ಮತಿ ಮೇರೆಗೆ ಕುಟುಂಬಸ್ಥರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮಾಡಲಾಗಿತ್ತು. ಆದರೆ ಫಸ್ಟ್‌ನೈಟ್ ದಿನ ದಂಪತಿ ನಡುವೆ ಜಗಳ ಶುರುವಾಗಿದೆ. ಏಕೆಂದರೆ ಫಸ್ಟ್ ನೈಟ್ ದಿನ ಹುಡುಗ ಯಾವುದಕ್ಕೂ ಆಸಕ್ತಿ ತೋರುತ್ತಿರಲಿಲ್ಲ. ಹೆಂಡತಿ ಹತ್ತಿರ ಹೋದ್ರು, ದೂರು ಹೋಗುತ್ತಿದ್ದ ಎಂದು ತಿಳಿದುಬಂದಿದೆ.
ಈ ಬಗ್ಗೆ ಮನೆಯಲ್ಲೂ ನಿತ್ಯ ಜಗಳ ನಡೆಯುತ್ತಿತ್ತು. ಕೊನೆಗೆ ಎರಡು ಕಡೆಯ ಕುಟುಂಬದವರು ಈ ಬಗ್ಗೆ ಚರ್ಚೆ ನಡೆಸಿ, ಇಬ್ಬರನ್ನು ವೈದ್ಯಕೀಯ ಪರೀಕ್ಷೆ ಒಳಪಡಿಸಲು ನಿರ್ಧರಿಸಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದ್ದಾರೆ.
ಹುಡುಗಿಯ ವೈದ್ಯಕೀಯ ಪರೀಕ್ಷೆಯಲ್ಲಿ ಎಲ್ಲವೂ ಸಾಮಾನ್ಯವಾಗಿತ್ತು. ಆದರೆ ಹುಡುಗ ಪುರುಷತ್ವ ಪರೀಕ್ಷೆ ಮಾಡಿಸದೇ, ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ
ಎನ್ನಲಾಗಿದೆ. ಆಸ್ಪತ್ರೆಯಿಂದ ಪರಾರಿಯಾದ ಹುಡುಗ ಮನೆಗೆ ಬಂದು, ತಾಯಿ ಜೊತೆ ಸೇರಿಕೊಂಡು ಪತ್ನಿ ಮೇಲೆ ಹಲ್ಲೆ ಮಾಡಿದ್ದಾರೆ. ಮಾನಸಿಕ ಮತ್ತು ದೈಹಿಕ ಹಿಂಸೆ ಜೊತೆಗೆ ವರದಕ್ಷಿಣೆ ಕಿರುಕುಳ ನೀಡಿದ್ದಾರೆಂದು ಯುವತಿಯ ಮನೆಯವರು ಆರೋಪಿಸಿದ್ದಾರೆ.
ಇದರಿಂದ ಮನನೊಂದು ಹುಡುಗಿ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಇದೀಗ ಪೊಲೀಸರು ಪತಿ, ಅತ್ತೆ ಹಾಗೂ ಮಾವನ ವಿರುದ್ಧ ಸೆಕ್ಷನ್ 85 (ಬಿಎನ್‌ಎಸ್) ಮತ್ತು ವರದಕ್ಷಿಣೆ ಕಿರುಕುಳ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇತ್ತ ನೆಲಮಂಗಲ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಪತಿ ಹಾಗೂ ಅತ್ತೆ ಪರಾರಿಯಾಗಿದ್ದಾರೆ.




















