ಹಾವೇರಿ Archives - Samyukta Karnataka

ಸರ್ಕಾರ ಎಸ್. ಜಾನಕಿ ನೆನಪಿನಲ್ಲಿ ಸ್ಮಾರಕ ನಿರ್ಮಾಣ ಮಾಡಲಿ
​ಹಾವೇರಿ: ಖ್ಯಾತ ಬಹುಭಾಷಾ ಗಾಯಕಿ ಎಸ್. ಜಾನಕಿ ಅವರು ದೈಹಿಕವಾಗಿ ಅವರು ಇಂದು ನಮ್ಮನ್ನು ಅಗಲಿದ್ದರೂ, ಅವರು ಹಾಡಿರುವ ಹಾಡುಗಳು ಮತ್ತು ಸಂಗೀತದ ಮೂಲಕ ಕರ್ನಾಟಕದ ಜನತೆಯ ಹೃದಯದಲ್ಲಿ ಅವರು ಚಿರಸ್ಥಾಯಿಯಾಗಿ ಉಳಿಯಲಿದ್ದಾರೆ. ರಾಜ್ಯ ಸರ್ಕಾರ ಮೈಸೂರಿನಲ್ಲಿ ಎಸ್.‌ ಜಾನಕಿ ಅವರ ನೆನಪಿನಲ್ಲಿ ಒಂದು ಸುಸಜ್ಜಿತ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಸಲಹೆ ನೀಡಿದ್ದಾರೆ.

ಹಾವೇರಿಯಲ್ಲಿ ​ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್. ಜಾನಕಿ ಅವರು ಸಂಗೀತ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಸತತವಾಗಿ ಐದು ದಶಕಗಳಿಗೂ ಹೆಚ್ಚು ಕಾಲ ಅವರು ಸಂಗೀತ ಸೇವೆ ಮಾಡಿದ್ದಾರೆ. ಕನ್ನಡ, ತಮಿಳು, ತೆಲುಗು ಸೇರಿದಂತೆ ಬರೋಬ್ಬರಿ 17 ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿರುವ ಅವರು, ಪ್ರತಿಯೊಂದು ಹಾಡಿನಲ್ಲೂ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಅವರು ಹಾಡಿದ ಎಲ್ಲಾ ಹಾಡುಗಳು ಜನಪ್ರಿಯವಾಗಿವೆ” ಎಂದು ಅವರ ಸಾಧನೆಯನ್ನು ಸ್ಮರಿಸಿದರು.

​ಧ್ವನಿಯ ಏರಿಳಿತ ಅವರ ವಿಶಿಷ್ಟ ಶಕ್ತಿ: “ಎಸ್. ಜಾನಕಿ ಅವರ ಧ್ವನಿಯ ಬದಲಾವಣೆ ಅಥವಾ ಮಾಡ್ಯುಲೇಶನ್ ಅತ್ಯಂತ ವಿಶಿಷ್ಟವಾಗಿತ್ತು. ಸಣ್ಣ ಮಗುವಿನ ಧ್ವನಿಯಿಂದ ಹಿಡಿದು ವಯೋವೃದ್ಧರ ಧ್ವನಿಯವರೆಗೂ ಎಲ್ಲ ತರಹದ ಹಾಡುಗಳನ್ನು ಹಾಡುವ ಅದ್ಭುತ ಶಕ್ತಿ ಅವರಿಗೆ ಒಲಿದಿತ್ತು. ಅವರು ಸಾಕ್ಷಾತ್ ಸರಸ್ವತಿಯ ಪ್ರತಿರೂಪದಂತಿದ್ದರು. ದೈಹಿಕವಾಗಿ ಅವರು ಇಂದು ನಮ್ಮನ್ನು ಅಗಲಿದ್ದರೂ, ಅವರು ಹಾಡಿರುವ ಹಾಡುಗಳು ಮತ್ತು ಸಂಗೀತದ ಮೂಲಕ ಕರ್ನಾಟಕದ ಜನತೆಯ ಹೃದಯದಲ್ಲಿ ಅವರು ಚಿರಸ್ಥಾಯಿಯಾಗಿ ಉಳಿಯಲಿದ್ದಾರೆ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ” ಎಂದು ಪ್ರಾರ್ಥಿಸಿದರು.

​ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ: ಎಸ್. ಜಾನಕಿ ಅವರಿಗೆ ಮೈಸೂರಿನ ಬಗ್ಗೆ ಅಪಾರವಾದ ಒಲವಿತ್ತು. ತಮ್ಮ ಕೊನೆಯ ದಿನಗಳನ್ನು ಮೈಸೂರಿನಲ್ಲೇ ಕಳೆಯಬೇಕೆಂಬ ಇಚ್ಛೆ ಹೊಂದಿದ್ದ ಅವರು, ತಮ್ಮ ಅಂತಿಮ ಸಂಸ್ಕಾರವೂ ಮೈಸೂರಿನಲ್ಲೇ ನಡೆಯಬೇಕೆಂದು ಬಯಸಿದ್ದರು. ಇದು ಅವರಿಗೆ ಕನ್ನಡಿಗರು ಮತ್ತು ಕರ್ನಾಟಕದ ಮೇಲಿದ್ದ ಪ್ರೀತಿಯನ್ನು ತೋರಿಸುತ್ತದೆ ಎಂದು ಬೊಮ್ಮಾಯಿ ತಿಳಿಸಿದರು.

​ಅವರ ನೆನಪನ್ನು ಜೀವಂತವಾಗಿರಿಸಲು ರಾಜ್ಯ ಸರ್ಕಾರ ಏನು ಮಾಡಬೇಕು ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, “ಮೈಸೂರಿನಲ್ಲಿ ಎಸ್.‌ ಜಾನಕಿ ಅವರ ನೆನಪಿನಲ್ಲಿ ಒಂದು ಸುಸಜ್ಜಿತ ಸ್ಮಾರಕ ನಿರ್ಮಾಣ ಮಾಡಬೇಕು. ಅವರು ಹಾಡಿರುವ ವಿವಿಧ ಪ್ರಕಾರದ ಹಾಡುಗಳ ಸಂಗ್ರಹ, ಅವರು ಹಾಡಿದ ರೀತಿಗಳ ಬಗ್ಗೆ ಸಂಶೋಧನೆ ನಡೆಸಲು ಮತ್ತು ಸಂಗೀತ ಕಲಿಯುವ ಆಸಕ್ತಿಯುಳ್ಳ ಯುವ ಪ್ರತಿಭೆಗಳಿಗೆ ತರಬೇತಿ ಹಾಗೂ ಸ್ಫೂರ್ತಿ ನೀಡುವಂತಹ ವ್ಯವಸ್ಥೆಯನ್ನು ಆ ಸ್ಮಾರಕದಲ್ಲಿ ಕಲ್ಪಿಸಬೇಕು” ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

ಎಸ್. ಜಾನಕಿ ಅಂತ್ಯಸಂಸ್ಕಾರಕ್ಕೆ ಕಣಿಯನಹುಂಡಿಯಲ್ಲಿ ಸಕಲ ಸಿದ್ಧತೆ

The post ಸರ್ಕಾರ ಎಸ್. ಜಾನಕಿ ನೆನಪಿನಲ್ಲಿ ಸ್ಮಾರಕ ನಿರ್ಮಾಣ ಮಾಡಲಿ appeared first on Samyukta Karnataka.

ಹಾವೇರಿ ಜಿಲ್ಲೆಯಲ್ಲಿ ಹಲವೆಡೆ ಮೋಡ ಬಿತ್ತನೆ, ಕೆಲವೆಡೆ ಅಡ್ಡಿ
ಹಾವೇರಿ: ಮುಂಗಾರು ಮಳೆ ದುರ್ಬಲವಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸೋಮವಾರದಿಂದ ಆರಂಭವಾಗಿರುವ ಮೋಡ ಬಿತ್ತನೆ ಕಾರ್ಯ ಮಂಗಳವಾರವೂ ಯಶಸ್ವಿಯಾಗಿ ನಡೆಯಿತು.

ಶಾಸಕ ಪ್ರಕಾಶ ಕೋಳಿವಾಡ ಅವರ ರಾಣೆಬೆನ್ನೂರಿನ ಪಿಕೆಕೆ ಸಂಸ್ಥೆ ವತಿಯಿಂದ ಜಿಲ್ಲೆಯ ಶಾಸಕರೇ ವಂತಿಕೆ ಹಾಕಿ ಮೋಡ ಬಿತ್ತನೆ ಕೈಗೊಂಡಿದ್ದಾರೆ.

ನಾಲ್ಕು ತಾಲೂಕುಗಳಲ್ಲಿ ಮೋಡ ಬಿತ್ತನೆ: ಕೇಂದ್ರ ಸರ್ಕಾರದ ಡಿಜಿಸಿಎ ಹಾಗೂ ಹಾವೇರಿ ಜಿಲ್ಲಾಡಳಿತದ ಅನುಮತಿಯೊಂದಿಗೆ ಮಂಗಳವಾರ ಸವಣೂರು, ಹಾವೇರಿ, ಬ್ಯಾಡಗಿ ಹಾಗೂ ರಾಣೆಬೆನ್ನೂರ ತಾಲೂಕಿನಲ್ಲಿ ತಲಾ ಎರಡು ಬಾರಿ ಮೋಡ ಬಿತ್ತನೆ (ಕ್ಲೌಡ್ ಸೀಡಿಂಗ್) ಮಾಡಲಾಯಿತು.

ಮಧ್ಯಾಹ್ನ 2.40ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಇಬ್ಬರು ಪೈಲಟ್‌ಗಳನ್ನು ಹೊಂದಿರುವ ವಿಮಾನ ಅಗತ್ಯ ಪರಿಕರಗಳೊಂದಿಗೆ ಹಾವೇರಿ ಜಿಲ್ಲೆಯತ್ತ ಪ್ರಯಾಣ ಬೆಳೆಸಿ ಸುಮಾರು 2 ಗಂಟೆ 20ನಿಮಿಷ ಮೋಡ ಬಿತ್ತನೆ ನಡೆಸಿತು.

ಶಿಗ್ಗಾವಿ, ಹಾನಗಲ್ಲ, ಹಿರೇಕೆರೂರ, ರಟ್ಟೀಹಳ್ಳಿ ತಾಲೂಕುಗಳಲ್ಲಿ ಅಗತ್ಯ ಪ್ರಮಾಣದ ಮಳೆ ಮೋಡಗಳು ಕಂಡುಬರದ ಕಾರಣ ಮೋಡ ಬಿತ್ತನೆ ನಡೆಸಲು ಸಾಧ್ಯವಾಗಿಲ್ಲ. ಮುಂದಿನ ದಿನದಲ್ಲಿ ಅನುಕೂಲಕರ ಹವಾಮಾನ ಆಧರಿಸಿ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹವಾಮಾನ ಇಲಾಖೆಯ ಮಾಹಿತಿ ಹಾಗೂ ರಾಡಾರ್ ಮೇಲ್ವಿಚಾರಣೆಯ ಆಧಾರದ ಮೇಲೆ ಪ್ರತಿದಿನ ಮೋಡಗಳ ಚಲನವಲನವನ್ನು ಪರಿಶೀಲಿಸಲಾಗುತ್ತಿದೆ. ಸೂಕ್ತ ಮೋಡಗಳು ಕಂಡುಬಂದರೆ ಬುಧವಾರವೂ ಮೋಡ ಬಿತ್ತನೆ ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲಾರಿ-ಬೈಕ್ ಡಿಕ್ಕಿ: ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವು

The post ಹಾವೇರಿ ಜಿಲ್ಲೆಯಲ್ಲಿ ಹಲವೆಡೆ ಮೋಡ ಬಿತ್ತನೆ, ಕೆಲವೆಡೆ ಅಡ್ಡಿ appeared first on Samyukta Karnataka.

ತುಷ್ಟೀಕರಣ ರಾಜಕೀಯದ ವಿರುದ್ಧ 16 ರಂದು ಬೃಹತ್ ಪ್ರತಿಭಟನೆ
​ಹಾವೇರಿ: ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು, ಜಿಲ್ಲಾಡಳಿತ ತನ್ನ ಹಿಡಿತವನ್ನು ಕಳೆದುಕೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದಲ್ಲಿ ಕ್ಷುಲ್ಲಕ ಕಾರಣಕ್ಕೆ ಕೊಲೆಯಾದ ಶಿವಾಜಿರಾವ್ ಬೈರೋಜಿ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ನಂತರ ​ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದ ಸರಣಿ ಅಪರಾಧ ಹಾಗೂ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಘಟನೆಗಳ ಕುರಿತು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

“ಭರತ್ ಮತ್ತು ಅವರ ತಂದೆ ಕಳೆದ 60 ವರ್ಷಗಳಿಂದ ಅಲ್ಲಿ ವ್ಯಾಪಾರ ಮಾಡಿಕೊಂಡಿದ್ದಾರೆ. ಮೊಟ್ಟೆ ಕೇಳಲು ಬಂದು, ಹಣದ ವಿಚಾರವಾಗಿ ಗಲಾಟೆ ಮಾಡಿದ್ದು ಕೇವಲ ಒಂದು ಸಣ್ಣ ಕಾರಣವಷ್ಟೇ. ಆದರೆ ಇದರ ಹಿಂದಿನ ಅಸಲಿ ಉದ್ದೇಶ ಅವರನ್ನು ಅಲ್ಲಿಂದ ಒಕ್ಕಲೆಬ್ಬಿಸಿ, ಅಲ್ಲಿರುವ ಎಲ್ಲಾ ಅಂಗಡಿಗಳನ್ನು ತಮ್ಮ ವಶಕ್ಕೆ ಪಡೆಯುವುದಾಗಿದೆ” ಎಂದು ಆರೋಪಿಸಿದರು.

​ರಾಜಕೀಯ ಕುಮ್ಮಕ್ಕಿನಿಂದ ಹೆಚ್ಚಿದ ಧೈರ್ಯ: ​ಜಿಲ್ಲೆಯಲ್ಲಿ ಕೋಮು ಸೌಹಾರ್ದತೆಯನ್ನು ಕೆಡಿಸುವ ದುರುದ್ದೇಶ ಇಟ್ಟುಕೊಳ್ಳಲಾಗಿದೆ ಎಂದ ಅವರು, “ಇಂತಹ ಶಕ್ತಿಗಳಿಗೆ ದೊಡ್ಡ ಪ್ರಮಾಣದಲ್ಲಿ ರಾಜಕೀಯ ಬೆಂಬಲ ಮತ್ತು ಕುಮ್ಮಕ್ಕು ಸಿಗುತ್ತಿರುವುದರಿಂದಲೇ ಇಷ್ಟೊಂದು ಧೈರ್ಯ ಬಂದಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ಯಾವುದೇ ಸಣ್ಣ ಕೋಮು ಗಲಭೆಯೂ ನಡೆದಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಹಾವೇರಿ ಜಿಲ್ಲೆಯಲ್ಲಿ, ವಿಶೇಷವಾಗಿ 7-8 ಗಂಭೀರ ಪ್ರಕರಣಗಳು ನಡೆದಿವೆ” ಎಂದರು.

​ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಅತ್ಯಾಚಾರ ಎಸಗಿದ ಯುವಕರು ಬೇಲ್ ಮೇಲೆ ಬಂದಾಗ, ಏನೋ ಯುದ್ಧ ಗೆದ್ದು ಬಂದವರಂತೆ ಮೆರವಣಿಗೆ ನಡೆಸಿ, ತಲವಾರ್ ಪ್ರದರ್ಶಿಸಿದ್ದಾರೆ. ಈ ವೇಳೆ ಪೊಲೀಸರು ಕಣ್ಣು ಮುಚ್ಚಿ ಕುಳಿತಿದ್ದರು. ​ಶಿಗ್ಗಾಂವಿಯಲ್ಲಿ ಹಗಲು ಹೊತ್ತಿನಲ್ಲೇ ಭೀಕರ ಕೊಲೆ ನಡೆದಿದೆ. ​ಹಾನಗಲ್ ತಾಲೂಕಿನಲ್ಲಿ 4-5 ಲವ್ ಜಿಹಾದ್ ಪ್ರಕರಣಗಳು ದಾಖಲಾಗಿವೆ. ಇತ್ತೀಚೆಗೆ ನರೇಗಲ್ ಹಾಗೂ ಕಾಗಿನೆಲೆಯಲ್ಲೂ ಇಂತಹ ಘಟನೆಗಳು ಮರುಕಳಿಸುತ್ತಿವೆ ಎಂದರು.

​ಪೊಲೀಸರು ಮತ್ತು ರಾಜಕೀಯ ನಾಯಕರು ಶಾಮೀಲು: ​”ಜಿಲ್ಲೆಯಲ್ಲಿ ಓಸಿ, ಜೂಜಾಟ ಸೇರಿದಂತೆ ಅಕ್ರಮಗಳು ಎಗ್ಗಿಲ್ಲದೆ ನಡೆಯುತ್ತಿವೆ. ಮಾಧ್ಯಮಗಳು ಹಾಗೂ ಸಾರ್ವಜನಿಕರು ವಿಡಿಯೋ ಮಾಡಿಕೊಟ್ಟರೂ ಪೊಲೀಸರು ಕೇವಲ ನಾಮ್ ಕೇ ವಾಸ್ತೆ ಕ್ರಮ ಜರುಗಿಸುತ್ತಿದ್ದಾರೆ. ಇದಕ್ಕೆ ಕಾರಣ ಪೊಲೀಸರು ಹಾಗೂ ರಾಜಕೀಯ ನಾಯಕರು ಇದರಲ್ಲಿ ಶಾಮೀಲಾಗಿದ್ದಾರೆ. ಎಲ್ಲವೂ ಪರ್ಸೆಂಟೇಜ್ ಲೆಕ್ಕದಲ್ಲೇ ನಡೆಯುತ್ತಿದೆ” ಎಂದು ಅವರು ಗಂಭೀರ ಆರೋಪ ಮಾಡಿದರು.

​ಕೋಮು ಸೌಹಾರ್ದತೆಗೆ ಹೆಸರಾಗಿದ್ದ ಜಿಲ್ಲೆಯಲ್ಲಿ ಶಾಂತಿ ಕದಡುತ್ತಿರುವ ಶಕ್ತಿಗಳನ್ನು ಮಟ್ಟಹಾಕದಿದ್ದರೆ ಇಂತಹ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ. ಹೀಗಾಗಿ ಇದರ ವಿರುದ್ಧ ದೊಡ್ಡ ಮಟ್ಟದ ಜಾಗೃತಿ ಹಾಗೂ ಪ್ರತಿಭಟನೆ ನಡೆಸುವ ಅಗತ್ಯವಿದೆ ಎಂದರು.

ಜುಲೈ 16 ರಂದು ಬೃಹತ್ ಪ್ರತಿಭಟನೆ: ​ರಾಜ್ಯ ಸರ್ಕಾರದ ತುಷ್ಟೀಕರಣ ರಾಜಕಾರಣ, ಕೋಮು ಸೌಹಾರ್ದತೆ ಕೆಡಿಸುವ ಸಂಚು ಹಾಗೂ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ವಿರುದ್ಧ ಬರುವ ಜುಲೈ 16 ರಂದು ಹಾವೇರಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ​ಇತ್ತೀಚೆಗೆ ಹಾನಗಲ್ ತಾಲೂಕಿನ ನರೇಗಲ್‌ನಲ್ಲಿ ನಡೆದ ಹಲ್ಲೆ ಮತ್ತು ರಟ್ಟಿಹಳ್ಳಿ ಕೊಲೆ ಪ್ರಕರಣವನ್ನು ಉಲ್ಲೇಖಿಸಿದ ಅವರು, “ವೈಯಕ್ತಿಕ ಗಲಾಟೆ ಎಂದು ಬಿಂಬಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ, ತಂದೆ-ಮಗನ ಮೇಲೆ ನಡೆದಿರುವ ಹಲ್ಲೆ ಕೇವಲ ಸಣ್ಣ ಕಾರಣಕ್ಕೆ ಅಲ್ಲ. ಒಂದು ನಿರ್ದಿಷ್ಟ ಕೋಮಿನ ಜನರು ಅತ್ಯಂತ ಅಮಾನುಷ ಹಾಗೂ ಕ್ರೂರವಾಗಿ ಮರ್ಮಾಂಗಕ್ಕೆ ಒದ್ದು ತಂದೆಯನ್ನು ಕೊಲೆ ಮಾಡಿದ್ದಾರೆ ಎಂದರೆ, ಅವರ ಈ ಧೈರ್ಯದ ಹಿಂದೆ ರಾಜಕೀಯ ಕುಮ್ಮಕ್ಕಿದೆ ಎಂಬುದು ಸ್ಪಷ್ಟವಾಗುತ್ತದೆ” ಎಂದು ಆರೋಪಿಸಿದರು.

​ಮುಖ್ಯಮಂತ್ರಿಗಳಿಗೆ ಎಚ್ಚರಿಕೆ: ಈ ಪ್ರಕರಣದಲ್ಲಿ ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಇಂತಹ ಕೃತ್ಯ ಎಸಗುವವರು ಯಾರೇ ಇರಲಿ, ಯಾವ ಪಕ್ಷಕ್ಕೆ ಸೇರಿರಲಿ, ಮುಲಾಜಿಲ್ಲದೆ ಜೈಲಿಗಟ್ಟಬೇಕು. ಪೊಲೀಸರು ಹಾಗೂ ಸರ್ಕಾರ ತಪ್ಪಿತಸ್ಥರಿಗೆ ಪಾಠ ಕಲಿಸದಿದ್ದರೆ, ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳಿಗೇ ಇದು ಕುತ್ತಾಗಿ ಪರಿಣಮಿಸಲಿದೆ ಮತ್ತು ಸರ್ಕಾರಕ್ಕೆ ದೊಡ್ಡ ಕೆಟ್ಟ ಹೆಸರು ಬರಲಿದೆ ಎಂದು ಎಚ್ಚರಿಸಿದರು.

​ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹತೋಟಿ ತಪ್ಪಿದ್ದು, ಅಪರಾಧ ಕೃತ್ಯಗಳು ಎಗ್ಗಿಲ್ಲದೆ ನಡೆಯುತ್ತಿದ್ದರೂ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ. ​”ನಾವು ಕೂಡ 35 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿದ್ದೇವೆ. ತಪ್ಪು ಮುಚ್ಚಿಕೊಳ್ಳಲು ಇಂತಹ ಹಾರಿಕೆ ಉತ್ತರಗಳು ನಡೆಯುವುದಿಲ್ಲ” ಎಂದ ಬೊಮ್ಮಾಯಿ, ಇಂತಹ ಶಕ್ತಿಗಳಿಗೆ ಮಣಿಯದೆ ತಕ್ಷಣ ಕಠಿಣ ಕ್ರಮ ಜರುಗಿಸಬೇಕೆಂದು ಮುಖ್ಯಮಂತ್ರಿಗಳಿಗೆ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಆಗ್ರಹಿಸಿದರು.

‘ಅಭೀ ಪಿಚ್ಚರ್ ಬಾಕಿ ಹೈʼ; ಆರ್‌ಎಸ್‌ಎಸ್‌ಗೆ ಖರ್ಗೆ ಟಾಂಗ್

The post ತುಷ್ಟೀಕರಣ ರಾಜಕೀಯದ ವಿರುದ್ಧ 16 ರಂದು ಬೃಹತ್ ಪ್ರತಿಭಟನೆ appeared first on Samyukta Karnataka.

H.K. ಪಾಟೀಲ್ ವೋಟರ್ ಲಿಸ್ಟ್ ಗೊಂದಲ : ಆಯೋಗವೇ ಉತ್ತರಿಸಲಿ
ಗದಗ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಸಾವಿರಾರು ಹೆಸರುಗಳು ಎರಡು, ಮೂರು ಹಾಗೂ ನಾಲ್ಕು ಕಡೆ ದಾಖಲಾಗಿವೆ ಎಂದು ಆರೋಪಿಸಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಲೋಪಗಳನ್ನು ಸರಿಪಡಿಸುವಂತೆ ಚುನಾವಣಾ ಆಯೋಗವನ್ನು ಆಗ್ರಹಿಸಿದ್ದಾರೆ. ಎಚ್.ಕೆ. ಪಾಟೀಲ್ ಆರೋಪಕ್ಕೂ ಅವರು ತಿರುಗೇಟು ನೀಡಿದ್ದಾರೆ.

ಹಾವೇರಿ : ಮತದಾರರ ಪಟ್ಟಿಯಲ್ಲಿ ಕಂಡುಬಂದಿರುವ ಲೋಪದೋಷಗಳನ್ನು ಜನರ ಗಮನಕ್ಕೆ ತರುವುದು ಹಾಗೂ ಅವುಗಳನ್ನು ಸರಿಪಡಿಸುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸುವುದು ಒಬ್ಬ ಜನಪ್ರತಿನಿಧಿಯಾಗಿ ತಮ್ಮ ಕರ್ತವ್ಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗದಗ ಕ್ಷೇತ್ರದ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ತಾವು ಮಾಡಿದ್ದ ಹೇಳಿಕೆಯನ್ನು ಸಮರ್ಥಿಸಿಕೊಂಡು, ಮಾಜಿ ಸಚಿವ ಹಾಗೂ ಶಾಸಕ ಎಚ್.ಕೆ. ಪಾಟೀಲ್ ಅವರ ಟೀಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಇದನ್ನೂ ಓದಿ: ತಂದೆ-ಮಗನ ಹೊಸ ಸಿನಿಮಾಗಳಿಗೆ ಮುಹೂರ್ತ: DK ಸಮ್ಮುಖದಲ್ಲಿ ಶುಭಾರಂಭ

ಗದಗ ಕ್ಷೇತ್ರದಲ್ಲಿ ಸಾವಿರಾರು ಹೆಸರುಗಳ ಪುನರಾವರ್ತನೆ? : ಬೊಮ್ಮಾಯಿ ಅವರ ಪ್ರಕಾರ, ಗದಗ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಎಚ್.ಕೆ. ಪಾಟೀಲ್ ಅವರ ಹೆಸರೇ ಮೂರು ಕಡೆ ದಾಖಲಾಗಿರುವುದನ್ನು ತಾವು ಉದಾಹರಣೆಯಾಗಿ ಪ್ರಸ್ತಾಪಿಸಿದ್ದಾಗಿ ಹೇಳಿದರು. ಇದರ ಜೊತೆಗೆ ಗದಗ ಕ್ಷೇತ್ರದಲ್ಲಿ ಸುಮಾರು 3,000ಕ್ಕೂ ಹೆಚ್ಚು ಮತದಾರರ ಹೆಸರುಗಳು ಎರಡು, ಮೂರು ಹಾಗೂ ನಾಲ್ಕು ಕಡೆ ದಾಖಲಾಗಿರುವ ಮಾಹಿತಿ ತಮ್ಮ ಬಳಿ ಇದ್ದು, ಅದರ ಪಟ್ಟಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಗದಗ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಸಾವಿರಾರು ಹೆಸರುಗಳು ಎರಡು, ಮೂರು ಹಾಗೂ ನಾಲ್ಕು ಕಡೆ ದಾಖಲಾಗಿವೆ ಎಂದು ಆರೋಪಿಸಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಲೋಪಗಳನ್ನು ಸರಿಪಡಿಸುವಂತೆ ಚುನಾವಣಾ ಆಯೋಗವನ್ನು ಆಗ್ರಹಿಸಿದ್ದಾರೆ. ಎಚ್.ಕೆ. ಪಾಟೀಲ್ ಆರೋಪಕ್ಕೂ ಅವರು ತಿರುಗೇಟು ನೀಡಿದ್ದಾರೆ.https://t.co/nNljzaUd5w pic.twitter.com/VUYOUOvhZ7
— Samyukta Karnataka (@SamyuktaKarnatk) July 5, 2026

“ಈ ಎಲ್ಲ ಹೆಸರುಗಳನ್ನು ಪರಿಶೀಲಿಸಿ ಮತದಾರರ ಪಟ್ಟಿಯನ್ನು ಪರಿಷ್ಕರಿಸಬೇಕು ಎಂಬುದೇ ನಮ್ಮ ಆಗ್ರಹ,” ಎಂದು ಅವರು ಹೇಳಿದರು.

ಇದನ್ನೂ ಓದಿ: ಕಾಂಗ್ರೆಸ್‌ಗೆ ಶಾಕ್: ಸತೀಶ್ ಜಾರಕಿಹೊಳಿ ಆಪ್ತ ಸದಾಶಿವ BJP ಸೇರ್ಪಡೆ

‘ನಾನು ರಾಜಕೀಯ ಮಾಡಿಲ್ಲ’ : ತಮ್ಮ ಹೇಳಿಕೆಯನ್ನು ‘ಕೀಳುಮಟ್ಟದ ರಾಜಕಾರಣ’ ಎಂದು ಎಚ್.ಕೆ. ಪಾಟೀಲ್ ಟೀಕಿಸಿರುವುದಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ತಾವು ಯಾವುದೇ ರಾಜಕೀಯ ಆರೋಪ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. “ಮ್ಯಾಪಿಂಗ್ ವೇಳೆ ಕಂಡುಬಂದ ಲೋಪಗಳನ್ನು ಮಾತ್ರ ಪ್ರಸ್ತಾಪಿಸಿದ್ದೇನೆ. ಯಾರ ಮೇಲೂ ವೈಯಕ್ತಿಕ ಆರೋಪ ಮಾಡಿಲ್ಲ. ತಮ್ಮ ಹೆಸರನ್ನು ಉಲ್ಲೇಖಿಸಿದ್ದರಿಂದ ಅದನ್ನು ಕೀಳುಮಟ್ಟದ ರಾಜಕಾರಣ ಎಂದು ಹೇಳುವುದು ಸರಿಯಲ್ಲ. ಅವರು ತಮ್ಮ ಹೇಳಿಕೆಯನ್ನು ವಾಪಸ್ ಪಡೆಯಬೇಕು,” ಎಂದು ಆಗ್ರಹಿಸಿದರು.

ಚುನಾವಣಾ ಆಯೋಗವೇ ಉತ್ತರಿಸಬೇಕು : ಮತದಾರರ ಪಟ್ಟಿಯಲ್ಲಿರುವ ಲೋಪಗಳ ಕುರಿತು ಚುನಾವಣಾ ಆಯೋಗದ ಅಧಿಕಾರಿಗಳೇ ಸೂಕ್ತ ಸ್ಪಷ್ಟನೆ ನೀಡಬೇಕಾಗಿದೆ ಎಂದು ಬೊಮ್ಮಾಯಿ ಒತ್ತಾಯಿಸಿದರು. “ಪಟ್ಟಿಯಲ್ಲಿರುವ ದೋಷಗಳನ್ನು ಸರಿಪಡಿಸುವಂತೆ ನಾವು ಆಗ್ರಹಿಸಿದ್ದೇವೆ. ಜನಪ್ರತಿನಿಧಿಯಾಗಿ ಯಾವುದೇ ಒತ್ತಡಕ್ಕೆ ಮಣಿಯದೆ ನನ್ನ ಕರ್ತವ್ಯವನ್ನು ಮಾಡಿದ್ದೇನೆ. ಇದರಲ್ಲಿ ಕ್ಷಮೆ ಕೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ,” ಎಂದು ಅವರು ಹೇಳಿದರು.

ಇದನ್ನೂ ಓದಿ: ದೇಣಿಗೆ ವಿವಾದ: ವಿರೋಧ ಪಕ್ಷದ ನಾಯಕರ ವಿಚಾರಣೆಗೆ VHP ಒತ್ತಾಯ

‘ಲೋಪ ಸರಿಪಡಿಸುವುದೇ ಮುಖ್ಯ’ : ಲೋಪಗಳ ಕುರಿತು ಸ್ಪಷ್ಟನೆ ನೀಡುವ ಬದಲು ರಾಜಕೀಯ ಆರೋಪಗಳನ್ನು ಮಾಡುತ್ತಿರುವುದು ಸಮಂಜಸವಲ್ಲ ಎಂದು ಬೊಮ್ಮಾಯಿ ಅಭಿಪ್ರಾಯಪಟ್ಟರು. ಮತದಾರರ ಪಟ್ಟಿಯ ನಿಖರತೆ ಪ್ರಜಾಪ್ರಭುತ್ವದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದ್ದು, ಚುನಾವಣಾ ಆಯೋಗ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರದಲ್ಲೇ ಪರಿಶೀಲನೆ ನಡೆಸಿ ಅಗತ್ಯ ಸ್ಪಷ್ಟನೆ ನೀಡಬೇಕು ಎಂದು ಅವರು ಆಗ್ರಹಿಸಿದರು.

ಈ ಹೇಳಿಕೆಯಿಂದ ಗದಗ ಕ್ಷೇತ್ರದ ಮತದಾರರ ಪಟ್ಟಿಗೆ ಸಂಬಂಧಿಸಿದ ಚರ್ಚೆ ಮತ್ತಷ್ಟು ತೀವ್ರಗೊಂಡಿದ್ದು, ಚುನಾವಣಾ ಆಯೋಗದ ಮುಂದಿನ ಕ್ರಮದತ್ತ ರಾಜಕೀಯ ವಲಯದ ಗಮನ ನೆಟ್ಟಿದೆ.

ಗದಗ: 33 ದಿನಗಳ ಸಮಾಧಿ ಯೋಗ ಮುಕ್ತಾಯ – ಶ್ರೀಗಳ ದರ್ಶನ

The post H.K. ಪಾಟೀಲ್ ವೋಟರ್ ಲಿಸ್ಟ್ ಗೊಂದಲ : ಆಯೋಗವೇ ಉತ್ತರಿಸಲಿ appeared first on Samyukta Karnataka.

ಹಾವೇರಿ ಮೂಲದ ಯೋಧ ಯಶೋಧರ ಕರ್ತವ್ಯದ ವೇಳೆ ಹುತಾತ್ಮ
ಹಾವೇರಿ: ದೇಶದ ಭದ್ರತೆಗಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಹಾವೇರಿ ಜಿಲ್ಲೆಯ ಯುವ ನೌಕಾಪಡೆಯ ಯೋಧ ಹುತಾತ್ಮರಾಗಿರುವ ದುಃಖದ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ. ಹಾನಗಲ್ ತಾಲೂಕಿನ ಉಪ್ಪುಣಸಿ ಗ್ರಾಮದ ನಿವಾಸಿ ಹಾಗೂ ಭಾರತೀಯ ನೌಕಾಪಡೆಯ ಯೋಧ ಯಶೋಧರ ವಡ್ಡರ್ (29) ಅವರು ಫೈರಿಂಗ್ ತರಬೇತಿ ಸಂದರ್ಭದಲ್ಲಿ ಸಂಭವಿಸಿದ ಅವಘಡದಲ್ಲಿ ವೀರ ಮರಣ ಹೊಂದಿದ್ದಾರೆ.

ಯಶೋಧರ ವಡ್ಡರ್ ಕಳೆದ ಸುಮಾರು ಹತ್ತು ವರ್ಷಗಳಿಂದ ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. 2016ರಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆಯಾದ ಅವರು ತಮ್ಮ ಕರ್ತವ್ಯನಿಷ್ಠೆ, ಶಿಸ್ತು ಹಾಗೂ ದೇಶಭಕ್ತಿಯಿಂದ ಸಹೋದ್ಯೋಗಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು.

ಇದನ್ನೂ ಓದಿ: ಹೆದ್ದಾರಿ ದರೋಡೆ ಪ್ರಕರಣ: ಮೂವರು ಆರೋಪಿಗಳ ಬಂಧನ

ಮೂಲತಃ ಅಂಡಮಾನ್ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದ ಯಶೋಧರ ಅವರು ಕಳೆದ ಮೂರು ತಿಂಗಳಿನಿಂದ ಕೇರಳದ ಕೊಚ್ಚಿಯಲ್ಲಿ ಸಶಸ್ತ್ರ ಪಡೆಗಳ ವಿಶೇಷ ತರಬೇತಿಯಲ್ಲಿ ಭಾಗವಹಿಸುತ್ತಿದ್ದರು. ಇದೇ ವೇಳೆ ನಡೆದ ಫೈರಿಂಗ್ ತರಬೇತಿ ಸಂದರ್ಭ ಸಂಭವಿಸಿದ ಅವಘಡದಲ್ಲಿ ಅವರು ಹುತಾತ್ಮರಾಗಿದ್ದಾರೆ ಎಂದು ತಿಳಿದುಬಂದಿದೆ.

ಹುತಾತ್ಮ ಯೋಧನ ಪಾರ್ಥಿವ ಶರೀರವನ್ನು ಸ್ವಗ್ರಾಮವಾದ ಉಪ್ಪುಣಸಿಗೆ ತರಲಾಗಿದ್ದು, ಕುಟುಂಬಸ್ಥರು, ಗ್ರಾಮಸ್ಥರು ಹಾಗೂ ಸಾರ್ವಜನಿಕರು ಕಣ್ಣೀರಿನ ವಿದಾಯ ಸಲ್ಲಿಸಿದರು. ವೀರ ಯೋಧನ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ಜಿಲ್ಲಾಡಳಿತ ಮತ್ತು ಸಂಬಂಧಿತ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.

ಇದನ್ನೂ ಓದಿ: ನೀರಿಗಾಗಿ ದಯಾಮರಣ ಕೇಳಿದ ದಂಪತಿ

ಯಶೋಧರ ವಡ್ಡರ್ ಅವರ ಅಕಾಲಿಕ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಉಪ್ಪುಣಸಿ ಗ್ರಾಮ ಸೇರಿದಂತೆ ಹಾನಗಲ್ ತಾಲೂಕಿನಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಗ್ರಾಮಸ್ಥರು, ಬಂಧು-ಬಳಗ, ಮಾಜಿ ಸೈನಿಕರು ಹಾಗೂ ವಿವಿಧ ಸಂಘಟನೆಗಳು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಯೋಧನಿಗೆ ಭಾವಪೂರ್ಣ ನಮನ ಸಲ್ಲಿಸಿ, ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡುವಂತೆ ಪ್ರಾರ್ಥಿಸಿದ್ದಾರೆ.

ದೇಶದ ಭದ್ರತೆಗಾಗಿ ತಮ್ಮ ಜೀವವನ್ನೇ ಅರ್ಪಿಸಿದ ಯಶೋಧರ ವಡ್ಡರ್ ಅವರ ಸೇವೆ ಸದಾ ಸ್ಮರಣೀಯವಾಗಿರಲಿದೆ. ಅವರ ತ್ಯಾಗ ಯುವಜನತೆಗೆ ದೇಶಸೇವೆಯ ಪ್ರೇರಣೆಯಾಗಿ ಉಳಿಯಲಿದೆ. ಅವರ ನಿಧನದಿಂದ ಕುಟುಂಬ ಮಾತ್ರವಲ್ಲ, ಹಾವೇರಿ ಜಿಲ್ಲೆ ಹಾಗೂ ಇಡೀ ಕರ್ನಾಟಕವೇ ಒಬ್ಬ ಧೈರ್ಯಶಾಲಿ ಯೋಧನನ್ನು ಕಳೆದುಕೊಂಡಂತಾಗಿದೆ.

ಹುಬ್ಬಳ್ಳಿಗೆ ಮೇಯರ್, ಧಾರವಾಡಕ್ಕೆ ಉಪ ಮೇಯರ್ ಸ್ಥಾನ ಫಿಕ್ಸ್!

The post ಹಾವೇರಿ ಮೂಲದ ಯೋಧ ಯಶೋಧರ ಕರ್ತವ್ಯದ ವೇಳೆ ಹುತಾತ್ಮ appeared first on Samyukta Karnataka.

ರಾಜ್ಯದಲ್ಲಿ ಮಳೆ ಕೊರತೆ: ಅಗತ್ಯ ಕಂಡುಬಂದರೆ ಬರಗಾಲ ಘೋಷಣೆ
ಹಾವೇರಿ: ರಾಜ್ಯದಲ್ಲಿ ಮಳೆ ಕೊರತೆಯಿಂದ ಉಂಟಾಗಿರುವ ಪರಿಸ್ಥಿತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಎಲ್ಲ ಜಿಲ್ಲೆಗಳಿಂದ ಪರಿಶೀಲನಾ ವರದಿಗಳು ಬಂದ ಬಳಿಕ ಅಗತ್ಯ ಕಂಡುಬಂದರೆ ಬರಗಾಲ ಘೋಷಣೆ ಕುರಿತು ತೀರ್ಮಾನ ಕೈಗೊಳ್ಳಲಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ರೈತರು ಮಳೆ ಕೊರತೆಯಿಂದ ನಷ್ಟ ಅನುಭವಿಸಿದ್ದು, ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ವರದಿ ಆಧರಿಸಿ ರೈತರಿಗೆ ಪರಿಹಾರ ನೀಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ಸವಣೂರು ಏತ ನೀರಾವರಿ ಯೋಜನೆ ಮರುಚಾಲನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿ ಇನ್ನೂ ಹಲವು ಕಡೆ ಪೂರ್ಣಗೊಂಡಿಲ್ಲ. ಸಂಪೂರ್ಣ ಮುಗಿದಿರುವ ಯೋಜನೆಗಳನ್ನು ಮಾತ್ರ ಇಲಾಖೆ ಹಸ್ತಾಂತರಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದರು.

ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿರುವ ಅನೇಕ ಪ್ರವಾಸಿ ಮಂದಿರಗಳು ಮುಚ್ಚಿರುವುದು ಗಮನಕ್ಕೆ ಬಂದಿದೆ. ಪ್ರತಿ ಐಬಿಗೆ 3ರಿಂದ 5 ಸಿಬ್ಬಂದಿಯನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿ ಶೀಘ್ರದಲ್ಲೇ ಪುನರಾರಂಭಿಸಲಾಗುವುದು ಎಂದರು.

ಪ್ರಜಾ ಸೇವೆ ಮೂಲಕ ಜನಸ್ಪಂದನಾ ಕಾರ್ಯಕ್ರಮ

The post ರಾಜ್ಯದಲ್ಲಿ ಮಳೆ ಕೊರತೆ: ಅಗತ್ಯ ಕಂಡುಬಂದರೆ ಬರಗಾಲ ಘೋಷಣೆ appeared first on Samyukta Karnataka.

ನೆಹರು ಪ್ರಧಾನಿ ಆಸೆಗಾಗಿ ಭಾರತ ವಿಭಜನೆ
ಹಾವೇರಿ: ಶ್ಯಾಮ್ ಪ್ರಕಾಶ್ ಮುಖರ್ಜಿ ಅವರು ಒಬ್ಬ ಚಿಂತಕರಾಗಿದ್ದರು. ಅವರು ಅಖಂಡ ಭಾರತದ ಪರಿಕಲ್ಪನೆ ಇಟ್ಟುಕೊಂಡು ಹೋರಾಟ ಮಾಡಿದ್ದರು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಹಾವೇರಿ ಜಿಲ್ಲೆಯ ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಕಾರ್ಯಾಲಯದಲ್ಲಿ ಭಾರತೀಯ ಜನತಾ ಪಾರ್ಟಿ ಹಾವೇರಿ ಜಿಲ್ಲೆಯ ವತಿಯಿಂದ ಏರ್ಪಡಿಸಿದ ಎಸ್.ಐ.ಆರ್ ಪ್ರಕ್ರಿಯೆ ಸಭೆಯಲ್ಲಿ ಅವರು ಮಾತನಾಡಿದರು.

ಶ್ಯಾಮ್ ಪ್ರಸಾದ್ ಮುಖರ್ಜಿಯವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಂಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಂಡವರಾಗಿದ್ದರು. ನೆಹರೂ ಅವರ ಮೊದಲನೇ ರಾಷ್ಟ್ರೀಯ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದರು. ರಾಷ್ಟ್ರೀಯ ಸರ್ಕಾರ ಅಂತ ಅಂದರೆ 1952 ರ ಪೂರ್ವದಲ್ಲಿ ಅದು ಚುನಾಯಿತ ಸರ್ಕಾರ ಇರಲಿಲ್ಲ. ದೇಶದ ವಿವಿಧ ಭಾಗದಲ್ಲಿ ಇರುವಂತಹ ಅತ್ಯಂತ ಪ್ರಭಾವಿ ಚಿಂತಕರು ಮತ್ತು ದೇಶದ ಬಗ್ಗೆ ಸಂಪೂರ್ಣವಾಗಿ ಎಲ್ಲಾ ರೀತಿಯ ವಿಚಾರಗಳನ್ನು ತಿಳಿದುಕೊಂಡು ಹೋಗಿರುವಂತಹ ಮೇಧಾವಿಗಳಿಗೆ ಅಲ್ಲಿ ಕ್ಯಾಬಿನೆಟ್ ದರ್ಜೆ ಕೊಟ್ಟಿತ್ತು.

ಅದರಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರು ಕೂಡ ಇದ್ದರು. ಸೋಶಿಯಲಿಸ್ಟ್ ಪಾರ್ಟಿಯ ಜನರು ಇದ್ದರು. ಕಮ್ಯುನಿಸ್ಟ್ ಪಾರ್ಟಿಯ ಡಾಂಗೆ ಅಂತಹ ಮೇಧಾವಿಗಳ ಕ್ಯಾಬಿನೆಟ್‌ನಲ್ಲಿ ಬಂಗಾಳದ ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ಇಡೀ ಭಾರತದ ಒಂದು ಕಲ್ಪನೆಯನ್ನು ಇಟ್ಟುಕೊಂಡು ಅವರು ಹೋರಾಟವನ್ನು ಮಾಡಿದ್ದರು ಮತ್ತು ಆ ಚಿಂತಕರಾಗಿದ್ದರು ಎಂದರು.

ಅಖಂಡ ಭಾರತದ ಕಲ್ಪನೆ ಇರುವಂತವರು ಬಹಳಷ್ಟು ಚಿಂತನೆಯನ್ನು ಮಾಡಲು ಶುರು ಮಾಡಿದರು. ಅಖಂಡ ಭಾರತ ಅಂತ ಅಂದರೆ ಈಗೇನು ಪಾಕ್ ಆಕ್ರಮಿತ ಕಾಶ್ಮೀರ್ ಅಂತ ಕರೆಯುತ್ತಾರೆ, ಅಲ್ಲಿಂದ ಹಿಡಿದು ಭೂತಾನ್ ಬರ್ಮಾವರೆಗೂ ಅಖಂಡ ಭಾರತ, ನೇಪಾಳ್ ಸಮೇತ. ಮತ್ತು ದಕ್ಷಿಣದಲ್ಲಿ ಶ್ರೀಲಂಕಾ ಸಮೇತ. ಇವತ್ತಿಗೂ ಎಲ್ಲಾ ದೇಶದಲ್ಲಿ ನಮ್ಮ ಆದಿ ಸಂಸ್ಕೃತಿ ಮತ್ತು ದೇವರು ದೇವಸ್ಥಾನದ ಪೂಜೆ ಆಗುತ್ತಿದೆ ಎಂದರು.

​ಶ್ರೀರಾಮಚಂದ್ರನ ಪೂಜೆ ಶ್ರೀಲಂಕಾದಲ್ಲೂ ಆಗುತ್ತೆ, ನೇಪಾಳದಲ್ಲೂ ಆಗುತ್ತದೆ, ಭೂತಾನದಲ್ಲೂ ಆಗುತ್ತದೆ. ಬುದ್ಧನ ಒಂದು ಪ್ರಾರ್ಥನೆ ಅಫ್ಘಾನಿಸ್ತಾನದಲ್ಲೂ ಆಗುತ್ತದೆ‌. ಪಾಕ್ ಆಕ್ರಮಿತ ಕಾಶ್ಮೀರದಲ್ಲಂತೂ ಸಾವಿರಾರು ಹಿಂದೂ ದೇವಸ್ಥಾನಗಳಿವೆ. ​ಆದರೆ ವಿಭಜನೆ ಮಾಡುವಾಗ ರಾಜಿ ಪಂಚಾಯಿತಿ ಮಾಡಿ, ಕಾಂಗ್ರೆಸ್ಸಿನ ನಾಯಕರು ವಿಶೇಷವಾಗಿ ಜವಾಹರಲಾಲ್ ನೆಹರು ಅವರು ಕೂಡಲೇ ವಿಭಜನೆಯಾಗಿ ವಿಭಜಿತ ಭಾರತದ ಪ್ರಧಾನಮಂತ್ರಿಯಾಗುವಂತಹ ಒಂದು ಮಹದಾಸೆಯಿಂದ ಅದನ್ನ ರಾಜಿ ಪಂಚಾಯಿತಿ ಮಾಡಿ ವಿಭಜನೆ ಆಯಿತು, ಸ್ವತಂತ್ರ ಬಂತು. ​ಆದರೆ, ಅಖಂಡ ಭಾರತ ಆಗಿಲ್ಲ ಅನ್ನುವಂತಹ ಚಿಂತನೆ ಇರುವಂತವರು ವಿಶೇಷವಾಗಿ ಕಾಶ್ಮೀರ ಭಾರತಕ್ಕೆ ಸೇರಿರುವಂತದ್ದು.

ಹಿಂದುಕುಶ್ ಮೌಂಟನ್ ಅಂತ, ಹಿಂದುಕುಶ್ ಮೌಂಟನ್ ಅಂದರೆ ಅಫ್ಘಾನಿಸ್ತಾನ. ಈಗಲೂ ಕೂಡ ಹಿಂದುಕುಶ್ ಪಾಸ್ ಅಂತ ಇದೆ. ನಾವು ಭಾರತದಿಂದ ಪಾಕಿಸ್ತಾನ ಮುಖಾಂತರ ಅಫ್ಘಾನಿಸ್ತಾನಕ್ಕೆ ಹೋದರೆ ಹಿಂದುಕುಶ್ ಪಾಸ್ ಇದೆ. ​ಈ ಕಲ್ಪನೆಯನ್ನು ಇಟ್ಟುಕೊಂಡು ಹೋರಾಟ ಪ್ರಾರಂಭವಾಯಿತು. ಆಗ ಕಾಶ್ಮೀರಕ್ಕೆ ಹೋಗಬೇಕಾದರೆ ಪರ್ಮಿಟ್ ಬೇಕಾಗಿತ್ತು. ​ಆ ಪರ್ಮಿಟ್ ಇಲ್ಲದೆ ನಾನು ಹೋಗುತ್ತೇನೆ ಯಾಕಂದರೆ ನಮ್ಮ ದೇಶದಲ್ಲಿ ನಮಗೆ ಯಾಕೆ ಪರ್ಮಿಟ್ ಬೇಕು ಅಂತ ಹೇಳಿ, ಶಾಮ್ ಪ್ರಸಾದ್ ಮುಖರ್ಜಿ ಉಲ್ಲಂಘನೆ ಮಾಡುವಂತಹ ಚಳುವಳಿ ಮಾಡಿ ಪರ್ಮಿಟ್ ಇಲ್ಲದೆ ಒಳಗಡೆ ಹೋದರು, ಅವರನ್ನು ಬಂಧಿಸಿ ಜೈಲಿಗೆ ಹಾಕಿದ ಮೇಲೆ ಆರು ತಿಂಗಳ ನಂತರ ಅವರಿಗೆ ಆರೋಗ್ಯ ಚೆನ್ನಾಗಿಲ್ಲ ಅಂತ ಸುದ್ದಿ ಬಂತು. ಅವರನ್ನು ಜೈಲಿನಲ್ಲಿ ಒಂದು ರೀತಿಯಲ್ಲಿ ಹೋಮಿಸೈಡ್ ಮಾಡಿ, ಸಾವನ್ನು ಒಪ್ಪುವ ರೀತಿಯಲ್ಲಿ ಅವರಿಗೆ ಕೊಲೆ ಮಾಡಿದರು ಎಂದು ಹೇಳಿದರು.

ಇಂದಿಗೂ ದಾರಿದೀಪ: ​”ಈ ರೀತಿ ಸನ್ನಿವೇಶದಲ್ಲಿ 1951 ರಲ್ಲಿ ಶ್ಯಾಮಪ್ರಸಾದ್ ಮುಖರ್ಜಿಯವರು ಜನಸಂಘದ ಸ್ಥಾಪಿಸಿ ದೇಶಕ್ಕಾಗಿ ತನ್ನ ಜೀವನವನ್ನೇ ತ್ಯಾಗ ಮಾಡಿರುವಂತಹ ಶ್ರೇಷ್ಠ ನಾಯಕ. ಅವರ ವಿಚಾರ ಮತ್ತು ಅವರ ಆದರ್ಶಗಳು ಇಂದು ಕೂಡ ನಮಗೆ ದಾರಿದೀಪವಾಗಿದ್ದಾವೆ. ಆ ದಾರಿದೀಪ ಮುಂದಿನ ಪೀಳಿಗೆಗೂ ಕೂಡ ಇರಬೇಕು ಅನ್ನುವ ಕಾರಣಕ್ಕಾಗಿ ಈ ಜನ್ಮದಿನಾಚರಣೆಯನ್ನು ನಾವು ಆಚರಣೆ ಮಾಡುತ್ತಿದ್ದೇವೆ. ಇದನ್ನು ಅತ್ಯಂತ ಶ್ರದ್ಧೆಯಿಂದ, ಭಕ್ತಿಯಿಂದ ನಾವು ಮಾಡಬೇಕಾಗಿ ತಮ್ಮೆಲ್ಲರಿಗೂ ವಿನಂತಿಯನ್ನು ಮಾಡುತ್ತೇನೆ. ಅವರ ವಿಚಾರಧಾರೆಗಳನ್ನು ಓದಿ ತಿಳ್ಕೊಂಡು, ಅನುಷ್ಠಾನ ನಿಮ್ಮ ಬದುಕಿನಲ್ಲಿ ಮಾಡಿದರೆ ಅದು ಸಾರ್ಥಕತೆ ಆಗುತ್ತದೆ. ಅವರ ಜನ್ಮದಿನಾಚರಣೆ ಸಾರ್ಥಕ ಆಗಲಿ ಅಂತ ನಾನು ಹಾರೈಸುತ್ತೇನೆ ಎಂದರು.

e-ವಾಹನ ಸ್ಥಗಿತಗೊಳಿಸುತ್ತಿದ್ದ : 3 ಆ್ಯಪ್‌ಗಳಿಗೆ ಸರ್ಕಾರದ ಬ್ರೇಕ್

The post ನೆಹರು ಪ್ರಧಾನಿ ಆಸೆಗಾಗಿ ಭಾರತ ವಿಭಜನೆ appeared first on Samyukta Karnataka.

ಮೊಟ್ಟೆಯಿಂದ ಶುರುವಾದ ಜಗಳ ಸಾವಿನಲ್ಲಿ ಅಂತ್ಯ
ಹಾವೇರಿ (ರಟ್ಟೀಹಳ್ಳಿ): ಕ್ಷುಲ್ಲಕ ಕಾರಣಕ್ಕೆ ಅನ್ಯಕೋಮಿನ ಯುವಕರು ಬೀದಿ ಬದಿ ವ್ಯಾಪಾರಿಯ ಮೇಲೆ ತೀವ್ರ ಹಲ್ಲೆ ಮಾಡಿದಾಗ ವ್ಯಾಪಾರಿ ಶಿವಾಜಿರಾವ ಭೈರೋಜಿ ಎಂಬಾತ ಸಾವನ್ನಪ್ಪಿದ ಘಟನೆ ಮಳಗಿ ರಸ್ತೆ ಕ್ರಾಸ್ ಬಳಿ ನಡೆದಿದೆ.

ಸಂಜೆ ಮೊಟ್ಟೆ ವ್ಯಾಪಾರಕ್ಕಾಗಿ ಶಿವಾಜಿರಾವ ಅಂಗಡಿಗೆ ಬಂದಾಗ ಕೆಲ ಯುವಕರು ಮೊಟ್ಟೆ ಖರೀದಿಸಿ 100 ರೂ. ಕೊಟ್ಟು, ಮರಳಿ ಚಿಲ್ಲರೆ ಪಡೆಯುವಾಗ 500 ರೂ. ಹಣ ಕೊಟ್ಟಿದ್ದೇನೆಂದು ವಾದಕ್ಕಿಳಿದರು. ಶಿವಾಜಿರಾವ ಮಗ ಭರತನ ಜೊತೆ ಜಗಳ ಪ್ರಾರಂಭವಾದಾಗ, ತಂದೆ ಮಧ್ಯೆಪ್ರವೇಶಿಸಿದರು. ಆಗ ಯುವಕರ ಗುಂಪು ಶಿವಾಜಿರಾವ ಮೇಲೆ ಹಲ್ಲೆ ನಡೆಸಿದ್ದು ಅವರು ಮೃತಪಟ್ಟಿದ್ದಾರೆ.

ಯುವಕರಾದ ವಾಸೀಂ ವಜೀರಸಾಬ ಮುಲ್ಲಾ, ಸಾಧಿಕ ವಜೀರಸಾಬ ಮುಲ್ಲಾ, ಸರ್ಫರಾಜ ವಜೀರಸಾಬ ಮುಲ್ಲಾ, ಸಿರಾಜ ವಜೀರಸಾಬ ಮುಲ್ಲಾ ಎಂಬವರ ಮೇಲೆ ರಟ್ಟಿಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಜ್ಜಿ ಕೊಂದ ಆರೋಪಿ ಕಾಲಿಗೆ ಪೊಲೀಸರ ಗುಂಡು

The post ಮೊಟ್ಟೆಯಿಂದ ಶುರುವಾದ ಜಗಳ ಸಾವಿನಲ್ಲಿ ಅಂತ್ಯ appeared first on Samyukta Karnataka.

ಚಿಲ್ಲರೆ ಹಣದ ವಾದದಲ್ಲಿ ವ್ಯಾಪಾರಿ ಸಾವು: ಮೂವರು ಪೊಲೀಸ್ ವಶಕ್ಕೆ
ರಟ್ಟೀಹಳ್ಳಿ (ಹಾವೇರಿ): ಚಿಲ್ಲರೆ ಹಣವನ್ನು ವಾಪಸ್ ನೀಡುವ ವಿಚಾರವಾಗಿ ನಡೆದ ಗಲಾಟೆ ವೇಳೆ ವ್ಯಾಪಾರಿಯೊಬ್ಬರು ಮೃತಪಟ್ಟಿರುವ ಘಟನೆ ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ಪಟ್ಟಣದಲ್ಲಿ ಬುಧವಾರ ರಾತ್ರಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಮೃತರನ್ನು ಶಿವಾಜಪ್ಪ ಬೈರೋಜಿ (54) ಎಂದು ಗುರುತಿಸಲಾಗಿದೆ. ಅವರು ರಟ್ಟೀಹಳ್ಳಿಯಲ್ಲಿ ಅಂಗಡಿ ನಡೆಸುತ್ತಿದ್ದು, ಬುಧವಾರ ರಾತ್ರಿ ಕೆಲ ಯುವಕರು ಅವರ ಅಂಗಡಿಗೆ ಬಂದು ಮೊಟ್ಟೆ ಖರೀದಿಸಿದ್ದಾರೆ. ಈ ವೇಳೆ ಚಿಲ್ಲರೆ ಹಣ ನೀಡುವ ವಿಚಾರದಲ್ಲಿ ವಾಗ್ವಾದ ಉಂಟಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಬೆಂಗಳೂರು: ಕಲ್ಲು ಕ್ವಾರಿ ದುರಂತ – ಬಂಡೆ ಕುಸಿದು 7 ಕಾರ್ಮಿಕರ ಸಾವು

ಆ ಸಮಯದಲ್ಲಿ ಅಂಗಡಿಯಲ್ಲಿ ಶಿವಾಜಪ್ಪ ಅವರ ಪುತ್ರ ಇದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿರುವುದನ್ನು ಗಮನಿಸಿದ ಶಿವಾಜಪ್ಪ ಮಧ್ಯಸ್ಥಿಕೆ ವಹಿಸಲು ಮುಂದಾಗಿದ್ದಾರೆ. ಈ ವೇಳೆ ಗಲಾಟೆಯಲ್ಲಿ ಭಾಗಿಯಾಗಿದ್ದ ಯುವಕರಲ್ಲಿ ಒಬ್ಬರು ಅಥವಾ ಕೆಲವರು ಅವರನ್ನು ಎದೆ ಭಾಗಕ್ಕೆ ತಳ್ಳಿದ ಪರಿಣಾಮ ಅವರು ನೆಲಕ್ಕೆ ಬಿದ್ದಿದ್ದಾರೆ. ಬಿದ್ದ ನಂತರ ಅವರು ಮೇಲೇಳದೇ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.

ಘಟನೆಯ ಬಳಿಕ ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಗುರುವಾರ ಬೆಳಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳಾದ ಐಜಿಪಿ ಡಾ. ರವಿಕಾಂತೇಗೌಡ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ: ವಾಟ್ಸಾಪ್ Username ವೈಶಿಷ್ಟ್ಯಕ್ಕೆ ಬ್ರೇಕ್ – Metaಗೆ ಕೇಂದ್ರ ನೋಟಿಸ್

ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ನಿಖರ ಕಾರಣ ಹಾಗೂ ಸಾವಿಗೆ ಕಾರಣವಾದ ಸಂದರ್ಭದ ಕುರಿತು ತನಿಖೆ ಮುಂದುವರಿದಿದೆ. ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚುವರಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದ್ದು, ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ಆರೋಪ: ಉಪನ್ಯಾಸಕನ ವಿರುದ್ಧ FIR

The post ಚಿಲ್ಲರೆ ಹಣದ ವಾದದಲ್ಲಿ ವ್ಯಾಪಾರಿ ಸಾವು: ಮೂವರು ಪೊಲೀಸ್ ವಶಕ್ಕೆ appeared first on Samyukta Karnataka.

ಹೋರಿ ಓಟದಲ್ಲಿ ಪಟಾಕಿ ವಿವಾದ: ಗುಂಪು ಘರ್ಷಣೆ, 8 ಮಂದಿಗೆ ಗಾಯ
ಹಾವೇರಿ: ಕಾರಹುಣ್ಣಿಮೆ ಅಂಗವಾಗಿ ನಡೆದ ಹೋರಿ ಓಟದ ವೇಳೆ ಪಟಾಕಿ ಹಚ್ಚುವ ಸಂಬಂಧ ಎರಡು ಗುಂಪುಗಳ ನಡುವೆ ಉಂಟಾದ ಗಲಾಟೆಯಿಂದ ಕೋಮು ಉದ್ವಿಗ್ನತೆಗೆ ಉಂಟಾಗಿ 8 ಜನರು ಗಾಯಗೊಂಡ ಘಟನೆ ಹಾನಗಲ್ಲ ತಾಲೂಕಿನ ನರೇಗಲ್ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಮಸೀದಿ ಸಮೀಪ ಹೋರಿ ಓಟ ನಡೆಯುತ್ತಿದ್ದ ವೇಳೆ ಪಟಾಕಿ ಹಚ್ಚುವ ವಿಷಯಕ್ಕೆ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ, ಕುಡುಗೋಲಿನಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ಲೋಹಿತ್ ಕುರುಬರ, ಶಿವರಾಜ ಕುರುಬರ, ನಾಗಪ್ಪ ಕುರುಬರ, ಜಯಪ್ಪ ಕುರುಬರ, ನಿಂಗರಾಜ ಕುರುಬರ ಹಾಗೂ ಮಲ್ಲಪ್ಪ ಕೊಡಮಗ್ಗಿ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ಈ ಸಂಬಂಧ ಭಾಷಾಸಾಬ್ ಗೌಂಡಿ, ಖಾಜಾ ಗೌಂಡಿ ಎಂಬುವರು ಗಾಯಗೊಂಡಿದ್ದಾರೆ. ಘಟನೆ ನಡೆದ ತಕ್ಷಣ ಹಾನಗಲ್ಲ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ನರೇಗಲ್ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚುವರಿ ಪೊಲೀಸ್ ಭದ್ರತೆ ನಿಯೋಜಿಸಿದ್ದಾರೆ. ಸದ್ಯ ನರೇಗಲ್ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಆಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಪರಿಸ್ಥಿತಿಯ ಮೇಲೆ ನಿಗಾ ವಹಿಸಿದ್ದಾರೆ.

ಜಲಪಾತ, ನದಿಗಳಿಗೆ ತೆರಳಲು ಪ್ರವಾಸಿಗರಿಗೆ ನಿರ್ಬಂಧ

The post ಹೋರಿ ಓಟದಲ್ಲಿ ಪಟಾಕಿ ವಿವಾದ: ಗುಂಪು ಘರ್ಷಣೆ, 8 ಮಂದಿಗೆ ಗಾಯ appeared first on Samyukta Karnataka.