ಕಾರ್ಟೂನ್ Archives - Samyukta Karnataka

ತಾರಾತಿಗಡಿ: ಬಂದರೋ ಬಂದರೋ ಪುಟ್ಯಾ ಓಡಿ ಬಂದರೋ..
ತಾರಾತಿಗಾಡಿ: ರಷಿಯಾ ಪುಟ್ಯಾ ವಿಮಾನ ಇಳಿದ ಕೂಡಲೇ ಸೋದಿ ಮಾಮಾ ಮತ್ತು ಗೆಳೆಯರೆಲ್ಲ ಪುಟ್ಯಾನ ಸುತ್ತಲೂ ನಿಂತು…
ಬಂದರೋ ಬಂದರೋ ಪುಟ್ಯ ಬಂದರೋ…ಹಾಗೆ ಬಂದರೋ..ಏನರ ತಂದರೋ….

ಎಂದು ದೊಡ್ಡ ದನಿಯಲ್ಲಿ ಹಾಡುತ್ತ .. ಚಪ್ಪಾಳೆ ಹೊಡೆಯುತ್ತ ಆತನ ಸುತ್ತಲೂ ತಿರುಗ ತೊಡಗಿದರು. ಈ ಹಾಡಿಗೆ..ಇವರ ಡಾನ್ಸಿಗೆ ಕುಲು ಕುಲು ನಗುತ್ತಿದ್ದ ಪುಟ್ಯಾ… ವಾಟ್ ಎ ಡಾನ್ಸ್..ವಾಟ್ ಎ ಡಾನ್ಸ್ ಎಂದು ಎರಡೆರಡು ಬಾರಿ ಹೇಳಿದ.

ಹಾಡು ನಿಂತ ಮೇಲೆ ಸೋದಿ ಮಾಮಾ ಅವರನ್ನು ಬಾ ಪುಟ್ಯಾ ಬಾ…ಮಾರಿ ತೊಳಕೋ…ನಾಷ್ಟಾರೆಡಿ ಮಾಡಸ್ತೀನಿ ಅಂದರು. ಅದಕ್ಕೆ ಪುಟ್ಯಾ ನಾಷ್ಟಾ ಅಂದ ಕೂಡಲೇ ನಂಗೆ ಅಂಜಿಕಿ ಬರುತ್ತೆ…ಮೊನ್ನೆ ಅವರೆಡು ಹುಡ್ರು…ಒಬ್ಬೊಬ್ರ ಮನೆಯಲ್ಲಿ ನಾಷ್ಟಾ ಮಾಡಿದ್ದಕ್ಕ ಎಷ್ಟು ಸುದ್ದಿ ಆಗಿದಾರೆ ಅಂದ. ಹೇ…ಆ ನಾಷ್ಟಾ ಬ್ಯಾರೆ..

ನೀ ಬಾ ಸುಮ್ನ ಅಂದು ಮುಂಗೈ ಹಿಡಿದು ಒಳಗೆ ಕರೆದುಕೊಂಡು ಹೋದರು ಸೋದಿ ಮಾಮಾ. ಇಬ್ಬರೂ ಮಂಡಾಳೊಗ್ಗಣ್ಣಿ ಮಿರ್ಚಿ ತಿಂದರು..ಮಿರ್ಚಿ ಬಹಳ ಖಾರ ಅಂದ ಪುಟ್ಯಾನಿಗೆ ಬಿಸಿನೀರಿನಲ್ಲಿ ಸಕ್ಕರೆ ಕರಗಿಸಿಕೊಡಲಾಯಿತು…ಎಲ್ಲೂ ಬಂದ್ರು ಇನ್ನ ಮೀಟಿಂಗ್ ಮಾಡೋಣ ಎಂದು ಸೋದಿ ಮಾಮಾ..ನೋಡ್ ಪುಟ್ಯಾ…

ನಾನು ಅಂದರ ಏನು ಅಂತ ನಿನಗೆ ಗೊತ್ತಿದೆ…ನೀನು ಅಂದ್ರ ಏನು ಅಂತ ನಂಗೆ ತಿಳಿದಿದೆ….ಈಗ ವಿಷಯ ಏನೆಂದರೆ ನಾ ಏನ್ ಕೊಡ್ತೀನಿ ಅದನ್ನ ನೀನು ಒಲ್ಲೆ ಅನಲಾರದ ತಗೊಂಡು ಹೋಗಬೇಕು ಅಂದರು. ಅದಕ್ಕೆ ಪುಟ್ಯಾ ಹೇ ಮಾಮಾ ಎಲ್ಲೆಲ್ಲು ಗಿಫ್ಟ್ ಯಾಕೆ ಅಂದರು. ಇಲ್ಲಿಲ್ಲ..

ನಂಗೆ ಕೊಡಬೇಕು ಅಂತ ಅನಿಸಿದೆ ಅಂದದ್ದಕ್ಕೆ ಆಯಿತು ಬುಡಪಾ ನಿನ್ ಮನಸಿಗೆ ಯಾಕ ಬ್ಯಾಸರ ಮಾಡ್ಲಿ ಅಂತ ಪುಟ್ಯಾ ನಗುಮಾರಿ ಮಾಡಿದ. ಎಲ್ಲ ಮಾತುಕತೆ ಆಯಿತು…ಊಟಕ್ಕೆ ಪುಂಡಿಪಲೈ ಚಟ್ಟಿ…ಸಜ್ಜಿ ರೊಟ್ಟಿ ಮಾಡಿಸಲಾಗಿತ್ತು.

ಪುಟ್ಯಾನೂ ಜಬರ್ದಸ್ತ್ ತಿಂದ…ಸ್ವಲ್ಪ ಹೊತ್ತಾದ ಮೇಲೆ ಯಾಕೋ ಹೊಟ್ಟೆಯಲ್ಲಿ ಗುಡುಗುಡು ಅಂತ ಅಂದಾಗ ಸೋದಿ ಮಾಮಾ ಪುಟ್ಯಾನಿಗೆ ಚೂರ್ಣ ಕೊಟ್ಟರು…ಹೆಂಗರ ಆಗಲಿ ನಾ ಊರಿಗೆ ಹೋಗ್ತಿನಿ ಅಂತ ಪುಟ್ಯಾ ಹೊರಟು ನಿಂತಾಗ ಸೋದಿ ಮಾಮಾ…

ಇಬ್ಬರನ್ನು ಕೈ ಹಿಡಿದುಕೊಂಡು ಬಂದು…ಪುಟ್ಯಾ ಇಕಾ ತೊಗೋ.. ಇವೆರಡು ನಿನಗೆ ಗಿಫ್ಟ್. ಭಾಷೆ ಕೊಟ್ಟಿದ್ದಿಯ.. ಇವರನ್ನು ಇಲ್ಲೇ ಬಿಟ್ಟು ಹೋಗಬೇಡ… ಎಂದು ಹೇಳಿ ಆ ಇಬ್ಬರನ್ನು ಪುಟ್ಯಾಗೆ ಗಿಫ್ಟ್ ಕೊಟ್ಟು ಕಳಿಸಿದ.

The post ತಾರಾತಿಗಡಿ: ಬಂದರೋ ಬಂದರೋ ಪುಟ್ಯಾ ಓಡಿ ಬಂದರೋ.. appeared first on Samyukta Karnataka.

ತಾರಾತಿಗಡಿ: ತೆಂಗಿನಕಾಯಿ ಒಡೆಯಿರಿ-ಕುರ್ಚಿ ಪಡೆಯಿರಿ
ತಾರಾತಿಗಡಿ: ತೆಂಗಿನಕಾಯಿ ವ್ಯಾಪಾರಿ ಹಲ್ಟಿರ್ ಹಾಕೇಸಿ ಯಾವತ್ತೂ ಕೂತು ವ್ಯಾಪಾರ ಮಾಡಿದವನಲ್ಲ…ಟೆಂತ್‌ ಫೇಲಾಗಿ ಊರಲ್ಲಿ ಅಡ್ಡಾಡುತ್ತಿದ್ದ.. ಯಂಕೋಬಿ ಊರೂರು ಅಡ್ಡಾಡಿ ತೆಂಗಿನಕಾಯಿ ತಂದು ಸ್ವಲ್ಪ ಹೆಚ್ಚಿನ ದರಕ್ಕೆ ಮಾರಿ ಜೀವನ ಸಾಗಿಸುತ್ತಿದ್ದ. ಹಲ್ಲೀರ ಅವನ ಲಾಭ ನೋಡಿ ಸಹಿಸಲು ಆದಂತಹ ಹೊಟ್ಟೆ ಉರಿ ಮಾಡಿಕೊಂಡು ಹಿಂದಿನಿಂದ ಅವರಿವರಿಗೆ ಚುಚ್ಚಿ ಆತನ ಅಂಗಡಿ ಖಾಲಿ ಮಾಡಿಸಿ..

ತಾನು ಅದೇ ಜಾಗದಲ್ಲಿ ಅಂಗಡಿ ಇಟ್ಟ. ಚಹದ ಅಂಗಡಿ ಅಲ್ಲೇ ಇದ್ದುದರಿಂದ ಊರವರೆಲ್ಲ ಅಲ್ಲಿಗೆ ಚಹ ಕುಡಿಯಲು ಬರುತ್ತಿದ್ದರು. ಅವರು ಕರೆಯಲಿ ಬಿಡಲಿ ಅವರ ಹಿಂದೆ ಹೋಗಿ ಚಹ ಕುಡಿದು ಬಿಲನು ಅವರಿಗೆ ಅಂಬರಿಸಿ ಬರುತಿದ. ಇದು ಆತನಿಗೆ ರೂಡಿ ಆಗಿತು. ಬರೀ ಇಂಥದ್ದೇ ಮಾಡುತ್ತಿದ್ದ ಆತನ ಅಂಗಡಿ ಅಷ್ಟಕ್ಕಷ್ಟೆ ನಡೆಯುತ್ತಿತ್ತು.

ಆತನ ದೋಸ್ತ್ ಕೆಂಪ್ಯಾ ಅದೂ ಅಂಥದ್ದೇ ಗಿರಾಕಿ. ಅಂಗಡಿ ಸರಿಯಾಗಿ ನಡೆಯಲು ಏನು ಮಾಡಬೇಕು ಎಂದು ಕೇಳಿದಾಗ ಕೆಂಪ್ಯಾ..ನಿನ್ನ ಅಂಗಡಿ ನಡೀತಾ ಇಲ್ವ? ನೋಡೂ ಈಗ ಹೆಂಗಿದ್ದರೂ ಮದ್ರಾಮಣ್ಣ..ಬಂಡೇಸಿ ನಡುವೆ ಕುರ್ಚಿ ಲಫಡಾ ನಡದಿದೆ….ತೆಂಗಿನ ಕಾಯಿ ಒಡೆಸಿದರೆ ಕುರ್ಚಿ ಗ್ಯಾರಂಟಿ ಎಂದು ಹೇಳು ಆಗ ನೋಡು ವ್ಯಾಪಾರ ಅಂದ.

ಮರುದಿನವೇ ಕರಿಲಕ್ಷುಂಪತಿ ಕಡಗ ಹೋಗಿ ಹಿಂಗಿಂಗೆ ಭವಿಷ್ಯ ಹೇಳು ಅಂತ ಹೇಳಿಕೊಟ್ಟ, ಕರಿಲಕ್ಷಾಂಪತಿಯು ಇಬ್ಬರ ಗ್ಯಾಂಗಿಗೂ ಜೋಡು ಗಾಯಿ ಒಡೀರಿ..ನಿಮ್ಮ ಬಾಸ್ ಗೆ ಕುರ್ಚಿ ಪಡೆಯಿರಿ ಎಂದು ಭವಿಷ್ಯ ಹೇಳಿದ. ಮರುದಿನದಿಂದಲೇ ಐದು…ಹತ್ತು…ಐವತ್ತು…ನೂರು ಹೀಗೆ ಕಾಂಪಿಟೇಷನ್ ಮೇಲೆ ಕಾಯಿ ಒಡೆಯ ತೊಡಗಿದರು.

ಹಲ್ಟಿರನ ಕಾಯಿ ವ್ಯಾಪಾರವೂ ಹೆಚ್ಚಿಗೆ ಆಗ ತೊಡಗಿತು…ಇಬ್ಬರ ಗ್ಯಾಂಗಿನವರೂ ಬಂದಾಗ ಹಲ್ಮೀರ ಉದ್ರಿ ಕೊಡತೊಡಗಿದ. ಕಾಂಪಿಟೇಷನ್ ಮೇಲೆ ಎರಡೂ ಗ್ಯಾಂಗಿನವರು ಉದ್ರಿ ಒಯ್ದು ಲೆಕ್ಕ ಹಚ್ಚೇ ಅನ್ನ ತೊಡಗಿದರು. ಹಲ್ಮೀರ ಭಯಂಕರ ಖುಷಿ ಆದ. ಹಲ್ಟಿರನ ಕಡೆಯಿಂದ ಮೊದಲು ಮೋಸ ಹೋಗಿದ್ದನಲ್ಲ ಯಂಕೋಬಿ…

ಅವನು ಕರಿಲಕ್ಷಾಂಪತಿಯ ಹತ್ತಿರ ಹೋಗಿ ಡಬಲ್ ದಕ್ಷಿಣೆ ಕೊಟ್ಟು… ಉದ್ರಿ ತೆಂಗಿನಕಾಯಿ ಒಯ್ದವರಿಗೆ ಹಿಂಗಿಂಗೆ ಹೇಳು ಅಂದ. ಕರಿಲಕ್ಷುಂಪತಿ ಎರಡೂ ಗ್ಯಾಂಗಿನವರಿಗೆ ಪ್ರತ್ಯೇಕವಾಗಿ ಕರೆಯಿಸಿ…ನೋಡ್ರಪಾ ಬುಧ..ಕೇತು ಒಂದೇ ಕಡೆ ಇದಾರೆ…ನೀವು ಮಾಡಿದ ಉದ್ರಿ ರೊಕ್ಕಕೊಟ್ಟಿರಿ ಅಂದರೆ ಕುರ್ಚಿ ಹೋಗುತ್ತ ಹುಷಾರ್…

ಎಂದು ಹೇಳಿದ. ಅಷ್ಟರಲ್ಲಿ ಹಲ್ಟಿರನ ಕಿಸೆಯಲ್ಲಿ ರೊಕ್ಕ ಖಾಲಿ ಆಯಿತು..ತೆಂಗಿನಕಾಯಿ ಉದ್ರಿ ಇಸಿದುಕೊಂಡವರಿಗೆ ಹಣ ಕೊಡಿ ಅಂದ…ಹೋಗಲೇ ಹಲ್ಮೀರ…ನಿಂಗ ರೊಕ್ಕ ಕೊಟ್ಟರೆ ಕುರ್ಚಿ ಹುಸಿ ಹೋಗುತ್ತೆ ಅಂತ ಹೇಳಿ ಬಂಬ್ಬಾ ತೋರಿಸಿದರು..ಎಲ್ಲ ಲಾಸ್ ಆಗಿ ಹಲ್ಲೀರ ಅಂಗಡಿ ಬಂದ್ ಮಾಡಿದ. ಯಂಕೋಬಿ ಮೂಲೆಯಲ್ಲಿ ನಿಂತು ಮುಸಿ ಮುಸಿ ನಗತೊಡಗಿದ.

The post ತಾರಾತಿಗಡಿ: ತೆಂಗಿನಕಾಯಿ ಒಡೆಯಿರಿ-ಕುರ್ಚಿ ಪಡೆಯಿರಿ appeared first on Samyukta Karnataka.

ತಾರಾತಿಗಡಿ: ನೀವೇನಂತೀರಿ? ನೀವು ಯಾರ ಕಡೆ?
ತಾರಾತಿಗಡಿ: ಏನಾದರೂ ಘಟನೆ ನಡೆಯಿತೆಂದರೆ ಸಾಕು ಕಿವುಡನುಮಿ ಕ್ಯಾಮರಾ ಹೊತ್ತುಕೊಂಡು ದೊಡ್ಡರು…ಸಣ್ಣೂರು… ಓಣಿ..ಓಣಿ ತಿರುಗಾಡಿ…ಅಭಿಪ್ರಾಯ ಕೇಳುತ್ತಿದ್ದಳು. ಈಗ ಮದ್ರಾಮಣ್ಣ- ಬಂಡೇಸಿ ಕುರ್ಚಿ ಸಲುವಾಗಿ ನೀವೇನಂತೀರಿ…? ನೀವು ಯಾರಕಡೆ…? ಎಂದು ಕೇಳಲು ಮುಂದಾದಳು ಇಲ್ಲಿಂದಲೇ ಶುರುವಾಗಿಬಿಡಲಿ ಎಂದು ಆಕೆ ಸೀದಾ ಪಂ. ಲೇವೇಗೌಡರಕಡೆ ಹೋಗಿ..ನೀವೇನಂತೀರಿ? ಅಂದಳು.

ಅದಕ್ಕೆ ಅವರು…ನಾ ಏನ ಹೇಳು…ಈ ಕಡೆ ಹೊರಳಿದರೆ ಲೇವಣ್ಣಾ ಅಂತೀನಿ…ಆ ಕಡೆ ಹೊರಳಿದರೆ ಸುಮಾರಣ್ಣಾ ಅಂತೀನಿ…ಎದುರಿಗೇ ನೋಡಿದರೆ…ಕಿಕಿಲ್ ಕೂಸೂ ಅಂತೀನಿ…ಇದಕ್ಕಿಂತ ಏನನ್ನಲಿ? ಅಂದರು. ಇನ್ನು ನಾನು ಸೋದಿ ಮಾಮೋರ ಕಡೆ ಅಂದರು. ಅಲ್ಲಿಂದ ಬಂದ ಆಕೆ ಕನ್ನಾಳಲ್ಲನ ಕಡೆ ಹೋಗಿ…ಏನಂತೀರಿ? ಅಂದಳು..

ಏನರ ಅಂದರೆ ಯಾರಾದರೂ ಸುಮ್ಮ ಇರ್ತಾರಾ? ಅಂದ. ಹೋಗಲಿ ನೀವು ಯಾರ ಕಡೆ ಅಂದಳು. ಅದಕ್ಕೆ ಆತ ತಲೆಕೆರೆದುಕ ಕೊಳ್ಳುತ್ತ…ನಾನು…ನಿನ್ನ ಕಡೆಯಂತೂ ಅಲ್ಲ ಅಂದ…ಅಯ್ಯಾ ಇವನ ಅಂತ ಸಿಟ್ಟೂರಪ್ಪನ ಕಡೆ ಹೋಗಿ…ಸಾರ್ ಏನಂತೀರಿ ಅಂದಳು…ಏನಾರ ಅನ್ನಬೇಕು ಅಂದರೆ ಆ ಗುತ್ನಾಳ್ ಗೆ ಅನ್ನಬೇಕು…ನಾ ಒಂದು ಅಂದರೆ ಅವನು ನೂರು ಅಂತಾನೆ….ಸುಮ್ಮೆ ಯಾಕಿದ್ದೀತು? ಅಂತ ಸುಮ್ಮೇ ಇದ್ದೀನಿ ನೋಡಿ ಅಂತ ಅಂದರು…

ಹೋಗಲಿ ನೀವು ಯಾರ ಕಡೆ ಅಂದರೆ..ನಾನು ಗುಜೇಂದ್ರನ ಕಡೆ ನೋಡಮ್ಮ ಅಂತ ಅಂದರು..ನಂತರ ಮೇಕಪ್ ಮರೆಮ್ಮ ಬಂದು…ನಾನು ನಮ್ಮೆಜಮಾನರ ಕಡೆ ಅಂದಳು…ಕರಿ ಭಾಗೀರತಿ ನಾ ಏನೂ ಅನ್ನಂಗಿಲ್ಲ ಅಂದಳು…ದನದ ಗೌರವ್ವ ನಾನು ಹುಚ್ಚುಲುಗನ ಕಡೆ ಅಂದಳು…ಇಷ್ಟಕ್ಕೆ ತಲೆ ಚಿಟ್ಟು ಹಿಡಿಸಿಕೊಂಡ ಕಿವುಡನುಮಿ..ನಾ ಕೇಳಿದ್ದು..

ಮದ್ರಾಮಣ್ಣನ ಕಡೆಯೋ? ಬಂಡೇಸಿ ಕಡೆಯೋ ಅಂತ ಕೇಳಿದರೆ.. ಇವರು ಏನೇನೋ ಅನ್ನುತ್ತಿದ್ದಾರೆ….ಭಾನುವಾರದ ವರೆಗೆ ಏನೂ ಮಾತಾಡಲ್ಲ ಎಂದು ಬಯಲನುಮಪ್ಪನ ಮುಂದೆ ಆಣೆ ಮಾಡಿದಳು.

The post ತಾರಾತಿಗಡಿ: ನೀವೇನಂತೀರಿ? ನೀವು ಯಾರ ಕಡೆ? appeared first on Samyukta Karnataka.

ತಾರಾತಿಗಡಿ: ಅವರಿಬ್ಬರನ್ನು ಬಿಡಿ ನನಗೆ ಕೊಡಿ
ತಾರಾತಿಗಡಿ: ಸಾ ಹೇಬ್ ಇಲ್ಲಿ ಏನು ನಡೆದಿದೆ ಅಂತ ನಿಮಗೆ ನೀವು ಗೊತ್ತಿಲ್ಲ..ಗೊತ್ತಾದರೆ ಸುಮ್ಮನಿರಲ್ಲ..ನೀವು ಸುಮ್ಮನಿದ್ದರೂ ನಾನು ನನ್ನ ಗ್ಯಾಂಗು ಸುಮ್ಮನಿರಲ್ಲ ಅದಕ್ಕೆ ಸುಮ್ಮನೇ ಯಾಕೆ ಅವರಿಬ್ಬರನ್ನು ಬಿಡಿ..ನನಗೆ ಕೊಡಿ ಎಂದು ಶ್ರೀ…ಶ್ರೀ.. ತಿಗಡೇಸ್ಯಾನಂದ ರು ಅಮ್ಮಾಜಿ…ಅಜ್ಜಾಜಿ…ಹುಡುಗಾಜಿ ಅವರಿಗೆ ಬರೆದಿರುವ ಪತ್ರ ನೋಡಿ ಈಗ ಗದ್ದಲದಲ್ಲಿರುವ ಇಬ್ಬರ ಗ್ಯಾಂಗೂ ಹೌ ಹಾರಿದೆ…

ಈಗ್ಗೆ ಕೆಲವು ದಿನಗಳ ಹಿಂದೆ ಬಂಡೇಸಿ ಗ್ಯಾಂಗಿನವರು ತಿಗಡೇಸಿಯನ್ನು ಮೀಟ್ ಮಾಡಿ…ಅವರನ್ನುಇಳಿಸಲೇಬೇಕು. ಫೆವಿಕಾಲ್ ಆಗಿದಾನೆ ಎಂದು ಬಂಡೇಸಿ ಗ್ಯಾಂಗಿನವರು ಹೇಳಿದರೆ…ಮದ್ರಾಮಣ್ಣೂರ ಗ್ಯಾಂ ಗಿನವರು…ಬಿಡಿಸಬೇಡಿ…ಬುಡಿಸಬ ರೇಡಿ…ಅಣ್ಣನನ್ನು ಬಿಡಿಸಬೇಡಿ…ಅವರಿಗೆ ಕೊಟ್ಟರೆ ಕೋಡಂಗಿ ಗ್ಯಾರಂಟಿ ಎಂದು ಹೇಳುತ್ತಿದ್ದರು…

ಈ ಎರಡೂ ಗ್ಯಾಂಗುಗಳು ಕಣಿ ಕೇಳಲು ಬಂದು ಇದೆಲ್ಲ ಹೇಳಿದಾಗ ಎಲ್ಲವೂ ತಿಗಡೇಸಿಗೆ ಅರ್ಥವಾಗಿತ್ತು. ಇವರಿಬ್ಬರೂ ಹೀಗೆ ಗುದ್ದಾಡಲಿ ಎಂದು ಎರಡೂ ಗ್ಯಾಂಗಿನ ಮಧ್ಯ ಮತ್ತಷ್ಟು ತಂದಿಟ್ಟ… ಈಗ ಮೈ ದಮಾಂಡ್ ನವರು ಅವನೂ ಬ್ಯಾಡ…ಇವನೂ ಬ್ಯಾಡ ಅಂದರೆ ಒಬ್ಬರು ಬೇಕಲ್ಲ…ಅದಕ್ಕೆ ನನ್ನ ಹೆಸರೇ ಬರಲಿ….

ನನ್ನ ನೇಮ್ ಹೇಗಿದೆ ಅವರಿಗೆ ಗೊತ್ತಿಲ್ಲ…ಸಾಗುವ ಸರ್ಪ ಸಲಾಂ ಹಾಕುತ್ತದೆ….ಜನರು ಕಾಲಿಡಿದು ದಕ್ಷಿಣೆ ಕೊಡ್ತಾರೆ..ಹೋದಲ್ಲಿ ಚಪ್ಪಾಳೆ ಹೊಡೀತಾರೆ..ಬಂದಲ್ಲಿ ಸೀಟಿ ಹೊಡೀತಾರೆ. ಮದ್ರಾಮಣ್ಣ..ಬಂಡೇಸಿಗಿಂತ ನಾನೇ ಫೇಮಸ್ಸು….ನನಗೆ ಕೊಡಿ…ನನಗೆ ಕೊಡಿ…ಒಂದು ಬಾರಿ ಕೊಟ್ಟು ನೋಡಿ ಆಮೇಲೆ ನಿಮಗೇ ತಿಳಿಯುತ್ತದೆ ನನ್ನ ಮೋಡಿ ಎಂದು ಡೆಲ್ಲಿ ಮಾಮೂಗೆ ಹೇಳಿದ್ದಾನೆ.

ಇಬ್ಬರ ಮಧ್ಯದಲ್ಲಿ ತಿಗಡಿ ಸ್ವಾಮಿ ಹೊಡೆದ ಚಾನ್ಸ್ ಎಂದು ಎಲ್ಲ ಟಿವಿಗಳಲ್ಲಿ…ಪೇಪರ್ ಗಳಲ್ಲಿ.. ಯು ಟ್ಯೂಬ್ ಗಳಲ್ಲಿ…ಜನರ ಬಾಯಲ್ಲಿ ಓಡಾಡುತ್ತಿದೆ…. ಪ್ರಜಾಪ್ರಭುತ್ವದಲ್ಲಿ ಎಲ್ಲವೂ ಸಾಧ್ಯ ಎಂದು ಪಂ. ಲೇವೇಗೌಡರು ಮೆಲ್ಲಗೇ ಹೇಳಿದರು…ಅದನ್ನು ಕೇಳಿಸಿಕೊಂಡ ಪಂ. ಲೇವಣ್ಣ..ಹೌದಪ್ಪಾಜಿ ಹೌದಪ್ಪಾಜಿ ಎಂದು ಹೇಳುತ್ತಿದ್ದಾರೆ.

The post ತಾರಾತಿಗಡಿ: ಅವರಿಬ್ಬರನ್ನು ಬಿಡಿ ನನಗೆ ಕೊಡಿ appeared first on Samyukta Karnataka.

ತಾರಾತಿಗಡಿ: ಪಡ್ಕೊಬೇಕು ಅಂದರೆ ತಡ್ಕೊಬೇಕು
ತಾರಾತಿಗಡಿ: ಭೇಟಿಯಾಗಲು ಮನೆಗೆ ಹೋದರೆ…ಒಳಗಡೆ ಇದ್ದು ಇಲ್ಲ ಎಂದು ಹೇಳಿ ಕಳುಹಿಸಿದರು…ಹೊರಗಡೆ ಕಾದು ಕುಳಿತು ಅವರು ಹೊರಗಡೆ ಬಂದಾಕ್ಷಣ…ರಪ್ಪನೇ ಹೋಗಿ ನಿಂತು ಮಾತನಾಡಿಸಬೇಕು ಅಂದರೆ… ಅವರ ಕಾರಿನ ಕರಿ ಟಿಂಟೆಡ್ ಗಾಜಿನಲ್ಲಿ ಒಳಗಡೆ ಯಾರಿದ್ದಾರೆ ಎಂದು ಕಾಣಿಸುವುದೇ ಇಲ್ಲ.

ನನಗೆ ನೋಡಿದರೆ ಅವರನ್ನು ಮಾತನಾಡಿಸದೇ ಒಂದು ಹೆಜ್ಜೆ ಇಡಲು ಆಗುವುದಿಲ್ಲ ಎಂದು ದುರದುಂಡೇಸಿ ಮಿಡುಕಾಡಿ ಮೊಬೈಲ್‌ನಿಂದ ಕರೆ ಮಾಡಿದರೆ ಮರುಕ್ಷಣವೇ ಫೀಸ್ ವೇಟ್ ಐ ವಿಲ್ ಕಾಲ್ ಎಂಬ ಮೆಸೇಜು ಬಂದಿತ್ತು. ದುಂಡೇಸಿಯೂ ಸುಮ್ಮನೇ ಇರುವ ಮನುಷ್ಯನೇ ಅಲ್ಲ…ಮತ್ತೆ ಕರೆ ಮಾಡಿದರೆ ವೇಟ್.. ವೇಟ್ ಎಂದು ಬಂದಿತ್ತು.

ಮೂರನೇ, ನಾಲ್ಕನೇ ಸಲ ಕಾಲ್ ಮಾಡಿದರೂ ವೇಟ್ ಐ ವಿಲ್ ಕಾಲ್ ಎಂದು ಮತ್ತೆ ಬಂದಿತ್ತು. ಇವರು ಬೇಕಂತಲೇ ಮಾಡುತ್ತಾರೋ ಏನೋ ಎಂಬ ಅನುಮಾನದೊಂದಿಗೆ ತಿಗಡೇಸಿ ಫೋನ್ ಇಸಿದುಕೊಂಡು ಅವರ ನಂಬರ್ ನಿಂದ ಕಾಲ್ ಮಾಡಿದರೆ ರಿಂಗ್ ಆದಾಗ ಆ ಕಡೆಯಿಂದ ಹಲೋ ಅನ್ನುತ್ತಾರೆ…

ಸಾಹೇಬ್ರೆ ನಾನು ಅಂದ ಕೂಡಲೇ ಅದ್ಯಾವುದೋ ಹೆಣ್ಣುಮಗಳು ನೀವು ಕರೆ ಮಾಡಿರುವ ಚಂದಾದಾರರು…ಎಂದು ಉಲಿಯುತ್ತಾಳೆ… ಇದೇನು ಮೊಬೈಲ್‌ಗಳದ್ದೇ ತಪ್ಪೋ? ನೆಟ್‌ವರ್ಕ್‌ದ್ದೋ ಎಂದು ಒಂದು ತಿಳಿಯದ ಹಾಗೆ ಆಗಿದೆ ಎಂದು ಕರಿಲಕ್ಷುಂಪತಿಯ ಹತ್ತಿರ ಕವಡೆ ಹಾಕಿಸಿ ಕೇಳಿದಾಗ…

ಪಡೋಬೇಕು ಅಂದರೆ ತಡ್ಕೊಬೇಕು ಎಂದು ಹೇಳಿದ್ದ. ಅವರು ಫೋನೆತ್ತಿ ಒಂದೇ ಒಂದು ಸಲ… ಆಯೋಗಯ್ಯ ಅಂದರೆ ನನ್ನ ಕೆಲಸ ಮುಂದುವರಿಸುತ್ತೇನೆ ಎಂದು ಅಂದುಕೊಂಡು.. ಮರುಕ್ಷಣವೇ ಆದದ್ದಾಗಲಿ ಎಂದು ಎಲ್ಲರಿಗೂ ಈ ವಿಷಯ ತಿಳಿಸಿಬಿಡೋಣ ಎಂದು ಓಣೋಣಿ ತಿರುಗಾಡಿ…

ನೋಡ್ರಪ ಹೀಗಾಯ್ತು…ನೀನು ನನ್ನೊತೆ ಇರಬೇಕು ಎಂದು ಹೇಳಿದಾಗ ಅವರು ಹೇಳಿದರೆ ಓಕೆ ಅಂದರು…ನಿಮ್ಮ ಎದುರಿಗೇ ಹೇಳಿಸುತ್ತೇನೆ ತಡೀರಿ ಎಂದು ದುರದುಂಡೇಸಿ ಮತ್ತೆ ಕರೆ ಮಾಡಿದಾಗ…ಫೀಸ್ ವೇಟ್…ಪ್ಲೇಸ್ ವೇಟ್ ಐ ವಿಲ್ ಕಾಲ್ ಅಂದಿತ್ತು…ಭೇಟಿಯಾಗಿದ್ದವರೂ ಸಹ ಪಡ್ಕೊಬೇಕು ಅಂದರೆ ತಡ್ಕೊಬೇಕು ಎಂದರು ದುರದುಂಡೇಸಿ ತಲೆ ಕೆರೆದುಕೊಂಡು ನೋಡ್ತೀನಿ..ನೋಡ್ತೀನಿ ಅಂದುಕೊಂಡು ಹೊರಟು ಹೋದ.

The post ತಾರಾತಿಗಡಿ: ಪಡ್ಕೊಬೇಕು ಅಂದರೆ ತಡ್ಕೊಬೇಕು appeared first on Samyukta Karnataka.

ತಾರಾತಿಗಡಿ: ಬಿಗ್ ಬಾಸ್ ಹೆಂಗೋ ನಾವ್ ಹಂಗೆ
ತಾರಾತಿಗಡಿ: ಕೈ ಕೃಪಾಪೋಷಿತ ನಾಟಕ ಮಂಡಳಿ ಅವರು ಪ್ರತಿದಿನ ರಾತ್ರಿ..ಅಭಿನಯಿಸುತಿರುವ..ಬಿಗ್ ಬಾಸ್ ಎಂಬ ಸುಂದರ ಸಾಮಾಜಿಕ ನಾಟಕ ಭರ್ಜರಿಯಾಗಿ ಓಡುತ್ತಿದೆ. ಎಲ್ಲ ಮಂದಿ ಅಲ್ಲಿನ ಭರ್ಜರಿ ಮನರಂಜನೆ ಸೀನ್‌ಗಳನ್ನು ಮನಸ್ಸಿಗೆ ಹಚ್ಚಿಕೊಂಡು ನೋಡುತ್ತಿದ್ದಾರೆ.

ನಾಟಕದ ಮುಖ್ಯಪಾತ್ರಧಾರಿ ಮದ್ರಮಾಣ್ಣ- ಬಂಡೇಸಿ ಫೈಟಿಂಗ್ ದೃಶ್ಯಗಳನ್ನು ನೋಡಿದ ಜನರು ಒನ್ಸ್ ಮೋರ್ ಎಂದು ಕೂಗು ಹಾಕುತ್ತಿದ್ದಾರೆ. ಜೋರಾಗಿ ಡೈಲಾಗ್ ಹೇಳುತ್ತಿದ್ದ ಈ ಇಬ್ಬರು ಹೀರೋ ಈಗ ಮೆತ್ತಗಾಗಿ ಬಿಗ್ ಬಾಸ್ ಹೇಗಂತಾರೋ ಹಾಗೆ ಅನ್ನುವ ದೃಶ್ಯ ಪ್ರೇಕ್ಷಕರ ಕರುಳು ಕಿವಿಚಿದಂತಾಗುತ್ತದೆ..

ಬಿಳಿಬಿಳಿ ಗಡ್ಡ. ಕೆದರಿದ ಕೂದಲು ಮಾಡಿಕೊಂಡ ಬಂಡೇಸಿ ಆಂಗ್ರಿ ಯಂಗ್ ಮ್ಯಾನ್ ರೂಲ್ ನಂದು ಅಂದುಕೊಂಡಿದ್ದರೂ…ವೇಟ್…ವೇಟ್ ಅನಿಸಿಕೊಂಡು ಪ್ಲೇಟ್‌ನಲ್ಲಿನ ಉಪ್ಪಿಟ್ಟೂ ತಿನ್ನುವುದನ್ನು ಮರೆತಿದ್ದಾರೆ…

ಇಡೀ ನಾಟಕದಲ್ಲಿ ಪಾತ್ರಧಾರಿಗಳು ಬಿಗ್ ಬಾಸ್..ಬಿಗ್ ಬಾಸ್ ಅಂದರೂ ಸಹ ಬಿಗ್ ಬಾಸ್ ಹೂಂ ಇಲ್ಲ..ಉಪ್ಪಿನಕಾಯಿ ಇಲ್ಲ ಅನ್ನುವ ಹಾಗೆ ಸೊಂಡಿ ಮುಂದೆ ಮಾಡಿ ಕುಳಿತಿದ್ದಾರೆ…ಅಮ್ಮೋರು…ಕೆಂಪುಡುಗ .ನೋಡೋಣ..

ವೇಟ್ ಅನ್ನುವ ದೃಶ್ಯವಂತೂ ಮನಮೋಹಕವಾಗಿದೆ…ಇನ್ನು ಕಮಲೇಸಿ ಗ್ಯಾಂಗಿನವರು…ಇವರು ಪತಿ ಇವರಿಗೆ ಬಿಗ್ ಬಾಸೇ ಗತಿ ಅಂತ ಕಿಸಕ್ಕನೇ ನಗುವ ಸೀನ್ ಮಜವಾಗಿದೆ…ರಾಜಗಾಂಭೀರ್ಯದಿಂದ..ಲೇವೇಗೌಡರು…ಅವರುಗೂ ಬಾಸ್…ಇವರಿಗೂ ಬಾಸ್..

ನನಗೆ ನಾನೇ ಬಿಗ್ ಬಾಸ್ ಅನ್ನುತ್ತಿರುವಾಗಲೇ ಪರದೆ ಜಾರುತ್ತದೆ…ಮುಂದಿನ ಶೋ ಇನ್ನರ್ಧಗಂಟೆ ಎನ್ನುವ ಅನೌನ್ಸಮೆಂಟೂ ಆಗುತ್ತದೆ. ಕೈ ನಾಟಕ ಯಾವಾಗ ಮುಗಿಯುತ್ತೋ ಏನೋ ನಂತರದ ಕಮಲದ ನಾಟಕವೋ…ಅವರ ನಾಟಕವೋ…ಎಂದು ಪ್ರೇಕ್ಷಕರು ಆಕಾಶದ ಕಡೆ ನೋಡಿ ಕೈ ಮುಗಿದರು….

The post ತಾರಾತಿಗಡಿ: ಬಿಗ್ ಬಾಸ್ ಹೆಂಗೋ ನಾವ್ ಹಂಗೆ appeared first on Samyukta Karnataka.

ತಾರಾತಿಗಡಿ: ಹಲೋ, ನಾನು ಟ್ರಂಪೇಸಿ ಏನು ಹೇಳೋ ತಿಪ್ಪೇಸಿ….
ತಾರಾತಿಗಡಿ: ರಾಜ್ಯದಲ್ಲಿ ಏನೇನೋನಡೀತಾ ಇದೆ ಇವರಿಗೇನು ಕೆಲಸವಿಲ್ಲವೇ ಎಂದು ಅಮೆರಿಕದಲ್ಲಿ ಭಯಂಕರ ಸಿಟ್ಟಿಗೆದ್ದಿದ್ದಾನಂತೆ. ತನಗೆ ಸಂಬಂಧಿಸಿದ್ದು ಅಲ್ಲದಿದ್ದರೂ ಮುಂದೊಂದು ದಿನ ನಾನು ಕರೆ ಮಾಡಿ ಎಲ್ಲ ಬಗೆಹರಿಸಿದೆ ಎಂದು ಹೇಳಲು ಬರುತ್ತದೆ ಎಂದು ಟ್ರಂಪೇಸಿಯ ಪ್ಲಾನಾಗಿತ್ತು.

ಟ್ರಂಪೇಸಿಯ ಬಗ್ಗೆಯೂ ಎಲ್ಲರಿಗೂ ತಿಳಿದಿತ್ತು. ಎಲ್ಲದರಲ್ಲೂ ನಾನು ನಾನು ಎಂದು ಅಂತಿದೆ. ಬರೋಬ್ಬರಿ ಪಾಠ ಕಲಿಸಬೇಕು ಎಂದು ಪ್ರತಿಯೊಬ್ಬರು ನಿರ್ಧರಿಸಿದ್ದರು. ಟ್ರಂಪೇಸಿ ಅವತ್ತು ಫೋನ್ ತೆಗೆದು ನಂಬರ್ ಡೈಲ್ ಮಾಡಿದ ಆ ಕಡೆಯಿಂದ ರಿಂಗಾಗಿ ಎತ್ತಿದ ಕೂಡಲೇ…

ಟ್ರಂಪೇಸಿ ಎದುರಿಗೆ ಇದ್ದವರಿಗೆ ಕಣ್ಣು ಹೊಡೆದು…ಹಲೋ ಸೋದಿ ಮಾಮೋರಾ? ಎಂದು ಕೇಳಿದ…ಅದಕ್ಕೆ ಸೋದಿ ಮಾಮಾ..ಏಯ್ ಈಗ ಮಾಡಿದ್ಯಾ ನೀನು..ಮೊನ್ನೆ ಬಸ್‌ಚಾರ್ಜಿಗೆ ಅಂತ ನೂರು ರೂಪಾಯಿ ಇಸಿದುಕೊಂಡಿದ್ದು ಯಾವಾಗ ಕೊಡುತ್ತಿ? ಅಂದಾಗ…

ಸಾ…ಸಾರಿ ರಾಂಗ್ ನಂಬರ್ ಎಂದು ಕಟ್ ಮಾಡಿದ ಟ್ರಂಪೇಸಿ ಮೊಬೈಲ್ ನಂಬರ್ ಮತ್ತೊಮ್ಮೆ ಪರಿಶೀಲಿಸಿಕೊಂಡು ಇದೇ ನಂಬರ್ ಅಲ್ವಾ ಮಾಮೋರದ್ದು ಅಂದುಕೊಂಡ..ಯಾಕಿದ್ದೀತು ಬಿಡು ಅಲ್ಲಿನವರಿಗೇ ಕಾಲ್ ಮಾಡುತ್ತೇನೆ ಎಂದು ಪಂ. ಲೇವೇಗೌಡರಿಗೆ ಕಾಲ್ ಮಾಡಿದ….

ಹಲೋ ನಾನು ಟ್ರಂಪೇಸಿ ಅಂದ ಕೂಡಲೇ…ಲೇವೇಗೌಡರು…ಲೇ ತಿಪ್ಪೇಸಿ…ನೀ ಎಲ್ಲಿದ್ದೀಯ? ಮೊನ್ನೆ ಬೆಳ್ಳಿಹಬ್ಬದಲ್ಲಿ ನೀರು ತಂದು ಕೊಡು ಅಂತ ನಾ ಹೇಳಿದರೆ ಆ ಕಡೆ ಹೋದವನು ಬರಲೇ ಇಲ್ಲ..

ಇಲ್ಲಿ ಬಾ ಮಾಡ್ತೀನಿ ನಿಂಗೆ ತಿಪ್ಪೇಸಿ ಅಂದ ಕೂಡಲೇ ಗಾಬರಿಯಾದ ಟ್ರಂಪೇಸಿ..ಅಲಾ ಇ…ಇವರಿಗ್ಯಾರಿಗೂ ಬೇಡ ಎಂದು ಬಂಡೇಸಿಗೆ ಕಾಲ್ ಮಾಡಿ..ಅಲೋ ನಾನು ಟ್ರಂಪೇಸಿ ಅಂತ ಹೇಳಿದರು. ಅದಕ್ಕೆ ಬಂಡೇಸಿ…

ಹೇಳಪಾ ದನಿ ಚೇಂಜ್ ಮಾಡಿದರೆ ನನಗೇನೂ ಗೊತ್ತಾಗುವುದಿಲ್ಲವೇ? ನಿನಗೆ ಬೇಲ್ ಕೊಡಿಸೋಕೆ ಸಹಾಯ ಮಾಡಲ್ಲ ಕಣೋ ಅಂದರು. ತಥ್ ಎಂದುಕೊಂಡು..ಇನ್ನು ಏನಿದ್ದರೂ ಮದ್ರಾಮಣ್ಣನವರಿಗೆ ಕಾಲ್ ಮಾಡಿ ತಿಳಿದುಕೊಳ್ಳೋಣ ಎಂದು ಮದ್ರಾಮಣ್ಣನವರ ನಂಬರ್ ತಿರುಗಿಸಿ ಹಲೋ ಅಂದಾಕ್ಷಣಾ…

ಅವತ್ತು ಪಂಕ್ಸನ್ ನಲ್ಲಿ ಏನೇನೋ ಅಂದಿದ್ದಿ..ಪೊಲೀಸರಿಗೆ ಹೇಳಿ ಟ್ರ್ಯಾಕ್ ಮಾಡಸ್ತೀನಿ ಅಂದ ಕೂಡಲೇ ಇವರಾರೂ ಯಾರ ಪಟ್ಟಿಗೂ ಬಗ್ಗುವವರಲ್ಲ ಎಂದು ಸ್ವಿಚ್ಚಾಫ್ ಮಾಡಿದ ಟ್ರಂಪೇಸಿ.

The post ತಾರಾತಿಗಡಿ: ಹಲೋ, ನಾನು ಟ್ರಂಪೇಸಿ ಏನು ಹೇಳೋ ತಿಪ್ಪೇಸಿ…. appeared first on Samyukta Karnataka.

ತಾರಾತಿಗಡಿ: ಶಾಸ್ತ್ರದ ಗಿಳಿ ಹೇಳಿದ್ದೇನು…?
ತಾರಾತಿಗಡಿ: ಯಾರಾಗ್ತರೆ ಎಂದು ಯಾರನ್ನೇ ಕೇಳಿದರೂ… ನಂಗೊತ್ತಿಲ್ಲ ನಂಗೊತಿಲ ನೋಡಬೇಕು ಎಂದು ಹೇಳುವುದನ್ನು ಕೇಳಿ, ಕೇಳಿ ತಲೆಕೆಡೆಸಿಕೊಂಡ ತಿಗಡೇಸಿ ಇದಕ್ಕೆಲ್ಲ ಅದೇ ಬರೋಬ್ಬರಿ ಎಂದು ಶಾಸ್ತ್ರ ಹೇಳುವ ಕರಿಲಕ್ಷುಂಪತಿ ಹತ್ತಿರ ಹೋಗಿ ನೋಡಿ…ಯಾರಾಗ್ತಾರೆ ಎಂದು ಒಂದು ಬಾರಿ ಹೇಳಿಬಿಡಿ ಎಂದು ಕೇಳಿದ.

ಅದಕ್ಕೆ ಕರಿಲಕ್ಷುಂಪತಿ ಸ್ವಲ್ಪ ಹೊತ್ತು ಸುಮ್ಮನಿದ್ದು ಕವಡೆ ಹಾಕಿ…ನೀವು ವೇಟ್ ಮಾಡಬೇಕು ಈಗಲೇ ಹೇಳಲು ಆಗುವುದಿಲ್ಲ ಎಂದು ಹೇಳಿ ನನ್ನ ದಕ್ಷಿಣೆ ಕೊಡು ಎಂದು ಗಂಟು ಬಿದ್ದು ಇಸಿದುಕೊಂಡ…ಕುಂಟಿರುಪ್ತಿಯೂ ಸಹ ನಾ ಕರೆಕ್ಕಾಗಿ ಹೇಳಿದರೆ ಅಲ್ಲೋಲ ಕಲ್ಲೋಲ ಆಗುತ್ತದೆ ಆದ್ದರಿಂದ ನಾನೇನೂ ಹೇಳುವುದಿಲ್ಲ ಎಂದು ಹೇಳಿದ.

ಇನ್ನೇನಿದ್ದರೂ ಅಲ್ಲಿಗೆ ಹೋಗುವುದು ಲೇಸು ಎಂದು ಹತ್ತೂರು ದಾಟಿಕೊಂಡು ಆ ಊರಿಗೆ ಮಟಮಟ ಮಧ್ಯಾಹ್ನ ತಲುಪಿದ. ಹಾಗೆಯೇ ನಡೆದುಕೊಂಡು ಹೋದಾಗ ದೊಡ್ಡ ಆಲದ ಮರದ ಕೆಳಗೆ ಬಿಳಿ ಗಡ್ಡದ ಎಳೆ ಮುದಕುನಂತವನು ಕುಳಿತಿದ್ದ.

ಆತನಿಗೆ ಹೋಗಿ ಶಿರಿಸಾಸ್ಟಾಂಗ ನಮಸ್ಕಾರ ಹಾಕಿದ. ಆ ಎಳೆ ಮುದುಕಪ್ಪ ಬಾ..ಬಾ ಎಂದು ಬೆನ್ನುಸವರಿ ಮೇಲೆಬ್ಬಿಸಿ ಕೂಡಿಸಿ ಏನ್ ಬಂದದ್ದು ಎಂದು ಕೇಳಿದಾಗ….ಸ್ವಾಮೀ ಇಡೀ ರಾಜ್ಯದಲ್ಲಿ ಬರೀ ಅವೇ ಮಾತುಗಳನ್ನು ಕೇಳಿ ಸಾಕಾಗಿದೆ…

ಅವರು ನೋಡಿದರೆ ನಾನೇ ನಾನು ಅನ್ನುತ್ತಿದ್ದಾರೆ…ಇವರು ನೋಡಿದರೆ…ಪೆನ್ನು ಹಾಳಿ ಹಿಡಿದುಕೊಂಡು ಸೈ ಮಾಡಿ…ಸೈ ಮಾಡಿ ಅನ್ನುತ್ತಿದ್ದಾರೆ… ನಾನು ಮೊದಲೇ ಸಮಾಜಜೀವಿ..ಇದರಿಂದ ನನಗೆ ತಲೆಕೆಟ್ಟು ಹೋಗಿದೆ…ಯಾರಾಗುತ್ತಾರೆ ಎಂದು ನಿಮ್ಮ ಗಿಳಿಶಾಸ್ತ್ರ ಹೇಳಿ ಸ್ವಾಮಿ ಅಂದ.

ಅದಕ್ಕೆ ಸ್ವಲ್ಪ ಹೊತ್ತು ಸುಮ್ಮನಿದ್ದ ಆತ ಓಹೋ ಇದಾ ಸಮಚಾರ? ಎಂದು ಪಕ್ಕದಲ್ಲಿದ್ದ ಗಿಳಿಯ ಪಂಜರ ಮುಂದಿಟ್ಟುಕೊಂಡ. ಪಂಜರದ ಮುಂದೆಯೇ ಇಸ್ಪೀಟ್ ಕಾರ್ಡಿನಂಥವು ಇಟ್ಟುಕೊಂಡು…ಅರೆರೆರೆ ಗಿಣಿರಾಮಾ… ಅರೆರೆರೆ ಗಿಣಿರಾಮಾ…ಹೊರಬಂದು ನಿಜ ಹೇಳು…ನಿನ್ನ ಮೇಲೆ ಹಜಾರ್ ಮಂದಿ ನಂಬಿಕೆ ಇದೆ ಎಂದು ಅಂದು ಪಂಜರದಿಂದ ಗಿಳಿಯನ್ನು ಹೊರಬಿಟ್ಟ…

ಆ ಗಿಳಿ ಹೊರಬಂದು ಇಬ್ಬರನ್ನೂ ಪಿಳಿಪಿಳಿ ನೋಡಿ…ಕಾರ್ಡು ಕಡೆ ಹೋಗುವುದನ್ನು ಬಿಟ್ಟು..ಅಲ್ಲಿ ಬಿದ್ದಿದ್ದ ಪೋಸ್ಟರ್ ನ್ನು ಎತ್ತಿ ತೆಗೆದುಕೊಂಡು ಬಂತು…ಇಬ್ಬರೂ ಅದರ ಮೇಲೆ ಏನು ಬರದಿದೆ ಎಂದು ನೋಡಿದಾಗ…ಕೆಲಸವಿಲ್ಲದ ಮುರಾಳ ಆದ ನೋಡು ಗೋಟ್ಯಾಳ ಎಂದು ಬರೆದಿತ್ತು…

The post ತಾರಾತಿಗಡಿ: ಶಾಸ್ತ್ರದ ಗಿಳಿ ಹೇಳಿದ್ದೇನು…? appeared first on Samyukta Karnataka.

ತಾರಾತಿಗಡಿ: ಹಲೋ ನಾವು ಡಿಜಿಟಲ್ ಅರೆಸ್ಟ್ ಕಂಪನಿಯವರು
ತಾರಾತಿಗಡಿ: ಚಾಲೂಗಿರಿಯಲ್ಲಿ ಭಯಂಕರ ಹೆಸರು ಮಾಡಿದ್ದ ತಿಗಡೇಸಿ ಹತ್ತು ಹರದಾರಿಗುಂಟ ಫೇಮಸ್‌ ಆಗಿದ್ದ. ಆತನ ಚಾಲೂಗಿರಿಯಿಂದಲೇ ಇಷ್ಟೆಲ್ಲ ಆಗಿದ್ದಾನೆಯೇ ಹೊರತು ಮತ್ತೇನಕ್ಕೂ ಅಲ್ಲ ಎಂದು ಮುಂಗಾಲ್ಪುಟಗಿ ಮುರುಗೇಸಿ ಎಲ್ಲರ ಮುಂದೆ ಹೇಳುತ್ತಿದ್ದ.

ಎಲ್ಲರೂ ಸೇರಿದಾಗ ತಿಗಡೇಸಿ ಚಾಲೂಗಿರಿಯ ಬಗ್ಗೆ ವರ್ಣಿಸುತ್ತಿದ್ದ ಇದರಿಂದ ತಿಗಡೇಸಿಯ ಚಾಲೂಗಿರಿಯಾದರೂ ಎಷ್ಟು ಇರಬಹುದು ಎಂದು ಎಲ್ಲರೂ ಕುತೂಹಲದಿಂದ ಇದ್ದರು. ಒಂದು ದಿನ ತಿಗಡೇಸಿಗೆ ಮಧ್ಯ-ಮಧ್ಯಾಹ್ನ ತೀರ್ಥ ಕೊಡಿಸಿ ತಿಗಡೇಸಿ ಚಾಲೂಗಿರಿಯ ಬಗ್ಗೆ ಕೇಳಿದರು.

ಮೂಡಿನಲ್ಲಿದ್ದ ಮುರಗೇಸಿಯು ಚಾಲೂಕಥೆಯನ್ನು ಹೇಳತೊಡಗಿದ. ಎಲ್ಲಿಯೂ ಒಂದುಪೈಸೆ ಕಳೆದುಕೊಳ್ಳದ ತಿಗಡೇಸಿ ಅವತ್ತು ಅದೇನು ಎಡವಟ್ಟು ಮಾಡಿಕೊಂಡನೋ ಏನೋ ತನ್ನ ಮೊಬೈಲ್‌ಗೆ ಕರೆನ್ಸಿ ಹಾಕಿಸಬೇಕು ಎಂದು ಅಂಗಡಿಗೆ ಹೋದ.

ಅಂಗಡಿಯವನಿಗೆ ಸಾವಿರ ರೂ ಹಾಕು ಎಂದು ಒಂದೇ ಒಂದು ನಂಬರ್ ಮಿಸ್ಸಾಗಿ ಹೇಳಿಬಿಟ್ಟ. ಅದ್ಯಾರಿಗೋ ಕರೆನ್ಸಿ ಹೋಯಿತು. ಅಲಾ ಇವನ ಎಂದು ಆ ನಂಬರ್ ಗೆ ಕರೆ ಮಾಡಿದ ಆತ ಎತ್ತಲಿಲ್ಲ. ಹತ್ತು ನಿಮಿಷ ಕರೆ ಮಾಡಿದ ನೋ…ವೇ. ಏನು ಮಾಡುವುದು ಎಂದು ಚಿಂತೆ ಮಾಡಿ ಕೊನೆಗೆ..

ಯಾರದ್ದೋ ನಂಬರ್‌ನಿಂದ ಕರೆ ಮಾಡಿದಾಗ ಆ ಕಡೆಯಿಂದ ಹಲೋ ಹೇಳಿ ಅಂದರು..ಆಗ ತಿಗಡೇಸಿಯು… ನಮಸ್ಕಾರ…ನಿಮ್ಮ ರಜಿಸ್ಟರ್ ಸಕ್ಸಸ್‌ಫುಲ್ ಆಗಿದೆ. ನಿಮ್ಮಂಥವರು ನಮ್ಮ ಕಂಪನಿಗೆ ಸೇರಲು ಒಪ್ಪಿಕೊಂಡಿರುವುದು ನಮ್ಮ ಪೂರ್ವಜನ್ಮದ ಪುಣ್ಯವೇ ಇರಬಹುದು ಎಂದು ಹೇಳಿದ…

ಅದಕ್ಕೆ ಆ ಕಡೆಯಿಂದ ಯಾರು ನೀವು ಏನು ರಜಿಸ್ಟ್ರೇಷನ್ ಅಂದಾಗ …ನೋಡಿ ಸಾಹೇಬರೆ ನಾವು ಡಿಜಿಟಲ್ ಅರೆಸ್ಟ್ ಕಂಪನಿಯವರು..ನೀವು ದಿನಾಲೂ ಪೇಪರ್ ನೋಡುತ್ತಿರಬಹುದು…ನಾವು ಹೇಗೆ ಡಿಜಿಟಲ್ ಅರೆಸ್ಟ್ ಮಾಡುತ್ತೇವೆ ಎಂದು. ಇದರಲ್ಲಿ ಸಿಕ್ಕಾಪಟ್ಟೆ ಹಣ ಮಾಡಬಹುದು.

ನಮ್ಮ ಕಂಪನಿಯ ನಿಯಮದ ಪ್ರಕಾರ ಕರೆನ್ಸಿ ಕಳಿಸುತ್ತೇವೆ. ಅವರು ಒಪ್ಪಿದರೆ ಅವರು ನಮ್ಮ ಕಂಪನಿಗೆ ಸೇರಲು ಇಷ್ಟ ಪಡುತ್ತಾರೆ ಎಂದು ಅರ್ಥ. ಈಗ ನೀವು ನಮ್ಮ ಕಂಪನಿಗೆ ಸೇರಿದ್ದೀರಿ ಸಂತೋಷ ಅಂದಾಗ ಆ ಕಡೆಯಿಂದ ನೋವೇ ಹಂಗಲ್ಲ ಸರ್ ಅಂದರು..ಅದಕ್ಕೆ ತಿಗಡೇಸಿ.. ಓಕೆ.. ಇದರಲ್ಲಿ ನಿಮಗೇನೂ ಫೋರ್ಸ್ ಇಲ್ಲ.

ನೀವು ನಮ್ಮ ಕಂಪನಿ ಸೇರಿಕೊಳ್ಳದೇ ಇದ್ದರೆ ಸಾವಿರದ ಐದುನೂರು ರೂ ವಾಪಸ್ ಕಳಿಸಿ ನಿಮ್ಮ ರಜಿಸ್ಟ್ರೇಷನ್ ಕ್ಯಾನ್ಸಲ್ ಮಾಡಿಕೊಳ್ಳಬಹುದು ಎಂದು ಹೇಳಿದ… ಆ ಕಡೆಯಿಂದ ನಡಗುವ ಧನಿಯಲ್ಲಿ ಆಯಿತು ಸ್ವಾಮಿ ಆಯಿತು ಎಂದು ಮರುಕ್ಷಣವೇ ತಿಗಡೇಸಿ ಫೋನ್ ಪೇ ಗೆ ಸಾವಿರದ ಐನೂರು ಕಳುಹಿಸಿ ಕೈ ಮುಗಿಯುವ ಇಮೋಜಿ ಕಳುಹಿಸಿದ….

ನನ್ನ ಜತೆ ಅದೂ ಎಂದು ಮೀಸೆ ಮೇಲೆ ಕೈ ಹಾಕಿಕೊಂಡ ತಿಗಡೇಸಿ…ಇದಕ್ಕಿಂತ ಚಾಲೂಗಿರಿ ಬೇಕೇನ್ರಿ ಎಂದು ಮುಂಗಾಲ್ಪುಟಗಿ ಹೇಳಿದಾಗ ಎಲ್ಲರೂ ಭೇಷ್ ತಿಗಡೇಸಿ ಅಂದರು.

The post ತಾರಾತಿಗಡಿ: ಹಲೋ ನಾವು ಡಿಜಿಟಲ್ ಅರೆಸ್ಟ್ ಕಂಪನಿಯವರು appeared first on Samyukta Karnataka.

ತಾರಾತಿಗಡಿ: ಅವರಿಗೂ ಇಲ್ಲ- ಇವರಿಗೂ ಇಲ್ಲ
ತಾರಾತಿಗಡಿ: ಗಿಳಿಶಾಸ್ತ್ರದ ಮೂಲಕವೇ ಭರ್ಜರಿ ಪ್ರಸಿದ್ದಿ ಪಡೆದಿದ್ದ ಗಿರ್ಕಿ ಗುಂಡಪನ ಗತ್ತು ವರ್ಣಿಸಲು ಅಸಾಧ್ಯವೆಂಬಂತೆ ಆಗಿತ್ತು. ಶಾಲೆಗಂತೂ ಹೋಗಲೇ ಇಲ್ಲ. ಗೈರತ್ತು ವಣಿ ಸುಮ್ಮನೇ ತಿರುಗಾಡುತ್ತಿದ್ದ ಗುಂಡ ಕೆಟ್ಟು ಕೆರಹಿಡಿದು ಹೋಗುತ್ತಾನೆ ಎಂದು ಆತನ ಸೋದರಮಾವ ಸೀನಪ್ಪ ಬಹಳ ಚಿಂತೆ ಮಾಡುತ್ತಿದ್ದ.

ಅವತ್ತು ಆತನನ್ನು ಮಾರುಕಟ್ಟೆಗೆ ಕರೆದುಕೊಂಡು ಹೋದಾಗ..ಅಲ್ಲಿ ಗಿಳಿಮರಿ ಬೇಕೆಂದು ಗುಂಡಪ್ಪ ಹಠ ಮಾಡಿದಾಗ ಹಾಳಾಗಿ ಹೋಗಲಿ ಎಂದು ಸೀನಪ್ಪ ಆತನಿಗೆ ಗಿಳಿ ಕೊಡಿಸಿದ. ಅಂದಿನಿಂದ ಗುಂಡನ ಟೈಮ್‌ಟೇಬಲ್ಲೇ ಬದಲಾಯಿತು. ದಿನಾಲೂ ಗಿಳಿ ಜತೆ ಆಟ ಆಡುತ್ತಿದ್ದ. ಸೀಟಿ ಹೊಡೆದರೆ ಅದೂ ಸೀಟಿ ಹೊಡೆಯುತ್ತಿತ್ತು.

ತಾನು ಇಸ್ಪೀಟು ಆಡಲು ಹೋದಾಗ ಅದನ್ನೂ ಜತೆಗೆ ಕರೆದುಕೊಂಡು ಹೋಗುತ್ತಿದ್ದ. ಇದು ಲಕ್ಕಿಗಿಳಿ ಎಂದು ಅದರ ಕಡೆಯಿಂದಲೇ ಇಸ್ಪೀಟ್ ಎಲೆ ತೆಗೆಸುತ್ತಿದ್ದಾಗಲೆಲ್ಲ ಗೆಲ್ಲುತ್ತಿದ್ದ. ಮುಂದೆ ಹಲವು ಕಾರ್ಡುಗಳನ್ನು ಮಾಡಿಸಿ ಪಂಜರದೊಳಗೆ ಗಿಳಿಯನ್ನು ಹೊರಗೆ ಕರೆದು ಕಾರ್ಡು ತೆಗೆದುಕೊಡು ಎಂದು ಹೇಳುತ್ತಿದ್ದ.

ಅದು ಹಾಗೆ ಮಾಡುತ್ತಿತ್ತು. ಹೀಗೆ ಯಾರ್ಯಾರಿಗೋ ಏನೇನೋ ಹೇಳಿದ. ನೋಡ ನೋಡುತ್ತಿದ್ದಂತೆ ಗಿಳಿಶಾಸ್ತ್ರದ ಗುಂಡಪ್ಪನಾಗಿ ಪ್ರಸಿದ್ಧಿ ಪಡೆದಿದ್ದ. ಚುನಾವಣೆ ಸಂದರ್ಭದಲ್ಲಂತೂ ಮನೆಯ ಮುಂದೆ ಜನ ಜಾತ್ರೆಯಂತೆ ಸೇರುತ್ತಿದ್ದರು. ಈಗೀಗಂತೂ ಕುರ್ಚಿ ಯಾರಿಗೆ ಎಂದು ಕೇಳಲು ಬರುವವರ ಸಂಖ್ಯೆ ಹೆಚ್ಚಾಯಿತು.

ಆ ಕಡೆಯವರಿಗೆ ಈ ಬಾರಿ ಕುರ್ಚಿ ನಿಮ್ಮ ಬಾಸ್‌ಗೆ ಗ್ಯಾರಂಟಿ ಎಂದು ಹೇಳುತ್ತಿದ್ದ. ಈ ಕಡೆಯವರು ಬಂದರೆ…ನಿಮ್ಮ ಬಾಸ್‌ನನ್ನು ಕುರ್ಚಿ ಬಿಟ್ಟು ಇಳಿಸಲು ಹರಿಬ್ರಹ್ಮನಿಂದಲೂ ಸಾಧ್ಯವಿಲ್ಲ ಅನ್ನುತ್ತಿದ್ದ. ಈ ಮಧ್ಯೆ ಕಮಲೇಸಿ ಗಾಂಗಿನವರು ಬಂದರೆ…ಬಾರೋ ಗಿಣಿರಾಮಾ…ಸಾಹೇಬು ಬಂದಾರೆ.

ಬಾ ಎಂದು ಕರೆದು ಕಾರ್ಡು ತೆಗೆಸಿ…ಕುರ್ಚಿ ಸಲುವಾಗಿ ಕಾಳಗ ನಡೆದು ಕೊನೆಗೆ ನಿಮ್ಮವರ ಪಾಲು ಆಗೇ ಆಗುತ್ತದೆ ನೋಡುತಿರಿ ಎಂದು ಹೇಳಿ ಮೂವರ ಕಡೆಯೂ ಹಣ ಇಸಿದುಕೊಳ್ಳುತ್ತಿದ್ದ. ಮೊದಲಿನಿಂದಲೂ ಕೈ ನೋಡಿ ಭವಿಷ್ಯ ಹೇಳುತ್ತಿದ್ದ ಕರಿಲಕ್ಷುಂಪತಿ ಗುಂಡಪ್ಪನಿಂದಾಗಿ ಬಕ್ಕಬಾರಲೆ ಬಿದ್ದು ಹೋಗಿದ್ದ.

ಅದೇ ಸಿಟ್ಟು ಆತನಲ್ಲಿತ್ತು. ಒಂದು ದಿನ ಯಾರು ಇಲ್ಲದ ಸಮಯ ನೋಡಿ ಪಂಜರದಿಂದ ಆ ಗಿಣಿಯನ್ನು ಕದ್ದುಕೊಂಡು ಮೂರನೇ ಅಂತಸ್ತಿನ ಬಿಲ್ಡಿಂಗ್‌ನಲ್ಲಿರುವ ಸಾಹೇಬರ ಕೊಠಡಿ ಮುಂದೆ ಬಿಟ್ಟ. ಅಂದಿನಿಂದ ಅಲ್ಲಿಯೇ ಇರುವ ಆ ಗಿಣಿ…ಅವರ ಕಡೆಯವರು ಬಂದರೆ ಈ ಬಾರಿ ನಿಮ್ಮದೇ ಕುರ್ಚಿ ಅನ್ನುತ್ತಿದೆ.

ಇವರ ಕಡೆಯವರು ಬಂದರೆ ನಿಮ್ಮದೇ ಗ್ಯಾರಂಟಿ ಅನ್ನುತ್ತಿದೆ. ಕಮಲೇಸಿ ಕಡೆಯವರು ಬಂದರೆ ಅವರಿಗೂ ಇಲ್ಲ–ಇವರಿಗೂ ಇಲ್ಲ..ನಿಮಗೇ ಎಲ್ಲ ಅನ್ನುತ್ತಿದೆ. ಈಗ ಎಲ್ಲರಿಗೂ ಆ ಗಿಣಿ ಭಯಂಕರ ಪ್ರಿಯವಾಗಿದೆ.

The post ತಾರಾತಿಗಡಿ: ಅವರಿಗೂ ಇಲ್ಲ- ಇವರಿಗೂ ಇಲ್ಲ appeared first on Samyukta Karnataka.